Friday, 12 February 2021

Q&A on various competitive exams on Geography of Karnataka *

  MahitiVedike Com       Friday, 12 February 2021
  *ಕರ್ನಾಟಕದ ಭೂಗೋಳ ಶಾಸ್ತ್ರದ* ಮೇಲೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಿರುವ ಪ್ರಶ್ನೋತ್ತರಗಳು
              👇👇👇👇👇👇

1) ಕರ್ನಾಟಕದಲ್ಲಿ ಯಾವ ಹಬ್ಬವನ್ನು ನಾಡಹಬ್ಬವನ್ನಾಗಿ ಆಚರಿಸಲಾಗುತ್ತದೆ? 
 *ದಸರಾ*

2) ಕರ್ನಾಟಕದ ರೇಷ್ಮೆ ಪಟ್ಟಣ ಯಾವುದು? 
 *ರಾಮನಗರ*

3) "ಸುವರ್ಣ ವಿಧಾನಸೌಧ" ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ? 
 *ಬೆಳಗಾವಿ*

4) ಐತಿಹಾಸಿಕ ಸ್ಥಳ ಆಗಿರುವ "ಐಹೊಳೆ" ಯಾವ ಜಿಲ್ಲೆಯಲ್ಲಿದೆ? 
 *ಬಾಗಲಕೋಟೆ*

5) "ಯಾಣ" ಪ್ರವಾಸಿತಾಣವೂ ಯಾವ ಜಿಲ್ಲೆಯಲ್ಲಿದೆ? 
 *ಉತ್ತರ ಕನ್ನಡ*

6) ಕರ್ನಾಟಕದಲ್ಲಿರುವ ಒಟ್ಟು ಜಿಲ್ಲೆಗಳ ಸಂಖ್ಯೆ? 
30+1=31( ಇತ್ತೀಚಿಗೆ *ವಿಜಯನಗರ* 31ನೇ ಜಿಲ್ಲೆಯಾಗಿದೆ.)

7) ವಿಸ್ತೀರ್ಣದಲ್ಲಿ ಕರ್ನಾಟಕ ರಾಜ್ಯದ ಅತಿ ದೊಡ್ಡ ಜಿಲ್ಲೆ? 
 *ಬೆಳಗಾವಿ*

8) ಶ್ರೀರಂಗಪಟ್ಟಣ ಯಾವ ಜಿಲ್ಲೆಯಲ್ಲಿದೆ? 
 *ಮಂಡ್ಯ*

9) ಕರ್ನಾಟಕದ ಯಾವ ಪಟ್ಟಣ ನದಿ ತೀರದಲ್ಲಿ ಇಲ್ಲ? 
 *ಮಡಿಕೇರಿ*

10) ಪಟ್ಟದಕಲ್ಲು ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ? 
 *ಬಾಗಲಕೋಟೆ*

11) ಕರ್ನಾಟಕದ ಯಾವ ಜಿಲ್ಲೆಗಳಲ್ಲಿ ತುಳು ಭಾಷೆಯನ್ನು  ಮಾತನಾಡುತ್ತಾರೆ? 
 *ದಕ್ಷಿಣ ಕನ್ನಡ* ಮತ್ತು *ಉಡುಪಿ*

12) ಕರ್ನಾಟಕದ ಉದ್ಯಾನ ನಗರ ಎಂದೆನಿಸಿಕೊಳ್ಳುವ ಊರು? 
 *ಬೆಂಗಳೂರು*

13) ಟಿಪ್ಪು ಡ್ರಾಪ್ ಎಂದು ಪ್ರಸಿದ್ಧವಾಗಿರುವ "ನಂದಿ ಬೆಟ್ಟ" ಯಾವ ಜಿಲ್ಲೆಯಲ್ಲಿದೆ? 
 *ಚಿಕ್ಕಬಳ್ಳಾಪುರ*

14) ಮಲಗಿರುವ ಬುದ್ಧನ ಬೆಟ್ಟಗಳು ಯಾವ ಜಿಲ್ಲೆಯಲ್ಲಿ ಕಂಡು ಬರುತ್ತದೆ? 
 *ಯಾದಗಿರಿ ಜಿಲ್ಲೆ*

15) ಸೈಂಟ್ ಮೇರಿ ಐಲ್ಯಾಂಡ್ ದ್ವೀಪಯು  ಯಾವ ಜಿಲ್ಲೆಯಲ್ಲಿದೆ? 
 *ಉಡುಪಿ*

 *ಕರ್ನಾಟಕದ ಅರಣ್ಯ ಗಳ* ಮೇಲೆ ಕೇಳಿರುವ ಪ್ರಶ್ನೋತ್ತರಗಳು. 

1) ಕರ್ನಾಟಕದ ಯಾವ ಜಿಲ್ಲೆಗಳಲ್ಲಿ ಅತಿ ಹೆಚ್ಚು ಅರಣ್ಯ ಪ್ರದೇಶ ಕಂಡುಬಂದಿದೆ? 
 *ಉತ್ತರ ಕನ್ನಡ*( ಕಡಿಮೆ= "ಬಿಜಾಪುರ")

2) ರಾಣೆಬೆನ್ನೂರಿನಲ್ಲಿ ಯಾವ ವನ್ಯದಾಮ ಇದೆ? 
 *ಕೃಷ್ಣಮೃಗ ವನ್ಯಧಾಮ*

3) ಕರ್ನಾಟಕದಲ್ಲಿರುವ ಯಾವ ರಾಷ್ಟ್ರೀಯ ಉದ್ಯಾನ "ಪ್ರಜೆಕ್ಟ ಟೈಗರ್" ಗೆ ಸಂಬಂಧಿಸಿದೆ? 
 *ಬಂಡೀಪುರ ರಾಷ್ಟ್ರೀಯ ಉದ್ಯಾನವನ*

4) ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಯಾವ ಜಿಲ್ಲೆಯಲ್ಲಿದೆ? 
 *ಬೆಂಗಳೂರು*

5) ರಾಜ್ಯದಲ್ಲಿ ಕರಡಿಗಳಿಗಾಗಿ ಸ್ಥಾಪಿಸಿರುವ ರಕ್ಷಣಾಧಾಮ ಯಾವ ಜಿಲ್ಲೆಯಲ್ಲಿದೆ? 
 *ಬಳ್ಳಾರಿ*

6) ಬಿಸಿಲೆ ಕಾಡು ಯಾವ ಜಿಲ್ಲೆಯಲ್ಲಿ ಕಂಡು ಬರುತ್ತದೆ? 
 *ಹಾಸನ*

7) ಬಂಡೀಪುರ ರಾಷ್ಟ್ರೀಯ ಉದ್ಯಾನವನ ಯಾವ ಜಿಲ್ಲೆಯಲ್ಲಿದೆ? 
 *ಚಾಮರಾಜನಗರ*

8) ಕರ್ನಾಟಕ ರಾಜ್ಯದಲ್ಲಿ ಜೀವಶಾಸ್ತ್ರೀಯ "ಹಾಟ್-ಸ್ಟಾಟ್"  ಎಂದು ಕರೆಸಿಕೊಳ್ಳುವ ಪ್ರದೇಶ? 
 *ಪಶ್ಚಿಮ ಘಟ್ಟಗಳು*

 *ಕರ್ನಾಟಕದ ನದಿ ವ್ಯವಸ್ಥೆ* ಮೇಲೆ ಕೇಳಿರುವ ಪ್ರಶ್ನೋತ್ತರಗಳು

1) ಆಲಮಟ್ಟಿ ಆಣೆಕಟ್ಟು ಯಾವ ನದಿಗೆ ಕಟ್ಟಲಾಗಿದೆ? 
 *ಕೃಷ್ಣಾ ನದಿ*

2) ಕೂಡಗಿ ಶಾಖೋತ್ಪನ್ನ ಕೇಂದ್ರ ಯಾವ ಜಿಲ್ಲೆಯಲ್ಲಿದೆ? 
 *ವಿಜಯಪುರ*

3) ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ "ಕೃಷ್ಣರಾಜಸಾಗರ ಅಣೆಕಟ್ಟು" ಯಾವ ಜಿಲ್ಲೆಯಲ್ಲಿದೆ? 
 *ಮಂಡ್ಯ*

4) ಕರ್ನಾಟಕದ ಪ್ರಥಮ ಉಷ್ಣ ವಿದ್ಯುತ್ ಯೋಜನೆ ಆರಂಭಿಸಿದ ಜಿಲ್ಲೆ? 
 *ರಾಯಚೂರು*

5) ಯಾವ ನದಿ ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದೆ? 
 *ನೇತ್ರಾವತಿ ನದಿ*

6) ಪ್ರಸಿದ್ಧ ಗೋಕಾಕ್ ಜಲಪಾತ ಯಾವ ನದಿಯ ಮೇಲಿದೆ? 
 *ಘಟಪ್ರಭಾ ನದಿ*

7) ಬಸವಸಾಗರ ಅಣೆಕಟ್ಟು ಯಾವ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ? 
 *ಕೃಷ್ಣ ನದಿ*

8) ಮಹಾತ್ಮ ಗಾಂಧಿ ಜಲವಿದ್ಯುತ್ ಕೇಂದ್ರ ಯಾವ ಜಿಲ್ಲೆಯಲ್ಲಿದೆ? 
 *ಶಿವಮೊಗ್ಗ*

9) ಸ್ಟ್ಯಾನ್ಲಿ ಜಲಾಶಯ ಯಾವ ನದಿಗೆ ಸಂಬಂಧಿಸಿದೆ? 
 *ಕಾವೇರಿ ನದಿ*

10) ಜೋಗ್ ಫಾಲ್ಸ್ ಯಾವ ನದಿಗೆ ನಿರ್ಮಿಸಿದೆ? 
 *ಶರಾವತಿ*

11) ತುಂಗಾ ನದಿಯು ಯಾವ ಜಿಲ್ಲೆಯಲ್ಲಿ ಉಗಮಿಸುತ್ತದೆ? 
 *ಚಿಕ್ಕಮಂಗಳೂರು*

12) ಲಿಂಗನಮಕ್ಕಿ ಅಣೆಕಟ್ಟು ಯಾವ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ? 
 *ಶರಾವತಿ*

13) ಗೊರೂರು ಅಣೆಕಟ್ಟು ಯಾವ ಜಿಲ್ಲೆಯಲ್ಲಿದೆ? 
 *ಹಾಸನ್*

14) ಕಾರಂಜಿ ಡ್ಯಾಮ್ ಎಲ್ಲಿದೆ? 
 *ಬೀದರ್*

15) ಹಿಡಕಲ್ ಅಣೆಕಟ್ಟು ಯಾವ ನದಿಗೆ ಕಟ್ಟಲಾಗಿದೆ? 
 *ಘಟಪ್ರಭಾ*

16) ಗೊರೂರು ಅಣೆಕಟ್ಟು ಯಾವ ನದಿಗೆ ಕಟ್ಟಲಾಗಿದೆ? 
 *ಹೇಮಾವತಿ*

17) ಕರ್ನಾಟಕದ ಪಂಜಾಬ್ ಎಂದು ಕರೆಸಿಕೊಳ್ಳುವ ಜಿಲ್ಲೆ? 
 *ವಿಜಯಪುರ*

logoblog

Thanks for reading Q&A on various competitive exams on Geography of Karnataka *

Previous
« Prev Post

No comments:

Post a comment