Thursday 11 March 2021

(Important ISOLINES)

  MahitiVedike Com       Thursday 11 March 2021


ಪ್ರಮುಖ ಸಮ ರೇಖೆಗಳು (Important ISOLINES)


ಐಸೊಬಾತ್: ನೀರಿನ ಕೆಳಗೆ ಸಮ (ಒಂದೇ ಪ್ರಮಾಣದ) ಆಳದ ಬಿಂದುಗಳನ್ನು ಸೇರಿಸುವಂತೆ ಎಳೆಯುವ ರೇಖೆ.

Isobath: Joins points of the same depth below water.


ಐಸೊಬಾರ್: ಒಂದೇ ಪ್ರಮಾಣದ ವಾತಾವರಣದ ಒತ್ತಡದ ಬಿಂದುಗಳನ್ನು ಸೇರಿಸುವಂತೆ ಎಳೆಯುವ ರೇಖೆ..

Isobar: Joins points with the same atmospheric pressure.


ಐಸೊಥೆರ್ಮ್: ಒಂದೇ ಪ್ರಮಾಣದ ತಾಪಮಾನದ ಬಿಂದುಗಳನ್ನು ಸೇರಿಸುವಂತೆ ಎಳೆಯುವ ರೇಖೆ.

Isotherm: Joins points with the same temperature. (PSI 2020 Dec)


ಐಸೊಬಥೈಥರ್ಮ್: ನೀರಿನ ಅಡಿಯಲ್ಲಿ ಒಂದೇ ಪ್ರಮಾಣದ ತಾಪಮಾನದ ಬಿಂದುಗಳನ್ನು ಸೇರುವಂತೆ ಎಳೆಯುವ ರೇಖೆ.

Isobathytherm: Joins points with the same temperature under water.


ಐಸೋಹಲೈನ್: ಸಮುದ್ರದ ನೀರಿನ ಲವಣಾಂಶ (ಉಪ್ಪಿನ ಪ್ರಮಾಣ) ಒಂದೇ ಆಗಿರುವ ಸ್ಥಳಗಳನ್ನು ಸೇರಿಸುವಂತೆ ಎಳೆಯಲಾಗುವ ರೇಖೆ.

Isohaline: Joins points where the salinity (amount of salt) of sea water is the same.


ಐಸೋಹೆಲ್: ಸೂರ್ಯನ ಬೆಳಕು ಒಂದೇ ಆಗಿರುವ ಸ್ಥಳಗಳನ್ನು ಸೇರಿಸುವಂತೆ ಎಳೆಯುವ ರೇಖೆ.

Isohel: Joins points where the amount of sunshine is the same


ಐಸೋಹೈಟ್ : ಮಳೆಯ ಪ್ರಮಾಣ (ಮಳೆ, ಹಿಮ ಇತ್ಯಾದಿ) ಒಂದೇ ಆಗಿರುವ ಸ್ಥಳಗಳನ್ನು ಸೇರುವಂತೆ ಎಳೆಯುವ ರೇಖೆ.

Isyhyet: Joins points where the amount of precipitation (rainfall, snow etc) is the same.


ಐಸೊನೆಫ್: ಮೋಡದ ಹೊದಿಕೆಯ (cloud cover) ಪ್ರಮಾಣವು ಒಂದೇ ಆಗಿರುವ ಬಿಂದುಗಳನ್ನು ಸೇರಿಸುವಂತೆ ಎಳೆಯುವ ರೇಖೆ.

Isoneph: Joins points where the amount of cloud cover is the same.


ಐಸೊಸ್ಟೆರೆ: ವಾತಾವರಣದ ಸಾಂದ್ರತೆ ಒಂದೇ ಪ್ರಮಾಣದಲ್ಲಿರುವ ಬಿಂದುಗಳನ್ನು ಸೇರಿಸುವಂತೆ ಎಳೆಯುವ ರೇಖೆ.

Isostere: Joins points with the same atmospheric density.


ಐಸೊಟಾಚ್: ಒಂದೇ ಪ್ರಮಾಣದ ಗಾಳಿಯ ವೇಗ ಹೊಂದಿರುವ ಪ್ರದೇಶಗಳನ್ನು ಸೇರಿಸುವಂತೆ ಎಳೆಯುವ ರೇಖೆ.

Isotach: Joins points with the same wind speed.


ಐಸೊಗಾನ್: ಗಾಳಿಯ ದಿಕ್ಕು ಒಂದೆಯಾಗಿರುವ ಪ್ರದೇಶಗಳನ್ನು ಸೇರಿಸುವಂತೆ ಎಳೆಯುವ ರೇಖೆ.

Isogon: Joins points with the same wind direction.

ಈ ಮೇಲಿನ ವಿಷಯದಲ್ಲಿ ಭೂಗೋಳಶಾಸ್ತ್ರ ವಿಭಾಗದಲ್ಲಿ ಒಂದು ಪ್ರಶ್ನೆ ಕೇಳುವ ಸಂಭವವಿದೆ.

logoblog

Thanks for reading (Important ISOLINES)

Previous
« Prev Post

No comments:

Post a Comment