Saturday 6 March 2021

Brief information on the Diwan of Mysore

  MahitiVedike Com       Saturday 6 March 2021

  ಮೈಸೂರಿನ ದಿವಾನರ ಬಗ್ಗೆ ಸಂಕ್ಷಿಪ್ತ ಮಾಹಿತಿ


 ಕಮಿಷನರ್ಗಳ ಆಳ್ವಿಕೆಯ ನಂತರ ಕ್ರಿ.ಶ.1881 ರಲ್ಲಿ ಅಧಿಕಾರಕ್ಕೆ ಬಂದ ಒಡೆಯರು= *ಹತ್ತನೇ ಚಾಮರಾಜ ಒಡೆಯರ್*

 ಹತ್ತನೇ ಚಾಮರಾಜ ಒಡೆಯರು ಅಧಿಕಾರಕ್ಕೆ ಬಂದ ಅವಧಿ= *1881-1894*

 ಹತ್ತನೇ ಚಾಮರಾಜ ಒಡೆಯರು ಅಧಿಕಾರಕ್ಕೆ  ಬಂದಾಗ ಇದ್ದ ಬ್ರಿಟಿಷ್ ರೆಸಿಡೆಂಟ್= *ಜೆಡಿ ಗೋರ್ಡನ್*

 ಮೈಸೂರಿನ ಪ್ರಥಮ ದಿವಾನರು= *ದಿವಾನ್ ರಂಗಾಚಾರ್ಲು*(1881-1883 ದಿವಾನರ  ಅವಧಿ)

 "ಮೈಸೂರು ಪ್ರಜಾ ಪ್ರತಿನಿಧಿ ಸಭೆ" ಯನ್ನು ಸ್ಥಾಪಿಸಿದ ದಿವಾನರು= *ದಿವಾನ್ ರಂಗಾಚಾರ್ಲು*(1881 ರಲ್ಲಿ ಸ್ಥಾಪನೆ)

 ಬೆಂಗಳೂರು-ಮೈಸೂರು ರೈಲ್ವೆ ಆರಂಭಿಸಿದ ದಿವಾನರು= *ದಿವಾನ ರಂಗಚಾರ್ಲು*(1882ರಲ್ಲಿ)

 ದಿವಾನ ರಂಗಚಾರ್ಯ ನಂತರ ಮೈಸೂರಿನ ದಿವಾನರು= *ಕೆ ಶೇಷಾದ್ರಿ ಅಯ್ಯರ್*

 ಕೆ ಶೇಷಾದ್ರಿ ಅಯ್ಯರ್ ಅವರು ಮೈಸೂರಿನ ದಿವಾನರಾಗಿದ್ದ ಅವಧಿ= *1883-1901*

 ರೈತರಿಗೆ ಸಾಲ ನೀಡುವ ಉದ್ದೇಶಕ್ಕೆ "ಕೃಷಿ ಬ್ಯಾಂಕನ್ನು ಸ್ಥಾಪಿಸಿದ" ದಿವಾನರು= *ಕೆ ಶೇಷಾದ್ರಿ ಅಯ್ಯರ್*, 

 ಮೈಸೂರು "ರಾಜ್ಯ ಸರ್ಕಾರಿ ನೌಕರಿಗೆ ಜೀವ ವಿಮಾ ಯೋಜನೆ" ಜಾರಿಗೆ ತಂದ ದಿವಾನರು= *ಕೆ ಶೇಷಾದ್ರಿ ಅಯ್ಯರ್*

 ಮೈಸೂರಿನ ಚಾಮರಾಜೇಂದ್ರ ಮೃಗಾಲಯವನ್ನು ಸ್ಥಾಪಿಸಿದ ದಿವಾನರು= *ಕೆ ಶೇಷಾದ್ರಿ ಅಯ್ಯರ್*

 ಮೈಸೂರು ಬಾಲ್ಯ ವಿವಾಹ ನಿಷೇಧ ಕಾಯ್ದೆ ಜಾರಿಗೆ ದಿವಾನರು= *ಕೆ ಶೇಷಾದ್ರಿ ಅಯ್ಯರ್*( ಜಾರಿಗೆ ತಂದ ವರ್ಷ=1894)

 ಸರ್ಕಾರಿ ನೌಕರರ ಆಯ್ಕೆಗಾಗಿ( ಸ್ಪರ್ಧಾತ್ಮಕ) ಮೈಸೂರು "ಸಿವಿಲ್ ಸರ್ವಿಸ್ ಪರೀಕ್ಷೆಗಳನ್ನು" ಆರಂಭಿಸಿದ ದಿವಾನರು= *ಕೆ ಶೇಷಾದ್ರಿ ಅಯ್ಯರ್*

 ಏಷ್ಯಾದಲ್ಲೇ ಮೊದಲ ಜಲವಿದ್ಯುತ್ ಕೇಂದ್ರ ಎಂದು ಖ್ಯಾತಿಯಾಗಿದ್ದ ಶಿವನಸಮುದ್ರ ಜಲವಿದ್ಯುತ್ ಹಿಂದೆ ಅದನ್ನು ಕೆ ಶೇಷಾದ್ರಿ ಅಯ್ಯರ್ ಎಂದು ಕರೆಯುತ್ತಿದ್ದರು, 

 ಕೆ ಶೇಷಾದ್ರಿ ಅಯ್ಯರ್ ನಂತರ ಮೈಸೂರಿನ ದಿವಾನರಾದರು= *ಪಿ ಎನ್ ಕೃಷ್ಣಮೂರ್ತಿ*

 ನಾಲ್ವಡಿ ಕೃಷ್ಣರಾಜ ಒಡೆಯರು ಅಧಿಕಾರಕ್ಕೆ ಬಂದ ವರ್ಷ= *1894*

 ಮೈಸೂರಿನಲ್ಲಿ ಪ್ರಸ್ತುತ ಇರುವ ಅರಮನೆ ನಿರ್ಮಾಣಕ್ಕೆ ಶ್ರಮಿಸಿದ ದಿವಾನರು= *ದಿವಾನ ಟಿ ಆನಂದರಾವ್*

 ನಾಲ್ವಡಿ ಕೃಷ್ಣರಾಜ ಒಡೆಯರ ರಾಜಪ್ರತಿನಿಧಿಯಾಗಿ ಆಳ್ವಿಕೆ ನಡೆಸಿದವರು= *ಅವರ ತಾಯಿ ವಾಣಿವಿಲಾಸದ ಕೆಂಪರಾಜಮ್ಮಣ್ಣಿ*. 

 ನಾಲ್ವಡಿ ಕೃಷ್ಣರಾಜ ಒಡೆಯರು ಸ್ವತಃ ತಾವೇ ನೇರವಾಗಿ ಆಳ್ವಿಕೆ ಮಾಡಲಾರಂಭಿಸಿದ ವರ್ಷ= *1905*

1910ರಲ್ಲಿ ಮೈಸೂರು ಅರಮನೆಯನ್ನು ಪೂರ್ಣಗೊಳಿಸಿದ್ದ ಒಡೆಯರು= *ನಾಲ್ವಡಿ ಕೃಷ್ಣರಾಜ ಒಡೆಯರು*

 ಮೊದಲ ಬಾರಿಗೆ ಸ್ತ್ರೀಯರಿಗೂ ಮತಾಧಿಕಾರ ನೀಡಲು ಅನು ಮಾಡಿದವರು= *ನಾಲ್ವಡಿ ಕೃಷ್ಣರಾಜ ಒಡೆಯರು*

 ಕೆ ಆರ್ ಎಸ್   ಅಣೆಕಟ್ಟನ್ನು ನಿರ್ಮಾಣ ಮಾಡಿಸುವ ಮೂಲಕ ಸಂಸ್ಥಾನದಲ್ಲಿ ಕೃಷಿ ಭಿವೃದ್ಧಿ ಪಡಿಸಿದವರು = ನಾಲ್ವಡಿ *ಕೃಷ್ಣರಾಜ ಒಡೆಯರು*(TET-2020)

 ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ನಿರ್ಮಾಣವಾದ ಪ್ರಮುಖ ಜಲಾಶಯ= *ಮಾರಿಕಣಿವೆ ಜಲಾಶಯ*

 ಕೋಲಾರ ಚಿನ್ನದ ಗಣಿ ಆರಂಭವಾದಾಗ,  ಬೆಂಗಳೂರು ನಗರಕ್ಕೆ ವಿದ್ಯುತ್ ಸರಬರಾಜು ಆದಾಗ  ಇದ್ದಮೈಸೂರು ಒಡೆಯರು= *ನಾಲ್ವಡಿ ಕೃಷ್ಣರಾಜ ಒಡೆಯರು*

 ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ  ಇದ್ದ ದಿವಾನರು= *ಸರ್ ಎಂ ವಿಶ್ವೇಶ್ವರಯ್ಯ*

 "ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ" ಯನ್ನು ಸ್ಥಾಪಿಸಿದ ದಿವಾನರು= *ವಿಶ್ವೇಶ್ವರಯ್ಯರು*

 ಬೆಂಗಳೂರಿನ ಸರಕಾರಿ ಸಾಬೂನು ಮತ್ತು ಗಂಧದ ಎಣ್ಣೆ ಕಾರ್ಖಾನೆ ಸ್ಥಾಪಿಸಿದ ದಿವಾನರು= *ವಿಶ್ವೇಶ್ವರಯ್ಯರು*

 ಹೆಬ್ಬಾಳದ ಕೃಷಿ ಕಾಲೇಜು ಸ್ಥಾಪನೆಗೆ ಕಾರಣರಾದ ದಿವಾನರು= *ವಿಶ್ವೇಶ್ವರಯ್ಯ*

 ಪ್ರಾಥಮಿಕ ಶಿಕ್ಷಣದ ಶುಲ್ಕವನ್ನು ರದ್ದು ಮಾಡಿದ ಮೈಸೂರು ಒಡೆಯರು= *ನಾಲ್ವಡಿ ಕೃಷ್ಣರಾಜ ಒಡೆಯರು*

 "ಆಧುನಿಕ ಮೈಸೂರು ನಿರ್ಮಾಪಕ ಎಂದು" ಕರೆಯಲ್ಪಡುವ ಒಡೆಯರು= *ನಾಲ್ವಡಿ ಕೃಷ್ಣರಾಜ ಒಡೆಯರು*

 ಭದ್ರಾವತಿಯಲ್ಲಿ ಸಿಮೆಂಟ ಮತ್ತು ಕಾಗದದ ಕಾರ್ಖಾನೆಯನ್ನು ಸ್ಥಾಪಿಸಿದ ಮೈಸೂರಿನ ದಿವಾನರು= *ಸರ್ ಮಿರ್ಜಾ ಇಸ್ಮಾಯಿಲ್*

 ಕನ್ನಂಬಾಡಿ ಆಣೆಕಟ್ಟನ್ನು ಪೂರ್ಣಗೊಳಿಸಿದ ಮೈಸೂರಿನ ದಿವಾನರು= *ಮಿರ್ಜ ಇಸ್ಮಯಿಲರು*

 ದುಂಡುಮೇಜಿನ ಸಮ್ಮೇಳನದಲ್ಲಿ ಭಾಗವಹಿಸಿದ ಮೈಸೂರಿನ ದಿವಾನರು= *ಸರ್ ಮಿರ್ಜಾ ಇಸ್ಮೈಲರು*

 ಕನ್ನಂಬಾಡಿ ಆಣೆಕಟ್ಟು ಮುಂದೆ "ಬೃಂದಾವನ ಹೂದೋಟವನ್ನು"  ನಿರ್ಮಿಸಿದ ದಿವಾನರು= *ಸರ್ ಮಿರ್ಜಾ ಇಸ್ಮಾಯಿಲರು*

 "ಕೈಗಾರಿಕರಣ ಇಲ್ಲವೆ ವಿನಾಶ" ಎನ್ನುತ್ತಿದ್ದ ಮೈಸೂರಿನ ದಿವಾನರು= *ಸರ್ ಎಂ ವಿಶ್ವೇಶ್ವರಯ್ಯ*

 ಮೈಸೂರಿನ ಬ್ರಾಹ್ಮಣೇತರ ದಿವಾನರು= *ದಿವಾನ್ ಕಾಂತರಾಜ ಅರಸ*

 ನಾಲ್ವಡಿ ಕೃಷ್ಣರಾಜ ಒಡೆಯರ ನಂತರ ಮೈಸೂರಿನ ಒಡೆಯರ್ ಆದವರು= *ಜಯಚಾಮರಾಜ ಒಡೆಯರು* (ಮೈಸೂರು ಒಡೆಯರ ವಂಶದ ಕೊನೆಯ ಒಡೆಯರು)

 ಮೈಸೂರಿನ ಪ್ರಥಮ ರಾಜ್ಯಪಾಲರು= *ಜಯಚಾಮರಾಜ ಒಡೆಯರು*

 "ರಾಜರ್ಷಿ"  ಎಂದು ಹೆಸರಾಗಿದ್ದ ಮೈಸೂರು ಒಡೆಯರು= *ನೋಡಿ ಕೃಷ್ಣರಾಜ ಒಡೆಯರು*( ಕರೆದವರು ಮಹಾತ್ಮ ಗಾಂಧೀಜ)

 ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದ ಮೈಸೂರು ರಾಜ್ಯವನ್ನು ರಾಮರಾಜ್ಯ ಎಂದು ವರ್ಣಿಸಿದರು= *ಮಹಾತ್ಮ ಗಾಂಧೀಜಿ*

 ನಾಲ್ವಡಿ ಕೃಷ್ಣರಾಜ ಒಡೆಯರು ಸಿಂಹಾಸನಕ್ಕೆ ಬಂದಾಗ ಬ್ರಿಟಿಷ್ ರೆಸಿಡೆಂಟ್ ಆಗಿ ನೇಮಕಗೊಂಡವರು= *ಕರ್ನಲ್ ಹೆಂಡರ್ ಸೆನ್*

 ಮೈಸೂರಿನ ಕೊನೆಯ ದಿವಾನರು= *ರಾಮಸ್ವಾಮಿ ಮೊದಲಿಯಾರ್*

logoblog

Thanks for reading Brief information on the Diwan of Mysore

Previous
« Prev Post

No comments:

Post a Comment