*ನದಿಗಳು ಬಗ್ಗೆ ಸಂಕ್ಷಿಪ್ತ ಮಾಹಿತಿ*
👇👇👇👇👇
1) ಪೂರ್ವಾಭಿಮುಖವಾಗಿ ಹರಿಯುವ ನದಿಗಳು
1) *ಘಟಪ್ರಭಾ*
2) *ಮಲಪ್ರಭಾ*
3) *ಭೀಮಾ*
4) *ತುಂಗಭದ್ರಾ*
5) *ಡೋಣಿ*
6) *ಕಾವೇರಿ*
7) *ಕೃಷ್ಣನದಿ*
- ಮುಂತಾದವು.
2) ಮಹಾರಾಷ್ಟ್ರದ "ಭೀಮಾಶಂಕರ್" ಬಳಿಯಲ್ಲಿ ಉಗಮವಾಗುವ ನದಿ ಯಾವುದು?
*ಭೀಮಾನದಿ*
3) "ಉತ್ತರ ಪಿನಾಕಿನಿ ನದಿ"ಯ ಮತ್ತೊಂದು ಹೆಸರೇನು?
*ಪೆನ್ನಾರ್*
4) "ಛಾಯಾ ಭಗವತಿ" ಜಲಪಾತವನ್ನು ನಿರ್ಮಿಸುವ ನದಿ ಯಾವುದು?
*ಡೋಣಿ*
5) "ಹಿರಣ್ಯಕೇಶಿ" & "ಮಾರ್ಕಂಡೇಯ" ಇವು ಯಾವ ನದಿಯ ಉಪನದಿಗಳು?
*ಘಟಪ್ರಭಾ*
6) ರಾಣೆಬೆನ್ನೂರಿನ ಬಳಿ ಯಾವ ನದಿಯು ತುಂಗಭದ್ರಾ ನದಿಯನ್ನು ಸೇರುವುದು?
*ಕುಮುದ್ವತಿ*
7) "ನವಿಲುತಿರ್ಥ"ವೆಂದು ಯಾವ ನದಿಯನ್ನು ಕರೆಯುವರು?
*ಮಲಪ್ರಭಾ*
8) "ಗೋಕಾಕ್ ಜಲಪಾತ"ವನ್ನು ಉಂಟು ಮಾಡುವ ನದಿ ಯಾವುದು?
*ಘಟಪ್ರಭಾ*
9) ವೇದಾವತಿ & ಹಗರಿ ಯಾವ ನದಿಯ ಉಪನದಿಗಳು?
*ತುಂಗಭದ್ರಾ*
10) ಘಟಪ್ರಭಾ ನದಿಯ ಉಗಮ ಸ್ಥಳ ಯಾವುದು?
*ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಪಶ್ಚಿಮಘಟ್ಟ*
11) ಬಾದಾಮಿ ಯಾವ ನದಿಯ ಎಡದಂಡೆಗೆ ಸಮೀಪದಲ್ಲಿದೆ?
*ಮಲಪ್ರಭಾ*
12) ಗುಲ್ಬರ್ಗಾ ಜಿಲ್ಲೆಯ ಜಪಾಲಪುರದ ಬಳಿ ಡೋಣಿ ಯಾವ ನದಿಯನ್ನು ಸೇರುವುದು?
*ಕೃಷ್ಣಾ*
13) ಮಲಪ್ರಭಾ ನದಿಯ ಉಗಮ ಸ್ಥಳ ಯಾವುದು?
*ಕನಕುಂಬಿ*
14) ಕನಕುಂಬಿ ಬೆಳಗಾವಿ ಜಿಲ್ಲೆಯ ಯಾವ ತಾಲ್ಲೂಕಿನಲ್ಲಿದೆ?
*ಖಾನಾಪುರ*
15) ಯಾವ ನದಿಗೆ "ಪಂಪಸಾಗರ" ಜಲಾಶಯ ನಿರ್ಮಿಸಲಾಗಿದೆ?
*ತುಂಗಭದ್ರಾ*
16) ಮಹಾರಾಷ್ಟ್ರದ ದತ್ತಪಟ್ಟಣದ ಬಳಿ ಹುಟ್ಟುವ ನದಿ ಯಾವುದು?
*ಡೋಣಿ*
17) "ಬೆಣ್ಣೆ ಹಳ್ಳ" & "ಹಿರೇ ಹಳ್ಳ" ಯಾವ ನದಿಯ ಉಪನದಿಗಳು?
*ಮಲಪ್ರಭಾ*
18) ತುಂಗಾಭದ್ರಾ ನದಿಯು ಆಂಧ್ರಪ್ರದೇಶದ ಯಾವ ಸ್ಥಳದಲ್ಲಿ ಕೃಷ್ಣಾ ನದಿಯನ್ನು ಸೇರುತ್ತದೆ?
*ಕರ್ನೂಲ್ ಬಳಿ ಆಲಂಪುರದಲ್ಲಿ*
19) ಇತಿಹಾಸ ಪ್ರಸಿದ್ಧ ಪಟ್ಟದಕಲ್ಲು & ಐಹೋಳೆ ಯಾವ ನದಿಯ ಬಲದಂಡೆಗೆ ಇವೆ?
*ಮಲಪ್ರಭಾ*
20) ಶಿವಮೊಗ್ಗದ ಮೂಲಕ ಹರಿದು ಬರುವ "ವರದಾನದಿಯು" ಬಿಲ್ವಿಗಿಯ ಬಳಿ ಯಾವ ನದಿಯನ್ನು ಸೇರುವುದು?
*ತುಂಗಭದ್ರಾ*
21) ವರದಾ & ಕುಮದ್ವತಿ ಯಾವ ನದಿಯ ಉಪನದಿಗಳು?
*ತುಂಗಭದ್ರಾ*
ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು
1) *ಕಾಳಿ*
2) *ಶರಾವತಿ*
3) *ನೇತ್ರಾವತಿ*
4) *ಬೇಡ್ತಿ*
5) *ಅಘನಾಶಿನಿ*
6) *ವಾರಾಹಿ*
7) *ಮಹಾದಾಯಿ*
ಮುಂತಾದವು...
1) "ಬಾರಪೊಳೆ ನದಿ"ಯು ಯಾವ ಎರಡು ರಾಜ್ಯಗಳಲ್ಲಿ ಹರಿಯುತ್ತದೆ?
*ಕರ್ನಾಟಕ & ಕೇರಳ*
2) "ಮಾಗೋಡು ಜಲಪಾತ"ವನ್ನು ಉಂಟುಮಾಡುವ ನದಿ ಯಾವುದು?
*ಬೇಡ್ತಿ*
3) ಬೇಡ್ತಿ ನದಿಯ ಮತ್ತೊಂದು ಹೆಸರೇನು?
*ಗಂಗಾವಳಿ*
4) ಕಾಳಿ ನದಿಯ ಉಗಮ ಸ್ಥಳ ಯಾವುದು?
*ಉತ್ತರಕನ್ನಡ ಜಿಲ್ಲೆಯ ಸೂಪಾ ತಾಲ್ಲೂಕಿನ ಡಿಗ್ಗಿಘಾಟಿನಲ್ಲಿ.*
5) "ಭಂಡಾಜೆ ಜಲಪಾತ"ವನ್ನು ಉಂಟುಮಾಡುವ ನದಿ ಯಾವುದು?
*ನೇತ್ರಾವತಿ.*
6) ಹರಿದ್ರಾತಿ & ಎಣ್ಣೆ ಹೊಳಿ ಇವು ಯಾವ ನದಿಯ ಪ್ರಮುಖ ಉಪನದಿಗಳು?
*ಶರಾವತಿ.*
7) ಶರಾವತಿ ನದಿಯ ಉಗಮಸ್ಥಳ ಯಾವುದು?
*ಶಿವಮೊಗ್ಗ ಜಿಲ್ಲೆಯ ತಿರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥ.*
8) ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಲ್ಲಿ ಉದ್ದವಾದ ನದಿ ಯಾವುದು?
*ಕಾಳಿನದಿ*
9) "ಉಂಚಳ್ಳಿ ಜಲಪಾತ"ವನ್ನು ನಿರ್ಮಿಸುವ ನದಿ ಯಾವುದು?
*ಅಘನಾಶಿನಿ.*
10) ಭೂಗರ್ಭದಲ್ಲಿ ವಿದ್ಯುತ್ ಉತ್ಪಾದನೆಯನ್ನು ಆರಂಭಿಸಿರುವ ಏಕೈಕ ನದಿ ಯಾವುದು?
*ವರಾಹಿ ನದಿ*
11) ನೇತ್ರಾವತಿ ನದಿಯ ಉಗಮಸ್ಥಳ ಯಾವುದು?
*ಚಿಕ್ಕಮಗಳೂರು ಜಿಲ್ಲೆಯ ಬಲ್ಲಾಳರಾಯನದುರ್ಗದ ಬಳಿ*.
12) "ಲಾಲಗುಳಿ ಜಲಪಾತ''ವನ್ನು ಉಂಟು ಮಾಡುವ ನದಿ ಯಾವುದು?
*ಕಾಳಿ ನದಿ.*
13) ಕಳಸ & ಬಂಡೂರಿ ಯಾವ ನದಿಯ ಉಪನದಿಗಳು?
*ಮಹದಾಯಿ.*
14) ಶಿವಗಂಗೆ & ಇಳಿಮನೆ ಜಲಪಾತಗಳನ್ನು ಉಂಟುಮಾಡುವ ನದಿ ಯಾವುದು?
*ಅಘನಾಶಿನಿ.*
15) ಗುರುಪುರ & ಕುಮಾರಧಾರ ಯಾವ ನದಿಯ ಉಪನದಿಗಳು?
*ನೇತ್ರಾವತಿ.*
16) ಮಹದಾಯಿ ನದಿಯು ಗೋವಾದಲ್ಲಿ ಯಾವ ಹೆಸರಿನಿಂದ ಹರಿಯುವುದು?
*ಮಾಂಡೋವಿ*
17) ಜಗತ್ಪ್ರಸಿದ್ಧ "ಜೋಗ್ ಜಲಪಾತ"ವನ್ನು ಸೃಷ್ಟಿಸಿದ ನದಿ ಯಾವುದು?
*ಶರಾವತಿ*
18) "ಕಪ್ಪುಕಾಳಿ" ಎಂದು ಯಾವ ನದಿಯನ್ನು ಕರೆಯುತ್ತಾರೆ?
*ಕಾಳಿ*
19) "ಪಣಜಿ" ಯಾವ ನದಿಯ ತೀರದಲ್ಲಿದೆ?
*ಮಹದಾಯಿ*
20) ತಟ್ಟಿಹಳ್ಳ & ಪಂಡ್ರಿ ಯಾವ ನದಿಯ ಉಪನದಿಗಳು?
*ಕಾಳಿನದಿ*
21) ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ದೇವಾಂಗ ಎಂಬಲ್ಲಿ ಉಗಮವಾಗುವ ನದಿ ಯಾವುದು?
*ಮಹದಾಯಿ*
22) ಚಾರ್ಮುಡಿ, ಶಿಶಿಲ & ಪಾಲ್ಗುಣಿ ಯಾವ ನದಿಯ ಉಪನದಿಗಳು?
*ನೇತ್ರಾವತಿ*
23) ಕನೇರಿ, ವಾಕಿ & ಇವು ಯಾವ ನದಿಯ ಉಪನದಿಗಳು?
*ಕಾಳಿನದಿ*
No comments:
Post a Comment