Sunday 7 March 2021

Preamble to the Constitution

  MahitiVedike Com       Sunday 7 March 2021
  
   ಸಂವಿಧಾನದ ಪ್ರಸ್ತಾವನೆ (Preamble)

 ಭಾರತದ ಸಂವಿಧಾನದಲ್ಲಿರುವ "ಪ್ರಸ್ತಾವನೆಯನ್ನು" ಅಮೆರಿಕ ಸಂವಿಧಾನದಿಂದ ಎರವಲು ಪಡೆಯಲಾಗಿದೆ, 

 ಭಾರತ ಸಂವಿಧಾನದ ಪ್ರಸ್ತಾವನೆಗೆ ಒಂದು ಬಾರಿ ಮಾತ್ರ ತಿದ್ದುಪಡಿ ಮಾಡಲಾಗಿದೆ, 

 ಸಂವಿಧಾನದ ಪ್ರಸ್ತಾವನೆಗೆ "1976 ರಲ್ಲಿ 42ನೇ ತಿದ್ದುಪಡಿ" ಮಾಡಿ ಸಮಾಜವಾದಿ,  ಜಾತ್ಯತೀತ,  ಐಕ್ಯತೆ,  ಎಂಬ ಮೂರು ಪದಗಳನ್ನು ಸೇರಿಸಲಾಗಿದೆ, 

 ಭಾರತದ ಸಂವಿಧಾನದ ಪ್ರಸ್ತಾವನೆಯ ಭಾರತದ ಪ್ರಜೆಗಳಾದ ನಾವು ಅಥವಾ ನಾವು ಭಾರತೀಯರು ಎಂದು ಪ್ರಾರಂಭವಾಗುತ್ತದೆ,

 ಸಂವಿಧಾನದ ಪ್ರಸ್ತಾವನೆಯನ್ನು ಅಂಗೀಕರಿಸಿದ ದಿನಾಂಕ= 1949 ನವಂಬರ್ 26

 ಭಾರತದ ಸಂವಿಧಾನದ ಪ್ರಸ್ತಾವನೆಯು ಭಾರತದ ಪ್ರಜೆಗಳಾದ ನಾವು ಭಾರತವನ್ನು ಒಂದು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ಮಾಡಲು ಸಂವಿಧಾನ ಅಂಗೀಕರಿಸಿ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡಿದ್ದೇವೆ, 

 ಭಾರತವು ಸಾರ್ವಭೌಮ ಪ್ರಜಾಸತ್ತಾತ್ಮಕ ಗಣರಾಜ್ಯವಾದದ್ದು= 1950 ಜನವರಿ 26

 ಸಂವಿಧಾನದ ಪ್ರಸ್ತಾವನೆಯನ್ನು ತಿದ್ದುಪಡೆ ಮಾಡಬಹುದಾಗಿದೆ,

 ಸಂವಿಧಾನದ "ಪ್ರಸ್ತಾವನೆ"ಯಲ್ಲಿರುವ ಪ್ರಮುಖ ಪದಗಳು
1) "ಭಾರತದ ಪ್ರಜೆಗಳಾದ ನಾವು", 
2) "ಸಾರ್ವಭೌಮ", 
3) ಸಮಾಜವಾದಿ"
4) "ಜಾತ್ಯಾತೀತ, 
5) "ಪ್ರಜಾಸತ್ತಾತ್ಮಕ", 
6) ಗಣರಾಜ್ಯ, 
7) "ನ್ಯಾಯ"
8) "ಸಮಾನತೆ," 
9) "ಸ್ವಾತಂತ್ರ್ಯ", 
10) "ಭಾತೃತ್ವ", 
11) "ಐಕ್ಯತೆ" 

 ನ್ಯಾಯ ಎಂಬ ಪರಿಕಲ್ಪನೆಯನ್ನು "1917ರ  ರಷ್ಯಾ ಕ್ರಾಂತಿಯಿಂದ" ಪಡೆಯಲಾಗಿದೆ, 

 ಸ್ವಾತಂತ್ರ್ಯ, ಸಮಾನತೆ,  ಭಾತೃತ್ವ ಎಂಬ ಮೂರು ಪದಗಳನ್ನು "1789ರ ಫ್ರಾನ್ಸ್ ಕ್ರಾಂತಿಯಿಂದ" ಎರವಲು ಪಡೆಯಲಾಗಿದೆ. 

 ಒಂದು ದೇಶದ ಮುಖ್ಯಸ್ಥರು ಜನರಿಂದ ನೇರವಾಗಿ ಅಥವಾ ಪರೋಕ್ಷವಾಗಿ ಆಯ್ಕೆಯಾಗುತಿದ್ದರೆ ಆ ದೇಶವನ್ನು 
ಗಣರಾಜ್ಯ ನವರು. 

 "ಗಣರಾಜ್ಯ" ಎಂದರೆ *ರಾಷ್ಟ್ರಪತಿ ಹುದ್ದೆ ಆರಿಸುವಂತಹದು.

 "ಜಾತ್ಯತೀತ" ಎಂದರೆ= ಎಲ್ಲಾ ನಾಗರಿಕರಿಗೆ ಧಾರ್ಮಿಕ ಹಾಗೂ ಪೂಜಾ ಸ್ವಾತಂತ್ರ್ಯ ನೀಡುವುದು,( ಯಾವುದೇ ಧರ್ಮಗಳನ್ನು ಆಚರಿಸಲು ಅವಕಾಶ ನೀಡುವುದು,)

 "ಪ್ರಸ್ತಾವನೆಗೆ" ಸಂಬಂಧಿಸಿದ ಪ್ರಮುಖ ಪ್ರಕರಣಗಳು

1) ಬೇರುಬಾರಿ ಪ್ರಕರಣ=1960

" ಈ ಬೇರುಬಾರಿ ಪ್ರಕರಣ ಗಳಲ್ಲಿ "ಸುಪ್ರೀಂಕೋರ್ಟ್" ಪ್ರಸ್ತಾವನೆಯು ಸಂವಿಧಾನದ ಭಾಗವಲ್ಲ ಎಂದು ತೀರ್ಪು ನೀಡಿತು

2)  ಕೇಶವಾನಂದ ಭಾರತಿ
 V/S ಕೇರಳ ಸರ್ಕಾರ-1973

 ಈ ಪ್ರಕರಣದಲ್ಲಿ "ಸುಪ್ರೀಂಕೋರ್ಟ್" ತೀರ್ಪಿನ ಪ್ರಕಾರ ಪ್ರಸ್ತಾವನೆ ಸಂವಿಧಾನ ಭಾಗ ಎಂದು ತೀರ್ಪು ನೀಡಿತು, 

3) LIC OF INDIA CASE-1995

 ಈ ಪ್ರಕರಣದಲ್ಲಿ "ಸುಪ್ರೀಂಕೋರ್ಟ್" ಪ್ರಸ್ತಾವನೆಯು ಸಂವಿಧಾನದ ಅವಿಭಾಜ್ಯ ಅಂಗ ಎಂದು ತೀರ್ಪು ನೀಡಿತ್ತು, 

  ಸಂವಿಧಾನದ ಪ್ರಸ್ತಾವನೆಯ ಮೇಲೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಪ್ರಶ್ನೋತ್ತರಗಳು

1) ಭಾರತೀಯ ಸಂವಿಧಾನದ ಪ್ರಸ್ತಾವನೆ ಯಾವುದರಿಂದ ಆರಂಭವಾಗುತ್ತದೆ?(SDA-1998)
 ನಾವು ಭಾರತೀಯರು

2) ಭಾರತೀಯ ಸಂವಿಧಾನದ ಪ್ರಸ್ತಾವನೆಯಲ್ಲಿ ಯಾವ ವ್ಯಾಖ್ಯಾನವು ಕಾಣಿಸಿಕೊಳ್ಳುತ್ತದೆ?(SDA-2011)
 ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, ಪ್ರಜಾಸತ್ತಾತ್ಮಕ ಗಣರಾಜ್ಯ,

3) ಭಾರತದ ಸಂವಿಧಾನದ ಪ್ರಸ್ತಾವನೆಯಲ್ಲಿ ಭಾರತವನ್ನು ಎನನ್ನಾಗಿ ಮಾಡುವ ದೃಢ ಸಂಕಲ್ಪ ಮಾಡಲಾಗಿದೆ?(SDA-2008)
 ಸಾರ್ವಭೌಮ,  ಸಮಾಜವಾದಿ,  ಜಾತ್ಯಾತೀತ,  ಪ್ರಜಾಸತ್ತಾತ್ಮಕ,  ಗಣರಾಜ್ಯ,  ವೆಂದು

4) "ಜಾತ್ಯತೀತ" ಮತ್ತು "ಸಮಾಜವಾದಿ" ಪದಗಳನ್ನು ಸೇರಿಸಿದ ತಿದ್ದುಪಡಿ ಯಾವುದು?(PC-2016&ESI-2013)
 42 ನೇ ತಿದ್ದುಪಡಿ(1976ರಲ್ಲಿ)

5) ಭಾರತದ ಜಾತ್ಯತೀತ ರಾಷ್ಟ್ರವೆಂದು ತಿಳಿಸುವ ಅಂಶ ಯಾವುದು?(DAR-2018)
 ಸಂವಿಧಾನದ ಪೀಠಿಕೆ

6) ಭಾರತದ ಸಂವಿಧಾನದ ಉದ್ದೇಶಗಳಲ್ಲೊಂದಾದ ಆರ್ಥಿಕ ನ್ಯಾಯವು ಯಾವುದರಲ್ಲಿ ಉಪ ಬಂಧಿತವಾಗಿದೆ?(UPSC-2013)
 ಸಂವಿಧಾನದ ಪೀಠಿಕೆ ಮತ್ತು ರಾಜ್ಯನೀತಿ ನಿರ್ದೇಶಕ ತತ್ವಗಳಲ್ಲಿ, 

7) ಸಂವಿಧಾನದ ಪೀಠಿಕೆಯಲ್ಲಿ ಯಾವ ಅಂಶ ಅಡಕವಾಗಿಲ್ಲಾ? 
(UPSC-2017)
 ಆರ್ಥಿಕ ಸ್ವಾತಂತ್ರ್ಯ

8) ಭಾರತ ಸಂವಿಧಾನದ ರೂಪಿಸಿದವರ ಆಂತರ್ಯವು ಯಾವುದರಲ್ಲಿ ಬಿಂಬಿತವಾಗಿದೆ? 
(UPSC-2017)
 ಸಂವಿಧಾನದ ಪೀಠಿಕೆ

9) ಯಾವ ಪ್ರಕರಣವು ಸಂವಿಧಾನ ಪ್ರಸ್ತಾವನೆಯ ಭಾಗ ಅಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು? 
 ಬೇರುಬಾರಿ ಪ್ರಕರಣ

10)  ಪ್ರಸ್ತಾವನೆಯ ಸಂವಿಧಾನದ ಭಾಗ ಎಂದು ಯಾವ ಪ್ರಕರಣದಡಿಯಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿತು? 
 ಕೇಶವನಂದ ಭಾರತಿ
v/s ಕೇರಳ ಸರ್ಕಾರ

11) ಯಾವ ಪ್ರಕರಣದ ಅಡಿಯಲ್ಲಿ ಸುಪ್ರೀಂಕೋರ್ಟ್ ಪ್ರಸ್ತಾವನೆಯು ಸಂವಿಧಾನದ ಅವಿಭಾಜ್ಯ ಅಂಗ ಎಂದು ತೀರ್ಪು ನೀಡಿತು? 
 Lic of india case

logoblog

Thanks for reading Preamble to the Constitution

Previous
« Prev Post

No comments:

Post a Comment