Wednesday, 3 March 2021

Meaning of the adage

  MahitiVedike Com       Wednesday, 3 March 2021
 
ಗಾದೆ ಮಾತುಗಳ ಅರ್ಥ
   👇👇👇👇👇

 'ಅನ್ನ ದೇವರ ಮುಂದೆ ಇನ್ನು ದೇವರು ಉಂಟೆ'
- ಅನ್ನ ಜೀವನಕ್ಕೆ ಅತ್ಯಾವಶ್ಯಕ

 'ಅಲ್ಪರಸಂಗ ಅಭಿಮಾನ ಭಂಗ'
- ಕೀಳರೊಡನೆ ಒಡನಾಟ ದುಃಖಕರ 

 'ಊರಿಗೆ ಹಂದಿಬೇಕು ನೆರೆಗೆ ನಿಂದಕ ಬೇಕು'
- ಊರ ಹೊಲಸು ನಿವಾರಣೆಗೆ ಹಂದಿಯಂತೆ ನಮ್ಮ ದೋಷ ನಿವಾರಣೆಗೆ ನೆರೆಯ ನಿಂದಕರು.

 'ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರು'
- ಅಸಂಬದ್ಧತೆ

 'ಒಲಿದರೆ ನಾರಿ ಮುನಿದರೆ ಮಾರಿ'
- ಹೆಣ್ಣಿನ ಎರಡು ಮುಖಗಳು

 'ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ'
- ಅಜ್ಞಾನಿಗೆ ಜ್ಞಾನಬೋಧನೆ ನಿರರ್ಥಕ

 'ಜಟ್ಟಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ'
- ಸೋತರು ಕೂಡ ಸೋಲನ್ನು ಒಪ್ಪಿಕೊಳ್ಳದಿರುವುದು

 'ನೀರಿನಲ್ಲಿ ಹೋಮ ಮಾಡಿದ ಹಾಗೆ'
- ವ್ಯರ್ಥ ಪರಿಶ್ರಮ

 'ಬಂದ ದಾರಿಗೆ ಸುಂಕವಿಲ್ಲ'
- ಉದ್ದೇಶ ನೆರವೇರದಿರುವುದು 

 'ಬಡವನ ಸಿಟ್ಟು ದವಡೆಗೆ ಮೂಲ'
- ಬಡವನ ಸಿಟ್ಟು ವ್ಯರ್ಥ

 'ಗಾಳಿಗೆ ಗುದ್ದಿ ಮೈ ನೋಯಿಸಿಕೊಂಡ ಹಾಗೆ'
- ಅಸಾಧ್ಯವಾದ ಕೆಲಸಕ್ಕೆ ಕೈ ಹಾಕಿ ಹೈರಾಣಾಗುವುದು
logoblog

Thanks for reading Meaning of the adage

Previous
« Prev Post

No comments:

Post a Comment