Monday 8 March 2021

The Guptas and the Vardhanas

  MahitiVedike Com       Monday 8 March 2021
ಗುಪ್ತರು
ಆಕರಗಳು

ಗುಪ್ತರ ಇತಿಹಾಸವನ್ನು ತಿಳಿದುಕೊಳ್ಳಲು ಸಹಾಯಕವಾಗುವ ಆಕರಗಳು ಯಾವುವೆಂದರೆ: 1. ಅಲಹಾಬಾದ್ ಸ್ತಂಭ ಶಾಸನ

2. ಮೆಹುರೂಲಿಯ ಸ್ತಂಭ ಶಾಸನ

3. ವಿಶಾಖದತ್ತನ ಮುದ್ರಾರಾಕ್ಷಸ ಮತ್ತು ದೇವಿ ಚಂದ್ರಗುಪ್ತ

4. ರಾಜಶೇಖರನ ಕಾವ್ಯಮೀಮಾಂಸೆ

5. ಕಾಳಿದಾಸನ ಕೃತಿಗಳು

6. ವಿಜ್ಜಿಕೆಯ ಕೌಮುದಿಮಹೋತ್ಸವ

7. ಫಾಹಿಯಾನ ಮತ್ತು ಇತ್ಸಿಂಗ್ರ ಬರವಣಿಗೆಗಳು

ರಾಜಕೀಯ ಇತಿಹಾಸ
 ಗುಪ್ತರ ಮೊದಲ ಐತಿಹಾಸಿಕ ಪುರುಷನೆಂದು ಒಂದನೇ ಚಂದ್ರಗುಪ್ತನನ್ನು ಕರೆಯುತ್ತಾರೆ.

 ಈತ ಲಿಚ್ಚವಿ ರಾಜಕುಮಾರಿಯಾದ ಕುಮಾರದೇವಿಯನ್ನು ಮದುವೆಯಾದನು. ಇದರಿಂದ ಗುಪ್ತರ ಬಲ ಮತ್ತು ಪ್ರತಿಷ್ಠೆ ಹೆಚ್ಚಾಯಿತು.

 ಒಂದನೇ ಚಂದ್ರಗುಪ್ತನು ಸಾ.ಶ. 319-20ರಲ್ಲಿ ಪಟ್ಟಕ್ಕೆ ಬಂದಾಗ ಗುಪ್ತ ಶಕೆ ಆರಂಭವಾಯಿತು.

ಸಮುದ್ರಗುಪ್ತ (ಸಾ.ಶ. 335 - 380)
 ಚಂದ್ರಗುಪ್ತನ ನಂತರ ಇವನ ಮಗ ಸಮುದ್ರಗುಪ್ತನು ಅಧಿಕಾರಕ್ಕೆ ಬಂದನು.

  ಹರಿಸೇನನು ರಚಿಸಿದ ಅಲಹಾಬಾದ್ ಪ್ರಶಸ್ತಿಯಿಂದಾಗಿ ಅವನ ಸಾಧನೆಗಳು ಅಮರಗೊಂಡಿವೆ.

 ಇದು ಸಂಸ್ಕøತ ಭಾಷೆಯಲ್ಲಿದ್ದು, ಅಶೋಕನ ಸ್ತಂಭವೊಂದರ ಮೇಲೆ ಕೆತ್ತಲಾಗಿದೆ. ಭಾರತದ ಬಹುಭಾಗವು ಇವನ ಕಾಲದಲ್ಲಿ ಗುಪ್ತರ ಆಳ್ವಿಕೆಗೆ ಒಳಪಟ್ಟಿತ್ತು.

 ಇವನ ಅಶ್ವಮೇಧಯಾಗವು ವೈದಿಕ ವಿಧಿ ವಿಧಾನಗಳನ್ನು ಮರುಕಳಿಸಿತು.

 ಸಮುದ್ರಗುಪ್ತನು ಕೇವಲ ಆಕ್ರಮಣಕಾರಿಯಲ್ಲ. ಇವನು ಮಹಾಕವಿ ಹಾಗೂ ಸಂಗೀತಪ್ರಿಯನೂ ಆಗಿದ್ದನು.

 ಇವನ ಸಂಗೀತದ ವ್ಯಾಮೋಹವು ಅವನ ಕಾಲದ ಚಿನ್ನದ ನಾಣ್ಯಗಳಲ್ಲಿ ವೀಣೆಯನ್ನು ನುಡಿಸುತ್ತಿರುವ ಚಿತ್ರದ ಮೂಲಕ ವ್ಯಕ್ತವಾಗಿದೆ.

ಎರಡನೆಯ ಚಂದ್ರಗುಪ್ತ (ಸಾ.ಶ.380-412)

 ಸಮುದ್ರಗುಪ್ತನ ಸಾಮ್ರಾಜ್ಯವನ್ನು ಎರಡನೇ ಚಂದ್ರಗುಪ್ತನು ಮತ್ತಷ್ಟು ವಿಸ್ತರಿಸಿ ಸ್ಥಿರತೆಯನ್ನು ತಂದನು.

 ಇವನು ಶಕರನ್ನು ಸೋಲಿಸಿ ಪಶ್ಚಿಮ ಭಾರತವನ್ನು ಗುಪ್ತರ ಸಾಮ್ರಾಜ್ಯಕ್ಕೆ ಸೇರಿಸಿಕೊಂಡನು.

 ಭಾರತದ ಅನೇಕ ರಾಜ ಮನೆತನಗಳೊಂದಿಗೆ ಈತನು ಮದುವೆ ಮೂಲಕ ಸಂಬಂಧವನ್ನು ಬೆಳೆಸಿ ಪ್ರಭಾವಿಯಾಗಿ ವಿಕ್ರಮಾದಿತ್ಯನೆಂಬ ಬಿರುದನ್ನು ಪಡೆದನು. ಇವನ ಕಾಲದಲ್ಲಿ ಯುದ್ಧಗಳಿಗಿಂತ ಸಾಹಿತ್ಯ ಹಾಗೂ ಕಲೆಗೆ ನೀಡಿದ ಘೋಷಣೆಯು ಸ್ಮರಣೀಯವಾಗಿದೆ.

 ಸುಪ್ರಸಿದ್ಧ ಸಂಸ್ಕøತ ಕವಿ ಹಾಗೂ ನಾಟಕಕಾರ ಕಾಳಿದಾಸನು ಇದೇ ಕಾಲಕ್ಕೆ ಸೇರಿದವನು. ಮೇಘದೂತ, ರಘುವಂಶ, ಕುಮಾರಸಂಭವ ಹ
logoblog

Thanks for reading The Guptas and the Vardhanas

Previous
« Prev Post

No comments:

Post a Comment