Monday, 22 March 2021

Questionnaires pertaining to Karnataka history heard in various competitive exams

  MahitiVedike Com       Monday, 22 March 2021


ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಿರುವ  ಕರ್ನಾಟಕ ಇತಿಹಾಸಕ್ಕೆ ಸಂಬಂಧಪಟ್ಟ  ಪ್ರಶ್ನೋತ್ತರಗಳು1) ದಿವಾನ್ ಪೂರ್ಣಯ್ಯನವರು ಯಾರ ಬಳಿ ದಿವಾನರಾಗಿದ್ದರು? 
 ಟಿಪ್ಪು ಸುಲ್ತಾನ್

2) ಮೈಸೂರು ಸಂಸ್ಥಾನದ ಕೊನೆಯ ಅರಸ ಯಾರು? 
 ಜಯಚಾಮರಾಜೇಂದ್ರ ಒಡೆಯರ್

3) ಮೈಸೂರು ಸಂಸ್ಥಾನವನ್ನು ಆಳಿದ ರಾಜರು ಎಷ್ಟು ಮಂದಿ? 
 24

4) ಚಾಲುಕ್ಯರ ದೊರೆಯಾದ ಹಿಮ್ಮಡಿ ಪುಲಿಕೇಶಿ ಸಿಂಹಾಸನವೇರಿದ ಕಾಲ? 
 ಕ್ರೀಶ 600

5) ಮರೆಯಲಾಗದ ಸಾಮ್ರಾಜ್ಯ ಎಂದು ಹೆಸರು ಮಾಡಿದ ಸಾಮ್ರಾಜ್ಯ? 
 ವಿಜಯನಗರ ಸಾಮ್ರಾಜ್ಯ
( ಗಾಂಧೀಜಿ ಅವರು ರಾಮರಾಜ್ಯ ಎಂದು ಕರೆದಿದ್ದಾರೆ)

6) ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಯಾದ ವರ್ಷ? 
 ಕ್ರೀಶ 1336

7) ವಿಜಯನಗರ ಸಾಮ್ರಾಜ್ಯ ಕಟ್ಟಲು ಮಾರ್ಗದರ್ಶಕರಾಗಿದ್ದ ಗುರುಗಳು? 
 ವಿದ್ಯಾರಣ್ಯಗುರುಗಳು

8) ವಿಜಯನಗರ ಸಾಮ್ರಾಜ್ಯದ ಅಂತ್ಯ ಯಾರ ಕಾಲದಲ್ಲಾಯಿತು? 
 ಅಳಿಯ ರಾಮರಾಯ

9) ವಿಜಯನಗರ ಸಾಮ್ರಾಜ್ಯದ ಅಂತ್ಯ ಹಾಡಿದ ಯುದ್ಧ ಯಾವುದು? 
 ತಾಳಿಕೋಟಿ ಯುದ್ಧ

10) ಎಲ್ಲೋರದ ಜಗತ್ಪ್ರಸಿದ್ದ ಕೈಲಾಸನಾಥ ದೇವಾಲಯವನ್ನು ಅಖಂಡತೆಯಲ್ಲಿ ಕೊರೆಸಿದ ಕನ್ನಡ ದೊರೆ ಯಾರು? 
 ಒಂದನೇ ಕೃಷ್ಣ

11) ಮೈಸೂರು ರಾಜ್ಯದಲ್ಲಿ ನಾಣ್ಯ ಮುದ್ರಣ ಪ್ರಾರಂಭವಾದದ್ದು ಯಾವಾಗ? 
 1640

12) ಕೃಷ್ಣದೇವರಾಯನು ಯಾವ ಮನೆತನಕ್ಕೆ ಸೇರಿದವನು? 
 ತುಳು ಮನೆತನ

13) ಮೈಸೂರು ಅರಸರ ಮೂಲಪುರುಷ ಯಾರು? 
 ಯದುರಾಯ

14) ಶಿವಾಜಿಯನ್ನು ಶ್ರೀರಂಗಪಟ್ಟಣದ ಯುದ್ಧದಲ್ಲಿ ಸೋಲಿಸಿದ ಮೈಸೂರು ಅರಸ ಯಾರು?
 ಚಿಕ್ಕದೇವರಾಜ ಒಡೆಯರ 

15) ನವಕೋಟಿ ನಾರಾಯಣ ಎಂಬ ಬಿರುದ್ಧ ಯಾವ ಅರಸನಿಗೆ ಇತ್ತು? 
 ಚಿಕ್ಕದೇವರಾಜ ಒಡೆಯರು ( ಕಾರಣ " ಅವನ ಖಜಾನೆಯಲ್ಲಿ 9 ಕೋಟಿ ಹಣ ಇದ್ದ ಕಾರಣ)

16) ಗಂಗರ ಸಾಮ್ರಾಜ್ಯವನ್ನು ಸ್ಥಾಪಿಸಿದವರು? 
  ದಡಿಗ

17) ರಾಷ್ಟ್ರಕೂಟರ ರಾಜ್ಯ ಲಾಂಛನ ಯಾವುದು? 
 ಗರುಡ

18) ಕನ್ನಡದ ಅತ್ಯಂತ ಹಳೆಯ ಶಾಸನ ಯಾವುದು? 
 ಹಲ್ಮಿಡಿ ಶಾಸನ

19) ಕನ್ನಡದ ಮೊದಲ ದೊರೆ ಯಾರು? 
 ಮಯೂರವರ್ಮ

20) ನಾಟ್ಯಾ ರಾಣಿ ಎಂಬ ಬಿರುದಿನಿಂದ ಯಾರನ್ನು ಕರೆಯುತ್ತಿದ್ದರು? 
 ಶಕುಂತಲಾ ದೇವಿ

21) ಮಂಡ್ಯದಲ್ಲಿನ ಸಕ್ಕರೆ ಕಾರ್ಖಾನೆಯು ಯಾರ ಕಾಲದಲ್ಲಿ ಸ್ಥಾಪನೆಯಾಯಿತು? 
 ಸರ್ ಮಿರ್ಜಾ ಇಸ್ಮಾಯಿಲ್

22) ಯಾರನ್ನು ಕನ್ನಡದ ಕಾಳಿದಾಸ ಎಂದು ಕರೆಯುತ್ತಾರೆ? 
 ಬಸಪ್ಪ ಶಾಸ್ತ್ರಿ

23) ಮೈಸೂರನ್ನು ಕರ್ನಾಟಕವೆಂದು ನಾಮಕರಣ ಮಾಡಿದಾಗ ಇದ್ದಾರ ಯಾರು? 
 ದೇವರಾಜ್ ಅರಸು (1973)

24) ಕರ್ನಾಟಕ ಸಭಾ ವನ್ನು ಯಾರು ಸ್ಥಾಪಿಸಿದರು? 
 ಆಲೂರು ವೆಂಕಟರಾಯ

25) ಅಂಕೋಲದಲ್ಲಿ ಯಾರ ನೇತೃತ್ವದಲ್ಲಿ ಉಪ್ಪಿನ ಸತ್ಯಾಗ್ರಹ ಪ್ರಾರಂಭವಾಯಿತು? 
 ಎಂ.ಪಿ ನಾಡಕರ್ಣಿ

26) ಕರ್ನಾಟಕ ಗತವೈಭವ ಎಂಬ ಗ್ರಂಥವನ್ನು ರಚಿಸಿದವರು ಯಾರು? 
 ಆಲೂರು ವೆಂಕಟರಾಯ

27) ಕರ್ನಾಟಕ ಜಲಿಯನ್ ವಾಲಾಬಾಗ್ ಎಂದು ಯಾವ ನಗರವನ್ನು ಕರೆಯುತ್ತಾರೆ? 
 ವಿದುರಾಶ್ವತ

28) ಈಸೂರು ಪ್ರಕಾರವು ಯಾವ ಚಳುವಳಿ ಕಾಲದಲ್ಲಿ ನಡೆಯಿತು? 
 ಭಾರತ ಬಿಟ್ಟು ತೊಲಗಿ ಚಳುವಳಿಯ ಕಾಲದಲ್ಲಿ

29) ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಎಂಬ ಗೀತೆಯನ್ನು ಬರೆದವರು ಯಾರು? 
 ಹುಯಿಗೊಳ್ ನಾರಾಯಣರಾವ್

30) ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿಕೊಂಡವರು ಯಾರು? 
 ಮಹಾತ್ಮ ಗಾಂಧೀಜಿ 1924

31) ಹಿಂದುಸ್ತಾನಿ ಸೇವಾದಳ ವನ್ನು ಸ್ಥಾಪಿಸಿದವರು ಯಾರು? 
 ಎನ್ ಎಸ್ ಹರ್ಡೇಕರ್

32) ಕರ್ನಾಟಕದ ಸಿಂಹ ಎಂದು ಜನಪ್ರಿಯರಾದವರು ಯಾರು? 
 ಗಂಗಾಧರ ದೇಶಪಾಂಡೆ

33) ಮ್ಯಾಜಿನಿ ಕ್ಲಬ್ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದವರು ಯಾರು? 
 ಹನುಮಂತರಾಯ ದೇಶಪಾಂಡೆ

34) ಸುರಪುರ ವೆಂಕಟಪ್ಪ ನಾಯಕ ಯಾವ ದಂಗೆಯಿಂದ ಪ್ರಭಾವಗೊಂಡರು? 
 1857 ಸಿಪಾಯಿ ದಂಗೆ

35) ಯಾವ ಕಾಯ್ದೆಯ ವಿರುದ್ಧ ಹಲಗಲಿಯ ಬೇಡರು ಬ್ರಿಟಿಷರ ವಿರುದ್ಧ ದಂಗೆ ಎದ್ದರು? 
 ಶಶಸ್ತ್ರ ಕಾಯ್ದೆ

36) ಬ್ರಿಟಿಷರು ಕೊಡಗನ್ನು ಯಾವಾಗ ವಶಪಡಿಸಿಕೊಂಡರು? 
 1834

37) ನಗರ ದಂಗೆಯ ನೇತೃತ್ವ ವಹಿಸಿಕೊಂಡರು ಯಾರು? 
 ಬೂದಿ ಬಸಪ್ಪ 1831

38) ಕಿತ್ತೂರಿನ ದಂಗೆ ಯಾವಾಗ ಪ್ರಾರಂಭವಾಯಿತು? 
 1824

39) ಬೃಂದಾವನ ಉದ್ಯಾನವನ್ನು ಯಾರು ನಿರ್ಮಿಸಿದರು? 
 ಸರ್ ಮಿರ್ಜಾ ಇಸ್ಮಾಯಿಲ್

40) ಆಧುನಿಕ ಮೈಸೂರು ನಿರ್ಮಾಪಕ ಎಂದು ಯಾರನ್ನು ಕರೆಯುತ್ತಾರೆ? 
 ಸರ್ ಎಂ ವಿಶ್ವೇಶ್ವರಯ್ಯ

41) ಮೈಸೂರು ವಿಶ್ವವಿದ್ಯಾಲಯ ಯಾವಾಗ ಪ್ರಾರಂಭವಾಯಿತು? 
 1916

42) ಯಾರನ್ನು ರಾಜ್ಯ ಋಷಿ ಎಂದು ಕರೆಯುತ್ತಾರೆ?
 ನಾಲ್ವಡಿ ಕೃಷ್ಣರಾಜ ಒಡೆಯರು 

43) ಯಾವ ದಿವಾನರ ಕಾಲದಲ್ಲಿ ಮೈಸೂರು ಸಿವಿಲ್ ಪರೀಕ್ಷೆ ಪ್ರಾರಂಭವಾಯಿತು? 
 ಶೇಷಾದ್ರಿ ಅಯ್ಯರ್

44) ಯಾವಾಗ ಮೈಸೂರನ್ನು ಬ್ರಿಟಿಷರು ವಶಪಡಿಸಿಕೊಂಡರು? 
 1831ರ ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ

45) ಯಾವ ಒಪ್ಪಂದ ಪ್ರಕಾರವಾಗಿ ಟಿಪ್ಪು ತನ್ನ ಮಕ್ಕಳನ್ನು ಒತ್ತೆಯಾಳಾಗಿ ಇಡಲಾಯಿತು? 
 ಶ್ರೀರಂಗಪಟ್ಟಣ ಒಪ್ಪಂದ ಪ್ರಕಾರ

46) ಮೂರನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಬ್ರಿಟಿಷರ ಸೇನಾಧಿಕಾರಿ ಯಾರು?
 ಲಾರ್ಡ್ ಕಾರ್ನವಾಲಿಸ್

47) ಎರಡನೇ ಮೈಸೂರ್ ಇದು ಯಾವ ಒಪ್ಪಂದದಿಂದ ಮುಕ್ತಾಯವಾಯಿತು? 
 ಮಂಗಳೂರು ಒಪ್ಪಂದ

48) ಹೈದರಾಲಿಯು ಯಾವ ಯುದ್ಧದಲ್ಲಿ ಮರಣಹೊಂದಿದನು? 
 ಎರಡನೇ ಆಂಗ್ಲೋ ಮೈಸೂರು ಯುದ್ಧದಲ್ಲಿ

49) ಮೊದಲನೇ ಆಂಗ್ಲೋ ಮೈಸೂರ್ ಯುದ್ಧ ಯಾವ  ಒಪ್ಪಂದದಿಂದ ಮುಕ್ತಾಯವಾಯಿತು? 
 ಮದ್ರಾಸ್ ಒಪ್ಪಂದ

50) ಹದಿಬದೆಯ ಧರ್ಮದ ಕರ್ತೃ ಯಾರು? 
 ಸಂಚಿಹೊನ್ನಮ್ಮ

51) ಸಂಚಿ ಹೊನ್ನಮ್ಮಳ ಯಾರ ಆಸ್ಥಾನದಲ್ಲಿದ್ದರು? 
 ಚಿಕ್ಕದೇವರಾಜ ಒಡೆಯರು

52) ಕನ್ನಡದ ಮೊದಲ ನಾಟಕ? 
 ಮಿತ್ರವಿಂದ ಗೋವಿಂದ

53) ಎರಡನೇ ಇಬ್ರಾಹಿಮ್ ಆದಿಲ್ ಶಾನ ರಚಿಸಿದ ಕೃತಿ? 
 ಕಿತಾಬ್ ಇ ನವರಸ್

54) ಮಹಮ್ಮದ್ ಗವಾನನ ಮರಣಕ್ಕೆ ಗುರಿಮಾಡಿದ ದೊರೆ ಯಾರು? 
 ಮೂರನೇ ಮಹಮ್ಮದ್ ಷಾ

55) ಡೋಮಿಂಗೋ ಪಯಾಸ್ ಯಾರ ಕಾಲದಲ್ಲಿ ವಿಜಯನಗರ'ಕ್ಕೆ ಭೇಟಿಕೊಟ್ಟನು? 
 ಕೃಷ್ಣದೇವರಾಯ

56) ವಿಜಯನಗರ ಕಾಲದಲ್ಲಿ ವರ್ಣ ಚಿತ್ರಕಲೆಯ ಪ್ರಮುಖ ಕೇಂದ್ರ? 
 ಲೇಪಾಕ್ಷಿ

57) ವಿಜಯನಗರ ಸಾಮ್ರಾಜ್ಯದ ಹಡಗು ನಿರ್ಮಾಣ ಕೇಂದ್ರ ಯಾವುದು?
 ಕ್ಯಾಲಿಕಟ್ 

58) ಗಂಗಾದೇವಿ ರಚಿಸಿದ ಕೃತಿ ಯಾವುದು? 
 ಮಧುರಾವಿಜಯಂ

59) ಕುಮಾರವ್ಯಾಸನೂ ರಚಿಸಿದ ಕೃತಿ? 
 ಕರ್ನಾಟಕದ ಕಥಾಮಂಜರಿ

60) ಅಲ್ಲಸನಿ ಪೆದ್ದನ ರಚಿಸಿದ ಕೃತಿ? 
 ಮನುಚರಿತಂ

61) ಇಮ್ಮಡಿ ದೇವರಾಯನ ಕಾಲದಲ್ಲಿ ಭೇಟಿ ಕೊಟ್ಟ ಪರ್ಷಿಯಾದ ರಾಯಬಾರಿ? 
 ಅಬ್ದುಲ್ ರಜಾಕ್

62) ಶಂಕರಾಚಾರ್ಯರು ಉತ್ತರದಲ್ಲಿ ಸ್ಥಾಪಿಸಿದ ಮಠ ಯಾವುದು? 
 ಜ್ಯೋತಿರ್ ಮಠ

63) ಮಧ್ವಾಚಾರ್ಯರು ಎಲ್ಲಿಂದ ಕೃಷ್ಣನ ವಿಗ್ರಹವನ್ನು ತಂದು ಉಡುಪಿಯಲ್ಲಿ ಪ್ರತಿಷ್ಠಾಪಿಸಿದರು? 
  ದ್ವಾರಕಾ ಯಿಂದ

64) ರಾಮಾನುಚಾರ್ಯರು ಯಾವ ಮಠದ ಮಠಾಧಿಪತಿ ಯಾಗಿದ್ದರು? 
 ಶ್ರೀರಂಗಂ

65) ಶಂಕರಾಚಾರ್ಯರು ಕರ್ನಾಟಕದಲ್ಲಿ ಎಲ್ಲಿ ಮಠವನ್ನು ಸ್ಥಾಪಿಸಿದರು? 
 ಶೃಂಗೇರಿ

66) ವಿಜಯನಗರ ಸಾಮ್ರಾಜ್ಯವನ್ನು ಆಳಿದ ಪ್ರಥಮ ಮನೆತನ ಯಾವುದು? 
 ಸಂಗಮ ಮನೆತನ

67) ಬೇಲೂರಿನ  ಚನ್ನಕೇಶವ ದೇವಾಲಯವನ್ನು ನಿರ್ಮಾಣ ಮಾಡಿದವರು ಯಾರು?
 ವಿಷ್ಣುವರ್ಧನ 

68) ವಿಷ್ಣುವರ್ಧನನ ಆಶ್ರಯ ಪಡೆದ ವೈಷ್ಣವ ಗುರು ಯಾರು? 
 ರಾಮಾನುಜಚಾರ್ಯ

69) ಬಸವೇಶ್ವರರು ಯಾವ ರಾಜನ ಪ್ರಧಾನ ಮಂತ್ರಿ ಆಗಿದ್ದರು? 
 ಎರಡನೇ ಬಿಜ್ಜಳನ ಅರಸನಲ್ಲಿ

70) ಯಾವ ದೊರೆಯನ್ನು ಸರ್ವಜ್ಞ ಚಕ್ರವರ್ತಿ ಎಂದು ಕರೆಯುತ್ತಾರೆ? 
 ಮೂರನೇ ಸೋಮೇಶ್ವರ

@gkmasteracademy21-03-2021

"ದಿನಕ್ಕೊಂದು ಕವಿ ವಿಶೇಷ "

ಉಡುಪಿ ರಾಜಗೋಪಾಲಾಚಾರ್ಯ  ಅನಂತಮೂರ್ತಿ

  ಯು ಆರ್ ಅನಂತಮೂರ್ತಿ

 ಜನನ: 31- ಡಿಸೆಂಬರ್ - 1932

 ಸ್ಥಳ ಶಿಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಭಾರತೀಪುರ (ಮೇಳಿಗೆ )

 ತಂದೆ-ತಾಯಿ - ರಾಜಗೋಪಾಲಚಾರ್ಯ  ಸತ್ಯಭಾಮ. 

 ವೃತ್ತಿ: ಕೇರಳದ ಕೊಟ್ಟಾಯಂ ಗಾಂಧಿ ವಿಶ್ವವಿದ್ಯಾಲಯದ ಕುಲಪತಿ ಮತ್ತು  ಮೈಸೂರು ವಿಶ್ವವಿದ್ಯಾಲಯದ ರೀಡರ್,  ಪ್ರಾಧ್ಯಾಪಕರಾಗಿದ್ದರು. 

 ನಿಧನ :  22- ಅಗಸ್ಟ್- 2014

       ಸಾಹಿತಿಕ ಜೀವನ

 ಕಥಾಸಂಕಲನಗಳು : ಮೂರು ದಶಕದ ಕಥೆಗಳು, ಎಂದೆಂದೂ ಮುಗಿಯದ ಕಥೆ, ಪ್ರಶ್ನೆ,  ಆಕಾಶ ಮತ್ತು ಬೆಕ್ಕು, ಮೌನಿ, ನವಿಲುಗಳು, ಸೂರ್ಯನ ಕುದುರೆ,  ಕ್ಲಿಪ್ ಜಾಯಿಂಟ್,  ಕಾರ್ತಿಕ. 

 ಕವನಸಂಕಲನಗಳು: ಮಿಥುನ, 15 ಪದ್ಯಗಳು,  ಅಜ್ಜನ ಹೆಗಲ ಸುಕ್ಕುಗಳು. 

 ವಿಮರ್ಶಾ ಕೃತಿಗಳು : ಬೆತ್ತಲೆ ಪೂಜೆ ಯಾಕೆ ಕೂಡದು, ನವ್ಯ ಲೋಕ, ಸನ್ನಿವೇಶ, ಪ್ರಜ್ಞೆ ಮತ್ತು ಪರಿಸರ, ಸಮಕ್ಷಮ,  ಸಂಸ್ಕೃತಿ ಮತ್ತು ಅಡಿಗ.

 ನಾಟಕ : ಆವಾಹನ

 ಕಾದಂಬರಿಗಳು: ಭಾರತೀಪುರ, ಅವಸ್ಥೆ,  ಬರ, ಘಟಶ್ರಾದ್ಧ, ದಿವ್ಯ, ಸಂಸ್ಕಾರ. 

 ಭಾಷಾಂತರ:  ಲಾವೋತ್ಸೆಮ ಕವನಗಳು, ದಾವದ್ ಜಿಂಗ್.  

       ಪ್ರಶಸ್ತಿಗಳು 

 ಜ್ಞಾನಪೀಠ ಪ್ರಶಸ್ತಿ ---1994  (ಸಮಗ್ರ ಸಾಹಿತ್ಯ) ಪೂರ್ವಾಪರ ವಿಮರ್ಶಾ ಲೇಖನಗಳನ್ನು ಒಳಗೊಂಡ ಕೃತಿ.

 ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ -- 1983

 ಮಾಸ್ತಿ ಪ್ರಶಸ್ತಿ -- 1994

 ಪದ್ಮಭೂಷಣ ಪ್ರಶಸ್ತಿ -- 1998

 ಮಹಮ್ಮದ್ ಬಶೀರ್ ಪ್ರಶಸ್ತಿ --- 2011
    (ಕೇರಳದ ಪ್ರವಾಸ ಟ್ರಸ್ಟ್ನ 18ನೇ ಪ್ರಶಸ್ತಿಗೆ ಭಾಜನರಾಗಿದ್ದರು)

 ಬಸವ ಪ್ರಶಸ್ತಿ --2012


ವಿಶೇಷ ಅಂಶಗಳು

 1993 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.

 2002ರಲ್ಲಿ ತುಮಕೂರಿನಲ್ಲಿ ನಡೆದ 69ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

 ಕನ್ನಡದ ನವ್ಯ ಪರಂಪರೆಯ ಪ್ರಮುಖ ಲೇಖಕರಾಗಿದ್ದರು.

 ಇವರ ಬರಹಗಳಾದ : ನಾನು ಹಿಂದೂ,  ಮೀಸಲಾತಿ, ತುರ್ತುಪರಿಸ್ಥಿತಿ, ಬ್ರಾಹ್ಮಣ ಮೊದಲಾದ ವಿಷಯಗಳ ಮೇಲೆ ವೈಚಾರಿಕ ವಿವಾದಗಳು ಸೃಷ್ಟಿ ಆಗಿದ್ದವು.

 ಇವರ ಕೃತಿಗಳಾದ: ಸಂಸ್ಕಾರ, ಘಟಶ್ರಾದ್ಧ, ಅವನೇ ಮತ್ತು ಅವಸ್ಥೆ ಇವು ಚಲನಚಿತ್ರಗಳಾಗಿವೆ 
 ಈ ಚಿತ್ರಗಳಿ0ದ ಅನಂತಮೂರ್ತಿಯವರಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಸಂದಿವೆ.

logoblog

Thanks for reading Questionnaires pertaining to Karnataka history heard in various competitive exams

Previous
« Prev Post

No comments:

Post a Comment