Monday 8 March 2021

abandon 2 optional papers in kAS (GP) exam. !!

  MahitiVedike Com       Monday 8 March 2021


KAS (GP) ಪರೀಕ್ಷೆಯಲ್ಲಿ 2 ಐಚ್ಛಿಕ ಪತ್ರಿಕೆಗಳನ್ನು ಕೈಬಿಟ್ಟಸರ್ಕಾರ.!!


ಗೆಜೆಟೆಡ್‌ ಪ್ರೊಬೆಷನರಿ(KAS) (ಗ್ರೂಪ್‌-A & B) ಹುದ್ದೆಗಳ ನೇಮಕಾತಿಗೆ ಕೆಪಿಎಸ್‌ಸಿ ನಡೆಸುವ ಮುಖ್ಯಪರೀಕ್ಷೆಯಲ್ಲಿ ಐಚ್ಛಿಕ ವಿಷಯದ (ತಲಾ 250 ಅಂಕಗಳ) 2 ಪತ್ರಿಕೆಗಳನ್ನು ಕೈಬಿಡಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ.!!

ಈವರೆಗೂ ಐದು ಸಾಮಾನ್ಯ ಜ್ಞಾನ(GS) ಪತ್ರಿಕೆಗಳು (1,250 ಅಂಕ), ಒಂದು ಐಚ್ಛಿಕ ವಿಷಯ (ಎರಡು ಪತ್ರಿಕೆಗಳು 500 ಅಂಕ) ಸೇರಿ ಏಳು ಪತ್ರಿಕೆಗಳಿಗೆ ಉತ್ತರಿಸಬೇಕಾಗಿತ್ತು.!!

ಆದರೆ.!!

ಇದೀಗ ಐದು ಪತ್ರಿಕೆಗಳಿಗೆ ಮಾತ್ರ ಲಿಖಿತ ಪರೀಕ್ಷೆ ನಡೆಯಲಿದ್ದು, ಒಟ್ಟು 1,250 ಅಂಕಗಳಿಗೆ ಮಾತ್ರ ಉತ್ತರಿಸಬೇಕಾಗುತ್ತದೆ.!!

50 ಅಂಕಗಳಿಗೆ ಸಂದರ್ಶನ:

ಈವರೆಗೆ 200 ಅಂಕಗಳಿಗೆ ನಡೆಯುತ್ತಿದ್ದ ವ್ಯಕ್ತಿತ್ವ ಪರೀಕ್ಷೆ ಯಲ್ಲಿ (Interview) ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದ್ದು, 150 ಅಂಕಗಳನ್ನು ಕಡಿತಗೊಳಿಸಬೇಕು ಎಂದು ಆಗ್ರಹಗಳು ಕೇಳಿ ಬಂದಿದ್ದವು. ಈ ಅಂಶವನ್ನು ಪರಿಗಣಿಸಿರುವ ಸರ್ಕಾರ, ವ್ಯಕ್ತಿತ್ವ ಪರೀಕ್ಷೆಯನ್ನು 50 ಅಂಕಗಳಿಗೆ ನಡೆಸಲು ಸಂಪುಟ ತೀರ್ಮಾನಿಸಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಮೂಲಗಳು ತಿಳಿಸಿವೆ.!!


logoblog

Thanks for reading abandon 2 optional papers in kAS (GP) exam. !!

Previous
« Prev Post

No comments:

Post a Comment