Friday, 12 March 2021

Brief information on the Dandi Salt Satyagraha undertaken by Gandhiji

  MahitiVedike Com       Friday, 12 March 2021
 

ಗಾಂಧೀಜಿ ಅವರು ಕೈಗೊಂಡ ದಂಡಿ  ಉಪ್ಪಿನ ಸತ್ಯಾಗ್ರಹ ಬಗ್ಗೆ ಸಂಕ್ಷಿಪ್ತ ಮಾಹಿತಿ


                     ಹಿನ್ನಲೆ

 ಮಾರ್ಚ್ 2, 1930ರಂದು ಉಪ್ಪಿನ ಕಾನೂನನ್ನು ಬದಲಾಯಿಸುವಂತೆ ಕೋರಿ ಅಂದಿನ ವೈಸ್‍ರಾಯ್, ಲಾರ್ಡ್ ಇರ್ವಿನ್ ರವರಿಗೆ ಒಂದು ಪತ್ರ ಬರೆದರು ._ _ಪತ್ರದ ಕೊನೆಯಲ್ಲಿ: "ಈ ನನ್ನ ಪತ್ರವು ತಮ್ಮ ಮನಸ್ಸನ್ನು_ _ಬದಲಾಯಿಸದಿದ್ದಲ್ಲಿ, ಈ ಮಾಹೆಯ 11ನೇ ತಾರೀಖಿನಂದು ನಾನು ನನ್ನ ಆಶ್ರಮದ ಸಹಚರರೊಂದಿಗೆ ಈ ಕಾನೂನಿನ ಉಪಬಂಧಗಳನ್ನು ನಿರ್ಲಕ್ಷ್ಯ ಮಾಡಲು ಮುಂದಾಗುತ್ತೇನೆ. ಈ ತೆರಿಗೆಯು ಬಡ ಜನರಿಗೆ ಅತ್ಯಂತ ಅನ್ಯಾಯಕಾರಿಯಾದುದು. ನಮ್ಮ ಸ್ವಾತಂತ್ರ್ಯದ ಹೋರಾಟ ಈ ರೀತಿಯ ಬಡ ಬಲ್ಲಿದರಿಗಾಗಿಯೇ ಇರುವುದರಿಂದ, ಈ ತೆರಿಗೆಯ ವಿರೋಧದಿಂದಲೆ ಇದನ್ನು ಪ್ರಾರಂಬಿಸುತ್ತೇವೆ." ವೈಸ್‍ರಾಯ್‍ರವರು ಇದಕ್ಕೆ ಉತ್ತರ ನೀಡಲಿಲ್ಲ. ಇದರಂತೆ ಮಾರ್ಚ್ 12, 1930ರಂದು ಗಾಂಧೀಜಿಯವರು 78ಮಂದಿ ಸಹ ಸತ್ಯಾಗ್ರಹಿಗಳೊಂದಿಗೆ ಸಬರಮತಿಯಿಂದ  ದಾಂಡಿ ಗ್ರಾಮಕ್ಕೆ ನಡೆಯಲು ಪ್ರಾರಂಭಿಸಿದರು. ಈ ನಡಿಗೆಯ 24 ದಿನಗಳಲ್ಲಿ ಸಹಸ್ರಾರು ಸತ್ಯಾಗ್ರಹಿಗಳು ದಾರಿಯುದ್ದಕ್ಕೂ ಸೇರಿದರು. ನಾಲ್ಕು ಜಿಲ್ಲೆಗಳು ಮತ್ತು 48 ಹಳ್ಳಿಗಳ ಮೂಲಕ ಹಾಯ್ದ ಈ ನಡಿಗೆ ಏಪ್ರಿಲ್ 5ರಂದು ದಾಂಡಿ ತಲುಪಿತು._ 
 
ಗಾಂಧೀಜಿಯವರು ದಂಡಿ ಉಪ್ಪಿನ ಸತ್ಯಾಗ್ರಹ ಪ್ರಾರಂಭಿಸಿದ ವರ್ಷ_ = ಮಾರ್ಚ್ 12,1930

 _ಎಲ್ಲಿಂದ ಎಲ್ಲಿವರೆಗೆ_ = ಅಹಮದಾಬಾದಿನ  ತಮ್ಮ ಸಬರಮತಿ ಆಶ್ರಮದಿಂದ ಗುಜರಾತಿ ದಂಡಿ ಯವರೆಗೆ
( 78 _ಅನುಯಾಯಿಗಳೊಂದಿಗೆ_ )

 _ದಂಡಿ ಉಪ್ಪಿನ ಸತ್ಯಾಗ್ರಹಕ್ಕೆ ಕರ್ನಾಟಕದಿಂದ ಹೋದ ಏಕೈಕ ವ್ಯಕ್ತಿ_ = ಮೈಲಾರ ಮಹದೇವಪ್ಪ
( ಹಾವೇರಿದವರು)
 _ಹಾವೇರಿ ರೈಲು ನಿಲ್ದಾಣಕ್ಕೆ_ ಮೈಲಾರ ಮಹಾದೇವಪ್ಪ ನೆಂದು ಹೆಸರಿಡಲಾಗಿದೆ.

 _ಗಾಂಧೀಜಿಯವರು ಮೊದಲು ಆಯ್ಕೆ ಮಾಡಿದ ಸತ್ಯಾಗ್ರಹಿ_ = ವಿನೋಬ ಬಾವಿ

 _ಗಾಂಧೀಜಿಯವರು 24 ದಿನಗಳಲ್ಲಿ  240 ಮೈಲಿ ಕ್ರಮಿಸಿ ದಂಡಿಯನ್ನು ತಲುಪಿದರು._

 _ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ ಚಳುವಳಿಯ ಸ್ಥಳಗಳು_
 ಅಂಕೋಲಾ
 ಸಿರ್ಸಿ
 ಸಿದ್ದಾಪುರ
 ಕಾರವಾರ
 ಉಡುಪಿ

ಅಂಕೋಲದಲ್ಲಿ M, P ನಾಡಕರ್ಣಿಯ ಅಧ್ಯಕ್ಷಯಲ್ಲಿ ಉಪ್ಪಿನ ಸತ್ಯಾಗ್ರಹ ಚಳುವಳಿ  ನಡೆಯಿತು_

ಅಂಕೋಲಾವನ್ನು ಕರ್ನಾಟಕದ ದಂಡಿ ಎಂದು ಕರೆಯಲಾಗುತ್ತದೆ_

ದಂಡಿ ಉಪ್ಪಿನ ಸತ್ಯಾಗ್ರಹದ ಯಾತ್ರೆಯನ್ನು " ಶ್ರೀರಾಮನ ಐತಿಹಾಸಿಕ ಲಂಕಾ ಯಾತ್ರೆ ಎಂದು ಕರೆದವರು_ = ಮೋತಿಲಾಲ್ ನೆಹರು

 _ದಂಡಿ ಸತ್ಯಾಗ್ರಹ ದೊಂದಿಗೆ ಆರಂಭವಾದ ಚಳುವಳಿ_ = ಕಾನೂನು ಭಂಗ ಚಳುವಳಿ

ದಂಡಿ ಉಪ್ಪಿನ ಸತ್ಯಾಗ್ರಹ ಸಂದರ್ಭದಲ್ಲಿ ಮೋತಿಲಾಲ್ ನೆಹರು ಅವರು ತಮ್ಮ "ಆನಂದ ಭವನ ಕಟ್ಟಡವನ್ನು " ರಾಷ್ಟ್ರೀಯ ಕಾಂಗ್ರೆಸ್ಸಿಗೆ ಕೊಡುಗೆಯಾಗಿ ನೀಡಿದರು._

logoblog

Thanks for reading Brief information on the Dandi Salt Satyagraha undertaken by Gandhiji

Previous
« Prev Post

No comments:

Post a Comment