Friday 5 March 2021

Questionnaires asked on the lighting unit in various competitive exams

  MahitiVedike Com       Friday 5 March 2021

ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಬೆಳಕು ಘಟಕದ ಮೇಲೆ ಕೇಳಿರುವ ಪ್ರಶ್ನೋತ್ತರಗಳು

1) ಪಟ್ಟಕ ಅಥವಾ ಆಶ್ರಗ(prism)ದ ಮೂಲಕ ಬೆಳಕನ್ನು ಹಾಯಿಸಿದಾಗ ಅತಿ ಕಡಿಮೆ ಬಾಗುವ ಬಣ್ಣ? 
 *ಕೆಂಪು*

2) ಯಾವ ಬಣ್ಣ ಅತಿಹೆಚ್ಚು ಚದುರುತ್ತದೆ? 
 *ನೇರಳೆ*

3) ಬೆಳಕಿಗಿಂತ ಅತಿ ಹೆಚ್ಚು ವೇಗ ಹೊಂದಿರುವ ಕಣಗಳು? 
 *ಟಾಕ್ ಯಾನ್ಸ್*

4) 1921 ರಲ್ಲಿ ಭೌತಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿಯನ್ನು ಪಡೆದ "ಆಲ್ಬರ್ಟ್ ಐನ್ಸ್ಟೀನ್" ಅವರ ಯಾವ ಸಂಶೋಧನೆಗಾಗಿ ಪ್ರಶಸ್ತಿ ಪಡೆದಿದ್ದಾರೆ? 
 *ದ್ವಿತಿ-ವಿದ್ಯುತ್ ಪರಿಣಾಮ*

5) ಜ್ಯೋತಿ ವರ್ಷ( ಪ್ರಕಾಶ ವರ್ಷ) ಏನನ್ನು ಅಳೆಯುತ್ತದೆ?
 *ದೂರ*

6) ಯಾವುದು "ಮಾನೋಕ್ರೋಮಾಟಿಕ್ ಬೆಳಕು" ನೀಡುತ್ತದೆ? 
 *ಸೋಡಿಯಂ ದೀಪ*

7) ಹಗಲಿನ ವೇಳೆ ಆಕಾಶವು ನೀಲಿಯಾಗಿ ಕಾಣಲು ಕಾರಣ? 
 *ಬೆಳಕಿನ ಚದುರುವಿಕೆ*

8) ಯಾವ ಅಲೆಗಳನ್ನು"Wave of Heat Energy"( ಶಾಖ ಶಕ್ತಿ ಅಲೆ) ಗಳೆನ್ನುವರು? 
 *ಇನ್ಫ್ರೆರೆಡ್ ತರಂಗಗಳು*(Infraed)

9) ಬೆಳಕಿನ ಕಣಗಳು ಮಾಡಲ್ಪಟ್ಟಿರುವ ಚಿಕ್ಕ ಕಣವನ್ನು ಹೀಗೆಂದು ಕರೆಯುತ್ತಾರೆ? 
 *ಪ್ರೋಟನ್ಸ್*(photons)

10) ದ್ವಿತೀಯ ಕಾಮನಬಿಲ್ಲು ಹೊಂದಿರುವುದು? 
 *ಎರಡು ವಕ್ರೀಭವನ. ಎರಡು  ಪ್ರತಿಫಲನ,* 

11) ಅಪೇಕ್ಷಿತ ಸ್ಟ್ರಕ್ಟರ್ ಲೈನ್(Desired Spectral Line)ನ್ನು ಪ್ರತ್ಯೇಕಿಸುವ ಸಾಧನ ಯಾವುದು?
 *ಮಾನೋಕ್ರೊಮಾಟರ*
(Manochromator)

12) ಬೆಳಗ್ಗಿನ ಅಲೆಯ ಸ್ವರೂಪಕ್ಕೆ ಒಂದು ಉದಾಹರಣೆ? 
 *ವ್ಯತಿಕರಣ*(Interference)

13) ವಸ್ತು ಅಲೆ(Matter Wave) ಯನ್ನು ಪ್ರತಿಪಾದಿಸಿದವರು? 
 *de-broglie*(ಡಿ-ಬ್ರೋಗ್ಲಿ)

14) ಯಾವ ನಿಯಮಗಳು ಪೋಲರೈಜೆಷನ್( ದೃಢೀಕರಣ) ಮತ್ತು ಇಂಟರ ಫೆರೆನ್ಸ್( ವ್ಯತಿಕರಣ)ಗಳ ಸಂಬಂಧ ತೋರಿಸುವುದು? 
 *ಫ್ರೆಶನೇಲ್ ಮತ್ತು ಆರ್ ಗೋ  ನಿಯಮಗಳು*

15) Uncertainty relation ನ್ನು ಪ್ರತಿಪಾದಿಸಿದವರು? 
 *ಹಿಸೆನ್ ಬರ್ಗ್*

16) ಯಾವುದು ಡೀ ಮ್ಯಾಗ್ನಿ  ಫೈಯರ್(Demagnifier)
 *ನಿಮ್ನ ಮಸೂರ*

17) ತೀಕ್ಷಣವಾದ ವಸ್ತುವಿನಲ್ಲಿ ಬೆಳಕು ಬಾಗುವುದನ್ನು ಹೀಗೆಂದು ಕರೆಯುತ್ತಾರೆ? 
 *ಬೆಳಕಿನ ವಿವರ್ತನೆ*

18) ಆಟೋಮೊಬೈಲ್ಸ್ ಗಳಲ್ಲಿ ಬದಿಯಲ್ಲಿನ ನೋಟದ ಕನ್ನಡಿಯಾಗಿ(Rear view mirror)ನ್ನು ಬಳಸುವುದು? 
 *ಪೀನ ದರ್ಪಣ*

19) ಬೆಳಕಿನ ಯಾವ ಲಕ್ಷಣವೂ ಅಡ್ಡ ಅಲೆಯ ವಿದ್ಯುತ್ ಕ್ಷೇತ್ರ ಕಂಪನದ ಮಹತ್ವವಾಗಿದೆ? 
 *ಧ್ರುವೀಕರಣ*
(polarization)

20) ಭೂಮಿಯಿಂದ ನೋಡುತ್ತಿರುವ ವ್ಯಕ್ತಿಗೆ ನಕ್ಷತ್ರಗಳು ಮಿನುಗುತ್ತಿರುವಂತೆ ಕಾಣುತ್ತವೆ ಇದಕ್ಕೆ ಕಾರಣ? 
 *ಭೂಮಿಯ ವಾತಾವರಣದಲ್ಲಿ ಆಗುವಂತಹ ವಕ್ರೀಭವನದ ಏರಿಳಿತಗಳು*

21) ಯಾವ ವಿದ್ಯಮಾನವು ಬೆಳಕಿನ ಕಣ  ಸ್ವರೂಪವನ್ನು ತೋರಿಸುತ್ತದೆ?
 *ದ್ವಿತಿ ವಿದ್ಯುತ್ ಪರಿಣಾಮ*

22) ಹಳದಿ ಬಣ್ಣವನ್ನು ಉತ್ಸರ್ಜಿಸುವ ನಕ್ಷತ್ರವೊಂದು ಭೂಮಿಯತ್ತ ವೇಗೋತ್ಕರ್ಷತವಾಗಿ ಬರುವಾಗ, ಭೂಮಿಯ ಮೇಲಿನಿಂದ ನೋಡಿದರೆ ಅದರ ಬಣ್ಣವು(KAS-2010)
 *ಕ್ರಮೇಣವಾಗಿ ನೀಲ ಲೋಹಿತ( ನೇರಳೆ) ಬಣ್ಣಕ್ಕೆ ತಿರುಗುತ್ತದೆ*

23) ಒಂದು ಸಮತಲವಾದ ಕನ್ನಡಿಯು ನಿಮ್ಮನ್ನು 
10CM/ ಸೆಕೆಂಡಿನಲ್ಲಿ ಸಮೀಪಿಸುತ್ತದೆ, ಇದರಲ್ಲಿ ನಿಮ್ಮ ಬಿಂಬವನ್ನು ಕಾಣಬಹುದು, ಯಾವ ವೇಗದಲ್ಲಿ ನಿಮ್ಮ ಬಿಂಬವು ನಿಮ್ಮನ್ನು ಸಮೀಪಿಸುತ್ತದೆ? 
 *20ಸೇ.ಮೀ/ ಸೆಕೆಂಡ್*

24) ಬೆಳಕು ಅತ್ಯಂತ ಚಿಕ್ಕ ಕಣಗಳಿಂದ ಆಗಿದೆ ಎಂದು ಬೆಳಕಿನ ಕಣ ಸಿದ್ಧಾಂತ ಮಂಡಿಸಿದವರು? 
 *ಐಸಾಕ್ ನ್ಯೂಟನ್*

25) ಬೆಳಕಿನ ಬಗ್ಗೆ ಹೈಗನ್ಸ್ ರವರು ಮಂಡಿಸಿದ ಸಿದ್ಧಾಂತ? 
 *ತರಂಗ ಸಿದ್ಧಾಂತ*

26) ಬೆಳಕಿನ ವೇಗ ಅತಿ ಹೆಚ್ಚಾಗಿರುವುದು? 
  *ನಿರ್ವಾತದಲ್ಲಿ*( ಶಬ್ದವು ಇದರಲ್ಲಿ ಹಾಯೋದಿಲ್ಲ)

27) ಅತಿ ಉದ್ದ ತರಂಗಾಂತರ ಹೊಂದಿರುವ ಬೆಳಕಿನ ಬಣ್ಣ? 
 *ಕೆಂಪು*

logoblog

Thanks for reading Questionnaires asked on the lighting unit in various competitive exams

Previous
« Prev Post

No comments:

Post a Comment