Monday, 15 March 2021

The "Top 50" Questionnaires heard in various competitive examinations on the Constitution of India

  MahitiVedike Com       Monday, 15 March 2021


ಭಾರತ ಸಂವಿಧಾನದ ಬಗ್ಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಿರುವ "ಪ್ರಮುಖ 50" ಪ್ರಶ್ನೋತ್ತರಗಳು 1)ಸ್ವತಂತ್ರ ಭಾರತಕ್ಕೆ ಸಂವಿಧಾನವೊಂದು ಬೇಕೆಂಬ ವಿಚಾರವನ್ನು ಮೊದಲ ಬಾರಿಗೆ ಪ್ರತಿಪಾದಿಸಿದವರು?
ಎಂ.ಎನ್.ರಾಯ್

2)1929 ಜನವರಿ 26ರ ಲಾಹೋರ್ ಕಾಂಗ್ರೇಸ್ ಅಧಿವೇಶನದಲ್ಲಿ ಪೂರ್ಣ ಸ್ವರಾಜ್ಯ ಪರಿಕಲ್ಪನೆಯನ್ನು ಘೋಷಿಸಿದವರು?
ಜವಹಾರ್ ಲಾಲ್ ನೆಹರು

3)1949ರ ನವೆಂಬರ್ 26 ರಂದೆ ಸಂವಿಧಾನ ಸಿದ್ದಗೊಂಡಿದ್ದರು 1950 ಜನವರಿ 26 ರಂದು ಅಧಿಕೃತವಾಗಿ ಜಾರಿಗೆ ಬರಲು ಕಾರಣವೇನು?
1929 ರ ಜನವರಿ 26 ರಂದು "ಜವಹಾರ್ ಲಾಲ್ ನೆಹರೂ" ಪೂರ್ಣ ಸ್ವರಾಜ್ಯ ಘೋಷಿಸಿದ ದಿನಕ್ಕೆ ಸರಿ ಹೊಂದಲಿ ಎಂಬ ದೃಷ್ಟಿಯಿಂದ

4)ಆರಂಭದಲ್ಲಿ ಮೂಲ ಸಂವಿಧಾನದಲ್ಲಿದ್ದ ಭಾಗಗಳು.ಅನುಚ್ಛೇದಗಳು.ಅನುಸೂಚಿಗಳೆಷ್ಟು?
ಸಂವಿಧಾನದ ಭಾಗಗಳು - 22
ಸಂವಿಧಾನದ ಅನುಚ್ಛೇದಗಳು- 395
ಸಂವಿಧಾನದ ಅನುಸೂಚಿಗಳು- 8

5)ಜಗತ್ತಿನ ಅತಿ ದೊಡ್ಠ ಲಿಖಿತ ಸಂವಿಧಾನ ಹೊಂದಿದ ದೇಶ ಯಾವುದು?
ಭಾರತ ಸಂವಿಧಾನ

6)ದೇಶಗಳನ್ನು ಹೊರತುಪಡಿಸಿ ಜಗತ್ತಿನಲ್ಲಿಯೆ ಅತಿ ದೊಡ್ಡ ಸಂವಿಧಾನವನ್ನು ಹೊಂದಿದ ಪ್ರಾಂತ್ಯ ಯಾವುದು?
"ಅಲಬಾಮ" ಎಂಬ ಅಮೇರಿಕ ಸಂಯುಕ್ತ ಸಂಸ್ಥಾನದ ಒಂದು ಪ್ರಾಂತ್ಯ

7)ಕಲ್ಕತ್ತಾದ ಪೋರ್ಟ್ ವಿಲಿಯಂನಲ್ಲಿ ಸುಪ್ರೀಂ ಕೋರ್ಟ್ ಸ್ಥಾಪನೆಗೆ ಅನುಪತಿ ನೀಡಿದ ಆಕ್ಟ್ ಯಾವುದು?
1773 ರ ರೆಗ್ಯುಲೇಟಿಂಗ್ ಆಕ್ಟ್

8)ಭಾರತೀಯ ನಾಗರೀಕ ಸೇವೆ (ICS) ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಭಾರತೀಯರಿಗೆ ಅವಕಾಶ ನೀಡಿದ ಆಕ್ಟ್ ಯಾವುದು?
1853ರ ಚಾರ್ಟರ್ ಆಕ್ಟ್

9) ಭಾರತದ ಸ್ವಾತಂತ್ರ್ಯದ ಮಹಾಸನ್ನದು ಎಂದು ಯಾವದನ್ನು ಕರೆಯುತ್ತಾರೆ?
1858 ರ ಮ್ಯಾಗ್ನಕಾರ್ಟ ನ್ನು.

10)ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪನಿಯು.ಕೊನೆಗೊಂಡಿದ್ದು ಯಾವ ಕಾಯಿದೆಯ ಮೂಲಕ?
1858ರ ಭಾರತ ಸರ್ಕಾರ ಕಾಯಿದೆ

11)ಸೆಕ್ರೆಟರಿ ಆಫ್ ಸ್ಟೇಟ್(ರಾಜ್ಯ ಕಾರ್ಯದರ್ಶಿ)ಕಚೇರಿ ಹಾಗೂಕೌನ್ಸಿಲ್ ಆಷ್ ಇಂಡಿಯಾ ಸ್ಥಾಪನೆಯಾದದ್ದು?
ಭಾರತ ಸರ್ಕಾರ ಕಾಯಿದೆಯ ಮೂಲಕ

12)"ಇಂಡಿಯನ್ ಕೌನ್ಸಿಲ್ ಆಕ್ಟ್ 1909"ನ್ನು "ಮಾರ್ಲೆ ಮಿಂಟೊ ಸುಧಾರಣೆ" ಎಂದು ಕರೆಯಲು ಕಾರಣವೇನು?
ಮಾರ್ಲೆ(ಸೆಕ್ರೆಟರಿ ಆಫ್ ಸ್ಟೇಟ್ ಫಾರ್ ಇಂಡಿಯಾ)
ಮಿಂಟೊ(ವೈಸ್ ರಾಯ್)ಸೇರಿ ಈ ಕಾಯಿದೆಯನ್ನು ಜಾರಿಗೆ ತಂದಿದ್ದರಿಂದ

13)ಮುಸ್ಲಿಂರಿಗೆ ಪ್ರತ್ಯೇಕ ಚುನಾವಣೆಯ ಕಲ್ಪಿಸಿದ ಕಾಯ್ದೆ ಯಾವುದು?
1909 ರ ಮಿಂಟೋ ಮ
ಮಾರ್ಲೇ ಸುಧಾರಣೆ ಕಾಯ್ದೆ

14) ಮಾಂಟೇಗ್ ಹಾಗೂ ಚೆಮ್ಸ್ ಪೋರ್ಡ್ ನೇತೃತ್ವದ ಸಮಿತಿರಚಿಸಿದ್ದು ಯಾವಾಗ?
1919.

15)ಒಂದು ದೇಶವು ಅನುಸರಿಸುವ ಮೂಲಭೂತ ಕಾನೂನನ್ನು ---- ಎನ್ನುವರು?
ಸಂವಿಧಾನ.

16)ಸಂವಿಧಾನವು ಯಾರ ಹಕ್ಕುಗಳನ್ನು ರಕ್ಷಿಸುತ್ತದೆ?
ಪ್ರಜೆಗಳ.

17)ಸಂವಿಧಾನದ ಹೃದಯ ಯಾವುದು?
ಪ್ರಸ್ತಾವನೆ.
(32ನೇ ವಿಧಿಯನ್ನು ಸಂವಿಧಾನ ಹೃದಯ &ಆತ್ಮ ಎಂದು ಸಹ ಕರೆಯುತ್ತಾರೆ,)

18) ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಯಾವುದು?
ಭಾರತ.

19) ಭಾರತದ ಸಂವಿಧಾನದ ಆದರ್ಶವೇನು?
 ಸುಖೀ ರಾಜ್ಯವನ್ನು ಸ್ಥಾಪಿಸುವುದು.

20) "ಸಂವಿಧಾನ ದಿನ"ವನ್ನು ಯಾವಾಗ ಆಚರಿಸಲಾಗುತ್ತದೆ?
ನವೆಂಬರ್ 26.

21)ಭಾರತ ಸಂವಿಧಾನದ ರಚನ ಸಮಿತಿಯನ್ನು ಈ ಕೆಳಗಿನ ಯಾವ ಸಮಿತಿಯ ಶಿಫಾರಸ್ಸಿನ ಮೇಲೆ ಸ್ಥಾಪಿಸಲಾಯಿತು?
ಕ್ಯಾಬಿನೆಟ್ ಆಯೋಗ

22)ಸಂವಿಧಾನ ರಚನಾ ಸಭೆಯ ಪ್ರಥಮ ಅಧಿವೇಶನ ನಡೆದದ್ದು ಯಾವಾಗ?
 1946 ರಲ್ಲಿ.

23)ಭಾರತ ಸಂವಿಧಾನದ ರಚನ ಸಮಿತಿಯ ಅಧ್ಯಕ್ಷರು ಯಾರು?
ಡಾ.ಬಾಬು ರಾಜೇಂದ್ರ ಪ್ರಸಾದ್

24)ಸಂವಿಧಾನ ರಚನಾ ಸಭೆಯ ಮೊದಲ ಸಭೆ ನಡೆದದ್ದು ಯಾವಾಗ?
1946, ಡಿಸೆಂಬರ್ 9.

25) ಸಂವಿಧಾನ ರಚನಾ ಸಭೆಯ ಮೊದಲ ಸಭೆಯ ಅಧ್ಯಕ್ಷತೆ ವಹಿಸಿದವರು ಯಾರು?
ಡಾ.ಸಚ್ಚಿದಾನಂದ ಸಿನ್ಹಾ.

26) ಭಾರತದ ಸಂವಿಧಾನದ ರಚನಾ ಸಭೆಯ ಸಲಹೆಗಾರರು ಯಾರು?
ಬಿ.ಎನ್.ರಾಯ್.

27) ಸಂವಿಧಾನ ರಚನಾ ಸಮಿತಿಯ ಕಾನೂನು ಸಲಹೆಗಾರರಾದ ಬಿ.ಎನ್.ರಾವ್ ಅವರ ಪೂರ್ಣ ಹೆಸರೇನು?
ಬೆನಗಲ್ ನರಸಿಂಹರಾವ್.

28) ಭಾರತದ ಸಂವಿಧಾನದ ರಚನಾ ಸಭೆಯ ಉಪಾಧ್ಯಕ್ಷರು ಯಾರು?
 ಪ್ರೊ.ಎಚ್.ಸಿ. ಮುಖರ್ಜಿ.

29) ಭಾರತದ ಸಂವಿಧಾನ ರಚನಾ ಸಭೆಯು ಒಟ್ಟು ಎಷ್ಟು ಸಮಿತಿಗಳನ್ನು ಒಳಗೊಂಡಿತ್ತು?
 22.

30)ಯಾರನ್ನು ಸಂವಿಧಾನದ ಪಿತಾಮಹ ಎಂದು ಕರೆಯುತ್ತಾರೆ?
ಡಾ.ಬಿ.ಆರ್.ಅಂಬೇಡ್ಕರ್ ರವರನ್ನು

31)ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರು?
ಡಾ.ಬಿ.ಆರ್.ಅಂಬೇಡ್ಕರ್

32) ಸಂಂವಿಧಾನದ ಪ್ರಿಯಾಂಬಲ್(ಪೀಠಿಕೆ) ಎಂದರೇನು?
ಸಂವಿಧಾನದ ಗುರಿ ಏನು ಎಂದು ಸೂಚಿಸುವ ಪರಿಚಯಾತ್ಮಕ ಮುನ್ನುಡಿಯೇ ಪ್ರಿಯಾಂಬಲ್

33)1976 ರ "42 ನೇ ತಿದ್ದುಪಡಿ" ಶಾಸನದ ಮೂಲಕ ಯಾವ ಪದಗಳನ್ನು ಸಂವಿಧಾನದ ಪೀಠಿಕೆಗೆ ಸೇರಿಸಲಾಯಿತು?
ಸಮಾಜವಾದಿ,ಧರ್ಮ ನಿರಪೇಕ್ಷ,ಅಖಂಡತೆ.

34) ಭಾರತದ ಸಂವಿಧಾನ ರಚನೆಗೆ ತೆಗೆದುಕೊಂಡ ಕಾಲವೆಷ್ಟು?
 2 ವರ್ಷ 11 ತಿಂಗಳು 18 ದಿನ.

35)ಮೊದಲ ಸಾರ್ವತ್ರಿಕ ಚುನಾವಣೆ ನಡೆದದ್ದು ಯಾವಾಗ?
1951 ರಲ್ಲಿ.

36) ಮೊದಲ ಸಾರ್ವತ್ರಿಕ ಚುನಾವಣೆಯ ಕಮಿಷನರ್ ಯಾರು?
ಸುಕುಮಾರ ಸೇನ್.

37) ಸಂವಿಧಾನ ದಿನವನ್ನು ಯಾವಾಗ ಮೊದಲ ಬಾರಿಗೆ ಆಚರಿಸಲಾಯಿತು?
 26 ನವೆಂಬರ್ 2015.

38)ಭಾರತದ ಸಂವಿಧಾನವು?
ದೀರ್ಘ ಕಾಲದ ಸಂವಿಧಾನ

39)ಭಾರತ ಸಂವಿಧಾನದ ಸ್ವರೂಪವು
ಸಂಸದೀಯ ಪದ್ದತಿ

40)ಭಾರತದ ಸಂವಿಧಾನವು ಒಂದು
ಭಾಗಶಃ ಕಠಿಣ.ಭಾಗಶಃ ಸರಳವಾದ ಸಂವಿಧಾನ

41)ಭಾರತ ಸಂವಿಧಾನವು ಈ ಕೆಳಕಂಡ ಸರಕಾರ ಸ್ಥಾಪಿಸಿದೆ?
ಸಂಯುಕ್ತ ಮತ್ತು ಏಕೀಕೃತ ಸರಕಾರಗಳ ಮಿಶ್ರಣ

42) ದೇಶದ ಅತ್ಯುನ್ನತ ನ್ಯಾಯಾಲಯ ಯಾವುದು?
ಸರ್ವೋಚ್ಚ ನ್ಯಾಯಾಲಯ.

43) ನ್ಯಾಯ ನಿರ್ಣಯ ಮಾಡುವ ಸಲುವಾಗಿ ----- ರಚನೆಯಾದವು?
 ಕಾನೂನುಗಳು.

44) ಭಾರತ ಸಂವಿಧಾನದ ಯಾವ ಭಾಗದಲ್ಲಿ ಮೂಲಭೂತ ಹಕ್ಕುಗಳನ್ನು ಒಳಗೊಂಡಿದೆ?
ಭಾಗ-3

45)ರಾಜ್ಯ ನಿರ್ದೇಶಕ ತತ್ವಗಳನ್ನು ಯಾವ ಸಂವಿಧಾನದಿಂದ ತೆಗೆದುಕೊಳ್ಳಲಾಗಿದೆ?
ಐರಿಷ್ ಸಂವಿಧಾನದಿಂದ

46) ರಾಜ್ಯ ನಿರ್ದೇಶಕ ತತ್ವಗಳು ಯಾವ ಗುರಿಗಳನ್ನು ಹೊಂದಿವೆ?
ಆರ್ಥಿಕ ಹಾಗೂ ಸಾಮಾಜಿಕ ನ್ಯಾಯ
logoblog

Thanks for reading The "Top 50" Questionnaires heard in various competitive examinations on the Constitution of India

Previous
« Prev Post

No comments:

Post a Comment