Friday 5 March 2021

Questionnaires heard by various competing party

  MahitiVedike Com       Friday 5 March 2021
 

ಹೃದಯ ದ ಮೇಲೆ ವಿವಿಧ ಸ್ಪರ್ಧಾತ್ಮಕ ಪಕ್ಷದ ಕೇಳಿರುವ ಪ್ರಶ್ನೋತ್ತರಗಳು,

     ಉತ್ತರಗಳ ಜೊತೆಗೆ ವಿವರಣೆ ಯನ್ನು ನೀಡಲಾಗಿದೆ


1)ಹೃದಯದ ಬಡಿತವನ್ನು ಕಂಡು ಹಿಡಿಯುವ ಸಾಧನ ಯಾವುದು?
 *ಸ್ಟೆತೆಸ್ಕೋಪ್*

"ಹೃದಯದ ಬಡಿತವನ್ನು ಕಂಡು ಹಿಡಿಯುಲು ಬಳಸುವ ಸಾಧನ ಸ್ಟೆತೆಸ್ಕೋಪ್. 1819ನೇ ಇಸವಿಯಲ್ಲಿ ಫಾನ್ಸ್ ದೇಶದ ವಿಜ್ಞಾನಿ 'ರೇನೆ ಲೆನೆಕ್' ಎಂಬುವವನು ಸ್ಟೆತೆಸ್ಕೋಪ್ ಸಾಧನವನ್ನು ಕಂಡು ಹಿಡಿದನು."

2)ಹೃದಯವನ್ನು ಆವರಿಸಿರುವ ಇಪ್ಪರದ ಪೊರೆ ಯಾವುದು?
  *ಪೆರಿಕಾರ್ಡಿಯಂ*

"ಹೃದಯವು ’ಹೃದಯಾವರಣ’(Pericardium) ಎಂಬ ಇಪ್ಪದರ ಪೊರೆಯಿಂದ ಆವರಿಸಲ್ಪಟ್ಟಿದೆ. ಈ ಪದರಗಳ ನಡುವೆ ಇರುವ ’ಪೆರಿಕಾರ್ಡಿಯಲ್ ದ್ರವ’ ಹೃದಯವನ್ನು ಯಾಂತ್ರಿಕ ಆಘಾತ ಮತ್ತು ಘರ್ಷಣೆಗಳಿಂದ ರಕ್ಷಿಸುತ್ತದೆ."


3)ಅಪಧಮನಿಗಳು ಮತ್ತು ಅಭಿಧಮನಿಗಳನ್ನು ಸೇರಿಸುವ ಸೂಕ್ಮ ರಕ್ತನಾಳ ಯಾವುದು?
 *ಲೋಮನಾಳಗಳು*

"ಅಪಧಮನಿಗಳು ಮತ್ತು ಅಭಿಧಮನಿಗಳನ್ನು ಸೇರಿಸುವ ಸೂಕ್ಮ ರಕ್ತನಾಳ ಲೋಮನಾಳ. ರಕ್ತವು ಮಹಾ ಅಪಧಮನಿಯ ಕವಲುಗಳ ಮೂಲಕ ಅಂಗಾಂಶದಲ್ಲಿ ಹರಡಿರುವ ಲೋಮನಾಳಗಳ ಬಲೆಯ ಮೂಲಕ ಅಭಿಧಮನಿಮನಿಗಳಿಗೆ ಸಾಗಿ ನಂತರ ಹೃತ್ಕರ್ಣಗಳನ್ನು ಸೇರುತ್ತವೆ."


4)ದೇಹದ ಎಲ್ಲಾ ಭಾಗಗಳಿಂದ ರಕ್ತವನ್ನು ಹೃದಯಕ್ಕೆ ತರುವ ರಕ್ತನಾಳ ಯಾವುದು?
 *ಅಭಿಧಮನಿ*

"ದೇಹದ ಎಲ್ಲಾ ಭಾಗಗಳಿಂದ ರಕ್ತವನ್ನು ಹೃದಯಕ್ಕೆ ತರುವ ರಕ್ತನಾಳ ಅಭಿಧಮನಿ. ದೇಹದ ಎಲ್ಲಾ ಭಾಗಗಳಿಂದ ಆಮ್ಲಜನಕ ಸಹಿತ ರಕ್ತವನ್ನು ತರುವ ’ಊರ್ಧ್ವ’ ಮತ್ತು ’ಅಧೋ ಅಭಿಧಮನಿಗಳು’ ಹೃದಯದ ಬಲ ಹೃತ್ಕರ್ಣಕ್ಕೆ ತೆರೆಯುತ್ತವೆ. ಶ್ವಾಸಕೋಶಗಳಿಂದ ಆಕ್ಸಿಜನ್ ಸಹಿತ ರಕ್ತವನ್ನು ತರುವ ಎರಡು ’ಪುಪ್ಪುಸಕ ಅಭಿಧಮನಿಗಳು’ ಎರಡು ಹೃತ್ಕರ್ಣಕ್ಕೆ ತೆರೆಯುತ್ತವೆ."


5)ಹೃದಯದಿಂದ ಎಲ್ಲಾ ಭಾಗಗಳಿಗೂ ರಕ್ತವನ್ನು ತೆಗೆದುಕೊಂಡು ಹೋಗುವ ರಕ್ತನಾಳ ಯಾವುದು?
  *ಅಪಧಮನಿ*

"ಹೃದಯದಿಂದ ಎಲ್ಲಾ ಭಾಗಗಳಿಗೂ ರಕ್ತವನ್ನು ತೆಗೆದುಕೊಂಡು ಹೋಗುವ ರಕ್ತನಾಳ ಅಪಧಮನಿ. ದೇಹದ ಎಲ್ಲಾ ಭಾಗಗಳಿಗೂ ಆಕ್ಸಿಜನ ಸಹಿತ ರಕ್ತವನ್ನು ಒಯ್ಯುವ ’ಮಹಾ ಅಪಧಮನಿ’ ಎಡ ಹೃತ್ಕುಕ್ಷಿಯಿಂದ ಹೊರಡುತ್ತದೆ. ಮಹಾ ಅಪಧಮನಿಯಿಂದ ಹೊರಡುವ ’ಕರೋನರಿ ಅಪಧಮನಿ’ಯ ಬಲ ಮತ್ತು ಎಡ ಕವಲುಗಳು ಆಕ್ಸಿಜನ್ ಸಹಿತ ರಕ್ತವನ್ನು ಹೃದಯದ ಸ್ನಾಯುಗಳಿಗೆ ಒದಗಿಸುತ್ತವೆ."

6)ಮಾನವನ ಹೃದಯದಲ್ಲಿ ಎಷ್ಟು ಕೋಣೆಗಳಿವೆ?
 *ನಾಲ್ಕು*

"ಮಾನವನ ಹೃದಯದಲ್ಲಿ ನಾಲ್ಕು ಕೋಣೆಗಳಿವೆ. ಮಾನವನ ಹೃದಯದ ಮೇಲಿರುವ ಎರಡು ಕೋಣೆಗಳನ್ನು ’ಹೃತ್ಕರ್ಣ’ (Auricles) ಗಳೆಂದು ಕರೆಯುತ್ತಾರೆ. ಮತ್ತು ಕೆಳಗಿನ ಎರಡು ಕೋಣೆಗಳನ್ನು ’ಹೃತ್ಕುಕ್ಷಿ’(Ventricles)ಗಳೆಂದು ಕರೆಯುತ್ತಾರೆ."


7)ಬಲ ಹೃತ್ಕರ್ಣ ಮತ್ತು ಬಲ ಹೃತ್ಕುಕ್ಷಿಗಳ ನಡುವೆ ಇರುವ ಕವಾಟ ಯಾವುದು?
 *ತ್ರಿದಳ ಕವಾಟ*

"ಬಲ ಹೃತ್ಕರ್ಣ ಮತ್ತು ಬಲ ಹೃತ್ಕುಕ್ಷಿಯ ನಡುವೆ ’ತ್ರಿದಳ ಕವಾಟ’ವಿದೆ. ಎಡ ಹೃತ್ಕರ್ಣ ಮತ್ತು ಎಡ ಹೃತ್ಕುಕ್ಷಿಯ ನಡುವೆ ’ದ್ವಿದಳ ಕವಾಟ’ವಿದೆ. ಈ ಕವಾಟಗಳು ರಕ್ತವು ಹೃತ್ಕುಕ್ಷಿಗಳಿಂದ ಹೃತ್ಕರ್ಣಗಳಿಗೆ ಹರಿಯುವುದನ್ನು ತಡೆಯುತ್ತದೆ."


8)ದೊಡ್ಡದಾದ ಅಭಿಧಮನಿ ಯಾವುದು?
  *ಅಧೋ ಅಭಿಧಮನಿ*

"ದೊಡ್ಡದಾದ ಅಭಿಧಮನಿಯ ಹೆಸರು 'ಅಧೋ ಅಭಿಧಮನಿ'. ದೊಡ್ಡದಾದ ಅಪಧಮನಿಯ ಹೆಸರು ಮಹಾ ಅಪಧಮನಿ."

9)ಹೃದಯದ ಕೋಣೆಗಳ ಸಂಕೋಚನಾ ಕ್ರಿಯೆಗೆ ಏನೆಂದು ಕರೆಯುತ್ತಾರೆ?
 *ಸಿಸ್ಟೋಲ್*

"ಹೃದಯದ ಕೋಣೆಗಳ ಸಂಕೋಚನಾ ಕ್ರಿಯೆಗೆ ಸಿಸ್ಟೋಲ್ ಕರೆಯುತ್ತಾರೆ. ಹೃದಯದ ಕೋಣೆಗಳ ವಿಕಸನ ಕ್ರಿಯೆಗೆ ’ಡಯಾಸ್ಟೋಲ್’ ಎಂದು ಕರೆಯುತ್ತಾರೆ. ಒಂದು ಸಿಸ್ಟೋಲ್ ಮತ್ತು ಒಂದು ಡಯಾಸ್ಟೋಲ್ ಸೇರಿ ಒಂದು ’ಹೃದಯದ ಬಡಿತ’ ವಾಗುತ್ತದೆ."

10)ಹೃದಯಕ್ಕೂ ಶ್ವಾಸಕೋಶಗಳಿಗೂ ನಡುವಿನ ರಕ್ತ ಪರಿಚಲನೆಯನ್ನು ಏನೆಂದು ಕರೆಯುವರು?
  *ಪುಪ್ಪಸಕ ಪರಿಚಲನೆ*

"ಹೃದಯಕ್ಕೂ ಶ್ವಾಸಕೋಶಗಳಿಗೂ ನಡುವಿನ ರಕ್ತಪರಿಚಲನೆಯ ಪಥವನ್ನು 'ಪುಪ್ಪಸಕ ಪರಿಚಲನೆ'ಎನ್ನುವರು. ಆಮ್ಮಜನಕ ರಹಿತ ರಕ್ತವು ಹೃತ್ಕುಕ್ಷಿಯಿಂದ ಪುಪ್ಪಸಕ ಅಭಿಧಮನಿ ಹಾಗೂ ಅದರ ಶಾಖೆಗಳ ಮೂಲಕ ಶ್ವಾಸಕೋಶಗಳಲ್ಲಿರುವ ಲೋಮನಾಳಗಳ ಬಲೆಯಲ್ಲಿ ಹರಿಯುತ್ತದೆ. ವಿಸರಣದಿಂದ ವಾಯುಕೋಶಗಳಲ್ಲಿರುವ ಆಕ್ಸಿಜನ್ ಪಡೆದು ಕಾರ್ಬನ್ ಡೈ ಆಕ್ಸೈಡನ್ನು ವಾಯುಕೋಶಗಳಿಗೆ ಬಿಡುಗಡೆ ಮಾಡಿ ಅಕ್ಸಿಜನ್ ಸಹಿತ ರಕ್ತವಾಗಿ ಪುಪ್ಪಸಕ ಅಭಿಧಮನಿಗಳ ಮೂಲಕ ಎಡ ಹೃತ್ಕರ್ಣಕ್ಕೆ ಹಿಂದಿರುಗುತ್ತದೆ."

11)ಅಪಧಮನಿಗಳ ಗೋಡೆಗಳಲ್ಲಿ ರಕ್ತದ ಚಲನೆಯಿಂದ ಉಂಟಾಗುವ ಅಲೆಯಂತಹ ಚಲನೆಯನ್ನು _______ ಎನ್ನುವರು.
 *ನಾಡಿ ಮಿಡಿತ*

"ಎಡ ಹೃತ್ಕುಕ್ಷಿಯು ಸಂಕುಚಿಸಿದಾಗ ರಕ್ತವು ಮಹಾ ಅಪಧಮನಿ ನಂತರ ಅದರ ಕವಲುಗಳಲ್ಲಿ ನುಗ್ಗುತ್ತದೆ. ಹೀಗೆ ನುಗ್ಗಿದಾಗ ಸ್ಥಿತಿಸ್ಥಾಪಕ ಶಕ್ಯಿಯುಳ್ಳ ಅಪಧಮನಿಯ ಗೋಡೆ ರಕ್ತ ಮುಂದಕ್ಕೆ ಹರಿಯುವಾಗ ಕುಗ್ಗುತ್ತದೆ. ಇದರಿಂದ ಅಪಧಮನಿಯ ಗೋಡೆಯಲ್ಲಿ ಅಲೆಯಂತಹ ಚಲನೆ ಏರ್ಪಡುತ್ತದೆ. ಇದನ್ನೇ ನಾವು ’ನಾಡಿ ಮಿಡಿತ’ (ಪಲ್ಸ್) ಎಂದು ಕರೆಯುವುದು. ಹೃದಯದ ಮಿಡಿತದಷ್ಟೇ ನಾಡಿಬಡಿತವಿರುತ್ತದೆ."

12)ಒಬ್ಬ ಆರೋಗ್ಯವಂತ ವ್ಯಕ್ತಿಯ ಹೃದಯ ಒಂದು ನಿಮಿಷಕ್ಕೆ ಎಷ್ಟು ಬಾರಿ ಬಡಿದುಕೊಳ್ಳುತ್ತದೆ?
  *72 ಬಾರಿ*

"ಒಬ್ಬ ಆರೋಗ್ಯವಂತ ಮನುಷ್ಯನ ಹೃದಯ ಬಡಿತ ನಿಮಿಷಕ್ಕೆ 72ಬಾರಿ ಬಡಿದುಕೊಳ್ಳುತ್ತದೆ. ಹೃದಯ ಬಡಿತವನ್ನು ಅಳೆಯಲು ;ಸ್ಟೆತೆಸ್ಕೋಪ್' ಎಂಬ ಉಪಕರಣವನ್ನು ಬಳಸುತ್ತಾರೆ."

13)ಹೃದಯ ಸ್ನಾಯುಗಳಿಗೆ ಆಮ್ಲಜನಕ ಸಹಿತ ರಕ್ತವನ್ನು ಸರಬರಾಜು ಮಾಡುವ ಅಪಧಮನಿ ಯಾವುದು?
  *ಕರೋನರಿ ಅಪಧಮನಿ*

"ಹೃದಯ ಸ್ನಾಯುಗಳಿಗೆ ಆಮ್ಲಜನಕ ಸಹಿತ ರಕ್ತವನ್ನು ಸರಬರಾಜು ಮಾಡುವ ಅಪಧಮನಿ ಕರೋನರಿ ಅಪಧಮನಿ. ಮಹಾ ಅಪಧಮನಿಯಿಂದ ಹೊರಡುವ ’ಕರೋನರಿ ಅಪಧಮನಿ’ಯ ಬಲ ಮತ್ತು ಎಡ ಕವಲುಗಳು ಆಕ್ಸಿಜನ್ ಸಹಿತ ರಕ್ತವನ್ನು ಹೃದಯದ ಸ್ನಾಯುಗಳಿಗೆ ಒದಗಿಸುತ್ತವೆ."

14)ಆಮ್ಲಜನಕ ರಹಿತ ರಕ್ತವನ್ನು ಬಲಹೃತ್ಕರ್ಣಕ್ಕೆ ಒಯ್ಯುವ ರಕ್ತನಾಳ ಯಾವುದು?
  *ಕರೋನರಿ ಸೈನಸ್*

"’ಕರೋನರಿ ಸೈನಸ್’ ಎಂಬ ಅಭಿಧಮನಿ ಆಕ್ಸಿಜನ್ ರಹಿತ ರಕ್ತವನ್ನು ಬಲ ಹೃತ್ಕರ್ಣಕ್ಕೆ ಒಯ್ಯುತ್ತದೆ. ಶ್ವಾಸಕೋಶಗಳಿಂದ ಆಮ್ಲಜನಕ ಸಹಿತ ರಕ್ತವನ್ನು ಹೃದಯದ ಎಡ ಹೃತ್ಕರ್ಣಕ್ಕೆ ತರುವ ಅಭಿಧಮನಿ ಪುಪ್ಪುಸಕ ಆಭಿಧಮನಿ."

15)ರಕ್ತವನ್ನು ಹೊರಕ್ಕೆ ಪಂಪು ಮಾಡುವ ಹೃದಯದ ಕೋಣೆ ಯಾವುದು?
 *ಹೃತ್ಕುರ್ಷಿ*

"ರಕ್ತವನ್ನು ಹೊರಕ್ಕೆ ಪಂಪು ಮಾಡುವ ಹೃದಯದ ಕೋಣೆ ಹೃತ್ಕುರ್ಷಿ. ರಕ್ತವನ್ನು ಒಳಗೆ ತೆಗೆದುಕೊಳ್ಳುವ ಹೃದಯದ ಕೋಣೆ ಹೃತ್ಕರ್ಣ"

16)ಮೂತ್ರ ಪಿಂಡಗಳಿಂದ ರಕ್ತವನ್ನು ಹೃದಯಕ್ಕೆ ತೆಗೆದುಕೊಂಡು ಹೋಗುವ ರಕ್ತನಾಳ ಯಾವುದು?
 *ರೀನಲ್ ಅಪಧಮನಿ*

ಮೂತ್ರ ಪಿಂಡಗಳಿಂದ ರಕ್ತವನ್ನು ಹೃದಯಕ್ಕೆ ತೆಗೆದುಕೊಂಡು ಹೋಗುವ ರಕ್ತನಾಳ ರೀನಲ್ ಅಭಿಧಮನಿ. ಮೂತ್ರ ಪಿಂಡಗಳಿಗೆ ಹೃದಯದಿಂದ ರಕ್ತವನ್ನು ಸರಬರಾಜು ಮಾಡುವ ರಕ್ತನಾಳ ರೀನಲ್ ಅಪಧಮನಿ.

17)ಒಂದು ಹೃದಯ ಬಡಿತಕ್ಕೆ ಒಂದು ಹೃತ್ಕುಕ್ಷಿಯಿಂದ ಹೊರಬರುವ ರಕ್ತದ ಪ್ರಮಾಣವನ್ನು ಏನೆಂದು ಕರೆಯುತ್ತಾರೆ?
 *ಸ್ಟ್ರೋಕ್‌ವ್ಯಾಲೂಂ*

"ಒಂದು ಹೃದಯ ಬಡಿತಕ್ಕೆ ಒಂದು ಹೃತ್ಕುಕ್ಷಿಯಿಂದ ಹೊರಬರುವ ರಕ್ತದ ಪ್ರಮಾಣವನ್ನು ಸ್ಟ್ರೋಕ್‌ವ್ಯಾಲೂಂ ಎಂದು ಕರೆಯುತ್ತಾರೆ. ಒಂದು ಹೃದಯ ಬಡಿತಕ್ಕೆ ಒಂದು ಹೃತ್ಕುಕ್ಷಿಯಿಂದ ಹೊರಬರುವ ರಕ್ತದ ಪ್ರಮಾಣ 70 ಮೀ.ಲಿ ಆಗಿರುತ್ತದೆ."

18)ತ್ರಿದಳ ಕವಾಟ ಮತ್ತು ದ್ವಿದಳ ಕವಾಟ ಮುಚ್ಚುವಾಗ ಬರುವ ಹೃದಯದ ಶಬ್ದ _____.
 *ಲಬ್* (Lubb)

"ತ್ರಿದಳ ಕವಾಟ ಮತ್ತು ದ್ವಿದಳ ಕವಾಟ ಮುಚ್ಚುವಾಗ ಬರುವ ಹೃದಯದ ಶಬ್ದ ಲಬ್ (Lubb). ಅದೇ ರೀತಿ ಅರ್ಧ ಚಂದ್ರಾಕೃತಿಯ ಕವಾಟಗಳು ಮುಚ್ಚುವಾಗ ಬರುವ ಹೃದಯದ ಶಬ್ದವು ಡಬ್ (Dubb) ಎಂದು ಕೇಳಿಸುತ್ತದೆ."

19)ರಕ್ತವು ಅಪಧಮನಿಗಳ ಮೇಲೆ ಉಂಟುಮಾಡುವ ಒತ್ತಡ ಯಾವುದು?
  *ರಕ್ತದ ಒತ್ತಡ*
"ಎಡ ಹೃತ್ಕುಕ್ಷಿ ಸಂಕುಚಿಸಿದಾಗ ರಕ್ತವು ಮಹಾ ಅಪಧಮನಿಗೆ ಒತ್ತಿ ತಳ್ಳಲ್ಪಡುತ್ತದೆ. ಇದು ಮಹಾ ಅಪಧಮನಿ ಮತ್ತು ಅದರ ಕವಲುಗಳಾದ ಅಪಧಮನಿಗಳ ಗೋಡೆಗಳ ಮೇಲೆ ಒತ್ತಡವನ್ನು ಏರ್ಪಡಿಸುತ್ತದೆ. ಇದನ್ನು’ರಕ್ತದ ಒತ್ತಡ’ ಎನ್ನುವರು."

20)ಆರೋಗ್ಯವಂತ ಮನುಷ್ಯನಲ್ಲಿರುವ ಸಾಮಾನ್ಯ ರಕ್ತದ ಒತ್ತಡ ಎಷ್ಟು?
 *120/80 mm Hg*

"ಆರೋಗ್ಯವಂತ ಮನುಷ್ಯನಲ್ಲಿರುವ ಸಾಮಾನ್ಯ ರಕ್ತದ ಒತ್ತಡ 120/80 mm Hg ಇರುತ್ತದೆ. SP (ಸಿಸ್ಟಾಲಿಕ್ ಒತ್ತಡ) =120 mm Hg ಮತ್ತು DP (ಡಯಾಸ್ಟಾಲಿಕ್ ಒತ್ತಡ) = 80 mm Hg."

21)ರಕ್ತದ ಒತ್ತಡವನ್ನು ಅಳೆಯಲು ಬಳಸುವ ಸಾಧನ ಯಾವುದು?
 *ಸ್ಪಿಗ್ಮೋ ಮಾನೋ ಮೀಟರ್*
 
"ರಕ್ತದ ಒತ್ತಡವನ್ನು ಅಳೆಯಲು ಬಳಸುವ ಸಾಧನ ಸಿಗ್ಮೋ ಮಾನೋ ಮೀಟರ್ . ಇದನ್ನು ಕಂಡು ಹಿಡಿದ ವಿಜ್ಞಾನಿ 'ರಿವ್ ರಾಕ್ಷೀ'. ಮೊಟ್ಟ ಮೊದಲ ಬಾರಿಗೆ ರಕ್ತದ ಒತ್ತಡವನ್ನು ಅಳೆದ ವಿಜ್ಞಾನಿ 'ಸ್ಟೀಫನ್ ಹಾರ್ಲ್ಸ್'."

22)ಕೆಳಗಿನವುಗಳಲ್ಲಿ ಯಾವುದು ಹೃದಯದ ಬಲ ಹೃತ್ಕರ್ಣದಲ್ಲಿ ವಿದ್ಯುತ್ ತರಂಗಗಳನ್ನು ಉತ್ಪತ್ತಿ ಮಾಡುತ್ತದೆ?
 *SAN*

"ಹೃದಯದ ಬಲ ಹೃತ್ಕರ್ಣದಲ್ಲಿರುವ SAN (ಸೀನೋ ಆಟ್ರಿಯಲ್ ನೋಡ್) ವಿದ್ಯುತ್ ತರಂಗಗಳನ್ನು ಉತ್ಪತ್ತಿ ಮಾಡುತ್ತದೆ. ಈ ತರಂಗಗಳು ಹೃದಯ ಬಡಿತಕ್ಕೆ ಕಾರಣವಾಗಿದೆ. SANನ್ನು Pace Maker ಎಂದು ಕರೆಯುತ್ತಾರೆ."

23)ಹೃದಯಘಾತದ ಮತ್ತೊಂದು ಹೆಸರು ಏನು?
 *ಮಿಯೋಕಾರ್ಡಿಯಲ್ ಇನ್‌ಫಾರ್ಕಷನ್*

"ಹೃದಯಘಾತದ ಮತ್ತೊಂದು ಹೆಸರು ಮಿಯೋಕಾರ್ಡಿಯಲ್ ಇನ್‌ಫಾರ್ಕಷನ್ (Myocardial infarction). ಹೃದಯಘಾತಕ್ಕಿರುವ ಚಿಕಿತ್ಸೆಗಳು ಹೀಗಿವೆ 'ಆ್ಯಂಜಿಯೊಪ್ಲಾಸ್ಟಿ' ಮತ್ತು 'ಬೈಪಾಸ್ ಸರ್ಜರಿ'"

24.)ECG ಯನ್ನು ಕಂಡು ಹಿಡಿದವರು ಯಾರು?
 *ಐಸ್ತೊವನಿ*

"ECG (ಇಲೆಕ್ಟ್ರೊ ಕಾರ್ಡಿಯೋ ಗ್ರಾಫಿ) ಯನ್ನು ಕಂಡು ಹಿಡಿದವರು ಐಸ್ತೊವನಿ. SAN ದಿಂದ ಉತ್ಪತ್ತಿಯಾಗುವ ವಿದ್ಯುತ್ ತರಂಗಗಳನ್ನು ಸ್ವೀಕರಿಸಿ ಹೃದಯದ ಆರೋಗ್ಯವನ್ನು ತಿಳಿಸುವ ಉಪಕರಣ ECG (ಇಲೆಕ್ಟ್ರೊ ಕಾರ್ಡಿಯೋ ಗ್ರಾಫಿ)."

25.)ದೇಹದ ಜೀವಕೋಶಗಳಿಗೆ ಆಮ್ಲಜನಕ ಸಹಿತ ರಕ್ತದ ಅಸಮರ್ಪಕ ಸಾಗಾಣಿಕೆಯಿಂದ ಹುಟ್ಟುವ ಮಗುವಿನ ನಾಲಿಗೆ, ಕಣ್ಣು ಯಾವ ಬಣ್ಣಕ್ಕೆ ತಿರುಗುತ್ತದೆ?
  *ನೀಲಿ*

"ದೇಹದ ಜೀವಕೋಶಗಳಿಗೆ ಆಮ್ಲಜನಕ ಸಹಿತ ರಕ್ತದ ಅಸಮರ್ಪಕವಾಗಿ ಸಾಗಾಣಿಕೆ ಆಗುವುದರಿಂದ ಹುಟ್ಟುವ ಮಗುವಿನ ತುಟಿ, ನಾಲಿಗೆ, ಕಣ್ಣು ಗುಡ್ಡೆಗಳು ನೀಲಿ ಬಣ್ಣಕ್ಕೆ ತಿರುಗುತ್ತದೆ. ಇಂತಹ ಮಗುವನ್ನು ಬ್ಲೂ ಬೇಬಿ (Blue Baby) ಅಥವಾ ನೀಲಿ ಮಗು ಎಂದು ಕರೆಯುತ್ತಾರೆ."

26.)ಕೆಳಗಿನವುಗಳಲ್ಲಿ ಹೃದಯಘಾತಕ್ಕೆ ಕಾರಣವಾದ ಅಂಶ ಯಾವುದು?
 *ಕೊಲೆಸ್ಟ್ರಾಲ್*

"ರಕ್ತನಾಳದಲ್ಲಿ ಕೊಲೆಸ್ಟ್ರಾಲ್ ಸಂಗ್ರಹಗೊಳ್ಳುವುದರಿಂದ ರಕ್ತನಾಳಗಳು ಸ್ಥಿತಿಸ್ಥಾಪಕ ಗುಣಗಳನ್ನು ಕಳೆದುಕೊಳ್ಳುತ್ತವೆ. ಈ ಸ್ಥಿತಿಯನ್ನು 'ಅಥೆರೊಸ್ಕ್ಲಿರೊಸಿಸ್' ಎನ್ನುವರು. ಇದು ಹೃದಯಘಾತಕ್ಕೆ ಕಾರಣವಾಗುತ್ತದೆ."

logoblog

Thanks for reading Questionnaires heard by various competing party

Previous
« Prev Post

No comments:

Post a Comment