Tuesday 9 March 2021

South India-Shathavahanas, Kadambas

  MahitiVedike Com       Tuesday 9 March 2021

ದಕ್ಷಿಣ ಭಾರತ-ಶಾತವಾಹನರು, ಕದಂಬರು


(ಸಾ.ಶ.ಪೂ. 3ನೇ ಶತಮಾನದಿಂದ ಸಾ.ಶ. 13ನೇ ಶತಮಾನದವರೆಗೆ)
ವಿಂಧ್ಯ ಪರ್ವತಗಳು ಉತ್ತರ ಮತ್ತು ದಕ್ಷಿಣ ಭಾರತವನ್ನು ಪ್ರತ್ಯೇಕಿಸುತ್ತವೆ. ವಿಂಧ್ಯ ಪರ್ವತದ ದಕ್ಷಿಣ ಭಾಗದಿಂದ ಕನ್ಯಾಕುಮಾರಿಯವರೆಗಿನ ಪ್ರದೇಶವನ್ನು ದಕ್ಷಿಣ ಭಾರತ ಅಥವಾ ದಖನ್ ಪ್ರಾಂತ್ಯ ಎಂದು ಕರೆಯಲಾಗಿದೆ. ಶಾತವಾಹನರು, ಕದಂಬರು, ಗಂಗರು, ಚಾಲುಕ್ಯರು, ರಾಷ್ಟ್ರಕೂಟರು, ಪಲ್ಲವರು ಈ ಪ್ರದೇಶವನ್ನು ಆಳಿದವರಲ್ಲಿ ಪ್ರಮುಖರು.

ಶಾತವಾಹನರು (ಸಾ.ಶ.. 230 - ಸಾ.ಶ. 220)

 ಶಾತವಾಹನ ವಂಶವು ದಖನ್ನಲ್ಲಿ ಸ್ಥಾಪನೆಗೊಂಡ ಮೊದಲ ರಾಜವಂಶವಾಗಿದೆ.

 ಚಂದ್ರಗುಪ್ತಮೌರ್ಯನ ಕಾಲದಲ್ಲಿ ಗೋದಾವರಿ, ಕೃಷ್ಣಾ ನದಿಗಳ ಮಧ್ಯೆ ನೆಲೆಸಿದ್ದು, ಸಾಮಂತರಾಗಿ ಕಪ್ಪಕಾಣಿಕೆಯನ್ನು ಸಲ್ಲಿಸುತ್ತಾ, ಸಾ.ಶ.ಪೂ. 220ರ ವೇಳೆಗೆ ಸಿಮುಖನು ಸ್ವತಂತ್ರನಾಗಿ ಶ್ರೀಕಾಕುಲಂನ್ನು ರಾಜಧಾನಿಯನ್ನಾಗಿ ಮಾಡಿಕೊಂಡನು.

ಗೌತಮಿಪುತ್ರ ಶಾತಕರ್ಣಿ 

 ಈ ವಂಶದ ಪ್ರಮುಖ ದೊರೆ ಗೌತಮಿಪುತ್ರ ಶಾತಕರ್ಣಿ.

ಸಾಮ್ರಾಜ್ಯಕ್ಕೆ ಕಂಠಕರಾಗಿದ್ದ ಶಖರನ್ನು ಭಾರತದ ಗಡಿಯಿಂದ ಹೊರಗಟ್ಟಿ ಸಾಹಸವನ್ನು ಮೆರೆದನು.

 ಇವನಿಂದ ಶಾಲಿವಾಹನ ಶಕೆಯು ಪ್ರಾರಂಭಗೊಂಡಿತೆಂದು ನಂಬಲಾಗಿದೆ.

 ಕೊಂಕಣ, ಬೀರಾರ್, ಸೌರಾಷ್ಟ್ರ, ಮಾಳವಗಳಲ್ಲದೆ ಅನೇಕ ಹೊಸ ಪ್ರದೇಶಗಳನ್ನು ತನ್ನ ರಾಜ್ಯಕ್ಕೆ ಸೇರಿಸಿಕೊಂಡನು. ಇವನಿಗೆ ತ್ರ್ಯಸಮುದ್ರತೋಯಪೀತವಾಹನ, ಶಾತವಾಹನ ಕುಲಯಶಃ ಪ್ರತಿಷ್ಠಾಪನಕರ ಎಂಬ ಬಿರುದುಗಳಿದ್ದವು.


ಯಜ್ಞ ಶ್ರೀ ಶಾತಕರ್ಣಿಯು ಈ ವಂಶದ ಕೊನೆಯರಸ. ಅವನ ಕಾಲದಲ್ಲಿ ಶಕಷತ್ರಪರವು ನಿರಂತರ ದಾಳಿಯಿಂದಾಗಿ ಸಾಮ್ರಾಜ್ಯವು ಪತನಗೊಂಡಿತು.

 ಶಾತವಾಹನರ ಕಾಲದಲ್ಲಿ ರಾಜನೇ ರಾಜ್ಯದ ಸರ್ವೋಚ್ಚ ಅಧಿಕಾರಿ. ಆಡಳಿತದ ಅನುಕೂಲತೆಗಾಗಿ ರಾಜ್ಯವನ್ನು ಜನಪದ ಎಂಬ ಜಿಲ್ಲೆಗಳನ್ನಾಗಿ ವಿಭಾಗಿಸಿ, ಅವುಗಳಿಗೆ ಅಧಿಕಾರಿಗಳನ್ನು ನೇಮಿಸಲಾಗಿತ್ತು. ನಗರ ಮತ್ತು ಗ್ರಾಮಗಳ ವ್ಯವಸ್ಥೆಯನ್ನು ಸ್ವಯಮಾಡಳಿತ ಸಂಸ್ಥೆಗಳು ನೋಡಿಕೊಳ್ಳುತ್ತಿದ್ದವು. ಸಮಾಜದಲ್ಲಿ ವರ್ಣಭೇದÀವಿರಲಿಲ್ಲ. ಸ್ತ್ರೀಯರೂ ಸಹ ಉನ್ನತ ಅಧಿಕಾರ ಸ್ಥಾನಮಾನಗಳನ್ನು ಹೊಂದಿದ್ದರು.

 ರೈತ, ವ್ಯಾಪಾರಿ, ಅಕ್ಕಸಾಲಿಗ, ಮೀನುಗಾರ, ಬಡಗಿ, ನೇಕಾರ, ಔಷಧ ತಯಾರಿಸುವವ ಮುಂತಾದ ಕಸುಬುದಾರರಿದ್ದರು.

 ಕಸುಬುದಾರರ ಸಂಘಗಳು ಇದ್ದವು. ಇದೇ ಮುಂದೆ ವಾಣಿಜ್ಯ ಮತ್ತು ವ್ಯಾಪಾರಿ ಸಂಘಗಳಾಗಿ ಕಾರ್ಯ ನಿರ್ವಹಿಸಿದವು.

 ವಿದೇಶೀ ವ್ಯಾಪಾರಕ್ಕೂ ಪೆÇ್ರೀತ್ಸಾಹ ನೀಡಿದ್ದರಲ್ಲದೆ, ನಾಸಿಕ್, ಕಲ್ಯಾಣ್, ಬ್ರೋಚ್, ಭಟ್ಕಳ ವ್ಯಾಪಾರ ಕೇಂದ್ರಗಳಾಗಿದ್ದವು.

 ವೈದಿಕ ಮತಸ್ಥರಾದ ಶಾತವಾಹನರು ಇತರೆ ಧರ್ಮಗಳಾದ ಬೌದ್ಧ ಹಾಗೂ ಜೈನಮತಕ್ಕೂ ಪ್ರೋತ್ಸಾಹ ನೀಡಿ ಸಹಮತ ಭಾವನೆಯಿಂದಳುತ್ತಿದ್ದರು. ಕಲೆ, ಸಾಹಿತ್ಯ, ವಿದ್ಯಾಭ್ಯಾಸಕ್ಕೆ ತ್ತೇಜನ ನೀಡಿದರು.

 ವಿದ್ವಾಂಸರ ಹಾಗೂ ಸಾಮಾನ್ಯ ಜನರ ಭಾಷೆಯಾಗಿದ್ದ ಪ್ರಾಕೃತ ಭಾಷೆಯಲ್ಲಿ ಸಾಹಿತ್ಯ ಸೃಷ್ಟಿಯಾಯಿತು. ಹಾಲನು ಬರೆದ ಗ್ರಂಥ ಗಾಥಾ ಸಪ್ತಶತೀ ಇದಕ್ಕೆ ಉದಾಹರಣೆಯಾಗಿದೆ. ಇವರ ಕಾಲದಲ್ಲಿ ಅಜಂತ ಮತ್ತು ಕಾರ್ಲೆಯ ಚೈತ್ಯಾಲಯ ಅಮರಾವತಿಯ ಚಿತ್ರಕಲೆಗಳು ರಚನೆಗೊಂಡವು. ದೇವಾಲಯ, ವಿಹಾರ ಮತ್ತು ಚೈತ್ಯಾಲಯಗಳನ್ನು ಕಟ್ಟಲಾಯಿತು. ಕಾರ್ಲೆಯಲ್ಲಿ ಚೈತ್ಯಾಲಯವನ್ನು ಬನವಾಸಿಯ ಶ್ರೀಮಂತ ವರ್ತಕ ಭೂತಪಾಲನು ನಿರ್ಮಿಸಿದನು.

 ಒಟ್ಟಿನಲ್ಲಿ ಶಾತವಾಹನರ ಕಾಲದಲ್ಲಿ ಕನ್ನಡ ನಾಡು ಸಮೃದ್ಧಿಯಿಂದ ಕೂಡಿತ್ತು ಮತ್ತು ಇವರು ಸಾಹಸಿಗಳೂ, ಸಮರ್ಥ ಆಡಳಿತಗಾರರಾಗಿದ್ದು, ಭಾರತದ ಸಂಸ್ಕøತಿಗೆ ತಮ್ಮದೇ ಆದ ಕೊಡುಗೆಗಳನ್ನು ನೀಡಿ ಶ್ರೀಮಂತಗೊಳಿಸಿದ್ದಾರೆ.

ಕದಂಬರು (ಸಾ.ಶ. 325 ರಿಂದ ಸಾ.ಶ. 540)

 ಕರ್ನಾಟಕದಲ್ಲಿ ಸ್ಥಾಪನೆಗೊಂಡ ಮೊದಲ ಸ್ಥಳೀಯ ರಾಜವಂಶ ಇದಾಗಿದೆ. ಇವರ ರಾಜಧಾನಿ ಬನವಾಸಿ, ಈಗಿನ ಉತ್ತರ ಕನ್ನಡ ಜಿಲ್ಲೆಯಲ್ಲಿದೆ. ಮಯೂರವರ್ಮನು ಈ ಸಂತತಿಯ ಸ್ಥಾಪಕ ಮತ್ತು ಶ್ರೇಷ್ಠನಾದ ರಾಜನು.

 ಪಲ್ಲವರಾಜ ಶಿವಸ್ಕಂದವರ್ಮನಿಂದ ಅಪಮಾನಗೊಂಡಾಗ ಮಯೂರಶರ್ಮ ತನ್ನ ವರ್ಣವನ್ನು ತ್ಯಜಿಸಿ ಕ್ಷತ್ರಿಯ ವರ್ಣ ಸ್ವೀಕರಿಸಿ ಮಯೂರವರ್ಮನಾದನು. ಪಲ್ಲವರನ್ನು ಸೋಲಿಸಿ ಕದಂಬರಾಜ್ಯ ಸ್ಥಾಪಿಸಿದನು. ಇವನು ಕನ್ನಡಿಗರ ಸ್ವಾಭಿಮಾನದ ಸಂಕೇತ.

 ಕರ್ನಾಟಕ ಮತ್ತು ಭಾರತೀಯ ಸಂಸ್ಕøತಿಗೆ ಕದಂಬರ ಕೊಡುಗೆ ವಿಶಿಷ್ಟ್ಯಪೂರ್ಣವಾಗಿದೆ. ಕದಂಬರು ಆಳಿದ ಪ್ರದೇಶವು ಸುಮಾರು ಮೂರು ಶತಮಾನಗಳ ಕಾಲ ರಾಜಕೀಯ ಐಕ್ಯತೆಗೆ ಒಳಗಾಗಿತ್ತು.

 ಆಡಳಿತದಲ್ಲಿ ಮಾಂಡಲಿಕರು, ರಾಜ ಪುರೋಹಿತರು, ಮಂತ್ರಿಗಳು, ಸೇನಾಧಿಪತಿಗಳು ಪ್ರಮುಖ ಪಾತ್ರವಹಿಸಿದ್ದರು. 

 ಆಡಳಿತದ ಅನುಕೂಲಕ್ಕಾಗಿ ಪ್ರಾಂತಾಧಿಕಾರಿಗಳನ್ನು ಪ್ರಾಂತ್ಯವನ್ನು ನೋಡಿಕೊಳ್ಳುವಂತೆ ನೇಮಿಸುತ್ತಿದ್ದರು. ಭೂಕಂದಾಯ ರಾಜ್ಯದ ಮುಖ್ಯ ಆದಾಯವಾಗಿತ್ತು.

 ಬಡಗಿ, ಅಕ್ಕಸಾಲಿಗ, ಕಮ್ಮಾರ, ನೇಕಾರ, ಗಾಣಿಗ, ಕುಂಬಾರ ಮುಂತಾದ ಕಸುಬುಗಳು ಮುಖ್ಯವಾಗಿದ್ದವು. 

 ವ್ಯವಸಾಯ, ವ್ಯಾಪಾರಗಳಿಗೆ ಹೆಚ್ಚಿನ ಪೆÇ್ರೀತ್ಸಾಹವಿದ್ದಿತು. ಸಮಾಜದಲ್ಲಿ ಬಹುತೇಕ ಜನರು ವರ್ಣಾಶ್ರಮ ಧರ್ಮವನ್ನು ಪಾಲಿಸುತ್ತಿದ್ದರು.

 ಪಿತೃ ಪ್ರಧಾನವಾದ ಕುಟುಂಬ ಹಾಗೂ ಅವಿಭಕ್ತ ಕುಟುಂಬಕ್ಕೆ ಹೆಚ್ಚು ಪ್ರಾಧಾನ್ಯವಿತ್ತು.

 ಕದಂಬರು ವೈದಿಕ ಧರ್ಮಾನುಯಾಯಿ ಗಳಾದರೂ ಜೈನ ಮತ್ತು ಬೌದ್ಧಧರ್ಮ ಗಳನ್ನು ಪ್ರೋತ್ಸಾಹಸಿದರು.

 ಹಾನಗಲ್, ಪುಲಿಗೆರೆ ಮುಂತಾದ ಸ್ಥಳಗಳಲ್ಲಿ ಜೈನ ದೇವಾಲಯಗಳಿಗೆ ಮತ್ತು ವಿದ್ವಾಂಸರುಗಳಿಗೆ ದಾನದತ್ತಿಗಳನ್ನು ನೀಡಿ ಕರ್ನಾಟಕದಲ್ಲಿ ಜೈನ ಸಂಸ್ಕøತಿಯು ಹರಡಲು ಉತ್ತೇಜನ ನೀಡಿದರು. ಕದಂಬರ ನಾಡಿನಲ್ಲಿ ಬೌದ್ಧ ಧರ್ಮವು ಉಚ್ಛ್ರಾಯ ಸ್ಥಿತಿಯಲ್ಲಿತ್ತು.

 ಇದು ಎರಡು ಪ್ರಮುಖ ಕೇಂದ್ರಗಳಾದ ಅಜಂತ ಮತ್ತು ಬನವಾಸಿಯನ್ನು ಒಳಗೊಂಡಿತ್ತು. ದೇವಾಲಯಗಳು ಹಬ್ಬ, ಉತ್ಸವಗಳ ಕೇಂದ್ರವಾಗಿದ್ದವು.

 ಪ್ರಾಕೃತ-ಸಂಸ್ಕøತ ಭಾಷೆಗೆ ಪ್ರೋತ್ಸಾಹ ನೀಡಿದ್ದು, ಮೊದಲು ಪ್ರಾಕೃತ ನಂತರ ಸಂಸ್ಕøತ ರಾಜಭಾಷೆಯಾಯಿತು.

 ಕನ್ನಡವೂ ಜನರ ಭಾಷೆ ಆಗಿತ್ತು ಅತ್ಯಂತ ಪ್ರಾಚೀನವಾದ ಹಲ್ಮಿಡಿ ಶಾಸನವು ಐದನೆಯ ಶತಮಾನದಲ್ಲಿ ರೂಢಿಯಲ್ಲಿದ್ದ ಕನ್ನಡ ಭಾಷೆಯ ಸ್ವರೂಪವನ್ನು ತೋರಿಸಿಕೊಡುತ್ತದೆ.

 ಇದೇ ಕನ್ನಡದಲ್ಲಿ ದೊರೆತ ಮೊದಲ ಶಾಸನವಾಗಿದೆ. ಕರ್ನಾಟಕದಲ್ಲಿ ವಾಸ್ತುಶಿಲ್ಪ ಕಲೆಗೆ ತಳಹದಿಯನ್ನು ಕದಂಬರು ಹಾಕಿದರು.

 ಬನವಾಸಿಯಲ್ಲಿ ಅನೇಕ ದೇವಾಲಯಗಳನ್ನು ಮತ್ತು ಬಸದಿಗಳನ್ನು ನಿರ್ಮಿಸಿದರು.

 ಕದಂಬರ ಕಾಲದಲ್ಲಿ ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ಅಭಿವೃದ್ಧಿಗೊಂಡು ಶಿಕ್ಷಣ ಕೇಂದ್ರಗಳಾದ ಅಗ್ರಹಾರಗಳು, ಬ್ರಹ್ಮಪುರಿಗಳು ಮತ್ತು ಘಟಿಕ ಸ್ಥಾನಗಳು ಸ್ಥಾಪನೆಗೊಂಡವು. ಆ ಕಾಲದ ಪ್ರಮುಖ ಅಗ್ರಹಾರಗಳು ತಾಳಗುಂದ ಮತ್ತು ಬಳ್ಳಿಗಾವೆಯಲ್ಲಿದ್ದವು. ಅಗ್ರಹಾರಗಳು ಗುರುಕುಲಗಳಾಗಿದ್ದು ವಸತಿ ಶಾಲೆಗಳಂತೆ ನಡೆಯುತ್ತಿದ್ದವು.

ಗಂಗರು (ಸಾ.ಶ. 350 - ಸಾ.ಶ. 1004)

 ಗಂಗರಾಜ ವಂಶದ ಉನ್ನತಿ ಮತ್ತು ಅವನತಿ ಕರ್ನಾಟಕದ ಇತಿಹಾಸದ ಆದಿಭಾಗದ ಒಂದು ಮುಖ್ಯ ಅಧ್ಯಾಯವಾಗಿದೆ.

 ಗಂಗವಂಶದ ಸಂಸ್ಥಾಪಕರು ತಮ್ಮನ್ನು ಇಕ್ಷ್ವಾಕು ವಂಶದವರೆಂದು ಹೇಳಿಕೊಂಡರು.

 ಕುವಲಾಲ, ತಲಕಾಡು ಹಾಗೂ ಮಾನ್ಯಪುರ (ಈಗಿನ ಮಣ್ಣೆ, ನೆಲಮಂಗಲ, ಬೆಂಗಳೂರು ಗ್ರಾಮಾಂತರ ಜಿಲ್ಲೆ) ಗಳಿಂದ ರಾಜ್ಯವಾಳಿದರು.

 ದಡಿಗನಿಂದ ಪ್ರಾರಂಭವಾದ ಗಂಗವಾಡಿ ರಾಜ್ಯವು ಸುಮಾರು 27 ಮಂದಿ ರಾಜರುಗಳಿಂದ ಆಳಲ್ಪಟ್ಟಿತು. ದುರ್ವಿನೀತನು ಗಂಗರಸರಲ್ಲಿ ಪ್ರಸಿದ್ಧನಾದವನು.

 ಅಪ್ರತಿಮ ವೀರ ಹಾಗೂ ವಿದ್ವಾಂಸ. ದೀರ್ಘಕಾಲ ಆಳಿದ ಇವನು ತನ್ನ ರಾಜ್ಯವನ್ನು ಬಲಪಡಿಸಿಕೊಳ್ಳಲು ಪುನ್ನಾಟವನ್ನು ಗೆದ್ದುಕೊಂಡನು.

 ಇವನು ಅನೇಕ ಕೆರೆಗಳನ್ನು ನೀರಾವರಿಗಾಗಿ ಕಟ್ಟಿಸಿದನೆಂದು ನಲ್ಲಾಳ ತಾಮ್ರ ಪಟಗಳಿಂದ ತಿಳಿದುಬರುತ್ತದೆ.

 ಈತನು ಸಾಹಿತ್ಯ ಪ್ರೇಮಿಯಾಗಿದ್ದನಲ್ಲದೆ ಸ್ವತಃ ಸಂಸ್ಕøತ ಮತ್ತು ಕನ್ನಡ ಭಾಷೆಯಲ್ಲಿ ಸಾಹಿತ್ಯ ರಚಿಸಿದ್ದಾನೆ. ಗುಣಾಢ್ಯನ ವಡ್ಡಕಥಾ ಗ್ರಂಥವನ್ನು ಪ್ರಾಕೃತದಿಂದ ಸಂಸ್ಕøತಕ್ಕೆ ಭಾಷಾಂತರಿಸಿದ್ದಾನೆ.

ಗಂಗರ ಕೊಡುಗೆಗಳು

 ರಾಜನಿಗೆ ಸಹಾಯಕವಾಗಿ ಮಂತ್ರಾಲೋಚನೆ ಸಭೆಯಿತ್ತು. ಮಂತ್ರಿಗಳು ವಿವಿಧ ಆಡಳಿತ ಶಾಖೆಗಳ ಮೇಲ್ವಿಚಾರಣೆ ನಡೆಸುತ್ತಿದ್ದರು.

 ಗ್ರಾಮಾಡಳಿತವು ಸುವ್ಯವಸ್ಥಿತವಾಗಿತ್ತು. ಗ್ರಾಮಸಭೆಯು ಭೂಕಂದಾಯ, ತೆರಿಗೆ, ನ್ಯಾಯ, ನೈರ್ಮಲ್ಯ, ರಕ್ಷಣೆಗಳನ್ನು ಗಮನಿಸುತ್ತಿದ್ದಿತು.

 ವ್ಯವಸಾಯವು ಮುಖ್ಯ ಕಸುಬಾಗಿದ್ದಿತು. ನೇಯ್ಗೆ, ಕಮ್ಮಾರಿಕೆ ಮುಂತಾದ ಕಸುಬುಗಳಿದ್ದವು. ಇತರ ರಾಷ್ಟ್ರಗಳೊಡನೆ ವ್ಯಾಪಾರ ಸಂಬಂಧವನ್ನಿಟ್ಟುಕೊಂಡಿದ್ದರು.

 ಗಂಗರ ಕಾಲದ ಸಮಾಜ ಹಲವು ಪಂಗಡ ಜಾತಿಗಳಾಗಿ ವಿಭಜಿತವಾಗಿದ್ದರೂ ಪರಸ್ಪರಾವಲಂಬಿಗಳಾಗಿದ್ದರು. ಪಿತೃ ಪ್ರಧಾನ ಅವಿಭಕ್ತ ಕುಟುಂಬ ಪದ್ಧತಿ ಸಾಮಾನ್ಯವಾಗಿತ್ತು.

 ಸಮಾಜದಲ್ಲಿ ಸತ್ಯಶೀಲತೆ, ಸ್ವಾಮಿನಿಷ್ಠೆ, ಶೌರ್ಯ ಮತ್ತು ತಾಳ್ಮೆ ಎಂಬ ಸಾಮಾಜಿಕ ಮೌಲ್ಯಗಳು ಪ್ರಭಾವಿಯಾಗಿದ್ದವು.

 ಚೈತ್ಯಾಲಯ, ದೇವಾಲಯ, ಮಠ ಹಾಗೂ ಅಗ್ರಹಾರಗಳು ಶಿಕ್ಷಣ ನೀಡುವ . ಉನ್ನತ ಕೇಂದ್ರಗಳಾಗಿದ್ದವು

 ವಿದ್ಯಾಭ್ಯಾಸಕ್ಕೆ ಬ್ರಹ್ಮಪುರಿ ಮತ್ತು ಘಟಿಕ ಸ್ಥಾನಗಳಿದ್ದವು. ತಲಕಾಡು, ಶ್ರವಣಬೆಳಗೊಳ, ಬಂಕಾಪುರ ಮತ್ತು ಪೆರೂರುಗಳನ್ನು ಜ್ಞಾನಾರ್ಜನೆಯ ಕೇಂದ್ರಗಳೆಂದು ಹೆಸರಿಸಲಾಗಿದೆ.

 ಗಂಗರು ಜೈನ ಮತಾವಲಂಬಿಗಳಾದುದರಿಂದ ಜೈನಮತವು ಅಭಿವೃದ್ಧಿಗೆ ಬಂದಿತು. ಪೂಜ್ಯಪಾದ, ವಜ್ರನಂದಿ, ಅಜಿತಸೇನ ಮುಂತಾದವರುಗಳಿಂದ ಈ ಧರ್ಮವು ಜನಪ್ರಿಯವಾಯಿತು.

 ಅಲ್ಲದೆ ಶ್ರವಣಬೆಳಗೊಳದಲ್ಲಿ 58 ಅಡಿ ಏಕಶಿಲಾ ಗೊಮ್ಮಟೇಶ್ವರ ಪ್ರತಿಮೆಯನ್ನು ಪ್ರತಿಷ್ಠಾಪನೆಗೊಳಿಸಿ ಅದನ್ನು ಅತ್ಯಂತ ಪ್ರಸಿದ್ಧ ಕೇಂದ್ರವನ್ನಾಗಿ ಮಾರ್ಪಡಿಸಿದರು.

 ಹನ್ನೆರಡು ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ಗೊಮ್ಮಟೇಶ್ವರನಿಗೆ ಇಂದಿಗೂ ನಡೆಯುತ್ತದೆ.

 ಬಾಹುಬಲಿ – ಗೊಮ್ಮಟೇಶ್ವರ

ಶ್ರವಣಬೆಳಗೊಳದ ಗೊಮ್ಮಟೇಶ್ವರ (ಬಾಹುಬಲಿ) ಮೂರ್ತಿಯು ವಿರಕ್ತ ಜೀವನದ ಸಂಕೇತವಾಗಿದೆ. ನಾಲ್ಕನೇ ರಾಚಮಲ್ಲನ ಮಂತ್ರಿಯಾಗಿದ್ದ ಚಾವುಂಡರಾಯನು ಇದನ್ನು ನಿರ್ಮಿಸಿದವನು.

 100 ಜನ ಸಹೋದರರಲ್ಲಿ ಭರತ ಹಿರಿಯವ, ಬಾಹುಬಲಿ ಕಿರಿಯವ. ಭರತನಿಗೆ ರಾಜ್ಯಾಭಿಷೇಕವಾದ ಮೇಲೆ ಒಂದು ಚಕ್ರರತ್ನ ದೊರಕಿ ಎಲ್ಲಾ ರಾಜ್ಯಗಳನ್ನು ಗೆದ್ದು ಚಕ್ರಾಧಿಪತಿಯಾಗುತ್ತಾನೆ.

 ಅದಕ್ಕೂ ಮೊದಲು ಎಲ್ಲಾ ತಮ್ಮಂದಿರೂ ಅವನ ಅಧಿಪತ್ಯವನ್ನು ಒಪ್ಪಿಕೊಳ್ಳುತ್ತಾರೆ. ಆದರೆ ಬಾಹುಬಲಿ ಒಪ್ಪದಿದ್ದಾಗ, ಯುದ್ಧಕ್ಕೆ ಅಣಿಯಾಗುತ್ತಾರೆ.

 ದೃಷ್ಟಿಯುದ್ಧ, ಜಲಯುದ್ಧ, ಮಲ್ಲಯುದ್ಧದಲ್ಲಿ ಭರತ ಸೋಲುತ್ತಾನೆ. ಮಲ್ಲಯುದ್ಧದ ಅಂತ್ಯದಲ್ಲಿ ಬಾಹುಬಲಿ ಭರತನನ್ನು ಚಕ್ರದಂತೆ ತಿರುಗಿಸಿ ಇನ್ನೇನು ಬಿಸಾಡಬೇಕು ಎನ್ನುವಷ್ಟರಲ್ಲಿ ಬಾಹುಬಲಿಯ ಮನದಲ್ಲಿ ವಿರಕ್ತಿ ಉಂಟಾಗಿ, ಅಣ್ಣನನ್ನು ಕೆಳಗಿಳಿಸಿ ನಮಸ್ಕಾರ ಮಾಡಿ ನಿರ್ವಾಣಕ್ಕೆ ಹೋಗಿ ನಿಂತೇ ತಪಸ್ಸು ಮಾಡುತ್ತಾನೆ.

 ಆದರೂ ಮುಕ್ತಿಯಾಗದಿದ್ದಾಗ, ಬಾಹುಬಲಿಯು ತನ್ನ ಅಣ್ಣ ಸಾಮ್ರಾಜ್ಯದಲ್ಲಿ ನಿಂತು ತಪಸ್ಸು ಮಾಡುತ್ತಿರುವುದರಿಂದ ಅವನಿಗೆ ನಿರ್ವಾಣ ದೊರಕುತ್ತಿಲ್ಲವೆಂದು ತಿಳಿಯುತ್ತದೆ.

 ಆಗ ಭರತನೇ ಬಂದು ಬಾಹುಬಲಿಗೆ ಇಡೀ ಸಾಮ್ರಾಜ್ಯವೇ ಬಾಹುಬಲಿಯದೆಂದೂ, ಅದನ್ನು ಆಳುತ್ತಿರುವವನು ತಾನೆಂದು ತಿಳಿಸಿದಾಗ ಮೋಕ್ಷ ಲಭಿಸುತ್ತದೆ.

 ಗಂಗರಾಜರು ಕಲೆ ಮತ್ತು ವಾಸ್ತುಶಿಲ್ಪಗಳಿಗೆ ಪ್ರೋತ್ಸಾಹ ನೀಡಿದ್ದರು. ಇವರು ಸುಂದರ ದೇವಾಲಯಗಳನ್ನು, ಬಸದಿಗಳನ್ನು ಕಟ್ಟಿಸಿದರು. ಮಣ್ಣೆಯಲ್ಲಿರುವ ಕಪಿಲೇಶ್ವರ ದೇವಸ್ಥಾನ, ತಲಕಾಡಿನ ಪಾತಾಳೇಶ್ವರ ಮತ್ತು ಮರುಳೇಶ್ವರ, ಕೋಲಾರದ ಕೋಲಾರಮ್ಮ, ಬೇಗೂರಿನ ನಾಗರೇಶ್ವರ, ಶ್ರವಣಬೆಳಗೊಳದ ಗೊಮ್ಮಟೇಶ್ವರ ಮುಂತಾದವು.

 ಗಂಗರ ವಿಶಿಷ್ಟ ಕೊಡುಗೆಯೆಂದರೆ ಎತ್ತರದ ಮಾನಸ್ತಂಭ ಮತ್ತು ಬ್ರಹ್ಮ ಮಾನಸ್ತಂಭಗಳು. ಸಾಹಿತ್ಯಾಭಿಮಾನಿಗಳಾದ ಗಂಗರಾಜರು ಸಂಸ್ಕøತ, ಪ್ರಾಕೃತ ಮತ್ತು ಕನ್ನಡ ಭಾಷೆಗಳಿಗೆ ಪ್ರೋತ್ಸಾಹ ನೀಡಿದ್ದರಿಂದ ಗ್ರಂಥ ರಚನೆಗಳಾದುವು. ಇಮ್ಮಡಿ ಮಾಧವನು ‘ದತ್ತಕ ಸೂತ್ರ’ಕ್ಕೆ ಟಿಪ್ಪಣಿ ಬರೆದನು. ದುರ್ವಿನೀತನು ‘ಶಬ್ದಾವತಾರ’ ಸಂಸ್ಕøತ ಕೃತಿಯನ್ನು ರಚಿಸಿದನಲ್ಲದೇ, ಗುಣಾಢ್ಯನ ‘ವಡ್ಡಕತೆ’ಯನ್ನು ಸಂಸ್ಕøತಕ್ಕೆ ಅನುವಾದ ಮಾಡಿದನು.

 ಶ್ರೀ ಪುರುಷನು ‘ಗಜಶಾಸ್ತ್ರ’ವನ್ನು, ಎರಡನೇ ಶಿವಮಾಧವನು ‘ಗಜಾಷ್ಟಕ’ ಕನ್ನಡ ಕೃತಿಯನ್ನು ರಚಿಸಿದನು. ಕವಿ ಹೇಮಸೇನನು ‘ರಾಘವ ಪಾಂಡವೀಯ’ವನ್ನು, ವಾದೀಬಸಿಂಹನು ‘ಗದ್ಯ ಚಿಂತಾಮಣಿ’ ಮತ್ತು ‘ಷಾತ್ರ ಚೂಡಾಮಣಿ’ಯನ್ನು, ನೇಮಿಚಂದ್ರನು ‘ದ್ರವ್ಯಸಾರ ಸಂಗ್ರಹ’ವನ್ನು, ಚಾವುಂಡರಾಯನು ‘ಚಾವುಂಡ ಪುರಾಣ’ವನ್ನು ರಚಿಸಿ ಪ್ರಸಿದ್ಧರಾದರು.
logoblog

Thanks for reading South India-Shathavahanas, Kadambas

Previous
« Prev Post

No comments:

Post a Comment