"FDA/SDA". 1991 ರಿಂದ 2019 ರವರೆಗೆ ಪರೀಕ್ಷೆಯಲ್ಲಿ ಕೇಳಿರುವ ನುಡಿಗಟ್ಟುಗಳ ಅರ್ಥ ಬಗ್ಗೆ ಇಲ್ಲಿ ಕೊಡಲಾಗಿದೆ.
ನುಡಿಗಟ್ಟು ಎಂದರೇನು?
ಒಂದು ವಿಶಿಷ್ಟ ಅರ್ಥವನ್ನು ನೀಡುವ ಸಂಕ್ಷಿಪ್ತ ಶಬ್ದ
ನುಡಿಗಟ್ಟುಗಳ ಅರ್ಥ
1) ತಲೆದೂಗು= ಒಪ್ಪಿಕೋ
2) ರಾಮಬಾಣ= ಗುರಿ ತಪ್ಪದ ಬಾನ
3) ಹಿತ್ತಾಳೆ ಕಿವಿ= ಚಾಡಿಮಾತು ಕೇಳುವವನು
4) ಗೋನಮುರಿ= ಸೊಕ್ಕು ಮುರಿ
5) ನುಂಗಿ ಬಿಡು= ಬಳಿಸು
6) ವೇದವಾಕ್ಯ= ಮೀರಲು ಬಾರದ ವಾಕ್ಯ / ಮಾತು
7) ಹೊಟ್ಟೆ ಒಳಗೆ ಹಾಕಿಕೊ= ಸಹಿಸಿಕೊ
8) ಮೀಸೆ ತಿರು= ಗರ್ವ ಪಡು
9) ಕೈ ಚೆಲ್ಲು= ಸೋಲು ವಪ್ಪು
10) ಗೋಡ್ಡು ಪಾಂಡಿತ್ಯ= ಸುಳ್ಳು ಪಾಂಡಿತ್ಯ
11) ಅರ್ಧಚಂದ್ರ ಪ್ರಯೋಗ ಮಾಡು= ಕತ್ತು ಹಿಡಿದು ಹೊರಹಾಕು
12) ಅರಣ್ಯರೋದಕ= ಯಾರು ಕೇಳದ
13) ಅಡ್ಡದಾರಿ ಹಿಡಿ= ಕೆಟ್ಟಚಾಳಿ ಹಿಡಿ
14) ಅಮವಾಸ್ಯೆಗೊಮ್ಮೆ ಹುಣ್ಣಿಮೆಗೊಮ್ಮೆ= *ಅಪರೂಪ*
15) ತಲೆ ಕೆಡಿಸಿ= ಬುದ್ಧಿ ಭ್ರಮೇಣ ಮಾಡು
16) ಆಟ ನಡೆಯುವುದಿಲ್ಲ= ಪ್ರಭಾವ ಬೀರದು ಎಂದರ್ಥ
17) ಅಂಗೈಯಲ್ಲಿ= ಚೆನ್ನಾಗಿ ತಿಳಿದುಕೋ ಎಂದರ್ಥ
18) ಅಣ್ಣ ಕಿತ್ತುಕೊಂಡ= ಜೀವನಮಾರ್ಗ ಹಾಳುಮಾಡಿದ
19) ಅನ್ನದ ದಾರಿ= ಬದುಕುವ ಮಾರ್ಗ
20) ಅಗ್ರತಾಂಬೂಲ= ಮೊದಲ ಮರ್ಯಾದೆ
21) ಅಜ್ಜನ ಕಾಲದ= ಬಹಳ ಹಳೆಯ ಕಾಲದ್ದು
22) ಅಜ್ಜಿ ಕಥೆ= ಕಟ್ಟುಕಥೆ
23) ಕಾಲಿಗೆ ಬುದ್ಧಿ ಹೇಳು= ಓಡಿಹೋಗು
24) ಕಾಲುಕಿತ್ತು= ತ್ಯಜಿಸು
25) ಕೈ ಕೊಡು= ಮೋಸ ಮಾಡು
26) ಕೈಬಿಡು= ದೂರ ಬಿಡು
27) ಇಂಗು ತಿಂದ ಮಂಗ= ಕಂಗಾಲು ಪರಿಸ್ಥಿತಿ
28) ಮಾರ್ಜಾಲ ಸನ್ಯಾಸಿ= ಕಪಟ ಸನ್ಯಾಸಿ
29) ಮುಖಕ್ಕೆ ಮಂಗಳಾರತಿ ಎತ್ತು= ಅವಮಾನ ಮಾಡು
30) ಆಕಾಶಕ್ಕೆ ಏಣಿ ಹಾಕಿ= ಕೈ ಗೊಡಕ್ಕೆ ಪ್ರಯತ್ನಿಸು
31) ಎರಡು ನಾಲಿಗೆ= ಸುಳ್ಳ್ ಆಡುವುದು
32) ಮೂಗು ತೋರಿಸು= ಅನಗತ್ಯವಾಗಿ ಮಧ್ಯಪ್ರವೇಶಿಸುವುದು
33) ಬಾಲ ಬಿಚ್ಚು= ತೊಂದರೆ ಉಂಟು ಮಾಡುವುದು
34) ಟೋಪಿ ಹಾಕು= ಮೋಸ ಮಾಡುವುದು
35) ಮೊಸಳೆ ಕಣ್ಣೀರು= ಕಪಟ ದುಃಖ
36) ಕಣ್ಣಲ್ಲಿ ಜೀವ ಇಟ್ಟುಕೊಂಡು= ತುಂಬಾ ಆಸೆ ಇಟ್ಕೊಂಡು
37) ಮೈಯೆಲ್ಲಾ ಕಣ್ಣಾಗು= ತುಂಬಾ ಜಾಗೃತರಾಗಿರು
38) ಏಳು ಕೆರೆ ನೀರು ಕುಡಿಸು= ಬಹಳ ಕಷ್ಟ ಕೊಡು
39) ಕೋಪ ಮುಂಡೊಕ= ಸಂಕುಚಿತ ಮನಸ್ಸಿನವ
40) ಗಳಸ್ಯ- ಕಂಠಸ್ಯ= ಅತಿ ಆತ್ಮೀಯತೆ
41) ಉಷಾಕಾಲ ಎಂದರೆ= ಮುಂಜಾನೆಯ ಸಮಯ
42) ಕಣ್ಮಣಿ= ಅಚ್ಚು ಮೆಚ್ಚಿಗೆ
43) ಅಜಗಜಾಂತರ= ಆಡು- ಆನೆಯಷ್ಟು ವ್ಯತ್ಯಾಸ
44) ಉತ್ಸವಮೂರ್ತಿ= ಸದಾ ತಿರುಗಾಡುತ್ತಾ ಮರೆಯುವ ಸ್ವಭಾವದವ
45) ಸಂಧ್ಯಾಕಾಲ= ಇಳಿವಯಸ್ಸು
46) ಬುಡಮೇಲು ಮಾಡು= ಅಂದೋಲನ ಮಾಡು
47) ಮೂಲಕ್ಕೆ ಕೈ ಹಾಕು= ಕಾರಣ ಕೇಳು
48) ಮಾಡಿದ್ದುಣ್ಣೋ ಮಹಾರಾಯ= ಪರಿಣಾಮ ಅನುಭವಿಸು
49) ದೀಪದ ಕುಡಿ= ವಂಶೋದ್ಧಾರಕ
50) ಸಟ್ಟುಗ ಆಡಿಸು= ಮಧ್ಯಪ್ರವೇಶಿಸಿ
51) ಗಾಳಿ ದೀಪ= ಅಂತ್ಯ ಅವಸ್ಥೆ
52) ಬಟ್ಟೆ ಇಳಿಸು= ನಕಲು ತಯಾರಿಸು
53) ಕಣ್ಣಿಗೆ ಎಣ್ಣೆ ಹಾಕಿ ನೋಡು= ಎಚ್ಚರಿಕೆಯಿಂದ ಗಮನಿಸಿ
54) ಗೆದ್ದೆತ್ತಿನ ಬಾಲ ಹಿಡಿ= ಗೆಲ್ಲುವ ಪಕ್ಷವನ್ನು ಸೇರು
55) ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡು= ಸ್ಪಷ್ಟವಾದ ನಿಲುವನ್ನು ವ್ಯಕ್ತಪಡಿಸದಂತೆ ಮಾತನಾಡು
56) ಚಳ್ಳೆಹಣ್ಣು ತಿನ್ನಿಸಿ= ಮೋಸ ಮಾಡು
57) ದ್ರಾವಿಡ ಪ್ರಾಣಾಯಾಮ ಮಾಡು= ಸುತ್ತು ಬಳಸಿ ಮಾಡು
68) ಪಾತಾಳಗರಡಿ ಹಾಕು= ಚೆನ್ನಾಗಿ ಶೋಧಿಸು
69) ಉಪ್ಪಿನ ಪಟ್ಟಣವನ್ನು ಸೇರು= ಸುಖ ದೊರೆಯುವ ಪ್ರದೇಶಕ್ಕೆ ಹೋಗು
70) ಬಾಯಿಯಲ್ಲಿ ಚಿನ್ನದ ಚಮಚ ಇಟ್ಟುಕೊಂಡು ಹುಟ್ಟು= ಹುಟ್ಟುವಾಗಲೇ ಶ್ರೀಮಂತನಾಗಿರು
71) ಗುಡ್ಡಕ್ಕೆ ಕಲ್ಲು ಹೊರು= ವ್ಯರ್ಥ ಕೆಲಸ ಮಾಡು
72) ಸೆರಗಿನಲ್ಲಿ ಕೆಂಡ ಕಟ್ಟಿಕೊಳ್ಳುವ= ಅಪಾಯವನ್ನು ಬಳಿ ಇಟ್ಟುಕೊಳ್ಳು
73) ಕೆರೆದೊಳಗಿನ ಕಲ್ಲು= ಒಳಗಿದ್ದು ಕೀಟಲೆ ಮಾಡುವುದು
74) ಮೂಗುದಾರ ತೊಡಿಸು= ಹತೋಟಿಯಲ್ಲಿಡುವ
75) ಕಿವಿಯಲ್ಲಿ ಗಾಳಿಉದು= ಹುರಿದುಂಬಿಸು
76) ಉಂಡ ಮನೆಗಳ ಎಣಿಸು/ ಉಂಡ ಮನೆ ಜಂತೆ ಎಣಿಸು= ಉಪಕರಿಸಿ ದವರಿಗೆ ಅಪಕಾರ ಮಾಡು
77) ಎಳ್ಳು ನೀರು ಬಿಡು= ವಿಷಯವನ್ನು ಮನುಷ್ಯನಿಂದ ಬಿಟ್ಟುಬಿಡು
78) ಕೊನೆಯ ಮೊಳೆಗಳನ್ನು ಹೊಡೆ= ಚರ್ಚೆಗೆ ಅವಕಾಶವಿಲ್ಲದಂತೆ ತೀರ್ಮಾನ ಗೊಳಿಸು
79) ಹತ್ತರ ಜೊತೆಗೆ ಹನ್ನೊಂದ್ ಆಗಿರು= ಇತರರಂತೆ ಇರು
80) ಶ್ವೇತಪತ್ರ ಹೊರಡಿಸು= ವಿಷಯ ಸ್ಪಷ್ಟವಾಗುವಂತೆ ದಾಖಲೆ ನೀಡು
81) ಮನೆ ತೊಳೆದು ಹೋಗುವುದು= ಮನೆಯಲ್ಲಿ ಎಲ್ಲವನ್ನು ನಾಶಮಾಡುವುದು
82) ಬೇರಿಗೆ ಬಿಸಿನೀರು ಹುಯ್ಯುವುದು= ಮೂಲವನ್ನೇ ನಾಶ ಮಾಡುವುದು
83) ಕಂಕಣಬದ್ಧನಾಗು= ಸಂಕಲ್ಪ ಮಾಡು
84) ಹೊಟ್ಟೆ ಬಟ್ಟೆ ಕಟ್ಟು= ಮಿತವ್ಯಯ ಮಾಡಿ ಉಳಿಸು
85) ಹೊಟ್ಟೆಕಿಚ್ಚು= ಮತ್ಸರ ಪಡು
86) ಕಣ್ಣು ಮುಚ್ಚು= ನಿಧಾನವಾಗು
87) ಕಣ್ಣಿನಲ್ಲಿ ಕಿಡಿಕಾರು= ತುಂಬಾ ಸಿಟ್ಟಾಗು
88) ದಂತಕಥೆ= ಒಬ್ಬರಿಂದ ಇನ್ನೊಬ್ಬರು ಹೇಳಿ ಮುಂದುವರೆದುಕೊಂಡು ಬಂದ ಹಳ್ಳಿಯ ಕಥೆ
89) ಒಂದೇ ಬಳ್ಳಿಯ ಎರಡು ಹೂವುಗಳು= ಒಂದೇ ಮೂಲದವರು
90) ಮಣಿ ಹಾಕು= ಗೌರವ ನೀಡು
91) ತನ್ನೀರು ಎರಚು= ನಿರಾಸೆ ಉಂಟು ಮಾಡು
92) ಕಣ್ಣು ಬಿಟ್ಟು ನೋಡು= ಗಮನವಿಟ್ಟು ನೋಡು
93) ಹೊಟ್ಟೆಪಾಡು= ಜೀವನೋಪಾಯ
94) ಮೈಮರೆ= ತಲ್ಲಿನ ನಾಗು
95) ಕರತಾಲಮಲಕ= ಚೆನ್ನಾಗಿ ತಿಳಿದುಕೊಂಡದ್ದು
96) ಹೆಗಲು ಕೊಡು= ಸಹಾಯ ಮಾಡು
97) ಭೂಮಿಗೆ ಭಾರ= ನಿಷ್ಪ್ರಯೋಜಕ
98) ಬಿಳಿಯಾನಿ= ನಿರುಪಯುಕ್ತ ಬಾರಿ ಖರ್ಚಿನ ಹುದ್ದೆ
99) ಕಣ್ಣೆರೆ ಯುವುದು= ಜ್ಞಾನೋದಯ ವಾಗುವುದು
100) ಎತ್ತಿದ ಕೈ= ಪ್ರವೀಣ
101) ತಲೆ ತೊಳೆದುಕೊಳ್ಳು= ಸಂಬಂಧವನ್ನು ಸಂಪೂರ್ಣ ಕಳೆದುಕೊಳ್ಳು
102) ಭೂಮಿಗೆ ತೂಕದ ಮನುಷ್ಯ= ತಾಳ್ಮೆ ಗುಣದ ಮನುಷ್ಯ
103) ಗುಡ್ಡಕ್ಕೆ ಕಲ್ಲು ಹೊತ್ತ ಹಾಗೆ= ನಿರರ್ಥಕವಾದ ಕೆಲಸ
104) ಮೂಗುದಾರ ತೊಡಿಸು= ಹತೋಟಿಯಲ್ಲಿಡು
No comments:
Post a Comment