Monday 15 March 2021

Brief Information on Ibadat Khan / Chapel

  MahitiVedike Com       Monday 15 March 2021



ಇಬಾದತ್ ಖಾನ್/ ಪ್ರಾರ್ಥನಾ ಮಂದಿರ ಬಗ್ಗೆ ಸಂಕ್ಷಿಪ್ತ ಮಾಹಿತಿ


 ಸ್ಥಾಪಿಸಿದ್ದು= ಅಕ್ಬರ್

ಸ್ಥಾಪನೆ= ಕ್ರೀ,ಶ 1575

 ಸ್ಥಾಪಿಸಿದ ಸ್ಥಳ= ಪತ್ತೆಪುರ್ ಸಿಕ್ರಿಯಲ್ಲಿ

 ಪ್ರತಿ ಗುರುವಾರದಂದು ಅಕ್ಬರನು ಈ ಚರ್ಚೆಯಲ್ಲಿ  ಭಾಗವಹಿಸುತ್ತಿದ್ದನು, ಈ ಪ್ರಾರ್ಥನಾ ಮಂದಿರದಲ್ಲಿ ತತ್ವಶಾಸ್ತ್ರ ಮತ್ತು ದೇವತಾಶಾಸ್ತ್ರ ಸಮಸ್ಯೆ ಕುರಿತು ಚರ್ಚೆ ನಡೆಯುತ್ತಿತ್ತು, 

 ಈ ಪ್ರಾರ್ಥನಾ ಮಂದಿರದಲ್ಲಿ ಪ್ರಾರಂಭಿಕ ಇಸ್ಲಾಂ ಗುರುಗಳು= ಮುಲ್ಲಾ, ಉಲೇಮಾರ್ ಗಳನ್ನು ಆಹ್ವಾನಿಸಲಾಗಿತ್ತು. 

ಅಕ್ಬರನು ಕ್ರೀ,ಶ 1578 ರಲ್ಲಿ ಅನ್ಯಧರ್ಮಿಯರನ್ನು ಚರ್ಚೆಗೆ ಕರೆದನು,

 ಹಿಂದೂ ತತ್ವಶಾಸ್ತ್ರಜ್ಞರು ಗಳಾದ= ಪುರುಷೋತ್ತಮ ಮತ್ತು ದೇವಿಯರು

( ಅಕ್ಬರನಿಗೆ ವಿಗ್ರಹಾರಾಧನೆ, ಕರ್ಮಸಿದ್ಧಾಂತ, ಪರಮಾತ್ಮ, ಜೀವಾತ್ಮ ಮೊದಲಾದ ಆಧ್ಯಾತ್ಮಿಕ ವಿಷಯಗಳನ್ನು ಬಗ್ಗೆ ತಿಳಿಸಿಕೊಟ್ಟರು,)

 ಜೈನಧರ್ಮ ಗುರುಗಳಾದ= ಹಿರವಿಜಯಸೂರಿ, ವಿಜಯಸೇನ್, ಮತ್ತು ಭಾನುಚಂದ್ರ ಉಪಾಧ್ಯಾಯರು,
( ಇವರು ಅಕ್ಬರ್ ನಿಗೆ ಧಾರ್ಮಿಕ ಸಂದೇಶಗಳಿಗೆ ಸಮರ್ಪಕ ಉತ್ತರ ನೀಡಿದರು, ಜೈನ ಧರ್ಮದ ಪ್ರಭಾವದಿಂದ ಅಕ್ಬರನು ಮಾಂಸಹಾರವನ್ನು ತ್ಯೇಜಿಸಿದನು.)

 ಪಾರ್ಸಿ ಧರ್ಮ ಪಂಡಿತರಾದ= ದೋಸ್ತುರ್ ಮಹೇರ್ಜಿಯು ( ಅಕ್ಬರನಿಗೆ "ಸೂರ್ಯ" ಮತ್ತು "ಅಗ್ನಿ ಪೂಜೆಯ" ಮಹತ್ವವನ್ನು ವಿವರಿಸಿದರು,)

 ಕ್ರೈಸ್ತ ಧರ್ಮದಿಂದ= ಆಂಟೋನಿಯೋ ( ಇವರು ಕ್ರೈಸ್ತ ಪಾದ್ರಿಗಳು ಕ್ರೈಸ್ತ ಧರ್ಮದ ಸಾರವನ್ನು ಅಕ್ಬರನಿಗೆ ಮನವರಿಕೆ ಮಾಡಿಕೊಟ್ಟರು,)

 ಸಿಖ್ ಧರ್ಮದ ಮುಖಂಡರು ಭಾಗವಹಿಸಿದ್ದರು,

 ಒಟ್ಟಾರೆಯಾಗಿ ಅಕ್ಬರನು ಸ್ಥಾಪಿಸಿದ "ಇಬಾದತ್ ಖಾನ್" ದಲ್ಲಿ ಸರ್ವಧರ್ಮಗಳ ಸಂಸತ್ ಮಾದರಿಯಲ್ಲಿತ್ತು, 

 ಅಕ್ಬರನು ಉತ್ತಮ ಅಂಶಗಳನ್ನು ತೆಗೆದುಕೊಂಡು "ಕ್ರೀ,ಶ 1581ರಲ್ಲಿ" ದೀನ್-ಇ-ಇಲಾಹಿ ಎಂಬ ಹೊಸ ಧರ್ಮವನ್ನು ಸ್ಥಾಪಿಸಿದನು. 

ದೀನ್-ಇ-ಇಲಾಹಿ ಧರ್ಮಕ್ಕೆ ಸೇರಿದ ಏಕೈಕ ಹಿಂದು ವ್ಯೆಕ್ತಿ= ಬೀರಬಲ್ಲ

logoblog

Thanks for reading Brief Information on Ibadat Khan / Chapel

Previous
« Prev Post

No comments:

Post a Comment