Subject : what's app user related
Subject Language : Kannada
Which Department : all
Place : Karnataka
Announcement Date : 25/03/2021
Subject Format : PDF/JPJ
Subject Size : 56kb
Pages : 1
Scanned Copy : Yes
Editable Text : NO
Password Protected : NO
Download Link : Yes
Copy Text : NO
Print Enable : Yes
Quality : High
Subject Size Reduced :NO
Password : NO
Cost : Free
For Personal Use Only
Save Environment!!!
ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ವಾಟ್ಸಾಪ್ ಇಂದು ತ್ವರಿತ ಸಂದೇಶಗಳ ರವಾನೆಗಾಗಿ ಬಳಕೆಯಾಗುತ್ತಿರುವಂತ ಬಹುಜನರ ನೆಚ್ಚಿನ ಸೋಷಿಯಲ್ ಮೀಡಿಯಾವಾಗಿದೆ. ಇಂತಹ ಸೋಷಿಯಲ್ ಮೀಡಿಯಾ ಬಳಸಿಕೊಳ್ಳುತ್ತಿರುವಂತ ಆನ್ ಲೈನ್ ವಂಚಕರು, ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕಲೆಹಾಕಿ, ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕುವಂತ ಪ್ರಯತ್ನಕ್ಕೆ ಇಳಿದಿರುವುದು ವರದಿಯೊಂದರಿಂದ ತಿಳಿದು ಬಂದಿದೆ.
BIG NEWS : ಇನ್ಮುಂದೆ CBSEಯ 6 ರಿಂದ 10ನೇ ತರಗತಿ ಕಲಿಕಾ ವಿಧಾನ ಬದಲು : ಇಲ್ಲಿದೆ ಸಂಪೂರ್ಣ ಮಾಹಿತಿ
ಇದಕ್ಕಾಗಿ ಉಡುಗೋರೆ ನೀಡಲಾಗುತ್ತದೆ ಎನ್ನುವಂತ ಯು ಆರ್ ಎಲ್ ಕ್ರಿಯೇಟ್ ಮಾಡುತ್ತಿರುವಂತ ಆನ್ ಲೈನ್ ವಂಚಕರು, ಅಲ್ಲಿ ಮೊಬೈಲ್ ಬಳಕೆದಾರರಿಂದ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಿ, ನಿಮ್ಮನ್ನು ತಾವಾಗಿಯೇ ತಮ್ಮ ಕೆಡ್ಡಾಕ್ಕೆ ಬೀಳಿಸಿಕೊಳ್ಳುವಂತ ತ್ವರಿತ ಪ್ರಕ್ರಿಯೆಗೆ ಇಳಿಯುವ ಕೆಲಸ ಮಾಡುತ್ತಿದ್ದಾರೆ.
ಓ.. ಹೌದಾ.. ಅಂತ ಅಚ್ಚರಿ ಪಡಬೇಡಿ.. ಇದು ನಿಜವೂ ಕೂಡ.. ಅದೇಗೆ ಅಂತ ಮುಂದೆ ಓದಿ..
ನಿಮಗೆ ವಾಟ್ಸಾಪ್ ಗಳ ಗ್ರೂಪ್ ನಲ್ಲಿ ಆ ಬರ್ತಡೇ, ಇವರ ಬರ್ತಡೆ, ಅಮೆಜಾನ್, ಫ್ಲಿಪ್ ಕಾರ್ಡ್ ಸೀಸನ್ ಸೇಲ್ ಸೇರಿದಂತೆ ವಿವಿಧ ವಿಷಯಗಳಲ್ಲಿ ಭರ್ಜರಿ ಉಡುಗೋರೆಯಂತ ಯು ಆರ್ ಎಲ್ ಒಂದು ಬಂದಿರಬಹುದು. ಅಂತಹ ಲಿಂಕ್ ಒಂದನ್ನು ನೀವು ದ್ರೇ.. ಮೊದಲು ತೆರೆದುಕೊಳ್ಳುವ ಪುಟವೇ.. ಮುಂದುವರೆಯಲು ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿ ಎಂಬುದಾಗಿರುತ್ತದೆ..
COVID-19 vaccine : 'ಕೊರೋನಾ ಲಸಿಕೆ'ಯನ್ನು ಯಾವ ಯಾವ ದಿನಗಳಲ್ಲಿ ನೀಡಲಾಗುತ್ತೆ ಗೊತ್ತಾ.? ಇಲ್ಲಿದೆ ಪರಿಷ್ಕೃತ ಲಸಿಕಾ ವೇಳಾಪಟ್ಟಿ
ಹೀಗೆ ತೆರೆದುಕೊಂಡ ಪುಟದಲ್ಲಿ ನೀವು ಮೊಬೈಲ್ ಸಂಖ್ಯೆ ನಮೂದಿಸಿ, ಮುಂದುವರೆದ್ರೇ.. ನಿಮ್ಮ ಮೊಬೈಲ್ ಸಂಖ್ಯೆಗೆ ಕೆಲವೊಮ್ಮ ಓಟಿಪಿ ಕೂಡ ಕಳಿಸಿ, ನಮೂದಿಸಲು ಸೂಚಿಸಲಾಗುತ್ತದೆ. ಇದಾದ ಬಳಿಕ ನಿಮ್ಮ ಹುಟ್ಟಿದ ದಿನಾಂಕ, ಮೇಲ್ ವಿಳಾಸ, ಲಿಂಗ ಸೇರಿದಂತೆ ವಿವಿಧ ಪ್ರಶ್ನೆಗಳು ನಿಮ್ಮ ಮುಂದೆ ಬರುತ್ತವೆ. ಆ ಎಲ್ಲವನ್ನು ಭರ್ತಿ ಮಾಡಿದ ನಂತ್ರ ಕೊನೆಗೆ ಈ ಸಂದೇಶವನ್ನು 10 ವಾಟ್ಸಾಪ್ ಗ್ರೂಪ್ ಗಳಿಗೆ ಕಳುಸಿಹಿಸಿದ್ರೇ.. ನೀವು ಉಡುಗೋರೆ ಪಡೆಯಲು ಅರ್ಹರಾಗುತ್ತೀರಿ ಎಂಬುದಾಗಿರುತ್ತದೆ.
ಇದ್ಯಾವುದನ್ನು ಸರಿಯಾಗಿ ಗಮನಿಸದೇ.. ಅವಸರದಲ್ಲಿ ಎಲ್ಲವನ್ನು ಭರ್ತಿ ಮಾಡಿ, ಗ್ರೂಪ್ ಗಳಿಗೂ ಶೇರ್ ಮಾಡಿದ ನಂತ್ರ.. ಆನ್ ಲೈನ್ ವಂಚಕರು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಿ, ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕೋಕೆ ನೀವೇ ನೀಡಿದಂತ ನಿಮ್ಮ ಮೊಬೈಲ್ ಸಂಖ್ಯೆಗೆ ಬ್ಯಾಂಕ್ ನವರು, ಎಟಿಎಂ ಬ್ಲಾಕ್ ಆಗಿದೆ. ಎಟಿಎಂ ಹೊಸದು ಮಾಡಿಸಬೇಕು. ಅದು ಇದು ಸಬೂಬಿನೊಂದಿಗೆ ನಿಮಗೆ ಕರೆ ಮಾಡುತ್ತಾರೆ. ಆಗ ನೀವು ಯಾಮಾರಿ ಅವರು ಹೇಳುವಂತ ಮಾಹಿತಿ ಕೊಟ್ರೇ.. ನಿಮ್ಮ ಬ್ಯಾಂಕ್ ಖಾತೆಯಲ್ಲಿನ ಹಣ ಚೋರರ ಪಾಲಾಗೋದು ಗ್ಯಾರಂಟಿ.
ಸೋ ಈಗ ನೀವೆ ಯೋಚಿಸಿ.. ಉಡುಗೋರೆಯಂತ ಆಮಿಷಗಳಿಗೆ ಬಿದ್ದು.. ಯಾರ್ ಯಾರೋ ಕಳುಹಿಸುವಂತ ಲಿಂಕ್ , ನಿಮ್ಮ ವೈಯಕ್ತಿಕ ಮಾಹಿತಿ ಹಂಚಿಕೊಳ್ಳೋದು ತಪ್ಪು ಅಲ್ವಾ.? ಹಾಗಾದ್ರೇ.. ಎಚ್ಚರಿಕೆ ವಹಿಸಿ.. ನಿಮ್ಮ ಬ್ಯಾಂಕ್ ಖಾತೆಯನ್ನು ಆನ್ ಲೈನ್ ಚೋರರಿಗೆ ತೆರೆದಿಡೋ ಮುನ್ನಾ ಮುಂಜಾಗ್ರತಾ ಕ್ರಮ ವಹಿಸೋದು ಮರೆಯಬೇಡಿ.
No comments:
Post a Comment