"FDA"="2018" ಮತ್ತು "2017" ರಲ್ಲಿ ಇತಿಹಾಸ ವಿಭಾಗದಲ್ಲಿ ಕೇಳಿದ ಪ್ರಶ್ನೋತ್ತರಗಳು
1) 1940 ರಲ್ಲಿ ಮಹಾತ್ಮ ಗಾಂಧೀಜಿಯವರು ಪರಿಮಿತ ಸತ್ಯಾಗ್ರಹವನ್ನು ವೈಯಕ್ತಿಕ ನೆಲೆಯಲ್ಲಿ ಪ್ರಾರಂಭಿಸಿದ್ದು ಏಕೆಂದರೆ?
ಭಾರತ ಸ್ವತಂತ್ರ ಬೇಡಿಕೆಯನ್ನು ಶಾಂತಿಯುತವಾಗಿ ಒಪ್ಪಿಕೊಳ್ಳಲಿಕಾಗಿ, ಮತ್ತು ತಕ್ಷಣವೇ ಮಧ್ಯಂತರ ಭಾರತೀಯ ಸರಕಾರವನ್ನು ರಚಿಸಲಿಕ್ಕಾಗಿ, ಬ್ರಿಟಿಷ್ ವಿಕ್ಕಿ ಒಂದು ಆಕಾಶವನ್ನು ನೀಡ ಬೀಸಿದರು.
2) ಉರ್ದು ಪಂಡಿತರಲ್ಲಿ ಯಾರನ್ನು ಎರಡನೇ ಮತ್ತು ಮೂರನೇ ದುಂಡು ಮೇಜಿನ ಸಮ್ಮೇಳನಕ್ಕೆ ಕರೆಯಲಾಗಿತ್ತು?
ಮಹಮ್ಮದ್ ಇಕ್ಬಾಲ್
3) ಯಾವ ಕಾಯ್ದೆಯನ್ನು ಜವಾಹರ್ ಲಾಲ್ ನೆಹರುರವರು ದಾಸ್ಯತ್ವದ ಹೊಸ ಸನ್ನದು ಎಂಬುದಾಗಿ ವಿವರಿಸಿದರು?
ಭಾರತ ಸರ್ಕಾರದ 1935ರ ಕಾಯ್ದೆ
4)"ಪೋಲೊ ಕಾರ್ಯಾಚರಣೆ" ಯಾವುದಕ್ಕೆ ಸಂಬಂಧಿಸಿದೆ?
ಭಾರತ ಸರ್ಕಾರದಿಂದ ಹೈದ್ರಾಬಾದ್ ಮಾಂಡಲಿಕ ರಾಜ್ಯದ ಸ್ವಾಧೀನಪಡಿಸಿಕೊಳ್ಳುವಿಕೆ
5)"1927ರ ಬಟ್ಲರ್" ಸಮಿತಿಯ ದ್ಯೇಯವು?
ಭಾರತ ಸರ್ಕಾರ ಮತ್ತು ಭಾರತೀಯ ಮಾಂಡಲೀಕ ರಾಜ್ಯಗಳ ನಡುವಣ ಸಂಬಂಧವನ್ನು ತೋರಿಸುವುದು
6) ಮೊಘಲರ ಆಸ್ಥಾನದಲ್ಲಿದ್ದ ಯಾರನ್ನು "ತುರಾನಿಸ್" ಎಂದು ಕರೆಯಲಾಗುತ್ತಿತ್ತು?
ಮಧ್ಯ ಏಷ್ಯಾ ಪ್ರದೇಶಗಳ ಮೂಲದಿಂದ ಬಂದವರನ್ನು
7) ಪಟ್ಟಿ 1ಲ್ಲಿನ ಪ್ರಸಿದ್ಧ ಸ್ಥಳಗಳನ್ನು, ಪಟ್ಟಿಗ 2ರಲ್ಲಿನ ಅವುಗಳು ಸಂಬಂಧ ಹೊಂದಿರುವ ಪ್ರಖ್ಯಾತ ವ್ಯಕ್ತಿಗಳೊಂದಿಗೆ ಸರಿಹೊಂದಿಸಿ.(ಹೊಂದಿಸಲಾಗಿದೆ)
1) "ಕೋರ್ಸಿಕಾ"= ನೆಪೋಲಿಯನ್ ಬೋನಾಪಾರ್ಟೆ
2) "ಮ್ಯಾಸೆಡೋನಿಯ"= ಅಲೆಕ್ಸಾಂಡರ್
3) "ಟ್ರಫಾಲ್ಗರ್"= ನೆಲ್ಸನ್
4) "ಮೆಕ್ಕಾ"= ಪ್ರವಾದಿ ಮೊಹಮ್ಮದ್
8)ಪಟ್ಟಿ 1ಲ್ಲಿನ ಪ್ರಸಿದ್ಧ ಸ್ಮಾರಕಗಳನ್ನು, ಪಟ್ಟಿ 2ರಲ್ಲಿನ ಮನೆಗಳೊಂದಿಗೆ ಸರಿಹೊಂದಿಸಿ
(ಹೊಂದಿಸಲಾಗಿದೆ)
1) "ಆಲಯ ಧರ್ವಾಜ್"= ಖಿಲ್ಜಿ ಮನೆತನ
2)"ಹಾಜ್ ಖಾಸ್"= ಲೋದಿ ಮನೆತನ
3) "ಶಾಲಿಮಾರ್ ಬಾಗ್"= ಮೊಘಲ ಮನೆತನ
4) "ಅಡಾಯಿ ದಿನ ಕಾ ಜೋಪ್ದಾ"= ಗುಲಾಮಿ ಮನೆತನ
9) ಭಾರತದ ಪ್ರಥಮ ಗೌರ್ನರ್ ಜನರಲ್ ವಾರನ್ ಹೇಸ್ಟಿಂಗ್ ನು ದುರ್ನಡತೆಯ ಆಪಾದಿತನಾಗಿದ್ದು ಅವನ ವಿರುದ್ಧವಾಗಿ ಕೈಗೊಳ್ಳಲಾದ ಕ್ರಮವೇನು?
ಅವರ ವಿರುದ್ಧವಾಗಿ ಖಂಡಿಸುವ ವ್ಯವಹರಣೆಗಳನ್ನು ಪ್ರಾರಂಭಿಸಲಾಯಿತು
10) ಶಿವಾಜಿಯನ್ನು ಸಿಕ್ಸಿಸುವ ಸಲುವಾಗಿ ಬಿಜಾಪುರದಿಂದ ಕಳಿಸಲ್ಪಟ್ಟವನಾರು?
ಅಫ್ಜಲ್ ಖಾನ್
11) ಪೇಶ್ವೆಗಳ ಕಾಲಾನು ಕ್ರಮ ಸರಿಯಾಗಿ ಬರೆಯಿರಿ(ಬರೆದಿದೆ)
1) "ಬಾಲಾಜಿ ವಿಶ್ವನಾಥ."
2) "ಮೊದಲನೆಯ ಬಾಜಿರಾವ್".
3) "ಬಾಲಾಜಿ ಬಾಜಿರಾವ್",
4) "ನಾರಾಯಣರಾವ್".
12) ಪ್ರಸಿದ್ಧ ಜೈನ ಪಂಡಿತನಾದ "ಜಿನಸೇನನು" ಯಾವ ದೊರೆಯ ಆಸ್ಥಾನದಲ್ಲಿದ್ದನು?
ಅಮೋಘವರ್ಷ
13) ಯಾವ ಪ್ರಾಂತ್ಯದ ಮೇಲೆ ವಿಜಯವಾಣಿ ಕಳಿಸಿದ ನೆನಪಿಗಾಗಿ ಅಕ್ಬರನು ಫತೇಪುರ್ ಸಿಕ್ರಿಯಲ್ಲಿ ಬುಲಂದ ದರ್ವಜ್ ಅವನ ನಿರ್ಮಿಸಿದನು?
ಗುಜರಾತ್
14) ವಿಜಯನಗರ ಆಳ್ವಿಕೆಯಡಿ ಜಮೀನ್ದಾರರು ಮತ್ತು ಗೇಣಿದಾರರ ನಡುವೆ ಇದ್ದ ಪಾಲುಗಾರಿಕೆ ವ್ಯವಸ್ಥೆಯನ್ನು ಏನೆಂದು ಕರೆಯುವರು?
ವರಮ್
15) ಯಾವ ದೇಶಗಳಲ್ಲೊಂದಾದ ದಖ್ಖನಿನ್ನ ಮುಸ್ಲಿಮ್ ರಾಜ್ಯವು 'ಪರ್ಷಿಯನ್' ಬದಲಿಗೆ "ಹಿಂದಿ" ಅಥವಾ "ದಖನಿ" ಉರ್ದುವನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಘೋಷಿಸಿತು?
ಬಿಜಾಪುರ್
16) ಯಾವ ಭಕ್ತಿಪಂಥದ ಸಂತರಿಂದ ಬೋದಿಸಲ್ಪಟ್ಟ ಅದ್ವೈತವು. ಶುದ್ದಾದ್ವೈತ ವೆಂದು ಕರೆಯಲ್ಪಟ್ಟಿದೆ?
ವಲ್ಲಭಾಚಾರ್ಯ
(FDA-2021? )
17) ಆಯುರ್ವೇದ ಎಂಬುದರ ಸಾಹಿತ್ಯಕ ಅರ್ಥವು ಜೀವನದ ವಿಜ್ಞಾನ ವಾಗಿದ್ದು. ಭಾರತದಲ್ಲಿ ಸಾವಿರಾರು ವರ್ಷಗಳ ಹಿಂದೆ ಅಭಿವೃದ್ಧಿ ಹೊಂದಿತು, ಆಯುರ್ವೇದದ ಪಕ್ಕದಲ್ಲಿ ಒಬ್ಬರು ಯಾರು?
ಚರಕ
"FDA=2017"
18) ಯಾವ ಮೊಘಲ ದೊರೆಗಳು ಇಸ್ಲಾಂ ಗನ್ನುಗಳನ್ನು "ಪತ್ವಾ-ಇ-ಅಲಂಗೀರ" ಎಂಬ ಪುಸ್ತಕದಲ್ಲಿ ಸಂಯೋಜಿಸಿ ಪರಿಚಯಿಸಿದರು?
ಔರಂಗಜೇಬ
19) ದಾರಾಶಿಕೋ ಪರ್ಷಿಯನ್ ಗೆ ಉಪನಿಷತ್ತುಗಳನ್ನು ಭಾಷಾಂತರ ಮಾಡಿದ್ದು ಯಾವ ಶೀರ್ಷಿಕೆಯಲ್ಲಿ?
ಶಿರ್-ಇ- ಅಕಬರ
20) ಪಟ್ಟಿ 1ರಲ್ಲಿ ಸಿದ್ಧಾಂತದ ಪ್ರತಿಪಾದಕರು, ಪಟ್ಟಿ 2ರಲ್ಲಿ ಸಿದ್ಧಾಂತಗಳನ್ನು ಸರಿಯಾಗಿ ಹೊಂದಿಸಿ( ಹೊಂದಿಸಲಾಗಿದೆ)
1) "ರಾಮಾನುಜಾಚಾರ್ಯರ"= ವಿಶಿಷ್ಟಾದ್ವೈತ
2) "ಮಧ್ವಾಚಾರ್ಯ"=
ದ್ವೈತಾದ್ವೈತ
3) "ನಿಂಬರಕಾಚಾರ್ಯ"= ದ್ವೈತ
4)"ವಲ್ಲಭಾಚಾರ್ಯ"=
ಶುದ್ದಾದ್ವೈತ
21) ಪಾರಿವಾಳ ಆಟದ ಆಟಕ್ಕೆ "ಇಸ್ಕ ಬಾಜಿ" ಎಂಬ ಪದವನ್ನು ನೀಡಿದವರು ಯಾರು?
ಅಕ್ಬರ್
22) ವಂಶಗಳು ಹಾಗೂ ರಾಜಧಾನಿಗಳು ಹೊಂದಿಸಿ( ಹೊಂದಿಸಲಾಗಿದೆ)
1) ಆದಿಲ್ ಶಾಹಿಗಳು= ಬಿಜಾಪುರ್
2) ಕುತುಬ್ ಶಾಹಿಗಳು= ಗೋಲ್ಕೊಂಡ
3) ನಿಜಾಮ್ ಶಾಹಿಗಳು= ಅಮ್ಮದ್ ನಗರ
4) ಬರೀದ ಶಾಹಿಗಳು= ಬೀದರ್
23) ಭಾರತಕ್ಕೆ ಸ್ವಯಮಾಡಳಿತ ಸರ್ಕಾರವನ್ನು ಆದುನಿಕ ಶರತ್ತುಗಳ ಅಡಿಯಲ್ಲಿ ಪ್ರಾಚೀನ ಭಾರತ ಜೀವನವನ್ನು ಪೂರೈಸುವಂತಿರಬೇಕು ಮತ್ತು ಅಂತಿಮವಾಗಿ ವೇದಂತ ಆದರ್ಶಕ್ಕನುಗುಣವಾಗಿ ಇರಬೇಕೆಂದು ಪ್ರತಿಪಾದಿಸಿದ ರಾಷ್ಟ್ರೀಯವಾದಿಗಳು ಯಾರು?
ಅರವಿಂದ ಘೋಷ್
24) ಯಾವುದೇ ಆಕಾರ ಅಥವಾ ರೂಪದಲ್ಲಿ ಸಹಕಾರವನ್ನು ಸೈನಿಕಿ ಸರಕಾರದೊಂದಿಗೆ ನೀಡುವುದು ಪಾಪ ಎಂದು ಮಹಾತ್ಮ ಗಾಂಧೀಜಿಯವರು ಯಾವ ಘಟನೆ ಕುರಿತು ಹೇಳಿದ್ದಾರೆ?
ಪಂಜಾಬಿನ ಜಲಿಯನ ವಾಲಾಬಾಗ ದುರಂತ
25) 1942 ರಲ್ಲಿ ಭಾರತ ಬಿಟ್ಟು ತೊಲಗಿ ಚಳುವಳಿ ಪ್ರಾರಂಭವಾದಾಗ ಭಾರತದ ವೈಸರಾಯ್ ಆಗಿದ್ದವರು ಯಾರು?
ಲಿನ್ ಲಿತ್ ಗೋ
No comments:
Post a Comment