Friday 12 March 2021

Social and religious reforms

  MahitiVedike Com       Friday 12 March 2021

ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆಗಳು


ಭಾರತದ ಇತಿಹಾಸದಲ್ಲಿ 19ನೆಯ ಶತಮಾನವನ್ನು ‘ಭಾರತೀಯ ನವೋದಯ’ ಕಾಲವೆಂದು ಕರೆಯಲಾಗಿದೆ. ಈ ಕಾಲಾವಧಿಯಲ್ಲಿ ಪಾಶ್ಚಿಮಾತ್ಯ ನಾಗರಿಕತೆಯ ಸಂಪರ್ಕವು ಭಾರತೀಯರಿಗೆ ದೊರೆಯಿತು. 

ಈ ಅವಕಾಶದಿಂದ ಇಂಗ್ಲಿಷ್ ವಿದ್ಯಾಭ್ಯಾಸದ ಸೌಲಭ್ಯ ದೊರೆಯಿತು. ಭಾರತೀಯರಲ್ಲಿ ವೈಚಾರಿಕತೆಯ ಮನೋಭಾವ ಬೆಳೆಯಿತು. 

ಇದು ಮೂಢನಂಬಿಕೆಗಳನ್ನು ಪ್ರಶ್ನಿಸಲು ಪ್ರೇರೇಪಿಸಿತಲ್ಲದೆ ದ್ವಂದ್ವತೆ, ವಿರೋಧಾಭಾಸ ಹಾಗೂ ಸ್ವಹಿತಾಸಕ್ತಿಗಳ ಅರಿವು ಮೂಡಿಸಿತು ಎನ್ನುವ ಜನಜನಿತ ಅಭಿಪ್ರಾಯವಿದೆ. 

ಇಂಗ್ಲಿಷ್ ಪೂರ್ವಕಾಲದಲ್ಲಿಯೂ ಭಾರತೀಯರಿಗೆ ಇಂಗ್ಲಿಷ್ ಭಾಷೆಯ ಹೊರತಾಗಿಯೂ ವೈಜ್ಞಾನಿಕ ಮನೋಭಾವ, ವೈಚಾರಿಕತೆ ಇತ್ತು ಎಂದು ಇತ್ತೀಚಿನ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. 

ಭಾರತೀಯರಲ್ಲಿ ಪ್ರಜಾಪ್ರಭುತ್ವ. ಸ್ವಾತಂತ್ರ್ಯ,ಸಮಾನತೆ, ರಾಷ್ಟ್ರೀಯತೆಯಂತಹ ವಿಚಾರಗಳನ್ನು ಪಾಶ್ಚಾತ್ಯ ಪರಿಕಲ್ಪನೆಗಳು ಪರಿಚಯಿಸಿದವು. ಪಾಶ್ಚಿಮಾತ್ಯ ಶಿಕ್ಷಣದಿಂದ ಜಾಗೃತರಾದ ಅನೇಕರು ಸುಧಾರಣೆಗಾಗಿ ಪ್ರಯತ್ನಿಸಿದರು. 

ಈ ಹಿನ್ನೆಲೆಯಲ್ಲಿ ರಾಮ್ ಮೋಹನರಾಯ್, ದಯಾನಂದ ಸರಸ್ವತಿ, ಮಹದೇವ ಗೋವಿಂದ ರಾನಡೆ, ಜ್ಯೋತಿಬಾ ಫುಲೆ, ಸ್ವಾಮಿ ವಿವೇಕಾನಂದ, ಆನಿಬೆಸೆಂಟ್, ಸೈಯದ್ ಅಹಮದ್ಖಾನ್ ಮೊದಲಾದವರು ಸಾಮಾಜಿಕ ಸುಧಾರಣೆಗಾಗಿ ಶ್ರಮಿಸಿದರು. 

ಬ್ರಹ್ಮ ಸಮಾಜ

ಬ್ರಹ್ಮ ಸಮಾಜದ ಸಂಸ್ಥಾಪಕರಲ್ಲಿ ರಾಮಮೋಹನ್ ರಾಯರು ಪ್ರಮುಖರು. ಇವರನ್ನು ‘ಭಾರತೀಯ ನವೋದಯದ ಜನಕ’ ಎಂದು ಕರೆಯಲಾಗಿದೆ. 

ಸಂಸ್ಕøತ, ಅರೇಬಿಕ್, ಪರ್ಷಿಯನ್, ಇಂಗ್ಲಿಷ್ , ಫ್ರೆಂಚ್, ಗ್ರೀಕ್, ಲ್ಯಾಟಿನ್ ಮುಂತಾದ ಭಾಷೆಗಳಲ್ಲಿ ಪಾಂಡಿತ್ಯವನ್ನು ಹೊಂದಿದ್ದರು. 

ಹಿಂದೂ, ಮುಸ್ಲಿಂ, ಸೂಫಿ, ಕ್ರೈಸ್ತ ಮತ್ತು ಬೌದ್ಧಮತಗಳ ಸಂಸ್ಕøತಿ ಮತ್ತು ತತ್ವಗಳನ್ನು ಅಧ್ಯಯನ ಮಾಡಿದ್ದರು. ಮೂರ್ತಿ ಪೂಜೆಯನ್ನು ಪ್ರಶ್ನಿಸಿದ ರಾಯರು ಉಪನಿಷತ್ತುಗಳಲ್ಲಿ ಅರ್ಥವನ್ನು ಕಂಡುಕೊಂಡರು. 

ಆಧುನಿಕ ವಿಜ್ಞಾನ ಮತ್ತು ಇಂಗ್ಲಿಷ್ ಶಿಕ್ಷಣವು ಭಾರತದ ನವೀಕರಣಕ್ಕೆ ಅತ್ಯಾವಶ್ಯಕವೆಂದು ಪ್ರತಿಪಾದಿಸಿದರು. ಸ್ತ್ರೀ ಶೋಷಣೆಯನ್ನು ಅವರು ವಿರೋಧಿಸಿದರು. 

ಸತಿಪದ್ದತಿ, ಬಾಲ್ಯವಿವಾಹಗಳ ವಿರುದ್ಧ ಸಂಘಟನಾತ್ಮಕವಾದ ಹೋರಾಟ ನಡೆಸಿದರು. ಇದರಿಂದಾಗಿ ಇವರನ್ನು ಸಂಪ್ರದಾಯವಾದಿ ಹಿಂದೂಗಳು ಖಂಡಿಸಿದರು. 

ಲಾರ್ಡ್ ವಿಲ
logoblog

Thanks for reading Social and religious reforms

Previous
« Prev Post

No comments:

Post a Comment