Tuesday 16 March 2021

FDA / SDA tests are useful technologies

  MahitiVedike Com       Tuesday 16 March 2021


FDA/SDA ಪರೀಕ್ಷೆಗಳಿಗೆ ಉಪಯುಕ್ತವಾಗುವ ತದ್ದಿತಾಂತಗಳು


" ಕನ್ನಡ ಭಾಷಾ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಈ "ತದಿತಾಂತಗಳು" ಪ್ರಮುಖ ಪಾತ್ರವಹಿಸುತ್ತವೆ, ಇವು  "ಸಾಧಿತ ನಾಮ" ಗಳಲ್ಲಿ ಒಂದಾಗಿವೆ. "ಸಾಧಿತ ನಾಮ" ಎಂದರೆ, 

ಎರಡು ಪದಗಳು ಕೂಡಿ ಹೊಸ ಪದವನ್ನು ಸಿದ್ಧಗೊಳಿಸುವುದಾಗಿದೆ,  

" ನಾಮಪ್ರಕೃತಿಗಳಿಗೆ ತದ್ಧಿತ ಪ್ರತ್ಯಯಗಳು ಹತ್ತಿ ತದ್ದಿತಾಂತ ಪ್ರತ್ಯಗಳು ಆಗುತ್ತವೆ. ಇವುಗಳಲ್ಲಿ 3 ಪ್ರಕಾರಗಳು

1) ತದ್ದಿತಾಂತ ನಾಮ, 

2) ತದ್ಧಿತಾಂತಾ ಭಾವನಾಮ.

3) ತದ್ದಿತಾಂತ ಅವ್ಯಯ

 ತದ್ದಿತಾಂತ ನಾಮ,

" ನಾಮಪ್ರಕೃತಿ ಗಳಿಗೆ, ಗಾರ,  ವಂತ, ಇಗ,  ಅಡಿಗ, ಆರ,ಕಾರ,  ಇಕ, ಮುಂತಾದ ಪ್ರತ್ಯಗಳು ಹತ್ತಿ ತದ್ದಿತಾಂತ ನಾಮ ಗಳಾಗುತ್ತವೆ,

 ಉದಾಹರಣೆ

1) "ಗಾರ"= ಕೊಲೆಗಾರ, ಮೋಸಗಾರ, ಛಲಗಾರ, ಕಲೆಗಾರ, etc 

2) "ವಂತ"= ಹಣವಂತ, ಸಿರಿವಂತ, ಬುದ್ಧಿವಂತ, ರೂಪವಂತ, etc 

3) "ಇಗ"= ಕನ್ನಡಿಗ, ಕಬ್ಬಿಗ, ಗಾಣಿಗ, ಲೆಕ್ಕಿಗ, etc

4) "ಅಡಿಗ"= ಹೂವಾಡಿಗ, ಹಾವಾಡಿಗ, etc 

5) "ಆರ್"= ಕುಂಬಾರ, ಚಮ್ಮಾರ, ಪತ್ತಾರ, ಕಂಬಾರ. etc 

6)"ಕಾರ್"= ವಚನಕಾರ, ಓಲೆಕಾರ, ಚಿತ್ರಕಾರ, etc

7) "ಇಕ"= ಸೈನಿಕ, ಕ್ಷೌರಿಕ, ನಾವಿಕ, etc

 🔹ತದ್ದಿತಾಂತ ನಾಮ ಗಳಲ್ಲಿ ಸ್ತ್ರೀ ವಾಚಕಪದಗಳು

1) "ಇತಿ"= ಕನ್ನಡತಿ ( ಕನ್ನಡ+ಇತಿ= ಕನ್ನಡತಿ  "ಲೋಪ ಸಂಧಿ")

 ಬ್ರಾಹ್ಮಣಿತಿ( ಬ್ರಹ್ಮನ+ಇತಿ= ಬ್ರಾಹ್ಮಣಿತಿ  "ಲೋಪ ಸಂಧಿ")

2)"ಇತ್ತಿ"= ಹೂವಾಡಗಿತ್ತಿ ( ಹೂವಾಡಿಗ+ ಇತ್ತಿ=ಹೂವಾಡಗಿತ್ತಿ. "ಲೋಪ ಸಂಧಿ")

 ಹಾವಾಡಗಿತ್ತಿ ( ಹಾವಾಡಿಗ+ ಇತ್ತಿ=ಹಾವಾಡಗಿತ್ತಿ, "ಲೋಪ ಸಂಧಿ")

3)"ಗಿತ್ತಿ"= ಅಗಸಗಿತ್ತಿ ( ಅಗಸ+ ಗಿತ್ತಿ= ಅಗಸಗಿತ್ತಿ. "ಲೋಪ ಸಂಧಿ")

4)"ತಿ"= ಗೌಡತಿ ( ಗೌಡ+ತಿ= ಗೌಡತಿ)

 ಗೊಲ್ಲತಿ( ಗೊಲ್ಲ+ತಿ= ಗೊಲ್ಲತಿ. )

5)"ಇ"= ಅರಸಿ( ಅರಸ+ಇ= ಹರಸಿ) ( ಅಗಸ+ಇ= ಅಗಸಿ)

6)"ಎ"= ಜಾಣೆ ( ಜಾಣ+ಎ=ಜಾಣೆ)
ನಲ್ಲ+ಎ= ನಲ್ಲೆ) (ಬುದ್ದಿವಂತ+ಎ= ಬುದ್ಧಿವಂತೆ)

 ತದ್ದಿತಾಂತ ಭಾವನಾಮ

" ನಾಮಪ್ರಕೃತಿ ಗಳಿಗೆ ಭಾವಾರ್ಥದಲ್ಲಿ ತದ್ಧಿತ ಪ್ರತ್ಯಯಗಳು ಹತ್ತಿ ತದ್ದಿತಾಂತ ಭಾವನಾಮಗಳು ಆಗುತ್ತವೆ."
 ತನ, ಇಕೆ, ಫು, ಮೆ, ಉ ಪ್ರತ್ಯಗಳು ಹತ್ತುತ್ತವೆ.

 ಉದಾಹರಣೆ

1) "ತನ"= ಸುಳ್ಳತನ, ಕಳ್ಳತನ, ಮೋಸತನ, ಜಾಣತನ. ಸಿರಿತನ, ಬಡತನ etc 

2)"ಇಕೆ"= ಗೌಡಿಕೆ,ಹಣವಂತಿಕೆ, ಸಿರಿವಂತಿಕೆ, ಬುದ್ಧಿವಂತಿಕೆ, etc

3)"ಫು"= *ಕಪ್ಪು, ಬಿಳಿಪು, ನುಣುಪು, ಇಂಪು*, etc

4)"ಮೆ"= ಹಿರಿಮೆ, ಕಿರಿಮ, ಜಾಣ್ಮೆ, ನಲ್ಮೆ. ತಾಳ್ಮೆ, ದುಡಿಮೆ, etc 

5)"ಉ"= ಕುಂಟು. ಕಿವುಡು, ಕುರುಡು, etc 


 ತದ್ದಿತಾಂತ ಅವ್ಯಯ

" ನಾಮಪ್ರಕೃತಿಗಳಿಗೆ ಅವ್ಯಯದ ರೂಪದಲ್ಲಿ  ತದ್ದಿತಾಂತ ಪ್ರತ್ಯಯಗಳು ಹತ್ತಿ ತದ್ದಿತಾಂತ ಅವ್ಯಯಗಳು ಆಗುತ್ತವೆ, 

 ತನಕ, ವರಗೆ, ಆಗಿ, ಇಂತ, ಅಂತೆ, ಸಲುವಾಗಿ,ಓಸ್ಕೊರ, ಮಟ್ಟಿಗೆ,

 ಉದಾಹರಣೆ

1) "ತನಕ"= ಮನೆಯತನಕ, ಶಾಲೆಯತನಕ, ಊರಿನ ತನಕ. ತೋಟದತನಕ. etc 

2)"ವರಗೆ"= ಮನೆಯವರೆಗೆ. ಶಾಲೆಯವರೆಗೆ, ತೋಟದ ವರೆಗೆ. etc

3)'ಆಗಿ"= ನಿನಗಾಗಿ. ನನಗಾಗಿ, ಅವರಿಗಾಗಿ, ಅವಳಿಗಾಗಿ, etc 

4)"ಇಂತ"= ನಿನಗಿಂತ, ಅವರಿಗಿಂತ, ದೇವರಿಗಿಂತ, ತಾಯಿಗಿಂತ, ತಂದೆಗಿಂತ, etc 

5) "ಅಂತೆ"= ರಾಮನಂತೆ, ಸೀತೆಯಂತೆ, ನಿನ್ನಂತೆ, ನನ್ನಂತೆ, ತಾಯಿಯಂತೆ. etc

6) "ಸಲುವಾಗಿ"= ಮನೆಯ ಸಲುವಾಗಿ, ಊರಿನ ಸಲುವಾಗಿ, ನಿನ್ನ ಸಲುವಾಗಿ, ನನ್ನ ಸಲುವಾಗಿ, etc

7)"ಓಸ್ಕೊರ"= ನಿನಗೋಸ್ಕರ, ನನಗೋಸ್ಕರ, ಶಾಲೆಗೋಸ್ಕರ. etc 

8) "ಮಟ್ಟಿಗೆ"= ನಿನ್ನ ಮಟ್ಟಿಗೆ, ನನ್ನ ಮಟ್ಟಿಗೆ, ಅದರ ಮಟ್ಟಿಗೆ, ದೇಶದ ಮಟ್ಟಿಗೆ, etc

logoblog

Thanks for reading FDA / SDA tests are useful technologies

Previous
« Prev Post

No comments:

Post a Comment