ಇಂದು *ಶ್ರೀಕಂಠದತ್ತ ನರಸಿಂಹರಾಜ ಒಡೆಯರ್* "ಹುಟ್ಟುಹಬ್ಬದ" ಪ್ರಯುಕ್ತ ಇವರ ಬಗ್ಗೆ ಸಂಕ್ಷಿಪ್ತ ಮಾಹಿತಿ.
👇👇👇👇👇👇
ಜನನ= *20 ಫೆಬ್ರುವರಿ 1953*
ತಂದೆ=ಮೈಸೂರು ಸಂಸ್ಥಾನವನ್ನು ಆಳಿದ ಕೊನೆಯ ಅರಸರಾದ *ಮಹಾರಾಜ ಜಯಚಾಮರಾಜೇಂದ್ರ ಒಡೆಯರ್*
ತಾಯಿ= *ಅಮ್ಮಣ್ಣಿ ದೇವಿ*
ಹೆಂಡತಿ=
*ಪ್ರಮೋದಾ ದೇವಿ*
ಮರಣ= *ಡಿಸೆಂಬರ್ 10, 2013*
ಶಿಕ್ಸಣ
"ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜಿನಲ್ಲಿ" *ಪದವಿ ವ್ಯಾಸಂಗವನ್ನು ಪಡೆದರು*, ಮೈಸೂರು ವಿವಿಯಿಂದ *ರಾಜ್ಯಶಾಸ್ತ್ರ* ಹಾಗೂ *ಹಿಂದಿಯಲ್ಲಿ* "ಸ್ನಾತಕೋತ್ತರ ಪದವಿ ಪಡೆದಿದ್ದರು". "ಶಾರದವಿಲಾಸ ಕಾನೂನು ಕಾಲೇಜಿನಲ್ಲಿ" *ಲಾ ಪದವಿ ಪಡೆದು*, ಪಾಶ್ಚಾತ್ಯ ಹಾಗೂ ಶಾಸ್ತ್ರೀಯ ಸಂಗೀತದ ಮೇಲೆ ಆಸ್ಥೆ , ಪಾಂಡಿತ್ಯ, ಬೆಳೆಸಿಕೊಂಡಿದ್ದ ಒಡೆಯರ್, *ಲಂಡನ್‍ನ ಟ್ರಿನಿಟಿ ಕಾಲೇಜಿನಿಂದ ಪಿಯಾನೋ ಸೀನಿಯರ್ ಮಟ್ಟದ ಸಂಗೀತ ಪದವಿ ಪಡೆದಿದ್ದರು*.
ರಾಜಕೀಯ ಜೀವನ
1948ರಲ್ಲಿ *ಕಾಂಗ್ರೆಸ್ ಪಕ್ಷದಿಂದ* "ಮೈಸೂರು ಕ್ಷೇತ್ರವನ್ನು ಲೋಕಸಭೆಯಲ್ಲಿ ವೊದಲ ಬಾರಿ ಪ್ರತಿನಿಧಿಸಿದ್ದ 31 ವರ್ಷದ ಶ್ರೀಕಂಠದತ್ತ ಒಡಿಯರ್, ಮತ್ತೆ *1989, 1996, ಮತ್ತು 1999ರಲ್ಲಿ* "ಮೈಸೂರು ಕ್ಷೇತ್ರವನ್ನು ಪ್ರತಿನಿಧಿಸಿದ್ದರು". 1991ರಲ್ಲಿ *ಬಿ.ಜೆ.ಪಿ ಪಕ್ಷ ಸೇರಿ ಲೋಕಸಭೆಗೆ ಸ್ಪರ್ಧಿಸಿ, ಚಂದ್ರಪ್ರಭ ಅರಸ್ ಎದುರು ಸೋಲು ಕಂಡರು.* 1995ರ ಹೊತ್ತಿಗೆ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಮರಳಿದರು.
1997ರಲ್ಲಿ "ಜೆ.ಹೆಚ್. ಪಟೇಲರ" ಸರ್ಕಾರ, ಒಡೆಯರ ಖಾಸಗಿ ಸ್ವತ್ತಾದ ಬೆಂಗಳೂರು ಮತ್ತು ಮೈಸೂರು ಅರಮನೆಗಳನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳಲು ಮುಂದಾದಾಗ, ಆ ಆದೇಶವನ್ನು ಕೋರ್ಟಿನಲ್ಲಿ ಪ್ರಶ್ನಿಸಿದ ಒಡೆಯರ್, ಅರಮನೆಗಳನ್ನು ತಮ್ಮ ಸ್ವಾಧೀನಕ್ಕೆ ಪಡೆಯಲು ಬದುಕಿರುವ ತನಕ ಹೋರಾಡಿದರು. ಒಡೆಯರ್ ಬದುಕಿರುವವರೆಗೆ, ಅರಮನೆಯಲ್ಲಿ ವಾಸವಿರಲು, ಅವರ ಮರಣಾನಂತರ ಸರ್ಕಾರ ಅರಮನೆಗಳನ್ನು ಸ್ವಾಧೀನ ಪಡೆಯುವುದು, ಆ ಆದೇಶದ ಮುಖ್ಯ ಭಾಗವಾಗಿತ್ತು. *2004ರ ಲೋಕಸಭೆ ಚುನಾವಣೆಯಲ್ಲಿ 3ನೆ ಸ್ಥಾನ* ಪಡೆದ ನಂತರ ಶ್ರೀಕಂಠದತ್ತರು, ಸಕ್ರಿಯ ರಾಜಕಾರಣದಿಂದ ಹಿಂದೆ ಸರಿದರು.
"ಕ್ರೀಡೆಯಲ್ಲಿ ಒಲವು"
1971-72ರಲ್ಲಿ *ದಾಂಡಿಗ ಮತ್ತು ವೇಗದ ಬೌಲರ್ ಆಗಿ ಮೈಸೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದ ಒಡೆಯರ್,* ರಾಜಮನೆತನದ "ಹಮ್ಮು-ಬಿಮ್ಮು" ತೋರದೆ, ತಮ್ಮ ಸರಳತೆಯಿಂದ ಸಹ ಆಟಗಾರರ ಮನ ಗೆದ್ದಿದ್ದರು. ಮಹಾರಾಜರು ಕ್ರಿಕೆಟ್ ಆಡುವುದನ್ನು ನೋಡಲೆಂದೇ ಜನ ಮುಗಿಬಿದ್ದು ಕ್ರೀಡಾಂಗಣಕ್ಕೆ ಬರುತ್ತಿದ್ದರು.
2007ರಲ್ಲಿ *ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ಚುನಾವಣೆ ಗೆದ್ದ ಒಡೆಯರ್,* 2010ರಲ್ಲಿ "ಅನಿಲ್ ಕುಂಬ್ಳೆ" ವಿರುದ್ಧ ಸೋತರು. 2013ರಲ್ಲಿ ಮತ್ತೆ ಅಧ್ಯಕ್ಷರಾಗಿ ಆಯ್ಕೆಯಾದರು. ಬ್ರಿಜೇಶ್ ಪಟೇಲ್ ಎರಡೂ ಬಾರಿ ಅವರೊಂದಿಗೆ ಕಾರ್ಯದರ್ಶಿ ಸ್ಥಾನಕ್ಕೆ ನಿಂತಿದ್ದರು. *ಗಾಲ್ಫ಼್, ಕುದುರೆ ರೇಸು, ಕ್ರಿಕೆಟ್‍ನಲ್ಲಿ* ಆಸಕ್ತರಾಗಿದ್ದ ಶ್ರೀಕಂಠದತ್ತ,ಒಡಿಯರ್ "ಬೆಂಗಳೂರು, ಮೈಸೂರು ಮತ್ತು ದಿಲ್ಲಿ" ಟರ್ಫ಼್ ಕ್ಲಬ್‍ನ ಸದಸ್ಯ ಆಗಿದ್ದರು.
ಶ್ರೀಕಂಠದತ್ತರ ಧರ್ಮಪತ್ನಿ *ಪ್ರಮೋದಾ ದೇವಿ,* *ಮೈಸೂರು ರೇಷ್ಮೆ ಸೀರೆಗಳಿಗೆ ಮೆರುಗು ಹೆಚ್ಚಿಸುವ ಡಿಸೈನ್ ಪರಿಣಿತರಾಗಿದ್ದರು.* ಶ್ರೀಕಂಠದತ್ತರು "ಕುದುರೆ ರೇಸ್" ಹಾಗೂ "ಕ್ರಿಕೆಟ್" ಕ್ರೀಡೆಗಳ ಮೇಲೆ ಬಹಳ ಅಭಿಮಾನವನ್ನು ಇಟ್ಟುಕೊಂಡಿದ್ದರು. *"ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ " ಅಧ್ಯಕ್ಷರಾಗಿ ಕಾರ್ಯ ಸಲ್ಲಿಸಿದ್ದರು.* ಶ್ರೀಕಂಠದತ್ತರು ತಮ್ಮ 23ನೇ ವಯಸ್ಸಿನಲ್ಲಿ "ಬೆಟ್ಟದ ಕೋಟೆ ಅರಸು ವಂಶಕ್ಕೆ ಸೇರಿದ್ದ" *ಪ್ರಮೋದಾ ದೇವಿ ಅವರನ್ನು ಮದುವೆಯಾದರು.* ಇವರಿಗೆ ಮಕ್ಕಳಾಗಲಿಲ್ಲ. ಶ್ರೀಕಂಠದತ್ತರು *ಡಿಸೆಂಬರ್ 10, 2013ರಂದು ತೀವ್ರ ಹೃದಯಾಘಾತದಿಂದ ಬೆಂಗಳೂರಿನ ವಿಕ್ರಮ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು.*
ಮಾರನೆ ದಿನ ಅಂದರೆ 11-12-2013ರಲ್ಲಿ ತಮ್ಮ ಉತ್ತರಾಧಿಕಾರಿ, ಸಹೋದರಿ ಗಾಯತ್ರಿ ದೇವಿಯ ಪುತ್ರರಾದ *ಲಕ್ಶ್ಮೀಕಾಂತ ರಾಜೇ ಅರಸ್* ಇವರಿಂದ, ಒಡೆಯರ್ ಮನೆತನದ ಕರ್ಮಭೂಮಿಯಾದ "ಮಧುವನದಲ್ಲಿ" ಇವರ ಅಂತ್ಯಕ್ರಿಯೆ ನಡೆಯಿತು.
No comments:
Post a Comment