Subject : Corona related
Subject Language : Kannada
Which Department : all
Place : Karnataka
Announcement Date : 27/03/2021
Subject Format : PDF/JPJ
Subject Size : 56kb
Pages : 1
Scanned Copy : Yes
Editable Text : NO
Password Protected : NO
Download Link : Yes
Copy Text : NO
Print Enable : Yes
Quality : High
Subject Size Reduced :NO
Password : NO
Cost : Free
For Personal Use Only
Save Environment!!!
ಕೊರೊನಾ ಅಂಕಿ-ಅಂಶಗಳನ್ನು ಮುಚ್ಚಿಡೊ ಉದ್ದೇಶವೂ ಇಲ್ಲ, ಆ ಅವಶ್ಯಕತೆಯೂ ಇಲ್ಲ : ಡಾ. ಕೆ ಸುಧಾಕರ್ ಟಾಂಗ್
ಡಿಜಿಟಲ್ ಡೆಸ್ಕ್: ನಮ್ಮ ಸರ್ಕಾರಕ್ಕೆ ಕೊರೊನಾ ಅಂಕಿ-ಅಂಶಗಳನ್ನ ಮುಚ್ಚಿಡುವ ಉದ್ದೇಶವೂ ಇಲ್ಲ ಅದರ ಅವಶ್ಯಕತೆಯೂ ಇಲ್ಲ. ಜವಾಬ್ದಾರಿಯುತ ಸ್ಥಾನಗಳಲ್ಲಿರುವವರು ಕೇವಲ ರಾಜಕೀಯ ಲಾಭಕ್ಕಾಗಿ ಸುಳ್ಳು ಅಪಾದನೆಗಳನ್ನ ಮಾಡುವುದು ಸರಿಯಲ್ಲ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಹೇಳುವ ಮೂಲಕ ವಿಪಕ್ಷ ನಾಯಕ ಸಿದ್ದರಾಮಯ್ಯ ಅವ್ರಿಗೆ ಟಾಂಗ್ ನೀಡಿದ್ದಾರೆ.
ಸಿದ್ದರಾಮಯ್ಯ ಅವ್ರ ಟ್ವೀಟ್‌ಗೆ ಸರಣಿ ಟ್ವೀಟ್‌ಗಳ ಮೂಲಕ ಉತ್ತರ ನೀಡಿದ ಸಚಿವರು, ' ನಮ್ಮ ಸರ್ಕಾರಕ್ಕೆ ಕೊರೊನಾ ಅಂಕಿ-ಅಂಶಗಳನ್ನ ಮುಚ್ಚಿಡುವ ಉದ್ದೇಶವೂ ಇಲ್ಲ ಅದರ ಅವಶ್ಯಕತೆಯೂ ಇಲ್ಲ. ಜವಾಬ್ದಾರಿಯುತ ಸ್ಥಾನಗಳಲ್ಲಿರುವವರು ಕೇವಲ ರಾಜಕೀಯ ಲಾಭಕ್ಕಾಗಿ ಸುಳ್ಳು ಅಪಾದನೆಗಳನ್ನ ಮಾಡುವುದು ಸರಿಯಲ್ಲ. ಇದು ಕಳೆದ 1 ವರ್ಷದಿಂದ ಹಗಲಿರುಳು ಶ್ರಮಿಸುತ್ತಿರುವ ಕೊರೊನಾ ಯೋಧರಿಗೆ ಎಸಗಿರುವ ಅಪಮಾನ' ಎಂದ್ದಿದ್ದಾರೆ.
ಇನ್ನು 'ಈ ಅಂಕಿ-ಅಂಶಗಳು ಇ-ಜನ್ಮ ತಂತ್ರಾಂಶದಲ್ಲಿ ತಾತ್ಕಾಲಿಕವಾಗಿ ದಾಖಲಿಸಲಾಗಿರುವ ದತ್ತಾಂಶವಾಗಿದ್ದು, ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ ಅವರು ಹೊರಡಿಸಿರುವ ಮಾರ್ಗಸೂಚಿಗಳ ಅನುಸಾರ ಪರಿಷ್ಕರಣೆ ನಡೆಯಬೇಕಿದೆ. ಈ ಪ್ರಕ್ರಿಯೆ ಮುಕ್ತಾಯ ಹಂತದಲ್ಲಿದ್ದು ಅಂತಿಮ ಅಂಕಿ-ಅಂಶಗಳ ಪ್ರಕಟಣೆ ಇನ್ನೂ ಬಾಕಿಯಿದೆ' ಎಂದು ಹೇಳಿದ್ದಾರೆ.
ಅಂದ್ಹಾಗೆ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವ್ರು, ಅಂಕಿ ಅಂಶಗಳ ದಾಖಲೆಗಳನ್ನ ಹಂಚಿಕೊಂಡು, ರಾಜ್ಯದ ಆರೋಗ್ಯ ಇಲಾಖೆ ದಾಖಲೆ ಪ್ರಕಾರ 2020ರ ಡಿಸೆಂಬರ್ ವರೆಗಿನ ಕೊರೊನಾ ಸಾವಿನ ಸಂಖ್ಯೆ- 12,090. ಇನ್ನು ರಾಜ್ಯ ಯೋಜನಾ ಮತ್ತು ಅಂಕಿಅಂಶ ಇಲಾಖೆಯ ಪ್ರಕಾರ ಇದೇ ಅವಧಿಯಲ್ಲಿ ಕೊರೊನಾ ಸಾವಿನ ಸಂಖ್ಯೆ- 22,320. ಇದರಲ್ಲಿ ಯಾವುದು ಸತ್ಯ, ಯಾವುದು ಸುಳ್ಳು? ಎಂದು ಪ್ರಶ್ನಿಸಿ ಮುಖ್ಯಮಂತ್ರಿಗಳಿಗೆ ಮತ್ತು ಸುಧಾಕರ್ ಅವ್ರನ್ನ ಪ್ರಶ್ನಿಸಿ ಟ್ವೀಟ್ ಮಾಡಿದ್ದರು.
ಹೋಳಿ ಹಬ್ಬದ ಆಚರಣೆ, ಅರ್ಥ, ಶ್ರೀಕೃಷ್ಣನ ಜೊತೆಗಿರುವ ಸಂಬಂಧ…. ಇಲ್ಲಿದೆ ಸಂಪೂರ್ಣ ವಿವರ
No comments:
Post a Comment