Monday 8 March 2021

Mauryas, Kushanas and no

  MahitiVedike Com       Monday 8 March 2021

ಮೌರ್ಯರು,ಕುಶಾನರು ಮತ್ತು ಶಾತವಾನರು


ಮ್ಯಾಸಿಡೋನಿಯನ್ನರ (ಗ್ರೀಕರು) ದೊರೆ ಅಲೆಗ್ಲಾಂಡರ್ (ಕ್ರಿ.ಪೂ. 355-323): ಭಾರತದ ಆಕ್ರಮಣ 327-26 ಅಲೆಗ್ಲಾಂಡರ್ ಅಪ್ರತಿಮವೀರ ಇವನ ತಂದೆ ಎರಡನೆ ಫಿಲಿಫ್ ಮ್ಯಾಸಿಡೋನಿಯಾದ ಅರಸ ಸುಪ್ರಸಿದ್ದ ಗ್ರೀಕ್ ದಾರ್ಶನಿಕ ಅರಿಸ್ಟಾಟಲ್ ಅಲೆಕ್ಸಾಂಡರ್‌ನ ಗುರುವಾಗಿದ್ದನು. ಗ್ರೀಸ್‌ನ ಹೋಮರ್ ಮಹಾಕವಿಯ ಕೃತಿ “ಇಲಿಯಡ್ ಮತ್ತು ಒಡಿಸ್ಸಿ

ಮೌರ್ಯರು

ಭಾರತ ಕಂಡ ಮೊಟ್ಟಮೊದಲ ಸಾಮ್ರಾಜ್ಯ ಮೌರ್ಯರದು. ಇವರು ಮಗಧದಿಂದ ರಾಜ್ಯವನ್ನಾಳಿದರು.

ಚಂದ್ರಗುಪ್ತಮೌರ್ಯ, ಬಿಂದುಸಾರ ಹಾಗೂ ಅಶೋಕ ಈ ಮನೆತನದ ರಾಜರುಗಳಲ್ಲಿಯೇ ಪ್ರಮುಖರು.

ಈ ರಾಜಮನೆತನವು ಚಂದ್ರಗುಪ್ತಮೌರ್ಯನಿಂದ ಸ್ಥಾಪನೆಯಾಯಿತು.

ಇವನ ಪ್ರಖ್ಯಾತಿಯನ್ನು ಗ್ರೀಕರ ರಾಯಭಾರಿಯಾಗಿದ್ದ ಮೆಗಸ್ತನಿಸನು ‘ಇಂಡಿಕಾ’ದಲ್ಲಿ ದಾಖಲಿಸಿ ಅಮರಗೊಳಿಸಿದನು.
ಆಕರಗಳು

ಮೌರ್ಯ ಸಾಮ್ರಾಜ್ಯದ ಇತಿಹಾಸವನ್ನು ಅರಿಯಲು ನಮಗೆ ಲಭ್ಯವಿರುವ ಆಕರ(ಆಧಾರ)ಗಳು ಅತ್ಯಲ್ಪವಾದರೂ ಅವುಗಳು ನೀಡುವ ಮಾಹಿತಿ ಅಮೂಲ್ಯವಾಗಿವೆ. ಅವುಗಳನ್ನು ಈ ಕೆಳಗೆ ಗಮನಿಸಬಹುದು.

ಮೆಗಸ್ತನಿಸನ ‘ಇಂಡಿಕಾ’: ಮೆಗಸ್ತನೀಸನು ಗ್ರೀಕ್ನ ರಾಯಭಾರಿಯಾಗಿ ಚಂದ್ರಗುಪ್ತಮೌರ್ಯನ ಆಸ್ಥಾನಕ್ಕೆ ಬಂದನು. ಅವನು ಮೌರ್ಯರ ರಾಜಧಾನಿ ‘ಪಾಟಲಿಪುತ್ರ’ದಲ್ಲಿನ ತನ್ನ ಅನುಭವಗಳನ್ನು ‘ಇಂಡಿಕಾ’ ಎಂಬ ಕೃತಿಯಲ್ಲಿ ದಾಖಲಿಸಿದ್ದಾನೆ.

ಈ ಕೃತಿಯು ನಮಗೆ ಇಂದು ದೊರೆತಿಲ್ಲವಾದರೂ, ಅದರಲ್ಲಿನ ಸಂಗತಿಗಳನ್ನು ನಂತರ ಬಂದ ಗ್ರೀಕಿನ ಬರಹಗಾರರಾದ ಡಿಯೋಡೋರಸ್, ಸಿಕ್ಯುಲಸ್, ಸ್ಟ್ರಾಬೋ, ಫ್ಲಿನಿ ಮತ್ತು ಅರಿಯನ್ ಅವರುಗಳು ತಮ್ಮ ಗ್ರಂಥಗಳಲ್ಲಿ ದಾಖಲಿಸಿದ್ದಾರೆ. ‘ಇಂಡಿಕಾ’ ಕೃತಿಯು ಮೌರ್ಯರ ಕಾಲದ ನಗರಾಡಳಿತ, ಸಾಮಾಜಿಕ ಮತ್ತು ಆರ್ಥಿಕ ಸಂಗತಿಗಳನ್ನು ಕುರಿತು ತಿಳಿಸಿಕೊಡುತ್ತದೆ.

ಅರ್ಥಶಾಸ್ತ್ರ:ಅರ್ಥಶಾಸ್ತ್ರವನ್ನು ಚಂದ್ರಗುಪ್ತಮೌರ್ಯನ ಗುರು ಹಾಗೂ ಪ್ರಧಾನಮಂತ್ರಿಯಾದ ಕೌಟಿಲ್ಯನು ಬರೆದಿದ್ದಾನೆ. ಅವನಿಗೆ ಚಾಣಕ್ಯ ಮತ್ತು ವಿಷ್ಣುಗುಪ್ತ ಎಂಬ ಹೆಸರುಗಳೂ ಇವೆ. ಅರ್ಥಶಾಸ್ತ್ರ ಗ್ರಂಥವು ಸಂಸ್ಕøತ ಭಾಷೆಯಲ್ಲಿ ರಚಿಸಲ್ಪಟ್ಟಿದೆ.

ಇದು ರಾಜನೊಬ್ಬನು ತಿಳಿಯಲೇಬೇಕಾದ ರಾಜ್ಯಾಡಳಿತ, ವಿದೇಶಾಂಗ ನೀತಿ, ನ್ಯಾಯದಾನದ ಸಂಗತಿಗಳನ್ನು ವಿವರವಾಗಿ ತಿಳಿಸುತ್ತದೆ. ಈ ಗ್ರಂಥದಿಂದ ಮೌರ್ಯರ ಕಾಲದ ರಾಜಕೀಯ, ಆರ್ಥಿಕ, ಆಡಳಿತಾತ್ಮಕ, ಸಾಮಾಜಿಕ ಮೊದಲಾದ ಸಂಗತಿಗಳನ್ನು ತಿಳಿಯಬಹುದು.

ಮುದ್ರಾರಾಕ್ಷಸ :ಇದು ವಿಶಾಖದತ್ತ ಬರೆದ ಒಂದು ಸಂಸ್ಕøತ ನಾಟಕ. ಇದರಲ್ಲಿ ಕೌಟಿಲ್ಯನು ಚಂದ್ರಗುಪ್ತ ಮೌರ್ಯನನ್ನು ಅಧಿಕಾರಕ್ಕೆ ತಂದ ಕಥಾನಕವು ನಿರೂಪಿತವಾಗಿದೆ.

ದೀಪವಂಶ ಮತ್ತು ಮಹಾವಂಶ: ಇವು ಶ್ರೀಲಂಕಾದ ಬೌದ್ಧ ಸಾಹಿತ್ಯ ಕೃತಿಗಳು. ಇದರಲ್ಲಿ ಅಶೋಕನು ಬೌದ್ಧಧರ್ಮವನ್ನು ಶ್ರೀಲಂಕಾಗೆ ವಿಸ್ತರಿಸಿದ ಬಗೆಗಿನ ವಿವರಗಳು ದೊರಕುತ್ತವೆ.

ಅಶೋಕನ ಶಾಸನಗಳು : ಅಶೋಕನ ಬಗೆಗೆ ಅತ್ಯಂತ ಅಧಿಕೃತವಾಗಿ ಹೇಳುವ ದಾಖಲೆಗಳೆಂದರೆ ಶಾಸನಗಳು.

ಈ ಶಾಸನಗಳಿಂದ ಅಶೋಕನ ಸಾಮ್ರಾಜ್ಯದ ವಿಸ್ತಾರ, ಅವನ ಧಮ್ಮ ಸಂದೇಶದ ವಿಚಾರ, ಕಳಿಂಗ ಯುದ್ಧದ ವಿವರ ಮೊದಲಾದ ಸಂಗತಿಗಳನ್ನು ತಿಳಿಯಬಹುದು.

ಚಂದ್ರಗುಪ್ತಮೌರ್ಯ (ಸಾ.ಶ.ಪೂ. 321-298)
ಮೌರ್ಯ ಸಾಮ್ರಾಜ್ಯವನ್ನು ಚಂದ್ರಗುಪ್ತಮೌರ್ಯ ಸ್ಥಾಪಿಸಿದನು.

ಚಂದ್ರಗುಪ್ತಮೌರ್ಯನು ತನ್ನ ಗುರುವಾದ ಕೌಟಿಲ್ಯನ ಮಾರ್ಗದರ್ಶನದಲ್ಲಿ ನಂದ ವಂಶದ ಕೊನೆಯ ದೊರೆಯನ್ನು ಪದಚ್ಯುತಗೊಳಿಸಿ ತನ್ನ 25ನೇ ವಯಸ್ಸಿನಲ್ಲಿ ಅಧಿಕಾರಕ್ಕೆ ಬಂದನು.

ಈ ಹೊತ್ತಿಗೆ ವಾಯವ್ಯ ಭಾರತದಲ್ಲಿ ಪಂಜಾಬ್ ಪ್ರಾಂತ್ಯದವರೆಗಿನ ಈ ಪ್ರದೇಶವನ್ನು ಅಲೆಕ್ಸಾಂಡರನ ಉತ್ತರಾಧಿಕಾರಿಯಾದ ಸೆಲ್ಯೂಕಸ್ ನಿಕ್ಯಾಟರ್ ಆಳುತ್ತಿದ್ದನು.

ಸಾ.ಶ.ಪೂ. 305ರಲ್ಲಿ ಅವನೊಂದಿಗೆ ಚಂದ್ರಗುಪ್ತಮೌರ್ಯನು ಯುದ್ಧ ಸಾರಿದನು. ಅಂತಿಮವಾಗಿ ಯುದ್ಧವು ಒಪ್ಪಂದದೊಂದಿಗೆ ಅಂತ್ಯಗೊಂಡಿತು.

ಅದರಂತೆ, ಸೆಲ್ಯೂಕಸನು ಇಂದಿನ ಆಫ್ಘಾನಿಸ್ತಾನ ಮತ್ತು ಬಲೂಚಿಸ್ತಾನದ ಪ್ರದೇಶಗಳು ಸೇರಿದಂತೆ ನಾಲ್ಕು ಪ್ರಾಂತ್ಯಗಳನ್ನು ಚಂದ್ರಗುಪ್ತ ಮೌರ್ಯನಿಗೆ ವಹಿಸಿಕೊಟ್ಟನು. ಅಲ್ಲದೆ, ತನ್ನ ಮಗಳನ್ನು ಚಂದ್ರಗುಪ್ತಮೌರ್ಯನಿಗೆ ವಿವಾಹ ಮಾಡಿಕೊಟ್ಟನು.

ಇದರಿಂದ ಮಗದ ಸಾಮ್ರಾಜ್ಯ ವಾಯವ್ಯ ವಿಭಾಗದಲ್ಲಿ ವಿಸ್ತಾರವಾದ ಭೂ ಪ್ರದೇಶಗಳಲ್ಲಿ ತನ್ನ ಅಧಿಪತ್ಯವನ್ನು ಸ್ಥಾಪಿಸಿತು.

ಜೈನಧರ್ಮದ ಒಂದು ಸಂಪ್ರದಾಯದ ಪ್ರಕಾರ ಚಂದ್ರಗುಪ್ತಮೌರ್ಯನು ತನ್ನ ಕೊನೆಯ ಕಾಲದಲ್ಲಿ ಜೈನ ಧರ್ಮವನ್ನು ಸ್ವೀಕರಿಸಿದನು.

ಅವನು ಸಾಮ್ರಾಜ್ಯವನ್ನು ತನ್ನ ಮಗನಾದ ಬಿಂದುಸಾರನಿಗೆ ವಹಿಸಿ, ಜೈನ ಗುರು ಭದ್ರಬಾಹು ಹಾಗೂ ಕೆಲವು ಯತಿಗಳೊಡನೆ ಕರ್ನಾಟಕದ ಹಾಸನ ಜಿಲ್ಲೆಯಲ್ಲಿರುವ ಶ್ರವಣಬೆಳಗೊಳಕ್ಕೆ ಬಂದನು.

ಈ ಸಂಪ್ರದಾಯವು ಅಂತಿಮವಾಗಿ, ಸಲ್ಲೇಖನ ವ್ರತವನ್ನು ಕೈಗೊಂಡು ಅಲ್ಲಿಯೇ ಮರಣ ಹೊಂದಿದನೆಂದು ಹೇಳುತ್ತದೆ.
ಸಾಮ್ರಾಟ ಅಶೋಕ (ಸಾ.ಶ.ಪೂ. 273-232)

ಭಾರತದ ಇತಿಹಾಸದಲ್ಲಿಯೇ ಅಶೋಕನು ಈ ವಂಶದ ಅತ್ಯಂತ ಪ್ರಸಿದ್ಧ ದೊರೆ.

ಬಿಂದುಸಾರನ ಮಗನಾದ ಅಶೋಕನು ತನ್ನ ತಂದೆಯ ಆಳ್ವಿಕೆಯ ಕಾಲದಲ್ಲಿ ಉಜ್ಜೈನಿ ಮತ್ತು ತಕ್ಷಶಿಲೆ ಪ್ರಾಂತ್ಯಗಳ ರಾಜ್ಯಪಾಲನಾಗಿ ಕಾರ್ಯ ನಿರ್ವಹಿಸಿದ್ದನು. ತಕ್ಷಶಿಲೆಯಲ್ಲಿ ಉಂಟಾದ ದಂಗೆಯನ್ನು ಯಶಸ್ವಿಯಾಗಿ ನಿಗ್ರಹಿಸಿದನು.

ತಂದೆ ಬಿಂದುಸಾರನ ಮರಣಾನಂತರ ಸಿಂಹಾಸನಕ್ಕಾಗಿ ತನ್ನ 99 ಮಂದಿ ಸೋದರರನ್ನು ಕೊಂದು ಅಧಿಕಾರಕ್ಕೆ ಬಂದನೆಂದು ಬೌದ್ಧ ಐತಿಹ್ಯಗಳು ಹೇಳುತ್ತವೆ.

ಬಹುಶಃ ಸೋದರರೊಡನೆ ನಾಲ್ಕು ವರ್ಷಗಳ ಕಾಲ ಅಂತಃಕಲಹ ಏರ್ಪಟ್ಟಿರಬಹುದು. ಸಾ.ಶ.ಪೂ. 269ರಲ್ಲಿ ಸಿಂಹಾಸನಕ್ಕೆ ಬಂದನೆಂದು ಊಹಿಸಲಾಗಿದೆ.

ತನ್ನ ಆಳ್ವಿಕೆಯ ಎಂಟನೇ ವರ್ಷದಲ್ಲಿ ಅಶೋಕನು ಕಳಿಂಗ ರಾಜ್ಯದ ಮೇಲೆ ಯುದ್ಧ ಸಾರಿದನು. ರಾಜನಾದ ನಂತರ ಅಶೋಕನು ನಡೆಸಿದ ಏಕೈಕ ಯುದ್ಧ ಇದಾಗಿತ್ತು.

ಕಳಿಂಗ ಯುದ್ಧ

ಮೌರ್ಯ ಸಾಮ್ರಾಜ್ಯದ ಅಧಿಪತ್ಯವನ್ನು ಒಪ್ಪಿಕೊಳ್ಳದ ಕಳಿಂಗ ರಾಜ್ಯವನ್ನು ಆಕ್ರಮಿಸಿಕೊಳ್ಳಲು ಸಾ.ಶ.ಪೂ. 261ರಲ್ಲಿ ಅಶೋಕನು ಯುದ್ಧ ಸಾರಿದನು.


ಈ ಯುದ್ಧದ ಬಗೆಗೆ ಅಶೋಕನ 13ನೇ ಬಂಡೆಗಲ್ಲು ಶಾಸನವು ಮಾಹಿತಿ ನೀಡುತ್ತದೆ. ಅದರ ಪ್ರಕಾರ:
o ಅಶೋಕನು ಅಧಿಕಾರಕ್ಕೆ ಬಂದ ಎಂಟನೇ ವರ್ಷ ಕಳಿಂಗದ ಮೇಲೆ ಯುದ್ಧ ಸಾರಿದನು. ಯುದ್ಧದಲ್ಲಿ ಒಂದು ಲಕ್ಷದ ಐವತ್ತು ಸಾವಿರ ಜನರು ಸೆರೆಯಾಳುಗಳಾದರು.

o ಒಂದು ಲಕ್ಷ ಜನರು ಹತರಾದರು. ಹಲವು ಪಟ್ಟು ಜನರು ನಿರಾಶ್ರಿತರಾದರು. ಕಳಿಂಗವನ್ನು ಅಶೋಕ ಗೆದ್ದನಾದರೂ, ಯುದ್ಧದ ಸಾವು ನೋವು ಅವನ ಮನಕಲಕಿತು.

o ಅಲ್ಲದೆ, ಮತ್ತೆಂದೂ ಯುದ್ಧ ಮಾಡದಿರಲು ನಿರ್ಧರಿಸಿದನು. ದಿಗ್ವಿಜಯಕ್ಕಿಂತ ಧರ್ಮದ ವಿಜಯವೇ ಅತ್ಯುನ್ನತ ವಿಜಯವೆಂದು ಅಶೋಕನು ಭಾವಿಸಿದನು.

o ಯುದ್ಧವು ಸೃಷ್ಟಿಸಿದ ದುಃಖದಿಂದ ಪಶ್ಚಾತ್ತಾಪದ ಕಡೆ ತೆರಳಿದನು. ಬೌದ್ಧ ಧಮ್ಮದ ಕಡೆಗೆ ಪ್ರೇರಿತನಾಗಿ ತನ್ನ ಉಳಿದ ಜೀವನವನ್ನು ಶಾಂತಿ ಪ್ರತಿಪಾದನೆಗೆ ಮೀಸಲಿಟ್ಟನು.

ಬೌದ್ಧ ಧರ್ಮ ಮತ್ತು ಅಶೋಕ
ಕಳಿಂಗ ಯುದ್ಧದ ನಂತರ ಅಶೋಕನು ಬೌದ್ಧಧರ್ಮವನ್ನು ಸ್ವೀಕರಿಸಿದನು. ಬೌದ್ಧ ವಿಹಾರ ಮತ್ತು ಚೈತ್ಯಗಳಿಗೆ ದಾನ ನೀಡಿದನು.

ತನ್ನ ಸಾಮ್ರಾಜ್ಯದಲ್ಲಿ ಪ್ರಾಣಿ, ಪಕ್ಷಿಗಳ ಹತ್ಯೆಯನ್ನು ನಿಷೇಧಿಸಿದನು. ಅಶೋಕನು, ಪ್ರಜೆಗಳೆಲ್ಲರೂ ನನ್ನ ಮಕ್ಕಳಿದ್ದಂತೆ ಎಂದು ಸಾರಿದನು.

 ತಂದೆ ತಾಯಿಗಳಿಗೆ ವಿಧೇಯರಾಗಿರಬೇಕೆಂದೂ, ಗುರು ಹಿರಿಯರನ್ನು ಗೌರವಿಸಬೇಕೆಂದು ಹೇಳಿದನು. ಅಲ್ಲದೆ, ದೀನರು ಮತ್ತು ಗುಲಾಮರ ಬಗೆಗೆ ದಯೆಯನ್ನು ತೋರುವಂತೆಯೂ ಹೇಳಿದನು.

 ತಾವೂ ಬದುಕಿ, ಇತರರನ್ನು ಬದುಕಲು ಬಿಡಿ ಎಂದು ಬೋಧಿಸಿದನು. ಅಶೋಕನು ಸಾಮ್ರಾಜ್ಯದಲ್ಲಿ ಧರ್ಮ ಪ್ರಚಾರ ಮಾಡಲು ‘ಧರ್ಮಮಹಾಮಾತ್ರ’ ಎಂಬ ಅಧಿಕಾರಿಗಳನ್ನು ನೇಮಿಸಿದನು.

 ಸಾಮ್ರಾಜ್ಯದ ಉದ್ದಗಲಕ್ಕೂ ಧರ್ಮ ಸಂದೇಶ ಸಾರುವ ಶಾಸನಗಳನ್ನು ಹಾಕಿಸಿದನು. ದೇಶವಿದೇಶಗಳಿಗೂ ಧರ್ಮ ಪ್ರಚಾರಕರನ್ನು ಕಳುಹಿಸಿದನು.

 ಬನವಾಸಿಗೆ ರಕ್ಷಿತ, ಮಹಿಷಮಂಡಲಕ್ಕೆ (ಮೈಸೂರು) ಮಹಾದೇವ ಎಂಬ ಪ್ರಚಾರಕರನ್ನು ಕಳುಹಿಸಿದನು. ಅಲ್ಲದೆ, ಸಿಲೋನಿಗೆ ತನ್ನ ಮಗ ರಾಹುಲ ಮತ್ತು ಮಗಳು ಸಂಘಮಿತ್ರೆಯನ್ನು ಕಳುಹಿಸಿಕೊಟ್ಟನು.

 ಸಾ.ಶ.ಪೂ. 250ರಲ್ಲಿ ಮೂರನೇ ಬೌದ್ಧ ಸಮ್ಮೇಳನವನ್ನು ಪಾಟಲೀಪುತ್ರದಲ್ಲಿ ನೆರವೇರಿಸಿದನು.

 ಯುದ್ದವನ್ನೇ ತ್ಯಜಿಸಿದ ಅಶೋಕ ಮನುಷ್ಯ ಜೀವನದಲ್ಲಿ ಶಾಂತಿ ಮತ್ತು ಧರ್ಮಸೇವೆಗಾಗಿ ತಮ್ಮ ಜೀವನವನ್ನು ಮೀಸಲಾಗಿಟ್ಟನು.

o ಅಶೋಕನು ಮೌರ್ಯ ಸಾಮ್ರಾಜ್ಯವನ್ನು 5 ಪ್ರಾಂತಗಳನ್ನಾಗಿ ವಿಂಗಡಿಸಿದ್ದನು.
1. ಉತ್ತರಪಥ ಇದರಲ್ಲಿ ಅಪಘಾನಿಸ್ತಾನ ಬಲೂಚಿಸ್ತಾನ (ತಕ್ಷಶಿಲಾ) ಗಾಂಧಾರ, ಕಾಶ್ಮೀರ, ಪಂಜಾಬ್ ಪ್ರದೇಶಗಳು ಸೇರಿದ್ದವು. ಉತ್ತರ ಪಥದ ರಾಜಧಾನಿ ತಕ್ಷಶಿಲಾ ಆಗಿದ್ದಿತು.

2. ದಕ್ಷಿಣಾ ಪಥ ಇದರಲ್ಲಿ ವಿಂದ್ಯಾ ಪ್ರಾಂತಗಳು ದಖನ್ ಸುವರ್ಣಗಿರಿ. ಪ್ರಸ್ಥಭೂಮಿ ಸೇರ್ಪಡೆಯಾಗಿದ್ದವು. ಇದರ ರಾಜಧಾನಿ , ಕಳಿಂಗ ಇದರಲ್ಲಿ ಓರಿಸ್ಸಾ ಮತ್ತು ಪೂರ್ವಭಾಗದ ಕರಾವಳಿ ಪ್ರದೇಶಗಳು ಸೇರಿದ್ದವು. ಇದರ ರಾಜಧಾನಿ ತೊಸಾಲಿ

3. ಮಧ್ಯದೇಶ :ಇದರಲ್ಲಿ ಉತ್ತರಪ್ರದೇಶ, ಬಿಹಾರ ಮತ್ತು ಬಂಗಾಳದ ಪ್ರದೇಶಗಳು ಸೇರಿದ್ದವು. ಇದರ ರಾಜಧಾನಿ ಪಾಟಲೀಪುತ್ರ

5. ಆವಂತಿ :ಇದರಲ್ಲಿ ರಾಜಸ್ತಾನ, ಸೌರಾಷ್ಟ್ರ ಮತ್ತು ಮಾಗ್ವಾದ ಪ್ರದೇಶಗಳು ಸೇರಿದ್ದವು. ಇದರ ರಾಜಧಾನಿ ಉಚ್ಚೆನಿ. ಅಶೋಕ ತನ್ನ ಆಡಳಿತ ಅಧಿಕಾರದಲ್ಲಿ ಪಾಟಲೀಪುತ್ರದಲ್ಲಿ ಮೂರನೆಯ ಬೌದ್ಧ ಮಹಾಸಮ್ಮೇಳನವನ್ನು (ಕ್ರಿಶ.240)ರಲ್ಲಿ ಸಮಾವೇಶಗೊಳಿಸಿ ಅದರ ಶ್ರೇಯಸ್ಸಿಗೂ ಇವನೇ ಕಾರಣನಾದನು. ಮೌರ್ಯರ ಕಾಲದ ಕೌಟಿಲ್ಯನು ಅರ್ಥಶಾಸ್ತ್ರದಲ್ಲಿ ಪಣ, ಮಾಶಕ, ಕಾಕಣಿ ಮೊದಲಾದ ನಾಣ್ಯಗಳನ್ನು ಉಲ್ಲೇಖಿಸಿದ್ದಾನೆ.

 ಮೌರ್ಯರ ಕಾಲದಲ್ಲಿ ಪಾಟಲಿಪುತ್ರ ರಾಜಧಾನಿಯಾಗಿದ್ದಿತು. ಈ ಕಾಲದ ನಗರಾಡಳಿತ ತಿಳಿಯಲು. ಮೆಗಾಸ್ತಾನಿನ್ನ ಬರವಣಿಗೆ ಸಹಾಯಕವಾಗಿದೆ. ಪಾಟಲೀಪುತ್ರ ಸಳೀಯ ಸ್ವಾಯತ್ತ ಸರಕಾರವನ್ನು ಹೊಂದಿತ್ತು. ಪಾಟಲಿಪುತ್ರದ ಆಡಳಿತವನ್ನು 5 ಸದಸ್ಯರನ್ನು ಒಳಗೊಂಡ ಆರುಮಂಡಳಿ ಅಥವಾ ಸಮಿತಿಗಳ ಒಟ್ಟು 30 ಮಂದಿ ಅಧಿಕಾರಿಗಳುಕಾರ್ಯನಿರ್ವಹಿಸುತ್ತಿದ್ದರು.

ಅಶೋಕನ ಶಾಸನಗಳು:

 ಅಶೋಕನನ್ನು ‘ಶಾಸನಗಳ ಪಿತಾಮಹ’ ಎಂದು ಕರೆಯಲಾಗುತ್ತದೆ. ಈವರೆಗೆ ಓದಲಾಗಿರುವ ಮೊತ್ತಮೊದಲ ಶಾಸನಗಳೆಂದು ಅಶೋಕನ ಶಾಸನಗಳನ್ನು ಗುರುತಿಸಲಾಗಿದೆ.

 1837ರಲ್ಲಿ ಬ್ರಿಟಿಷ್ ಅಧಿಕಾರಿಯಾದ ಜೇಮ್ಸ್ ಪ್ರಿನ್ಸೆಪ್ ಅವರು ಅಶೋಕನ ಶಾನಸಗಳನ್ನು ಮೊತ್ತಮೊದಲ ಬಾರಿಗೆ ಓದಿದರು.

 1915ರವರೆಗೆ ದೊರೆತ ಅಶೋಕನ ಎಲ್ಲಾ ಶಾಸನಗಳಲ್ಲಿಯೂ ಅವನ ಹೆಸರಿನ ಬದಲು ದೇವನಾಂಪ್ರಿಯ ಪ್ರಿಯದರ್ಶಿ ಎಂಬ ಬಿರುದುಗಳು ಮಾತ್ರ ಇದ್ದವು.

 ಚಾಲ್ರ್ಸ್ ಬೇಡೆನ್ ಎಂಬ ಬ್ರಿಟಿಷ್ ಎಂಜಿನಿಯರ್ ಒಬ್ಬರು 1915ರಲ್ಲಿ ಕರ್ನಾಟಕದ ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ಅಶೋಕನ ಶಾಸನವನ್ನು ಪತ್ತೆ ಮಾಡಿದರು.

 ಈ ಶಾಸನದಲ್ಲಿ ಮೊತ್ತಮೊದಲ ಬಾರಿಗೆ ‘ದೇವನಾಂಪ್ರಿಯ ಪ್ರಿಯದರ್ಶಿ ಅಶೋಕ’ ಎಂಬ ಉಲ್ಲೇಖ ಕಂಡುಬಂದಿತು. ಇದರಿಂದ ಪುರಾಣಗಳಲ್ಲಿ ಮತ್ತು ಬೌದ್ಧ ಸಾಹಿತ್ಯಗಳಲ್ಲಿ ಕಂಡುಬರುವ ಅಶೋಕ ಮತ್ತು ಶಾಸನಗಳಲ್ಲಿ ಉಲ್ಲೇಖಗೊಂಡಿರುವ ದೇವನಾಂಪ್ರಿಯ, ಪ್ರಿಯದರ್ಶಿ ಒಬ್ಬನೇ ಎಂಬ ಅಭಿಪ್ರಾಯಕ್ಕೆ ಬರಲಾಯಿತು.

 ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ, ಸಿದ್ದಾಪುರ, ಈ ಶಾಸನಗಳು ಅಶೋಕನು ಬೌದ್ದಧರ್ಮಾವಲಂಬಿಯಾಗಿದ್ದ ದಯೆ ಧರ್ಮ ನೀತಿಯಲ್ಲಿ ನಂಬಿಕೆ ಇಟ್ಟಿದನ್ನು ತಿಳಿಸುತ್ತವೆ.

 ಉತ್ತರಪ್ರದೇಶದ ಕಾಲ್ಕಿ, ಸೌರಾಷ್ಟ್ರ ಗಿರ್ನಾರ್ ಶಾಸನಗಳು

ಮೌರ್ಯರ ಅರ್ಥವ್ಯವಸ್ಥೆ :
 ಮೌರ್ಯರ ಕಾಲದಲ್ಲಿ ಕೆರೆ ನೀರಾವರಿ ಮತ್ತು ಕಾಲುವೆ ನೀರಾವರಿ ವ್ಯವಸ್ಥೆ ಉತ್ತಮವಾಗಿದ್ದುದಕ್ಕೆ ನಿದರ್ಶನಗಳಿವೆ.

 ಚಂದ್ರಗುಪ್ತಮೌರ್ಯನ ರಾಜ್ಯಪಾಲನಾದ ಪುಷ್ಯಗುಪ್ತನು ಗುಜರಾತಿನ ಜುನಾಗಡದ ಬಳಿ ‘ಸುದರ್ಶನ ಸರೋವರ’ ಎಂಬ ಅಣೆಕಟ್ಟನ್ನು ನಿರ್ಮಿಸಿದನು.

 ಅಶೋಕನ ಕಾಲದಲ್ಲಿ ಈ ಅಣೆಕಟ್ಟಿಗೆ ತುಷಸ್ಪ ಎಂಬ ಅಧಿಕಾರಿಯು ಕಾಲುವೆಯನ್ನು ನಿರ್ಮಾಣ ಮಾಡಿಸಿದನು.

 ನೀರಾವರಿ ಕಾಲುವೆಗಳ ಬಗೆಗೆ ಮೆಗಸ್ತನಿಸ್ ಕೂಡ ದಾಖಲಿಸಿದ್ದಾನೆ. ಕೃಷಿ ಕ್ಷೇತ್ರವನ್ನು ಸರ್ಕಾರವೇ ನಿರ್ವಹಿಸುತ್ತಿತ್ತು.

 ಯುದ್ಧ ಖೈದಿಗಳನ್ನು, ಗುಲಾಮರನ್ನು ಕೃಷಿಕಾರ್ಯದಲ್ಲಿ ತೊಡಗಿಸುತ್ತಿದ್ದರು.

 ಭೂ ಕಂದಾಯವು ರಾಜ್ಯಾದಾಯದ ಪ್ರಮುಖ ಭಾಗವಾಗಿತ್ತು.

 ರೈತ ಅವನ ಉತ್ಪಾದನೆಯ 1 ಭಾಗವನ್ನು ತೆರಿಗೆಯಾಗಿ ರಾಜ್ಯಕ್ಕೆ ಪಾವತಿಸಬೇಕಾಗಿತ್ತು.

 ಸಮಾಹರ್ಥ ಮತ್ತು ಸನ್ನಿಧಾತ ಎಂಭ ಅಧಿಕಾರಿಗಳು ತೆರಿಗೆ ಸಂಗ್ರಹ ಮತ್ತು ರಾಜಭಂಡಾರದ ಪಾಲಕರಾಗಿದ್ದರು. ಮೌರ್ಯರ ಕಾಲದಲ್ಲಿ ಲೋಹಗಳನ್ನು ಕರಗಿಸಿ ಮಿಶ್ರಗೊಳಿಸುವ ತಾಂತ್ರಿಕ ನೈಪುಣ್ಯತೆ ಬೆಳೆಯಿತು. ಇದರಿಂದ ಕೃಷಿಯ ಜೊತೆಗೆ ನಗರಾಧರಿತ ಆರ್ಥಿಕ ಚಟುವಟಿಕೆಗಳಾದ ಕರಕುಶಲ ವಸ್ತುಗಳ ಉತ್ಪಾದನೆ ಮತ್ತು ಅವುಗಳ ವ್ಯಾಪಾರ ಮೌರ್ಯರ ಅರ್ಥವ್ಯವಸ್ಥೆಯಲ್ಲಿ ಸ್ಥಾನ ಪಡೆದುಕೊಂಡವು.

 ಮೌರ್ಯರ ರಾಜಧಾನಿ ಪಾಟಲೀಪುತ್ರದಿಂದ ಇತರ ಭಾಗಗಳಿಗೆ ಸಂಚರಿಸಲು ಹೆದ್ದಾರಿಗಳಿದ್ದವು. ರಾಜಧಾನಿಯಿಂದ ವೈಶಾಲಿ, ಚಂಪಾರಣ್ಯ ಮಾರ್ಗವಾಗಿ ನೇಪಾಳಕ್ಕೆ ಹೋಗುವ ರಾಜಮಾರ್ಗವಿತ್ತು.

 ಕೌಶಾಂಬಿಯಿಂದ ಪ್ರಮುಖ ಹೆದ್ದಾರಿ ಆಧುನಿಕ ದೆಹಲಿಯನ್ನು ಹಾಯ್ದು ಪಂಜಾಬಿನ ಮೂಲಕ ತಕ್ಷಶಿಲಾ ನಗರವನ್ನು ಸೇರುತ್ತಿತ್ತು.

 ವ್ಯಾಪಾರಿಗಳು ಈ ಮಾರ್ಗಗಳ ಮೂಲಕ ಕರಕುಶಲ ಸಾಮಗ್ರಿಗಳನ್ನು ಸಾಮ್ರಾಜ್ಯದೊಳಗೆ ಮತ್ತು ಹೊರಗಿನ ಮಾರುಕಟ್ಟೆಗಳಲ್ಲಿ ಮಾರುತ್ತಿದ್ದರು.

 ಕಚ್ಚು ಗುರುತಿನ ಬೆಳ್ಳಿನಾಣ್ಯಗಳು ಮೌರ್ಯ ಸಾಮ್ರಾಜ್ಯದಲ್ಲಿ ಚಲಾವಣೆಯಲ್ಲಿದ್ದವು. ಈ ಕಾಲವನ್ನು ನಗರೀಕರಣದ ಎರಡನೆ ಹಂತ ಎಂದು ಚರಿತ್ರೆಕಾರರು ಗುರುತಿಸಿದ್ದಾರೆ.

ಸಾಮಾಜಿಕ ವ್ಯವಸ್ಥೆ :

 ವೈದಿಕ ಕಾಲದಲ್ಲಿ ಆರಂಭವಾಗಿದ್ದ ವರ್ಗಾಧಾರಿತ ವಿಭಜನೆಯ ತಳಹದಿಯ ಮೇಲೆಯೇ ಸಾಮಾಜಿಕ ವ್ಯವಸ್ಥೆ ರೂಪುಗೊಳ್ಳುತ್ತಿತ್ತು.

 ಆದರೂ ಈ ಕಾಲದಲ್ಲಿ ಮೇಲ್ವರ್ಣದಲ್ಲಿ ಹುಟ್ಟಿದ್ದ ವ್ಯಕ್ತಿಗಳು, ಒಂದು ವರ್ಣದಿಂದ ಇನ್ನೊಂದು ವರ್ಣದೊಳಗೆ ಪ್ರವೇಶಿಸಿ ಸಾಮಾಜಿಕ ಮನ್ನಣೆ, ಗೌರವಗಳನ್ನು ಪಡೆಯಬಹುದಾದ ಅವಕಾಶಗಳು ಸ್ವಲ್ಪಮಟ್ಟಿಗಿದ್ದವು.

 ಬ್ರಾಹ್ಮಣರು ಮತ್ತು ಕ್ಷತ್ರಿಯರು ತಮ್ಮ ಸ್ಥಾನಮಾನಗಳನ್ನು ಪರಸ್ಪರ ಬದಲಾಯಿಸಿಕೊಳ್ಳಬಹುದಿತ್ತು. ಸಮಾಜ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರರೆಂಬ ನಾಲ್ಕು ವರ್ಣಗಳಲ್ಲಿ ವಿಂಗಡಣೆಯಾಗಿದ್ದರೂ ಈ ವರ್ಣಗಳಲ್ಲಿ ಜಾತಿಗಳಿದ್ದವು.

 ಮೆಗಸ್ತನಿಸ್ ತನ್ನ ಇಂಡಿ- ಕಾ ಕೃತಿಯಲ್ಲಿ ಮೌರ್ಯರ ಸಮಾಜದಲ್ಲಿ ಏಳು ಜಾತಿಗಳಿದ್ದವೆಂದು ತಿಳಿಸುತ್ತಾನೆ. ಬೌದ್ಧ ಮೂಲಗಳೂ ಸಹ ವರ್ಣಗಳಲ್ಲಿ ಜಾತಿಗಳಿದ್ದವೆಂಬುದನ್ನು ಸಮರ್ಥಿಸುತ್ತವೆ.

 ಮುಂದಿನ ಕಾಲಘಟ್ಟಗಳಲ್ಲಿ ಕಾಣುವಷ್ಟು ಕಟ್ಟುನಿಟ್ಟಾದ ಜಾತಿ ಪದ್ಧತಿ ಕಂಡುಬರದಿದ್ದರೂ, ಮೌರ್ಯರ ಕಾಲದಲ್ಲಿ ವರ್ಣಗಳ ಆಧಾರದ ಮೇಲೆಯೇ ಜಾತಿ ಪದ್ಧತಿ ಹೆಪ್ಪುಗಟ್ಟಲು ಆರಂಭಿಸಿತು.

 ಇಂಡಿಕಾ ಕೃತಿ ಮೌರ್ಯರ ಸಮಾಜದಲ್ಲಿ ಎಲ್ಲಿಯೂ ದಾಸರು ಮತ್ತು ಗುಲಾಮರಿದ್ದುದ್ದನ್ನು ಉಲ್ಲೇಖಿಸುವುದಿಲ್ಲ.

 ಗುಲಾಮ ಪದ್ಧತಿಯು ಮೌರ್ಯರ ಕಾಲದಲ್ಲಿಯೂ ಆಚರಣೆಯಲ್ಲಿತ್ತಾದರೂ ಪ್ರಾಚೀನ ಗ್ರೀಕ್ ಮತ್ತು ರೋಮ್ ಸಮಾಜದ ಮಾದರಿಯಲ್ಲಿದ್ದಂತೆ ತೀವ್ರವಾಗಿರಲಿಲ್ಲ.

 ಚಾತುರ್ವರ್ಣಗಳಲ್ಲಿ ಕೊನೆಯವರಾದ ಶೂದ್ರರು ಮೌರ್ಯರ ಕಾಲದಲ್ಲಿ ಕೃಷಿ ಕಾರ್ಮಿಕರಾಗಿ, ಮನೆಯ ಆಳುಗಳಾಗಿ ದುಡಿಯುತ್ತಿದ್ದರು.
ಆಡಳಿತ ವ್ಯವಸ್ಥೆ:

 ಮೌರ್ಯ ಸಾಮ್ರಾಜ್ಯವು ಕೇಂದ್ರೀಕೃತ ಆಡಳಿತ ವ್ಯವಸ್ಥೆಯನ್ನು ಹೊಂದಿತ್ತು.

 ಅಧಿಕಾರವು ರಾಜನಲ್ಲಿ ಕೇಂದ್ರೀಕೃತವಾಗಿತ್ತು.

 ಆದ್ದರಿಂದ ವಿಶಾಲ ಮೌರ್ಯ ಸಾಮ್ರಾಜ್ಯವನ್ನು ಆಳುವ ಸಲುವಾಗಿ ಹಿಂದೆಂದೂ ಕಾಣದಷ್ಟು ಅಧಿಕಾರಿ ವರ್ಗವು ಅಸ್ತಿತ್ವಕ್ಕೆ ಬಂದಿತು.

 ಬಲಿಷ್ಠ ಗೂಢಚಾರ ವ್ಯವಸ್ಥೆ ಅಸ್ತಿತ್ವದಲ್ಲಿತ್ತು.

 ರಾಜನ ಅಧೀನದಲ್ಲಿ ಮಂತ್ರಿ, ಪುರೋಹಿತ, ಸೇನಾಪತಿ ಮತ್ತು ಯುವರಾಜ ಅತ್ಯುನ್ನತ ಅಧಿಕಾರಿಗಳಾಗಿದ್ದರು.

 ಸಾಮ್ರಾಜ್ಯವನ್ನು ಪ್ರಾಂತ್ಯಗಳಾಗಿ ವಿಂಗಡಿಸಲಾಗಿತ್ತು.

 ಪ್ರಾಂತ್ಯಗಳನ್ನು ಯುವರಾಜ ಅಥವಾ ರಾಜ ಪರಿವಾರಕ್ಕೆ ಸಂಬಂಧಿಸಿದವರು ಆಳುತ್ತಿದ್ದರು.

 ತಕ್ಷಶಿಲೆ, ಉಜ್ಜೈನಿ, ದೌಲಿ, ಸುವರ್ಣಗಿರಿ ಮತ್ತು ಗಿರ್ನಾರ್ಗಳು ಪ್ರಾಂತೀಯ ಆಡಳಿತ ಕೇಂದ್ರಗಳಾಗಿದ್ದವು.

 ರಜುಕ (ನ್ಯಾಯಿಕ ಅಧಿಕಾರಿ), ಯುಕ್ತ (ಮಾಹಿತಿಗಳನ್ನು ದಾಖಲಿಸುವ ಅಧಿಕಾರಿ) ಮೊದಲಾದ ಅಧಿಕಾರಿಗಳಿದ್ದರು.

 ರಾಜಧಾನಿ ಪಾಟಲೀಪುತ್ರದ ಆಡಳಿತವನ್ನು 30 ಅಧಿಕಾರಿಗಳನ್ನು ಒಳಗೊಂಡ ಆರು ಸಮಿತಿಗಳು ನಿರ್ವಹಿಸುತ್ತಿದ್ದವು.
ಕಲೆ ಮತ್ತು ವಾಸ್ತುಶಿಲ್ಪ:

 ಮೆಗಸ್ತನೀಸನ ಇಂಡಿಕಾವು ಪಾಟಲೀಪುತ್ರದಲ್ಲಿ ಮೌರ್ಯರ ವೈಭವಪೂರ್ಣ ಅರಮನೆಯನ್ನು ಕುರಿತು ದಾಖಲಿಸುತ್ತದೆ.

 ಅರಮನೆ ಮತ್ತು ಸುತ್ತುವರೆದ ಮರದ ಕೋಟೆಯ ಕೆಲವು ಅವಶೇಷಗಳು ಉತ್ಖನನದ ವೇಳೆ ದೊರೆತಿದೆ.

 ಅಶೋಕನ ಕಾಲದಲ್ಲಿ ಅನೇಕ ಸ್ತೂಪಗಳು ಮತ್ತು ಸ್ತಂಭಗಳು ನಿರ್ಮಾಣಗೊಂಡಿವೆ.

 ಅವುಗಳಲ್ಲಿ ಇಂದು ದೊರೆತಿರುವ ಅತ್ಯಂತ ದೊಡ್ಡ ಸ್ತೂಪ ಸಾಂಚಿ ಸ್ತೂಪ.

 30ಕ್ಕೂ ಹೆಚ್ಚು ಸ್ತಂಭಗಳು ದೊರೆತಿದ್ದು, ಅವುಗಳನ್ನು ಅತ್ಯಂತ ನುಣುಪಾಗಿ ನಯಗೊಳಿಸಲಾಗಿದೆ.

 ಸ್ತಂಭದ ಮೇಲೆ ಸಿಂಹ ಅಥವಾ ಗೂಳಿಯ ಶಿಲ್ಪಗಳನ್ನು ಕಡೆಯಲಾಗಿದೆ.

 ನಮ್ಮ ರಾಷ್ಟ್ರ ಲಾಂಛನ ನಾಲ್ಕು ತಲೆಯ ಸಿಂಹವನ್ನು ಸಾರನಾಥದ ಅಶೋಕ ಸ್ತಂಭದಿಂದ ಪಡೆಯಲಾಗಿದೆ.

 ಇವಲ್ಲದೆ, ಅಶೋಕನು ಬರಾಬರ್ ಬೆಟ್ಟದಲ್ಲಿ ಮೂರು ಶಿಲಾಚ್ಛೇದಿತ ಗುಹೆ (Rock Cut Caves)ಗಳನ್ನು ಹಾಗೂ ಅವನ ಮಗ ದಶರಥನು ನಾಗಾರ್ಜುನಿ ಬೆಟ್ಟದಲ್ಲಿ ಮೂರು ಶಿಲಾಚೇದಿತ ಗುಹೆಗಳನ್ನು ನಿರ್ಮಿಸಿದ್ದಾನೆ.

 ಈ ಗುಹೆಗಳು ಕೂಡ ಮೌರ್ಯರ ಕಾಲದ ಪ್ರಮುಖ ನಿರ್ಮಾಣಗಳಾಗಿವೆ.
ಅಶೊಕನ ಪ್ರಮುಖ ಅಧಿಕಾರಿಗಳು

 ರಾಜುಕರು, ಯುಕ್ತರು, ಮಹಾಮಾತ್ರರು, ಪ್ರಾದೇಶಿಕರು ಇವರು ಅಶೊಕನ ಪ್ರಮುಖ ಅಧಿಕಾರಿಗಳಾಗಿದ್ದರು. ರಾಜುಕರೆಂದರೇ - ಭೂಮಿಯ ಸಮೀಕ್ಷೆ, ಬೆಲೆ ಕಟ್ಟುವುದು, ಗ್ರಾಮಗಳಲ್ಲಿ ನ್ಯಾಯಾಧಿಕಾರಿಯಾಗಿರುತ್ತಿದ್ದರು.

1.ಯುಕ್ತರೆಂದರೇ - ಜಿಲ್ಲೆಯ ಕಂದಾಯಧಿಕಾರಿ.

2.ಮಹಾಮಾತ್ರರೆಂದರೇ - ಇವರನ್ನು ಧರ್ಮದ ರಚಾರಕ್ಕಾಗಿ ಅಶೋಕನು ನೇಮಿಸಿದ್ದನು.

3.ಪ್ರಾದೇಶಿಕರೆಂದರೇ - ವರದಿಗಾರರಾಗಿದ್ದರು.

ಕುಶಾಣರು

 ಗ್ರೀಕರ ನಂತರ ಭಾರತೀಯ ಚರಿತ್ರೆ ಹಾಗೂ ಸಂಸ್ಕøತಿಯ ಮೇಲೆ ಪ್ರಭಾವ ಬೀರಿದವರು ಕುಶಾಣರು.

 ಬೌದ್ಧ ಧರ್ಮಕ್ಕೆ ವಿಶೇಷ ಚಲನೆಯನ್ನು ನೀಡಿದವರು ಇವರು.

 ಮಹಾಯಾನಪಂಥವು ಇವರ ಆಶ್ರಯದಲ್ಲಿ ಹೆಚ್ಚಿನ ಪ್ರೋತ್ಸಾಹವನ್ನು ಪಡೆಯಿತು.

 ಗಾಂಧಾರ ಶಿಲ್ಪಕಲೆಯು ಇವರಿಂದ ವಿಕಸಿತಗೊಂಡಿತು.

 ಮೌರ್ಯರ ನಂತರದಲ್ಲಿ ಕಾಣುವ ಪ್ರಮುಖ ರಾಜಮನೆತನವೇ ಕುಶಾಣರದು.

 ಮಧ್ಯ ಏಷ್ಯಾದಿಂದ ಭಾರತಕ್ಕೆ ವಲಸೆ ಬಂದ ಅಲೆಮಾರಿ ಜನಾಂಗದ ಮೂಲ ಹೊಂದಿದವರು ಕುಶಾಣರು. ಇವರು ಯೂಚಿ ಸಂತತಿಯವರು.

 ಇದೇ ಸಮಯದಲ್ಲಿ ಶಕರು ಹಾಗೂ ಪಾರ್ಥಿಯನ್ನರು ವಾಯುವ್ಯ ಭಾಗದಲ್ಲಿ ನೆಲಸಿದ್ದ ವಿದೇಶಿ ಸಮುದಾಯಗಳು. ಕುಶಾಣರು ಶಕ ಮತ್ತು ಪಾರ್ಥಿಯನ್ನರನ್ನು ಸೋಲಿಸಿ ಗಾಂಧಾರ ಪ್ರದೇಶದಲ್ಲಿ ನೆಲಸಿದರು.

 ಕುಜಲಕಡ್ಫೀಸಸ್ ಈ ರಾಜಮನೆತನದ ಸಂಸ್ಥಾಪಕ. ವಿಮಕಡ್ಫೀಸಸ್ ಮತ್ತು ಕನಿಷ್ಕ ಈ ವಂಶದ ಮುಖ್ಯ ದೊರೆಗಳು.

 ಯುಚಿಗಳು ಮೂಲತಃ ಬುಡಕಟ್ಟುಗಳಿಗೆ ಸೇರಿದವರು. ಕುಜಲ ಕಡ್ಫೀಸಸ್ನ ನೇತೃತ್ವದಲ್ಲಿ ಯುಚಿ ಬಣಗಳು ಐಕ್ಯಗೊಂಡವು. ಈತನು ಹಿಂದುಕುಷ್ನ ಬೆಟ್ಟಗಳನ್ನು ದಾಟಿ ಕಾಬುಲ್ ಹಾಗೂ ಕಾಶ್ಮೀರದಲ್ಲಿ ಬಂದು ನೆಲೆಸಿದನು.

 ವಿಮಕಡ್ಫೀಸಸ್ ಕಾಲದಲ್ಲಿ ಚಿನ್ನದ ನಾಣ್ಯಗಳನ್ನು ಹೊರಡಿಸಲಾಯಿತು. ಇಲ್ಲಿಂದ ಮುಂದಕ್ಕೆ ಕುಶಾಣರು ಸಾಮಾನ್ಯವಾಗಿ ಚಿನ್ನದ ಹಾಗೂ ತಾಮ್ರದ ನಾಣ್ಯಗಳನ್ನೇ ಟಂಕಿಸಿದರು.

 ವಿಮಕಡ್ಫೀಸಸ್ನ ನಂತರ ಬಂದವನೆ ಕನಿಷ್ಕ. ಇವನ ಆಳ್ವಿಕೆಯಡಿಯಲ್ಲಿ ಕುಶಾಣರ ಮನೆತನವು ವ್ಯಾಪಕವಾಗಿ ಬೆಳೆಯಿತು. ಇವನು ಸಾ.ಶ. 78ರಲ್ಲಿ ರಾಜಾಳ್ವಿಕೆಯನ್ನು ಪ್ರಾರಂಭಿಸಿ ಹೊಸ ಯುಗವೊಂದಕ್ಕೆ ನಾಂದಿಹಾಡಿದನು. ಇದನ್ನು ‘ಶಕ’ಯುಗವೆಂದು ಕರೆಯುತ್ತಾರೆ.

 ಭಾರತದಲ್ಲಿ ಕನಿಷ್ಕನ ಆಳ್ವಿಕೆಯ ವ್ಯಾಪ್ತಿಯು ದಕ್ಷಿಣದ ಸಾಂಚಿ ಹಾಗೂ ಪೂರ್ವದ ಬನಾರಸ್ಸಿನವರೆಗೆ ಹರಡಿತ್ತು. ಮಧ್ಯ ಏಷ್ಯಾವನ್ನು ಒಳಗೊಂಡ ಇವನ ಆಳ್ವಿಕೆಯು ವಿಶಾಲವಾದ ಸಾಮ್ರಾಜ್ಯವನ್ನು ಹೊಂದಿತ್ತು.

 ಪುರುಷಪುರವು ಕನಿಷ್ಕನ ರಾಜಧಾನಿ. ಇವನ ಕಾಲದ ಮತ್ತೊಂದು ಮುಖ್ಯನಗರ ಮಥುರಾ.

 ಕನಿಷ್ಕನು ಬೌದ್ಧಧರ್ಮಕ್ಕೆ ನೀಡಿದ ಆಶ್ರಯದಿಂದಾಗಿ ಅದು ಮತ್ತಷ್ಟು ಸಮೃದ್ಧಿಯಿಂದ ಬೆಳೆಯಲು ಸಾಧ್ಯವಾಯಿತು.

 ಅಶ್ವಘೋಷ, ವಸುಮಿತ್ರ, ಸಂಗರಕ್ಷ ಮುಂತಾದ ಬೌದ್ಧ ವಿದ್ವಾಂಸರನ್ನು ಇವನ ಕಾಲದಲ್ಲಿ ಕಾಣುತ್ತೇವೆ. ನಾಲ್ಕನೆಯ ಬೌದ್ಧ ಸಮಾವೇಶವನ್ನು ಕಾಶ್ಮೀರದಲ್ಲಿ ಕನಿಷ್ಕನ ನೇತೃತ್ವದಲ್ಲಿಯೇ ನಡೆಸಲಾಯಿತು.

 ಈತನೂ ಅಶೋಕನ ರೀತಿಯಲ್ಲಿಯೇ ಬೌದ್ಧಧರ್ಮ ಪ್ರಚಾರಕ್ಕಾಗಿ ಮಧ್ಯಏಷ್ಯ ಹಾಗೂ ಚೀನಾಗಳಿಗೆ ನಿಯೋಗಗಳನ್ನು ಕಳುಹಿಸಿದ್ದನು. ಇವನ ಕಾಲದಲ್ಲಿ ಕಲೆ ಮತ್ತು ವಾಸ್ತುಶಿಲ್ಪವು ಸಹ ಪ್ರೋತ್ಸಾಹವನ್ನು ಪಡೆಯಿತು.

 ಕಾನಿಷ್ಕ ಕ್ರಿಶ.78-120
. ಕುಶಾನರ ಅರಸರಲ್ಲಿ ಕಾನಿಷ್ಕ ಅತ್ಯಂತ ಸಮರ್ಥ ಮತ್ತು ಪ್ರಸಿದ್ಧನಾದವನು. ಕ್ರಿ.ಪೂ.58ರಲ್ಲಿ ಆರಂಭವಾಗುವ ವಿಕ್ರಮಶಕೆ ಕಾನಿಷ್ಕನಿಂದ ಸ್ಥಾಪಿತವಾಯಿತು. ಇವನ ಕಾಲದಲ್ಲಿ ಬೌದ್ಧಧರ್ಮ ರಾಜಧರ್ಮವಾಗಿತ್ತು. ನಾಲ್ಕನೆ ಬೌದ್ದಮಹಾಸಭೆ ಕಾಶ್ಮೀರದ ಶ್ರೀನಗರದ ಬಳಿಯ ಕುಂಡಲಿವನದಲ್ಲಿ ಕ್ರಿಶ.100ರಲ್ಲಿ)ಜರುಗಿದ ಈ ಮಹಾಸಭೆಯ ಅಧ್ಯಕ್ಷತೆಯನ್ನು ಬೌದ್ಧವಿದ್ವಾಂಸ ವಸುಮಿತ್ರ ವಹಿಸಿದ್ದು ಉಪಾಧ್ಯಕ್ಷ ಸ್ಥಾನವನ್ನು ಅಘೋಷವಹಿಸಿದ್ದನು. ಕಾನಿಷ್ಕನ ಕಾಲದಲ್ಲಿ ವೈದ್ಯಶಾಸ್ತ್ರ ಬೆಳೆವಣಿಗೆ ಹೊಂದಿತ್ತು, ಸುಶೃತನ ಸುಶ್ಯಪಸಂಹಿತಾ ವಾಗಟನೆ ಅಷ್ಟಾಂಗ ಸಂಗ್ರಹದಿಂದ ತಿಳಿದುಬರುತ್ತದೆ. ಬುದ್ಧನನ್ನು ಮೊದಲಿಗೆ ವಿಗ್ರಹರೂಪದಲ್ಲಿ ರೂಢಿಗೆ ತಂದವನು ಕಾನಿಷ್ಕ.

 ಹೀಗೆ ಕುಶಾನರ ಸಾಮ್ರಾಜ್ಯವು ಮಧ್ಯ ಏಷ್ಯಾದಲ್ಲಿ ಪಶ್ಚಿಮ ಏಷ್ಯಾ ಮತ್ತು ದಕ್ಷಿಣ ಏಷ್ಯಾದ ಗಡಿ ಪ್ರಾಂತಗಳನ್ನು ಒಳಗೊಂಡ ಸಾಮ್ರಾಜ್ಯವಾಗಿತ್ತು, ಪುರುಷಪುರ (ಪೇಷಾವರ) ಕುಶಾನರರಾಜಧಾನಿ, ಯಾದರೆ ಕಪಿಸ ಉಪರಾಜಧಾನಿ ಆಗಿತ್ತು. ಕಾನಿಷ್ಕನ ಕಾಲದ ಪ್ರಮುಖ ನಗರಗಳು, ಶ್ರೀನಗರ, ತಕ್ಷಶಿಲಾ, ಮಧುರ, ಸಾರನಾಥ್, ಬನಾರಸ್, ಪಾಟಲೀಪುತ್ರ, ಅಯೋಧ, ಕೋಸಂಬಿ ಇತ್ಯಾದಿ.

ಶಾತವಾಹನರು

 ದಕ್ಷಿಣ ಭಾರತದ ಇತಿಹಾಸದಲ್ಲಿ ಶಾತವಾಹನರು ಗಮನಾರ್ಹ ಸ್ಥಾನಗಳಿಸಿದ್ದಾರೆ. ನೂತನ ಶಾಲಿವಾಹನ ಶಕೆಯನ್ನು ಆರಂಭಿಸಿದವರೂ ಇವರೆ, ಗುಣಾಡ್ಯನ ಬೃಹತ್ಕಥಾ” ಕೃತಿ ಶಾತವಾಹನರನ್ನು ಕುರಿತುದಾಗಿದೆ.

 ಶಾತವಾಹನ ಅರಸ ಪಾಲನ ಗಥಾಸಪ್ತಶತಿ” ಶಾತವಾಹನರ ಕಾಲದ ವಿವರಣೆ ನೀಡುತ್ತದೆ.

 ಶಾತವಾಹನರ ರಾಜಧಾನಿ ಪ್ರತಿಷ್ಠಾನ ಅಥವಾ ಪೈತಾನ ಇದು ಹೈದರಾಬಾದಿನ ಔರಂಗಾಬಾದ ಜಿಲ್ಲೆಯ ಗೋದಾವರಿ ನದಿ ತೀರದಲ್ಲಿದೆ, ಶಾತವಾಹನರ ರಾಜ್ಯಸ್ಥಾಪಕ ಸಿಮುಖ ಇವನು ಮೌರ್ಯರ ಸಾಮಂತನಾಗಿ ಆಳ್ವಿಕೆ ನಡೆಸಿದ

ಗೌತಮೀಪುತ್ರ ಶಾತಕರಣಿ (ಕ್ರಿ.ಶ. 70-95)
 ಈತ ಶಾತವಾಹನರ ಪ್ರಸಿದ್ದ ದೊರೆ ತನು ಶಕರನಹಪಾನನ್ನು ಕ್ರಿ.ಶ.78ರಲ್ಲಿ ಸದೆಬಡಿದು ಈ ಮಹತ್ತಾದನೆಯ ನೆನಪಿನಲ್ಲಿ ಹೊಸಶಕೆಯನ್ನು ಆರಂಭಿಸಿದನು.

 ಈತನ ದಿಗ್ವಿಜಯದ ಪರಿಣಾಮವಾಗಿ ಶಾತವಾಹನರ ಸಾಮ್ರಾಜ್ಯವು ದಕ್ಷಿಣದಲ್ಲಿ ಕೃಷ್ಣಾ ನದಿಯಿಂದ ಹಿಡಿದು ಉತ್ತರದಲ್ಲಿ ವಾಳ್ಳದ ಕಾಥೇವಾಡದವರೆಗೂ ಪೂರ್ವದಲ್ಲಿ ಬಿರಾರ್ ನಿಂದ ವಿಧರ್ಭದವರೆಗೆ ಪಶ್ಚಿಮದಲ್ಲಿ ಕೊಂಕಣದವರೆಗೆ ಸಾಮ್ರಾಜ್ಯವನ್ನು ವಿಸ್ತರಿಸಿದ್ದನು

 ಇವನ ಸಾಮ್ರಾಜ್ಯವು ನರ್ಮದಾ, ಮಹಾನದಿ, ಗೋದಾವರಿ, ಕೃಷ್ಣ ಮತ್ತು ತುಂಗಭದ್ರನದಿಗಳ ಪ್ರದೇಶವನ್ನು ಒಳಗೊಂಡಿತ್ತು. ಶಾತವಾಹನರ ಕಾಲದಲ್ಲಿ ಸಾಮ್ರಾಜ್ಯವನ್ನು ಪ್ರಾಂತಗಳನ್ನಾಗಿ, ಪ್ರಾಂತಗಳನ್ನು ಜನಪದ (ವಿಭಾಗ) ವಿಷಯ, (ಜಿಲ್ಲೆ) ಸೀಮೆ (ತಾಲ್ಲೂಕ್ ನಗರ ಮತ್ತು ಗ್ರಾಮಗಳನ್ನಾಗಿ ವಿಂಗಡಿಸಲಾಗಿದ್ದಿತು. ಶಾತವಾಹನರ ಕಾಲದ ಸಾಹಿತ್ಯ ಕೃತಿಗಳು ಹಾಲನಗಥಸಪ್ತಾಸತಿ ಪ್ರಾಕೃತ ಭಾಷೆಯಲ್ಲಿ ರಚಿಸಲ್ಪಟ್ಟಿದೆ ಗುಣಾಡ್ಯನ ಬೃಹತ್ಕಥಾ ಸಂಸ್ಕೃತದಲ್ಲಿ ರಚಿಸಲ್ಪಟ್ಟಿದೆ.
logoblog

Thanks for reading Mauryas, Kushanas and no

Previous
« Prev Post

No comments:

Post a Comment