Subject : important notes
Subject Language : Kannada
Which Department : all
Place : Karnataka
Announcement Date : 27/03/2021
Subject Format : PDF/JPJ
Subject Size : 56kb
Pages : 1
Scanned Copy : Yes
Editable Text : NO
Password Protected : NO
Download Link : Yes
Copy Text : NO
Print Enable : Yes
Quality : High
Subject Size Reduced :NO
Password : NO
Cost : Free
For Personal Use Only
Save Environment!!!
'ಈ ಮೂರು ಬ್ಯಾಂಕ್ ಗ್ರಾಹಕರಿಗೆ' ಮಹತ್ವದ ಮಾಹಿತಿ : ಈ ಕಾರಣಕ್ಕೆ 'OTP' ಪಡೆಯುಲು ಸಮಸ್ಯೆಯಾಗಬಹುದು
ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್ ಡಿಎಫ್ ಸಿ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಎಚ್ ಡಿಎಫ್ ಸಿ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದರೆ, ನಿಮಗೆ ಬಹಳ ಮುಖ್ಯವಾದ ಸುದ್ದಿ ಇದೆಯಾಗಿದೆ, ಹೌದು 27 ರಿಂದ ಏಪ್ರಿಲ್ 4 ರವರೆಗೆ 7 ದಿನಗಳ ಕಾಲ ಬ್ಯಾಂಕ್ ಗಳನ್ನು ಮುಚ್ಚಲಾಗುತ್ತದೆ, ಆದರೆ ಈ ಮಧ್ಯೆ, ಮತ್ತೊಂದು ಆತಂಕದ ಸುದ್ದಿ ಎಂದರೆ ಆನ್ ಲೈನ್ ಬ್ಯಾಂಕಿಂಗ್ ನಲ್ಲೂ ಸಮಸ್ಯೆ ಎದುರಾಗಬಹುದು ಎನ್ನಲಾಗಿದೆ.
ಅನಗತ್ಯ ಮತ್ತು ಮೋಸದ ಎಸ್ ಎಂಎಸ್ ಗಳನ್ನು ನಿವಾರಿಸಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ವಾಣಿಜ್ಯ ಸಂದೇಶಗಳನ್ನು ನಿಯಂತ್ರಿಸುವ ಪ್ರಕ್ರಿಯೆಯನ್ನು ಆರಂಭಿಸಿದ್ದು, ಗ್ರಾಹಕರನ್ನು ತಲುಪಲು ಟ್ರಾಯ್ ನೊಂದಿಗೆ ಎಸ್ ಎಂಎಸ್ ಅನ್ನು ಒಂದು ಸ್ವರೂಪದಲ್ಲಿ ನೋಂದಾಯಿಸುವಂತೆ ಕಂಪನಿಗಳಿಗೆ ಹೇಳಿದೆ.
ಗ್ರಾಹಕರಿಗೆ ಸರಿಯಾದ ಸಂದೇಶ ವನ್ನು ಕಳುಹಿಸುವುದು ಮತ್ತು ಯಾವುದೇ ವಂಚನೆಗೆ ಬಲಿಯಾಗದಂತೆ ಅವರನ್ನು ರಕ್ಷಿಸುವುದು ಈ ಕ್ರಮದ ಉದ್ದೇಶವಾಗಿದೆ. ಆದರೆ, ಅನೇಕ ಕಂಪನಿಗಳು ಟ್ರಾಯ್ ನ ಈ ಆದೇಶವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎನ್ನಲಾಗಿದೆ.
ಎಚ್ ಡಿಎಫ್ ಸಿ ಬ್ಯಾಂಕ್, ಎಸ್ ಬಿಐ, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕ್ ಗಳು ಸೇರಿದಂತೆ ಇಂತಹ 40 ಬ್ಯಾಂಕ್‌ಗಳ ಪಟ್ಟಿಯನ್ನು ಟ್ರಾಯ್ ಬಿಡುಗಡೆ ಮಾಡಿದೆ. TRAI ಪದೇ ಪದೇ ಎಚ್ಚರಿಕೆ ನೀಡಿದ ನಂತರವೂ ಈ ಎಲ್ಲಾ ಕಂಪನಿಗಳು (ಪ್ರಧಾನ ಸಂಸ್ಥೆಗಳು) ಬೃಹತ್ ವಾಣಿಜ್ಯ ಎಸ್ ಎಂಎಸ್ ಗಳ ನಿಯಂತ್ರಕ ನಿಯಮಗಳನ್ನು ಪಾಲಿಸುತ್ತಿಲ್ಲ ಅಂತ ದೂರಿದೆ. ಕಂಪನಿಗಳು ಆದೇಶ ಪಾಲಿಸದಿರುವುದನ್ನು ಗಮನಿಸಿದ ಟ್ರಾಯ್ ಈಗ ಅವುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆರಂಭಿಸಿದೆ. ತಮ್ಮ ಗ್ರಾಹಕರು ಒಟಿಪಿ ಪಡೆಯಲು ತೊಂದರೆ ಗಳನ್ನು ಎದುರಿಸುವುದು ಬೇಡ ಎಂದಾದಲ್ಲಿ, 2021ರ ಏಪ್ರಿಲ್ 1ರ ಒಳಗೆ ಈ ಎಲ್ಲಾ ಡೀಫಾಲ್ಟ್ ಕಂಪನಿಗಳಿಗೆ ಈ ಆದೇಶವನ್ನು ಪಾಲಿಸಬೇಕೆಂದು ನಿಯಂತ್ರಕವು ಎಚ್ಚರಿಕೆ ನೀಡಿದೆ.
ಆದ್ದರಿಂದ, 2021ರ ಏಪ್ರಿಲ್ 1ರಿಂದ, 'ಸ್ಕ್ರಬ್ಬಿಂಗ್ ಪ್ರೊಸೆಸ್' ನಲ್ಲಿ ಯಾವುದೇ ಸಂದೇಶವು ವಿಫಲವಾದರೆ, ಆಗ ಅದು ಸಿಸ್ಟಮ್ ನಿಂದ ತಿರಸ್ಕೃತವಾಗುತ್ತದೆ ಎಂದು ನಿರ್ಧರಿಸಲಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್ ಡಿಎಫ್ ಸಿ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಮುಂತಾದ ದೊಡ್ಡ ಬ್ಯಾಂಕ್ ಗಳನ್ನು ಒಳಗೊಂಡ ಕಂಪನಿಗಳು (ಪ್ರಧಾನ ಸಂಸ್ಥೆಗಳು) ಕಂಟೆಂಟ್ ಟೆಂಪ್ಲೇಟ್ ಐ.ಡಿ, ಪಿಇ ಐ.ಡಿ. ಇತ್ಯಾದಿ ಅಗತ್ಯ ಮಾನದಂಡಗಳನ್ನು ಪಾಲಿಸುತ್ತಿಲ್ಲ ಎಂದು ಟ್ರಾಯ್ ಹೇಳಿದೆ. ಇಂತಹ ಸನ್ನಿವೇಶದಲ್ಲಿ, ಈ ಬ್ಯಾಂಕ್ ಗಳ ಗ್ರಾಹಕರು ಯಾವುದೇ ಆನ್ ಲೈನ್ ವ್ಯವಹಾರವನ್ನು ಮಾಡಿದರೆ, ಅವರಿಗೆ OTP ಸಿಗುವುದಿಲ್ಲ, ಏಕೆಂದರೆ ಎಸ್ ಎಂಎಸ್ ಸ್ಕ್ರಬ್ಬಿಂಗ್ ಪ್ರಕ್ರಿಯೆಯಲ್ಲಿ, ಈ ಬ್ಯಾಂಕ್ ಗಳ OTP ಸಂದೇಶ ಅಥವಾ ಇತರ ಯಾವುದೇ ಪ್ರಮುಖ ಸಂದೇಶ ವ್ಯವಸ್ಥೆಯಿಂದ ತಿರಸ್ಕರಿಸಲ್ಪಡುತ್ತವೆ. ಗ್ರಾಹಕರಿಗೆ ಸೇವೆ ಲಭ್ಯವಾಗುವುದಿಲ್ಲ.
No comments:
Post a Comment