ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗುಪ್ತರ ಮೇಲೆ ಕೇಳಲು ಪ್ರಶ್ನೋತ್ತರಗಳು
1) ಗುಪ್ತ ಸಾಮ್ರಾಜ್ಯದ ಸ್ಥಾಪಕ ಯಾರು? (PC-2010)
ಶ್ರೀ ಗುಪ್ತ.
2) ಮೆಹ್ರೌಲಿ ಕಬ್ಬಿಣ ಸ್ಥಂಭ ಶಾಸನವು? (KAS-2006)
ಪ್ರಾಚೀನ ಭಾರತದ ಕುಶಲಕರ್ಮಿಗಳ ನೈಪುಣ್ಯಕ್ಕೆ ಸಾಕ್ಷಿ ಯಾಗಿದೆ.
3) ಗುಪ್ತರ ನಂತರದ ಕಾಲದಲ್ಲಿ ಉಗಮವಾದ ಹೊಸ ಜಾತಿಯನ್ನು ಏನೆಂದು ಕರೆಯಲಾಗಿದೆ?
(D, Ed-2008)
ಕಾಯಸ್ಥರು.
4) ಸಂಸ್ಕೃತ ಕವಿ ಕಾಳಿದಾಸ ಯಾರ ಆಸ್ಥಾನದಲ್ಲಿದ್ದರು?(PSI-2005)
ಎರಡನೇ ಚಂದ್ರಗುಪ್ತ.
5) ಚಿನಿದೇಶದ ಯಾತ್ರಿಕ ಪಾಹಿಯಾನ ಭಾರತಕ್ಕೆ ಭೇಟಿ ನೀಡಿದಾಗ ಆಳುತ್ತಿದ್ದ ರಾಜ ಯಾರು?(PC-2008)
ಎರಡನೇ ಚಂದ್ರಗುಪ್ತ.
6) "ವಿಕ್ರಮಾದಿತ್ಯ" ಎಂಬ ಬಿರುದು ಯಾರದು?
ಎರಡನೇ ಚಂದ್ರಗುಪ್ತ
7) ಇಂಡಿಯಾ ದೇಶದ ಜನರನ್ನು "ಸಚ್ಚರಿತ್ರರು ಆದರೆ ಶೀಘ್ರ ಕೋಪಿಗಳು" ಎಂದು ಹೇಳಿದವರು?
ಪಾಹಿಯಾನ
8) ಗುಪ್ತರ ಕಾಲದ ನಂತರ ಅವಧಿಯಲ್ಲಿ ಭೂಮಿಯನ್ನು?
ರಾಜ್ಯದ ಆಸ್ತಿಯೆಂದು ಪರಿಗಣಿಸಲಾಗುತ್ತಿತ್ತು.
9) ಭಾರತದ ಪ್ರಾಚೀನ ಜ್ಯೋತಿಷ್ಯಶಾಸ್ತ್ರಜ್ಞರಾದ "ಆರ್ಯಭಟ" ಮತ್ತು "ವರಹಮೀರ" ಕೆಳಕಂಡ ರಾಜವಂಶದ ಕಾಲಕ್ಕೆ ಸೇರಿದವರಾಗಿದ್ದಾರೆ?
ಗುಪ್ತರ ಕಾಲ.
10) ಯಾರ ಕಾಲವನ್ನು "ಸುವರ್ಣಯುಗವೆಂದು" ಕರೆಯುತ್ತಾರೆ?
ಗುಪ್ತರ ಕಾಲವನ್ನು.
11) ಗುಪ್ತರ ಆಳ್ವಿಕೆ ಕಾಲದಲ್ಲಿ "ಭುಕ್ತಿಗಳು" ಎಂಬ ಪದದ ಸಮಾನವಾದುದು ಯಾವುದು?
ಪ್ರಾಂತ್ಯಗಳು.
12) ಗುಪ್ತರ ಕಾಲದ ಬಂಗಾರದ ವಿನಿಮಯ ಮಾಧ್ಯಮವನ್ನು ಏನೆಂದು ಕರೆಯಲಾಗುತ್ತಿತ್ತು?
ಸುವರ್ಣ
13) ಗುಪ್ತರ ಯುಗದಲ್ಲಿ ಚಿನ್ನದ ನಾಣ್ಯಗಳ ಚಲಾವಣೆ ಹೆಚ್ಚಾಗಿದ್ದಲ್ಲಿ ಏನನ್ನು ಸೂಚಿಸುತ್ತದೆ?
ವಿದೇಶಿ ವ್ಯಾಪಾರದ ಬೆಳವಣಿಗೆಯಿಂದ ಹೆಚ್ಚಿನ ಚಿನ್ನದ ಒಳಹರಿವು.
14) ಗುಪ್ತರ ಸಾಮ್ರಾಜ್ಯದ ಉನ್ನತ ಅಧಿಕಾರಿಗಳಾದ "ಭಟಶ್ವಪತಿ" ಮತ್ತು "ಕಟುಕ" ಯಾವ ಆಡಳಿತ ವ್ಯವಸ್ಥೆಗೆ ಸಂಬಂಧಿಸಿದರು?
ಸೈನ್ಯ.
15) ಚಂದ್ರಗುಪ್ತನ ಆಸ್ಥಾನದಲ್ಲಿ ಸಂಸ್ಕೃತ ಪಂಡಿತ ಯಾರಾಗಿದ್ದರು?
ಅಮರಸಿಂಹ
16) ಯಾವ ಗುಪ್ತ ಸಾಮ್ರಾಟನ ನಾಣ್ಯಗಳು "ಕೊಳಲು" ಅಥವಾ "ವೀಣೆ" ನುಡಿಸುವುದನ್ನು ಬಿಂಬಿಸುತ್ತದೆ?
ಸಮುದ್ರಗುಪ್ತ
17) ಗುಪ್ತ ಸಾಹಿತ್ಯದ "ಪುನರ್ಜೀವನದ ಚಿನ್ನದ ಯುಗವೆಂದು" ಹೇಳುವುದು ಯಾರ ಆಡಳಿತ ಕಾಲವನ್ನು?
ಎರಡನೇ ಚಂದ್ರಗುಪ್ತ.
18) ಅಲಹಾಬಾದ್ ಸ್ತಂಭ ಶಾಸನದ ಕರ್ತೃ ಯಾರು?
ಹರಿಸೇನ್
19) ಯಾವ ಪುಸ್ತಕ ಗುಪ್ತರ ಅಧಿಕೃತ ಕಾನೂನು ಪುಸ್ತಕ ಎಂದು ಪರಿಗಣಿಸಲಾಗಿದೆ?
ಮನಸ್ಮೃತಿ.
20) ಗುಪ್ತರ ಕಾಲದ ಬೆಳ್ಳಿ ನಾಣ್ಯ ಹೆಸರು?
ರೂಪಕ.
21) ಗುಪ್ತರ ಕಾಲದಲ್ಲಿ ಉತ್ತರ ಭಾರತದ ವ್ಯಾಪಾರವನ್ನು ಯಾವ ಬಂದರು ನಿರ್ವಹಿಸುತ್ತಿದ್ದು?
ತಮ್ರಲಿಪ್ತಿ.
22) ಗುಪ್ತರ ಕಾಲದಲ್ಲಿ ಯಾರು "ಬ್ಯಾಂಕರ್ಸ್" ಮತ್ತು "ಹಣದ ಲೇವಾದೇವಿಗಾರರಾಗಿದ್ದರು"?
ನಗರ ಶ್ರೇಣಿಗಳು.
23) ನಳಂದ ವಿಶ್ವವಿದ್ಯಾಲಯ ಯಾರ ಕಾಲದಲ್ಲಿ ಸ್ಥಾಪಿತವಾಗಿದೆ?
ಗುಪ್ತರ ಕಾಲದಲ್ಲಿ.
24) ಗುಪ್ತರ ಸುವರ್ಣಯುಗ ಕಾಲವು ಎಷ್ಟು ಶತಮಾನ ವಿತ್ತು?
ಎರಡು ಶತಮಾನದವರೆಗೆ.
25) ಅಜಂತಾ ಗುಹಾಂತರ ಗಳಲ್ಲಿ "ತೆರೆದ ವರ್ಣಚಿತ್ರಗಳನ್ನು" ರಚಿಸಿದಾಗ ಪ್ರವರ್ಧಮಾನವಾಗಿ ಹೇಳುತ್ತಿದ್ದ ಸಂತತಿ ಯಾವುದು?
ಗುಪ್ತರು.
27) ಭಾರತದ ನೆಪೋಲಿಯನ್ ಯಾರು?
ಸಮುದ್ರಗುಪ್ತ.
No comments:
Post a Comment