Wednesday, 10 March 2021

Brief information about the emergency

  MahitiVedike Com       Wednesday, 10 March 2021


    ತುರ್ತು ಪರಿಸ್ಥಿತಿ ಬಗ್ಗೆ ಸಂಕ್ಷಿಪ್ತ ಮಾಹಿತಿ


 _ಭಾರತ ಸಂವಿಧಾನಕ್ಕೆ ತುರ್ತು ಪರಿಸ್ಥಿತಿಯನ್ನು ಜರ್ಮನಿಯ ಸಂವಿಧಾನದಿಂದ ಎರವಲು ಪಡಯಲಾಗಿದೆ. ರಾಷ್ಟ್ರದ ಆರ್ಥಿಕ ಸ್ಥಿರತೆಗೆ ಧಕ್ಕೆಯಾದಾಗ ರಾಷ್ಟ್ರಾಧ್ಯಕ್ಷರು ಆರ್ಥಿಕ ತುರ್ತು ಪರಿಸ್ಥಿತಿಯನ್ನು ಘೋಷಿಸಬಹುದು. ರಾಷ್ಟ್ರಾಧ್ಯಕ್ಷರು ಸಂಧಿಗ್ದ ಪರಸ್ಥಿತಿಗಳಲ್ಲಿ ಮೂರು ಬಗೆಯ ತುರ್ತು ಪರಿಸ್ಥಿತಿಗಳನ್ನು ಘೋಷಿಸುವ ಅಧಿಕಾರವನ್ನು ಹೊಂದಿದ್ದಾರೆ._ 

 _ಮೂರು ವಿಧಗಳೆಂದರೆ:_ 

1) ರಾಷ್ಟ್ರೀಯ ತುರ್ತು ಪರಿಸ್ಥಿತಿ-352ನೇ ವಿಧಿ

 _ಯುದ್ದ ಅಥವಾ ಬಾಹ್ಯ ಆಕ್ರಮಣ ಅಥವಾ ಸಶಸ್ತ್ರ ಬಂಡಾಯ ಇವುಗಳಿಂಧಾಗಿ ಭಾರತದ ಅಥವಾ ಭಾರತದ ಯಾವುದೇ ಭಾಗದ ಭದ್ರತೆಗೆ ತೊಂದರೆಯಾದಾಗ ರಾಷ್ಟ್ರಾಧ್ಯಕ್ಷರು *352ನೇ ವಿಧಿಯನ್ವಯ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು* ಘೋಷಿಸಬಹುದು._

 _ರಾಷ್ಟ್ರೀಯ ಭದ್ರತೆಗೆ ತೊಂದರೆಯಾಗಬಹುದೆಂದು ಭಾವಿಸಿದ್ದಲ್ಲಿ ರಾಷ್ಟ್ರಾಧ್ಯಕ್ಷರು ಯುದ್ದ ಅಥವಾ ಬಾಹ್ಯ ಆಕ್ರಮಣ ಅಥವಾ ಸಶಸ್ತ್ರ ಬಂಡಾಯ ಸಂಭವಿಸುವುದಕ್ಕಿಂತ ಮುಂಚಿತವಾಗಿಯೇ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಬಹುದು._ 

2) _ರಾಜ್ಯ ತುರ್ತು ಪರಿಸ್ಥಿತಿ-356ನೇ ವಿಧಿ
:(_ KSRP-2020)

 _ಎರಡು ಆಧಾರಗಳ ಮೇಲೆ ಯಾವುದೇ ರಾಜ್ಯದ ಮೇಲೆ ರಾಷ್ಟ್ರಾಧ್ಯಕ್ಷರ ಆಡಳಿತವನ್ನು ಘೋಷಿಸಬಹುದು_ .

1. _ರಾಜ್ಯ ಸರ್ಕಾರವು ಸಂವಿಧಾನದ ನಿಯಮಗಳಿಗನುಗುಣವಾಗಿ ಆಡಳಿತ ನಡೆಸಲು ವಿಫಲವಾದರೆ *356ನೇ ವಿಧೀಯಡಿಯಲ್ಲಿ* ಅಂತಹ ರಾಜ್ಯದ ಮೇಲೆ ರಾಷ್ಟ್ರಾಧ್ಯಕ್ಷರು ತಮ್ಮ ಆಡಳಿತ ಘೋಷಿಸಬಹುದು. ರಾಷ್ಟ್ರಾಧ್ಯಕ್ಷರು ರಾಜ್ಯಪಾಲರ ವರದಿಯನ್ನು ಆಧರಿಸಿ ಘೋಷಿಸಬಹುದು ಅಥವಾ ರಾಜ್ಯಪಾಲರ ವರದಿಯಿಲ್ಲದೇ ತಾವೇ ಘೋಷಿಸಬಹುದು._ 

2. _356ನೇ ವಿಧಿಯನ್ವಯ ರಾಜ್ಯ ಸರ್ಕಾರವು ಕೇಂದ್ರದಿಂದ ನೀಡಲ್ಪಟ್ಟ ನಿರ್ದೇಶನಗಳನ್ನು ಪಾಲಿಸಲು ಅಥವಾ ಅನುಷ್ಟಾನಗೊಳಿಸಲು ವಿಫಲವಾದರೆ ರಾಷ್ಟ್ರಾಧ್ಯಕ್ಷರು ಅಂತಹ ರಾಜ್ಯದ ಮೇಲೆ ತಮ್ಮ ಆಡಳಿತ ಘೋಷಿಸಬಹುದು_ .

3)  ಆರ್ಥಿಕ ತುರ್ತು ಪರಿಸ್ಥಿತಿ-360ನೇ ವಿಧಿ 

 _ಭಾರತದ ಅಥವಾ ಭಾರತದ ಯಾವುದೇ ಭಾಗದಲ್ಲಿ ಆರ್ಥಿಕ ಭದ್ರತೆಗೆ ಧಕ್ಕೆಯೊದಗಿದೆ ಎಂದು *ರಾಷ್ಟ್ರಾಧ್ಯಕ್ಷರು ಭಾವಿಸಿದ್ದಲ್ಲಿ 360ನೇ ವಿಧಿಯನ್ವಯ* ಅವರು ಆರ್ಥಿಕ ತುರ್ತು ಪರಿಸ್ಥಿತಿ ಘೋಷಿಸಬಹುದು. 

 _1975ರ 38ನೇತಿದ್ದುಪಡಿ ಕಾಯ್ದೆಯ ಪ್ರಕಾರ ಆರ್ಥಿಕ ತುರ್ತು ಪರಿಸ್ಥಿತಿ ಘೋಷಣೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿರಲಿಲ್ಲ._ 

 _ಆದರೆ 1978ರ 44ನೇ ತಿದ್ದುಪಡಿ ಕಾಯ್ದೆಯು ಆರ್ಥಿಕ ತುರ್ತು ಪರಿಸ್ಥಿತಿ ಘೋಷಣೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು ಎಂದು ಸ್ಪಷ್ಟಪಡಿಸುತ್ತದೆ._ 

 _ಈ ರೀತಿ 44ನೇ ತಿದ್ದುಪಡಿ ಕಾಯ್ದೆಯು ಆರ್ಥಿಕ ತುರ್ತು ಪರಿಸ್ಥಿತಿಯ ಘೋಷಣೆಯನ್ನು ನ್ಯಾಯಿಕ ವಿಮರ್ಶೆಯ ಪರಿಶೀಲನೆಯ ವ್ಯಾಪ್ತಿಗೆ ಒಳಪಡಿಸುತ್ತದೆ._ 
logoblog

Thanks for reading Brief information about the emergency

Previous
« Prev Post

No comments:

Post a Comment