Tuesday, 13 September 2022

Crop damage compensation deposit in one week: Check application status on mobile in crop protection

  MahitiVedike Com       Tuesday, 13 September 2022

ಒಂದು ವಾರದಲ್ಲಿ ಬೆಳೆ ಹಾನಿ ಪರಿಹಾರ ಜಮೆ:ಬೆಳೆ ಸಂರಕ್ಷಣೆ ದಲ್ಲಿ ಅರ್ಜಿ ಸ್ಟೇಟಸ್ ಮೊಬೈಲ್ ನಲ್ಲಿ ನೋಡಿರಿ!

ಈ ವಾರದಲ್ಲಿ ರೈತರ ಖಾತೆಗೆ ಬೆಳೆ ಹಾನಿ ಪರಿಹಾರ ಜಮಾ ಆಗಲಿದೆ ಎಂದು ತಿಳಿದು ಬಂದಿದೆ, ಬೆಳೆ ಹಾನಿ ಎರಡು ರೀತಿಯಲ್ಲಿ ರೈತರಿಗೆ ನೀಡಲಾಗುವುದು ಒಂದು ಬೆಳೆ ವಿಮೆ ಮಾಡಿದ ನಂತರ ರೈತರಿಗೆ ಹಾನಿಯಾದ ಬೆಳೆಗಳಿಗೆ ಪರಿಹಾರ ಹಣವನ್ನು ನೀಡಲಾಗುತ್ತದೆ. ಇನ್ನೊಂದು ಜಿಲ್ಲೆಯಲ್ಲಿ ಬೆಳೆ ವಿಮೆ ಮಾಡದಿದ್ದರೂ ಪ್ರತ್ಯೇಕವಾಗಿ ಒಂದು ಬೆಳೆ ಸಂಪೂರ್ಣವಾಗಿ ನಾಶ ಹೊಂದಿದರೆ ಸರ್ಕಾರದಿಂದ ನೇರವಾಗಿ ಆ ಬೆಳೆಗಳಿಗೆ ಪರಿಹಾರ ಹಣವನ್ನು ನೀವು ನಮೂದಿಸಿರುವ ಬೆಳೆ ಸಮೀಕ್ಷೆಗೆ ಹೋಲಿಸಿ ನೀಡಲಾಗುವುದು.

ಆತ್ಮೀಯರೇ ರಾಜ್ಯದಲ್ಲಿ ಅತ್ಯಧಿಕ ಮಳೆಯಿಂದ ಸುಮಾರು ಎಲ್ಲಾ ಜಿಲ್ಲೆಗಳಲ್ಲಿ ವಿವಿಧ ಬೇರೆ ಬೇರೆ ಪ್ರಮುಖ ಬೆಳೆಗಳು ನಾಶವಾಗಿದ್ದು ಅವುಗಳಿಗೆ ತಕ್ಕ ಪರಿಹಾರ ಹಣವು ನೀಡಲಿದೆ ಎಂದು ತಿಳಿಸಿದೆ. ಯಾವ ಬೆಳೆಗಳಿಗೆ ಎಷ್ಟು ಬೆಳೆ ಹಾನಿ ಪರಿಹಾರ ಬರುತ್ತದೆ ಎಂಬುವುದರ ಬಗ್ಗೆ ನಿಖರವಾಗಿ ಹೇಳಿಲ್ಲ, ಕೇವಲ ಸಾಮಾನ್ಯ ಬೆಳಗಳಿಗೆ ಹಾಗೂ ತೋಟಗಾರಿಕಾ ಬೆಳಗಳಿಗೆ ಸ್ವಲ್ಪಮಟ್ಟಿಗೆ ಬೇರೆಬೇರೆ ರೀತಿಯಲ್ಲಿ ಬೆಳೆ ಹಾನಿ ಪರಿಹಾರವನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ರೈತರ ಖಾತೆಗೆ ಪರಿಹಾರ ಹಣ ಬಂದಿದೆ ಎಂದು ಹೇಗೆ ತಿಳಿಯುವುದು?

ರೈತರೇ ನಿಮ್ಮ ಖಾತೆಗೆ ಬೆಳೆ ಹಾನಿ ಪರಿಹಾರ ಜನ ಆಗಿದೆ ಎಂದು ನೇರವಾಗಿ ನಿಮ್ಮ ಆಧಾರ್ ಸಂಖ್ಯೆ ಮೂಲಕ ನೋಡಬಹುದು ಅಥವಾ ನೀವು ಬೆಳೆ ವಿಮೆ ಮಾಡಿಸಿರುವ ರೆಫರೆನ್ಸ್ ನಂಬರ್ ಸಹಾಯದಿಂದ ಸುಲಭವಾಗಿ ನೀವು ಬೆಳೆ ಹಾನಿ ಪರಿಹಾರ ಜಮೆಯಾಗಿರುವುದನ್ನು ನಿಮ್ಮ ಮೊಬೈಲ್ ಮೂಲಕ ನೋಡುವ ಅವಕಾಶವನ್ನು ಕಲ್ಪಿಸಲಾಗಿದೆ.

ಮೇಲೆ ನೀಡಿರುವ ಸಂರಕ್ಷಣೆ ಲಿಂಕ್ ಅನ್ನು ಒತ್ತಿರಿ ನಂತರ ನೀವು ಅರ್ಜಿ ಸಲ್ಲಿಸುವಾಗ ಇರುವ ವರ್ಷವನ್ನು ಆಯ್ಕೆ ಮಾಡಿಕೊಳ್ಳಿ ಹಾಗೂ ಬೆಳೆಯ ಸೀಸನ್ ಮುಂಗಾರು (kharif) ಅಥವಾ ಹಿಂಗರಾಗಿದ್ದರೆ (rabi) ಆಯ್ಕೆ ಮಾಡಿಕೊಳ್ಳಿ , ತದನಂತರ farmers ಕಾರ್ನರ್ ನಲ್ಲಿ ಚೆಕ್ ಸ್ಟೇಟಸ್ ಮೇಲೆ ಕ್ಲಿಕಿಸಿ ನಂತರ ನಿಮ್ಮ ಆಧಾರ್ ಸಂಖ್ಯೆ ಅಥವಾ ನಿಮ್ಮ ಅಪ್ಲಿಕೇಶನ್ ಐಡಿಯನ್ನು ನಮೂದಿಸಿ . ತದನಂತರ ನಿಮ್ಮ ಖಾತೆಗೆ ಹಿಂದೆ ಹಾಗೂ ಈ ಬಾರಿಯೂ ಹಣ ಜಮೆಯಾಗಿದ್ದರೆ ನೇರವಾಗಿ ನಿಮಗೆ ಕಾಣಿಸುತ್ತದೆ.


ಒಂದು ವೇಳೆ ನಿಮ್ಮ ಬೆಳೆಗಳಿಗೆ ಯಾವುದೇ ರೀತಿಯ ಬೆಳೆ ವಿಮೆ ಮಾಡಿಸದಿದ್ದರೆ ನಿಮ್ಮ ತಾಲೂಕಿನಲ್ಲಿ ಆ ಬೆಳೆಯು ಸಂಪೂರ್ಣವಾಗಿ ನಾಶವಾಗಿದ್ದಾರೆ ಆ ವರದಿಯನ್ನು ತಹಸಿಲ್ದಾರ್ ಗೆ ತಿಳಿಸಬೇಕು ತದನಂತರ. ಅವರು ಸರ್ವೆ ಮಾಡುವ ಮೂಲಕ ಆ ಬೆಳೆಯು ಸಂಪೂರ್ಣವಾಗಿ ಹಾನಿಯಾಗಿದೆ ಎಂದು ತಿಳಿದು ಬಂದರೆ ಸರಕಾರಕ್ಕೆ ವರದಿ ನೀಡುವ ಮೂಲಕ ನಿಮ್ಮ ತಾಲೂಕಿಗೆ ಪರಿಹಾರ ಹಣವನ್ನು ಪಡೆಯಬಹುದಾಗಿದೆ.

ಕೆಳಗಡೆ ನೀಡಿರುವ ಲಿಂಕಿನ ಮೂಲಕ ನೇರವಾಗಿ ಸ್ಟೇಟಸ್ ಅನ್ನು ಸಹ ನೀವು ಚೆಕ್ ಮಾಡಿಕೊಳ್ಳಬಹುದು.

logoblog

Thanks for reading Crop damage compensation deposit in one week: Check application status on mobile in crop protection

Previous
« Prev Post

No comments:

Post a Comment