Saturday 20 February 2021

* Key questions and answers that may be asked on current events in the upcoming "FDA," "SDA," "PSI" competitive exams

  MahitiVedike Com       Saturday 20 February 2021
 *ಮುಂಬರುವ "FDA," "SDA," "PSI" ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಚಲಿತ ಘಟನೆಗಳ ಮೇಲೆ ಕೇಳಬಹುದಾದ ಪ್ರಮುಖ ಪ್ರಶ್ನೋತ್ತರಗಳು*
       👇👇👇👇👇👇👇
1) ಇತ್ತೀಚಿಗೆ ಯಾವ ರಾಜ್ಯ ಕರೋನವೈರಸ್ ಕಂಡುಬಂದ ಕಾರಣ "ರಾಜ್ಯ ವಿಪತ್ತು" ಘೋಷಿಸಿದೆ? 
 *ಕೇರಳ*
( ಪ್ರಥಮ ಕರೋನಾವೈರಸ್ ಕಂಡು ಬಂದ ರಾಜ್ಯ. Civil PC-2020)

2) ಇತ್ತೀಚಿಗೆ ಮಿಡಿತಗಳಿಂದ ಬೆಳೆ ಹಾನಿಗಾಗಿ ಯಾವ ದೇಶವು "ರಾಷ್ಟ್ರೀಯ ತುರ್ತು ಪರಿಸ್ಥಿತಿ"ಯನ್ನು ಘೋಷಿಸಿದೆ? 
 *ಪಾಕಿಸ್ತಾನ್*

3) "ಪ್ರದಾನ ಮಂತ್ರಿ ಮಾತೃ ವಂದನ" ಯೋಜನೆ ಅನುಷ್ಠಾನಗೊಳಿಸಿದ ರಾಜ್ಯ? 
 *ಮಧ್ಯಪ್ರದೇಶ*

4) ಇತ್ತೀಚಿಗೆ ಯಾವ ರಾಷ್ಟ್ರದಲ್ಲಿ ಸರ್ವಾಧಿಕಾರಿ ಆಡಳಿತ ಅಂತ್ಯವಾಗಿದೆ? 
 *ಸಡಾನ್*

5) ಮಧ್ಯಪ್ರದೇಶದ ಯಾವ ನಗರವನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಯುನೆಸ್ಕೊ ಸೇರ್ಪಡೆಗೊಳಿಸಿದೆ? 
 *ಓಛ್ರಾ*

6) "ಲೇಸರ್ ಗನ್"  ಬಳಸಲು ಯಾವ ರಾಜ್ಯದ ಪೊಲೀಸರಿಗೆ ಅನುಮತಿ ಬರುತ್ತಿದೆ? 
 *ಗುಜರಾತ್*

7) "ಕರ್ತಾಪುರ್ ಕಾರಿಡಾರ್" ಒಪ್ಪಂದಕ್ಕೆ ಸಹಿ ಹಾಕಿದ ದೇಶಗಳು? 
 *ಭಾರತ ಮತ್ತು ಪಾಕಿಸ್ತಾನ*

8) ರಾಷ್ಟ್ರೀಯ ಶಿಕ್ಷಣ ನೀತಿ-2020 ಜಾರಿಗೆ ಬಂದಿತು.ಈ ನೀತಿಯ  ಕರಡು ಸಮಿತಿ ಅಧ್ಯಕ್ಷರು? 
 *ಡಾ//ಕೆ. ಕಸ್ತೂರಿರಂಗನ್*

9) ದೇಶದ ಅತಿ ಉದ್ದದ ಮತ್ತು ಸಮುದ್ರದ ಮೇಲೆ ನಿರ್ಮಾಣಗೊಂಡಿರುವ ದೇಶದ ಮೊದಲ ರೋಪ್ ವೇ ಎಲ್ಲಿದೆ? 
 *ಮುಂಬೈ* 
( ಎಲಿಫೆಂಟಾ ಗುಹೆ ನಡುವೆ)

10) ರೈತರು ಬೆಳೆದ ಉತ್ಪನ್ನಗಳನ್ನು ತ್ವರಿತವಾಗಿ ಸಾಗಿಸುವ ಸಲುವಾಗಿ ಯಾವಾ ರೈಲನ್ನು 2020 ಆಗಸ್ಟ್ 7ರಂದು "ಮಹಾರಾಷ್ಟ್ರದ ದೇವಹಳ್ಳಿಯಿಂದ ಬಿಹಾರದ ದಾನಪುರಕ್ಕೆ" ಮೊದಲ ರೈಲ್ವೆ ಆರಂಭವಾಯಿತು? 
 *ಕಿಸಾನ್ ರೈಲು*(FDA-2021)

11) ಇತ್ತೀಚಿಗೆ ಯಾವ ನದಿಯ ಮೇಲೆ ದೇಶದ ಅತಿ ಉದ್ದದ ರೋಪ್ ವೇಯನ್ನು ಗೌಹಾತಿಯ ಕಾಚಾರಿ ಘಾಟಿನಿಂದ ದೌಲ್ ಗೋವಿಂದ ದೇವಸ್ಥಾನದ ನಡುವೆ ಉದ್ಘಾಟಿಸಲಾಯಿತು? 
 *ಅಸ್ಸಾಮಿನಲ್ಲಿ ಬ್ರಹ್ಮಪುತ್ರ ನದಿಯ ಮೇಲೆ*
(Civil PC-2020)

12) ಆಗಸ್ಟ್ 2020 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಯಾವ ಖಂಡವನ್ನು ಪೋಲಿಯೋ ಮುಕ್ತ ಎಂದು ಘೋಷಿಸಿದೆ? 
 *ಆಫ್ರಿಕಾ ಖಂಡ*

13) ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಜಪಾನಿನ "ನಾಗಸಾಕಿ" ಮೇಲೆ ಅಮೆರಿಕ ದೇಶವು ಅಣುಬಾಂಬ್  ದಾಳಿ ನಡೆದು 2020 ಆಗಸ್ಟ್ 8ಕ್ಕೆ ಎಷ್ಟು ವರ್ಷವಾಯಿತು? 
 *75 ವರ್ಷ*

14) ಬರಾಕ್ ಒಬಾಮ ಅವರ ಆತ್ಮ ಚರಿತ್ರೆ? 
 *A Promised land*
(FDA-2021? )

15) ಭಾರತದ ಮೊದಲ "ಇಂಟಿಗ್ರೇಟೆಡ್ ಆಂಬುಲೆನ್ಸ್" ಸೇವೆಯನ್ನು ಆರಂಭಿಸಿದ ಸರ್ಕಾರ? 
 *ಕರ್ನಾಟಕ ಸರ್ಕಾರ*

16) *ಹಣ್ಣಿನ ರೈಲು*

 ಪ್ರಾರಂಭವಾಗಿದ್ದು= *2020 ಜನೆವರಿ31*
 ಉದ್ದೇಶ,= *ಬಾಳೆಹಣ್ಣನ್ನು ಸಾಗಿಸುವುದು*, 
 ಎಲ್ಲಿಂದ ಎಲ್ಲಿವರೆಗೆ= *ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ತಡಪಾದ್ರಿ ರೈಲ್ವೆ ಸ್ಟೇಷನ್ ನಿಂದ 980 ಟನ್ ಬಾಳೆಹಣ್ಣನ್ನು ಜವಾಲಾಲ್ ನೆಹರು ಬಂದರಿಗೆ ಸಾಗಿಸುವುದು*, {ಇದು ದೇಶದ ಮೊದಲು ಹಣ್ಣು ಸಾಗಿಸುವ ರೈಲ್ವೆ ಸೇವೆಯಾಗಿದೆ,}
 ಯಾವ ದೇಶಕ್ಕೆ ರಪ್ತವಾಗುತ್ತದೆ= *ಇರಾಕ್ ದೇಶಕ್ಕೆ*, 
 ಯಾವ ಬ್ರಾಂಡ್ ಹೆಸರಿನಲ್ಲಿ ಸಾಗಿಸಲಾಯಿತು= *ಹ್ಯಾಪಿ ಬನಾನಾ*
 ಯಾವ ಬಾಳೆಹಣ್ಣು = *ಗ್ರೀನ್ ಕ್ಯಾವೆಂಡಿಶ್*  

logoblog

Thanks for reading * Key questions and answers that may be asked on current events in the upcoming "FDA," "SDA," "PSI" competitive exams

Previous
« Prev Post

No comments:

Post a Comment