Friday 12 March 2021

Implications of British rule in India

  MahitiVedike Com       Friday 12 March 2021

ಭಾರತದಲ್ಲಿ ಬ್ರಿಟಿಷ್ ಆಡಳಿತದ ಪರಿಣಾಮಗಳು 


ಭಾರತದಲ್ಲಿ ಬ್ರಿಟಿಷರು, ವಸಾಹತು ಸ್ಥಾಪನೆ ಮತ್ತು ವಿಸ್ತರಣೆಯ ನಂತರ ಆಡಳಿತವನ್ನು ಪ್ರಾರಂಭಿಸಿದರು. ಬ್ರಿಟಿಷರ ಆಡಳಿತಾವಧಿಯಲ್ಲಿ ಭಾರತದ ವಿವಿಧ ಕ್ಷೇತ್ರಗಳ ಮೇಲೆ ತೀವ್ರತರವಾದ ಪರಿಣಾಮಗಳು ಉಂಟಾದವು.


ಏಕರೂಪದ ಆಡಳಿತ ವ್ಯವಸ್ಥೆ

ಬ್ರಿಟಿಷರು ತಮ್ಮ ಒಡೆದು ಆಳುವ ನೀತಿ, ದತ್ತು ಮಕ್ಕಳಿಗೆ ಹಕ್ಕಿಲ್ಲ, ಸಹಾಯಕ ಸೈನ್ಯ ಪದ್ಧತಿಯಂತಹ ಪ್ರಯೋಗಗಳಿಂದ ಭಾರತದ ಮೇಲೆ ನಿಯಂತ್ರಣವನ್ನು ಸಾಧಿಸುವಲ್ಲಿ ಯಶಸ್ವಿಯಾದರು. 

ಇದರಿಂದಾಗಿ ಇಡೀ ಭಾರತಕ್ಕೆ ಏಕರೂಪದ ಆಡಳಿತ ಜಾರಿಗೆ ಬಂದಿತು. ದೇಶದಲ್ಲಿ ಹಲವಾರು ಸಂಸ್ಥಾನಗಳು ಅಸ್ತಿತ್ವದಲ್ಲಿದ್ದರೂ ಅವುಗಳ ಮೇಲೆ ಸಹ ಬ್ರಿಟಿಷರು ನಿಯಂತ್ರಣ ಹೊಂದಿದ್ದರು. 

ಇದರಿಂದ ಆಡಳಿತ ವ್ಯವಸ್ಥೆಯಲ್ಲಿ ಏಕರೂಪತೆಯನ್ನು, ಕಾನೂನು ಸುವ್ಯವಸ್ಥೆಯನ್ನು ತರುವಲ್ಲಿ ಬ್ರಿಟಿಷರು ಸಫಲರಾದರು. ಇದರಿಂದ ದೇಶದಲ್ಲಿ ಸಮಾನತೆ ಮತ್ತು ಏಕರೂಪದ ಅಧಿಕಾರಶಾಹಿತ್ವ ಅಸ್ತಿತ್ವಕ್ಕೆ ಬಂದಿತು. 

ಆರ್ಥಿಕ ಪ್ರಭಾವ

18ನೆಯ ಶತಮಾನದಲ್ಲಿ ಇಂಗ್ಲೆಂಡಿನಲ್ಲಾದ ಕೈಗಾರಿಕಾ ಕ್ರಾಂತಿಯು ದೇಶೀ ಕೈಗಾರಿಕೆಗಳ ಮೇಲೆ ತೀವ್ರವಾಗಿ ಪರಿಣಾಮ ಬೀರಿತು. ಇದರಿಂದಾಗಿ ಐರೋಪ್ಯ ಮಾರುಕಟ್ಟೆಯಲ್ಲಿ ತೀವ್ರ ಅಂತರ ಉಂಟಾಗಿ ಅಸಮತೋಲನ ಬೆಳೆಯಿತು. 

ಒಂದು ಕಾಲದಲ್ಲಿ ಭಾರತದ ಸಿದ್ಧವಸ್ತುಗಳ ರಫ್ತÅ ಸದಾಕಾಲ ಆಮದಿಗಿಂತ ಹೆಚ್ಚಾಗಿರುತ್ತಿತ್ತು. ಕೈಗಾರಿಕಾ ಕ್ರಾಂತಿಯಿಂದಾಗಿ, ಉತ್ಪಾದನಾ ಕೇಂದ್ರವಾಗಿದ್ದ ಭಾರತ ಕೇವಲ ಕಚ್ಚಾ ವಸ್ತುಗಳನ್ನು ರಫ್ತು ಮಾಡುವ ಸ್ಥಿತಿ ತಲುಪಿತು. 

ಬ್ರಿಟಿಷರು ಸಿದ್ಧವಸ್ತುಗಳನ್ನು ಭಾರತಕ್ಕೆ ತಂದು ಕಡಿಮೆ ಬೆಲೆಗೆ ಮಾರಲು ಪ್ರಾರಂಭಿಸಿದರು. ಯಂತ್ರಗಳ ಮೂಲಕ ಅತಿ ಕಡಿಮೆ ವೆಚ್ಚದಲ್ಲಿ ಉತ್ಪಾದಿಸಲ್ಪಟ್ಟ ಇಂಗ್ಲೆಂಡಿನ ಸರಕುಗಳೊಂದಿಗೆ ಭಾರತದ ಸರಕುಗಳು ಸ್ಪರ್ಧಿಸಲಾರದೆ ಸೋತವು. 

ಇದರಿಂದಾಗಿ ಕೈಗಾರಿಕೆಗಳು ತೀವ್ರ ನಷ್ಟವನ್ನು ಅನುಭವಿಸಿ, ಕಾರ್ಮಿಕರು ನಿರುದ್ಯೋಗಿಗಳಾದರು. ಇದು ಭಾರತದ ಅರ್ಥ ವ್ಯವಸ್ಥೆಯ ಮೇಲೆ ಗಂಭೀರವಾದ ಪರಿಣಾಮವನ್ನು ಬೀರಿತು. 

ಭೂಕಂದಾಯ ವ್ಯವಸ್ಥೆ

ಬ್ರಿಟಿಷರ ಮೂಲ ಉದ್ದೇಶವು ಲಾಭಗಳಿಸಿಕೊಳ್ಳುವುದ್ದಾದರಿಂದ ಆಡಳಿತವನ್ನು ಅವರ ಹಿತಾಸಕ್ತಿಗನುಗುಣವಾಗಿ ರೂಪಿಸಿಕೊಂಡರು. ಇದರಿಂದಾಗಿ ಭೂಕಂದಾಯ ವ್ಯವಸ್ಥೆಗೆ ಸಂಬಂಧಿಸಿದಂತೆ ಹಲವು ಹೊ?
logoblog

Thanks for reading Implications of British rule in India

Previous
« Prev Post

No comments:

Post a Comment