Thursday, 4 March 2021

Wartime Military Awards in India

  MahitiVedike Com       Thursday, 4 March 2021
 
ಭಾರತದಲ್ಲಿ ಯುದ್ಧಕಾಲದಲ್ಲಿ ನೀಡಲಾಗುವ ಅತ್ಯುನ್ನತ ಸೇನಾ ಪುರಸ್ಕಾರಗಳು 
            👇👇👇👇👇

 ಪರಮ ವೀರ ಚಕ್ರ ಪ್ರಶಸ್ತಿ

 ಭಾರತ ಸೇನೆಯ *ಶೌರ್ಯ ಪುರಸ್ಕಾರ.* ಯುದ್ಧದ ವೇಳೆ ಅಪ್ರತಿಮ ಸಾಧನೆ ಮಾಡಿದವರಿಗೆ ಸಲ್ಲುವ ಪ್ರಶಸ್ತಿ. ಭಾರತದ *ಅತ್ಯುನ್ನತ ಸೇನಾ ಪುರಸ್ಕಾರ.* ಸಂಸ್ಕೃತದಲ್ಲಿ ಇದರ ಅರ್ಥ ಶೂರರಲ್ಲಿ ಶೂರ ಎಂದು.

ಪರಮವೀರ ಚಕ್ರವನ್ನು ಜನವರಿ 26, 1950 (ಗಣರಾಜ್ಯೋತ್ಸವ)ದಂದು ಆಗಸ್ಟ್ 15, 1947 (ಭಾರತದ ಸ್ವಾತಂತ್ರ್ಯ ದಿನಾಚರಣೆ)ದಿಂದ ಜಾರಿಯಾಗುವಂತೆ ಸ್ಥಾಪಿಸಲಾಯಿತು. ಭಾರತದ *ರಾಷ್ಟ್ರಪತಿಗಳು* ಪ್ರದಾನ ಮಾಡುವ ಈ ಪುರಸ್ಕಾರವು ಭಾರತ ರತ್ನದ ನಂತರ ದೇಶದ ಎರಡನೇ ಅತಿ ದೊಡ್ಡ ಪುರಸ್ಕಾರ.

  ಪರಮವೀರ ಚಕ್ರ ಪ್ರಶಸ್ತಿ ವಿನ್ಯಾಸ್

ಈ ಪದಕವನ್ನು *ಶ್ರೀಮತಿ ಸಾವಿತ್ರಿ ಖನೋಲನ್ಕರ್* (ಮೂಲನಾಮ ಈವಾ ಯುವೊನ್ ಲಿಂಡಾ ಮಡೇ-ಡಿ-ಮರೋಸ್, ಇವರು ಭಾರತ ಭೂಸೇನೆಯ ಅಧಿಕಾರಿಯೊಬ್ಬರ ಪತ್ನಿ)ಅವರು ವಿನ್ಯಾಸಗೊಳಿಸಿದ್ದಾರೆ. ಕಾಕತಾಳೀಯವಾಗಿ ಪ್ರಥಮ ಪರಮ ವೀರ ಚಕ್ರವು ಇವರ ಅಳಿಯ *ಮೇಜರ್ ಸೋಮನಾಥ ಶರ್ಮಾ* ಅವರಿಗೆ ಸಂದಯವಾಯಿತು. ಪಾಕಿಸ್ತಾನದ ಬಂಡುಕೋರರನ್ನು ಶ್ರೀನಗರ ವಿಮಾನ ನಿಲ್ದಾಣದಿಂದ ಹೊರಗಟ್ಟುವಾಗ ಇವರು ಮಡಿದರು.

ಈ ಪದಕವು *ಕಂಚಿನದಾಗಿದ್ದು* ದುಂಡಗಿದೆ. ಇದರ ವ್ಯಾಸ ಸುಮಾರು *ಮೂರೂವರೆ ಸೆಂ.ಮಿ.* ಮಧ್ಯದಲ್ಲಿ ಭಾರತ ದೇಶದ *ಲಾಂಛನವಿದೆ* . ಇದರ ಸುತ್ತಲೂ *ಇಂದ್ರನ ವಜ್ರದ ನಾಲ್ಕು ಚಿತ್ರಗಳಿವೆ. ಹಿಂಬದಿಯಲ್ಲಿ ಎರಡು ಆಖ್ಯಾನಗಳು, ಅವುಗಳ ಮಧ್ಯೆ ಕಮಲದ ಹೂವು. ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪರಮ ವೀರ ಚಕ್ರ ಎಂದು ಬರೆದಿದೆ* 

ಪದಕವನ್ನು ಹೊಂದಿದ *ರಿಬ್ಬನ್ 32 ಮಿ.ಮಿ. ಉದ್ದವಿದ್ದು* *ನೇರಳೆ* (purple) ಬಣ್ಣದ್ದಾಗಿದೆ. ಇಂದ್ರನಿಗೆ ತನ್ನ ತೊಡೆಯ ಮೂಳೆಯನ್ನು ವಜ್ರಾಯುಧವನ್ನಾಗಿ ಮಾಡಿಕೊಟ್ಟ ಋಷಿ ದಧೀಚಿಯ ಸಂಕೇತವಾಗಿ ಈ ಪುರಸ್ಕಾರವನ್ನು ವಿನ್ಯಾಸಗೊಳಿಸಲಾಗಿದೆ. ಶಿವಾಜಿಯ ಖಡ್ಗವಾದ ಭವಾನಿಯ ಚಿತ್ರವೂ ಇದೆ.

 ಈಗಿರುವ ₹25 ಲಕ್ಷದಿಂದ ₹ *1ಕೋಟಿ* ಗೌರವಧನ ಹೆಚ್ಚಳ ಮಾಡಲಾಗಿದೆ.

 ಮಹಾ ವೀರ ಚಕ್ರ ಪ್ರಶಸ್ತಿ.

 ಭಾರತದ *ಎರಡನೇ ಅತಿ ದೊಡ್ಡ ಸೇನಾ ಪುರಸ್ಕಾರವಾಗಿದೆ.* ಇದು ಶತ್ರುವಿನ ಇರುವಿಕೆಯಲ್ಲಿ ಅಪ್ರತಿಮ ಶೌರ್ಯ ಪ್ರದರ್ಶಿಸಿದ ಸೈನಿಕರಿಗೆ ಸಲ್ಲುತ್ತದೆ. ಈ ಪುರಸ್ಕಾರವನ್ನು *ಮರಣೋತ್ತರವಾಗಿಯೂ* ಕೊಡಬಹುದಾಗಿದೆ.

ಪದಕವು *ಬೆಳ್ಳಿಯದ್ದಾಗಿದೆ* ಹಾಗೂ ದುಂಡಗಿದೆ. ಇದರ ಮುಂಬದಿಯಲ್ಲಿ *ಐದು ಕೋನಗಳುಳ್ಳ ಹರಿಕಾರ ನಕ್ಷತ್ರದ ಎದ್ದು ಕಾಣುವ ಕೆತ್ತನೆ ಹಾಗೂ ಭಾರತ ದೇಶದ ಲಾಂಛನಗಳಿವೆ.* ಹಿಂಬದಿಯಲ್ಲಿ ಮಹಾ ವೀರ ಚಕ್ರ ಎಂದು *ದೇವನಾಗರಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಕೆತ್ತಲಾಗಿದೆ.* ಜೊತೆಗೆ ಎರಡು ಕಮಲಗಳ ಚಿತ್ರವಿದೆ . ಈ ಪುರಸ್ಕಾರವನ್ನು *ಎದೆಯ ಎಡಭಾಗದಲ್ಲಿ ಧರಿಸುತ್ತಾರೆ* .

155ಕ್ಕಿಂತಲೂ ಹೆಚ್ಚು ಶೌರ್ಯ ಸಾಹಸಗಳನ್ನು ಮಹಾ ವೀರ ಚಕ್ರ ಪ್ರದಾನ ಮಾಡಿ ಗೌರವಿಸಲಾಗಿದೆ. ಇವುಗಳಲ್ಲಿ ಬಹಳಷ್ಟು ಪದಕಗಳು *1971ರ ಭಾರತ-ಪಾಕಿಸ್ತಾನ ಯುದ್ಧದ ನಂತರ ಕೊಡಲಾಗಿದೆ.*

 ಮಹಾವೀರ ಚಕ್ರ ಪ್ರಶಸ್ತಿಗೆ  ₹12 ಲಕ್ಷದಿಂದ ₹ *50 ಲಕ್ಷಕ್ಕೆ* ಹೆಚ್ಚಿಸಲಾಗಿದೆ.


 ವೀರ ಚಕ್ರ ಪ್ರಶಸ್ತಿ.

 ಭಾರತದ ಶೌರ್ಯ ಪುರಸ್ಕಾರವಾಗಿದ್ದು *ಯುದ್ಧಭೂಮಿಯಲ್ಲಿ ಶೌರ್ಯ ಸಾಹಸಗಳನ್ನು ಪ್ರದರ್ಶಿಸಿದವರಿಗೆ ಪ್ರದಾನ ಮಾಡಲಾಗುವುದು.* ಸೇನಾ ಪುರಸ್ಕಾರಗಳ ಪಟ್ಟಿಯಲ್ಲಿ ಇದರ ಆದ್ಯತೆ ಪರಮ ವೀರ ಚಕ್ರ ಮತ್ತು ಮಹಾ ವೀರ ಚಕ್ರಗಳ ನಂತರ ಮೂರನೆಯದ್ದಾಗಿದೆ._

ಸ್ಥಾಪನೆ: ಭಾರತದ *ರಾಷ್ಟ್ರಪತಿಗಳಿಂದ* ೨೬ ಜನವರಿ ೧೯೫೦ ರಂದು, ಜಾರಿಗೆ ಬಂದದ್ದು ೧೫ ಆಗಸ್ಟ್ ೧೯೪೭ರಂದು.

ವಿನ್ಯಾಸ

ಮುಂಬದಿ: *ಮೂರೂವರೆ ಸೆಂ.ಮಿ. ದುಂಡನೆಯ ಬೆಳ್ಳಿಯ ಪದಕ. ಐದು ಕೋನಗಳುಳ್ಳ ನಕ್ಷತ್ರ, ಇದರ ಮಧ್ಯದಲ್ಲಿ ಚಕ್ರ, ಇದರ ಮೇಲೆ ಭಾರತದ ಲಾಂಛನ. ತುದಿಯಲ್ಲಿ ಪದಕದ ಹೆಸರು.* 

 ಹಿಂಬದಿ: *ಎರಡು ಆಖ್ಯಾನಗಳು ಕಮಲದ ಹೂವುಗಳು ಇವುಗಳ ಮಧ್ಯೆ. ಇದರ ಮೇಲೆ ವೀರ ಚಕ್ರ ಎಂದು ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ.*


logoblog

Thanks for reading Wartime Military Awards in India

Previous
« Prev Post

No comments:

Post a Comment