ಬಾದಾಮಿ ಚಾಲುಕ್ಯರ ಮೇಲೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ಕೇಳಿರುವ ಪ್ರಶ್ನೆ ಉತ್ತರಗಳು
1) ಹರ್ಷನ ಮೇಲೆ ಚಾಲುಕ್ಯರು ಸಾಧಿಸಿದ ವಿಜಯವನ್ನು ಎಲ್ಲಿ ಹೇಳಲಾಗಿದೆ?
ಐಹೊಳೆ ಶಾಸನ
2) ಹರ್ಷನಿಗಿಂತ ಎರಡನೇ ಪುಲಿಕೇಶಿ ಹೆಚ್ಚಿನ ಸೇನಾ ಸಾಮರ್ಥ್ಯಕ್ಕೆ ಸಾಕ್ಷಿ ಯಾವುರಲ್ಲಿ ಸಿಗುತ್ತದೆ?
ಐಹೊಳೆ ಶಾಸನ, ಹರ್ಷಚರಿತ, ಚೀನಿಯರ ವೃತ್ತಾಂತಗಳು,
3) ಬಾದಾಮಿಯ ಪ್ರಸಿದ್ದ ಗುಹಾಂತರ ದೇವಾಲಯಗಳನ್ನು ಯಾರು ನಿರ್ಮಿಸಿದರು?(PSI-2002)
ಚಾಲುಕ್ಯರು
4) ಬಾದಾಮಿಯ ಹಿಂದಿನ ಹೆಸರು?(PSI-2015)
ವಾತಾಪಿ
5) ಬಾದಾಮಿ ಚಾಲುಕ್ಯರು ಅಭಿವೃದ್ಧಿಪಡಿಸಿದ ವಾಸ್ತುಶಿಲ್ಪದ ಶೈಲಿ?(PSI-2013)
ವೇಸರ ಶೈಲಿ
6) ದಕ್ಷಿಣ ಪಥೇಶ್ವರ ಎಂಬ ಬಿರುದು ಪಡೆದ ಪುರಾತನ ರಾಜ?(PSI-2003)
2ನೇ ಪುಲಿಕೇಶಿ
7) ಇಮ್ಮಡಿ ಪುಲಕೇಶಿಯು ಯಾವಾಗ ರಾಜ್ಯ ಆಳುತ್ತಿದ್ದನು? (PSI-2000)
ಏಳನೇ ಶತಮಾನದ ಆರಂಭ
8) ಚಾಲುಕ್ಯ ವಿಕ್ರಮ-- ಶಕೆ ಪ್ರಾರಂಭ ವರ್ಷ?(FDA-1997)
ಕ್ರಿ.ಶ.1076
9) ಚಾಲುಕ್ಯರ ಸೈನ್ಯ ಯಾವ ಹೆಸರಿನಿಂದ ಗುರುತಿಸಿಕೊಂಡಿತ್ತು?(SDA-2019)
ಕರ್ನಾಟ ಬಲ
10) ಬಾದಾಮಿ ಚಾಲುಕ್ಯರ ಆಸ್ಥಾನಕ್ಕೆ ಭೇಟಿ ನೀಡಿದ ಚೀನಾದ ಯಾತ್ರಿಕ?(SDA-2008)
ಹುಯೆನ್ ತ್ಸಾಂಗ್
11) ಕನೌಜ ಹರ್ಷವರ್ಧನನನ್ನು ಸೋಲಿಸಿದ ಬಾದಾಮಿ ಚಾಲುಕ್ಯರ ದೊರೆ ಯಾರು?(SDA-2011)
2ನೇ ಪುಲಿಕೇಶಿ
12) ಚಾಲುಕ್ಯ ವಂಶದ ಸ್ಥಾಪಕ? (SDA-2019)
ಜಯಸಿಂಹ
13) ಪಟ್ಟದಕಲ್ಲು ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?(PC-2004)
ಬಾಗಲಕೋಟೆ
14) ಪೂರ್ವ ಚಾಲುಕ್ಯರ ರಾಜಧಾನಿ?(PUC Lecture-2012)
ವೆಂಗಿ
15) ಐಹೊಳೆ ಮತ್ತು ಪಟ್ಟದಕಲ್ಲು ಗಳಲ್ಲಿರುವ ಸುಂದರವಾದ ದೇವಾಲಯಗಳನ್ನು ಯಾರು ಕಟ್ಟಿಸಿದರು?
ಚಾಲುಕ್ಯರು
16) ಇಮ್ಮಡಿ ಪುಲಿಕೇಶಿ ಈತನ ಆಸ್ಥಾನದಲ್ಲಿ ಪರ್ಷಿಯಾದ ರಾಯಭಾರಿಗಳನ್ನು ಬರಮಾಡಿಕೊಳ್ಳುತ್ತಿರುವ ದೃಶ್ಯವನ್ನು ತೋರುವ ಚಿತ್ರ ಎಲ್ಲಿ ಕಾಣುತ್ತದೆ?(KAS-1999)
ಅಜಂತ
17) ಚಾಲುಕ್ಯರ ರಾಜಧಾನಿ?(RSI/PSI-2016)
ವಾತಾಪಿ/ ಬದಾಮಿ
No comments:
Post a Comment