Saturday 6 March 2021

Harappa or the civilization of the Indus plain

  MahitiVedike Com       Saturday 6 March 2021

ಹರಪ್ಪ ಅಥವಾ ಸಿಂದೂ ಬಯಲಿನ ನಾಗರಿಕತೆ 


ಮೊದಲ ಹಂತದ ನಗರೀಕರಣ
ಸುಮಾರು 150 ವರ್ಷಗಳ ಹಿಂದೆ ಪಂಜಾಬಿನ ಸಿಂಧೂ ಕಣಿವೆ ಪ್ರದೇಶದಲ್ಲಿ ರೈಲಿನ ಹಳಿಗಳನ್ನು ಜೋಡಿಸುವಾಗ ಅಲ್ಲಿನ ಇಂಜಿನೀಯರುಗಳು ಹರಪ್ಪ್ಪಾದ ಪ್ರಾಚೀನ ನೆಲೆಗಳನ್ನು ಕಂಡರು.


ಅವರಿಗೆ ಅದೊಂದು ಅತ್ಯುತ್ತಮ ಇಟ್ಟಿಗೆಗಳಿಂದ ಕೂಡಿದ ದಿಣ್ಣೆಯಂತೆ ಕಂಡಿತು ಅದರಲ್ಲಿ ಲಭ್ಯವಾದ ಇಟ್ಟಿಗೆಗಳನ್ನು ಅವರು ರೈಲು ಹಳಿಯ ನಿರ್ಮಾಣದಲ್ಲಿ ಬಳಸಿಕೊಂಡರು. ಈ ರೀತಿಯಾಗಿ ಅಲ್ಲಿ ಹುದುಗಿ ಹೋಗಿದ್ದ ಅನೇಕ ಕಟ್ಟಡಗಳು ಪತ್ತೆಯಾದವು.

ನಂತರದ ದಿನಗಳಲ್ಲಿ ಪ್ರಾಕ್ತನಶಾಸ್ತ್ರಜ್ಞರು ಇದರ ಬಗ್ಗೆ ವೈಜ್ಞಾನಿಕ ಸಂಶೋಧನೆ ಕೈಗೊಂಡರು, ಅದೊಂದು ಪ್ರಾಚೀನ ನಗರವೆಂದು ಅವರಿಗೆ ಮನವರಿಕೆಯಾಯಿತು. ಅಲ್ಲಿ ಸುತ್ತಲು ಕಂಡುಬಂದ ಮತ್ತಿತರ ನೆಲೆಗಳಿಗೂ ಈ ಮೊದಲು ಸಿಕ್ಕನೆಲೆಗಳಿಗೂ ಸಾಮ್ಯತೆ ಇದ್ದ ಕಾರಣ ಅವುಗಳನ್ನು ಹರಪ್ಪದ ನಾಗರಿಕತೆಯೆಂದು ಕರೆಯಲಾಯಿತು.

ಸಿಂಧ್ ಮತ್ತು ಪಂಜಾಬ್ ಪ್ರಾಂತ್ಯಗಳಲ್ಲಿ ಸಿಂಧು ಹಾಗೂ ಅದರ ಉಪನದಿಗಳ ಕಣಿವೆ ಪ್ರದೇಶದಲ್ಲಿ ಶೋಧಗೊಂಡ ಈ ನೆಲೆಗಳೆಲ್ಲವು ಸುಮಾರು 4600 ವರ್ಷಗಳಷ್ಟು ಪುರಾತನ ಕಾಲದ್ದೆಂದು ಭಾವಿಸಲಾಗಿದೆ.

ನಗರಗಳ ವಿಶೇಷತೆ
ಹರಪ್ಪದ ನಗರಗಳಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಭಾಗವನ್ನು ಕಾಣಬಹುದು. ಪಶ್ಚಿಮದ ಭಾಗವು ಕಿರಿದಾಗಿದ್ದು ಅದು ಎತ್ತರದಲ್ಲಿದೆ. ಇದನ್ನು ಪ್ರಾಕ್ತನಶಾಸ್ತ್ರಜ್ಞರು ಕೋಟೆಯೆಂದಿದ್ದಾರೆ. ಸಾಮಾನ್ಯವಾಗಿ ಪೂರ್ವದ ಭಾಗವು ವಿಶಾಲವಾಗಿದ್ದು ಅದು ತಗ್ಗು ಪ್ರದೇಶದಲ್ಲಿದೆ.

ಇದನ್ನು ಕೆಳಗಿನ ಗ್ರಾಮವೆಂದಿದ್ದಾರೆ. ಪ್ರತಿಯೊಂದು ಭಾಗದ ಸುತ್ತಲು ಸುಟ್ಟ ಇಟ್ಟಿಗೆಗಳ ಗೋಡೆಯೊಂದನ್ನು ಕಟ್ಟಿದ್ದರು. ಇಟ್ಟಿಗೆಗಳನ್ನು ಪರಸ್ಪರ ಬೆಸೆಯುವ ರೀತಿಯಲ್ಲಿ ಅಳವಡಿಸಿದ್ದರಿಂದ ಗೋಡೆಯು ಹೆಚ್ಚು ಭದ್ರವಾಗಿತ್ತು. ಕೋಟೆಯ ಒಳಗೆ ಗಮನಾರ್ಹವಾದ ಕಟ್ಟಡಗಳಿದ್ದವು.

ಮೊಹೆಂಜೋದಾರೊವಿನಲ್ಲಿ ಒಂದು ಕೊಳವನ್ನು ಕಟ್ಟಲಾಗಿತ್ತು. ಇದನ್ನು ವಿದ್ವಾಂಸರು ಸ್ನಾನದ ಕೊಳವೆಂದಿದ್ದಾರೆ ಇದನ್ನು ಇಟ್ಟಿಗೆಗಳಿಂದ ಕಟ್ಟಿದ್ದಾರೆ. ಈ ಮೂಲಕ ಕೊಳದಿಂದ ನೀರಿನ ಸೋರಿಕೆ ಆಗದಂತೆ ನಿರ್ಮಿಸಿದ್ದಾರೆ ಇದರ ಎರಡು ಕಡೆಗಳಲ್ಲಿ ಇಳಿಯುವ ಮೆಟ್ಟಿಲುಗಳಿದ್ದು ಸುತ್ತಲು ಕೊಠಡಿಗಳಿವೆ. ಬಹುಶಃ ಇದರ ನೀರಿನ ಪೂರೈಕೆಯು ಬಾವಿಯಿಂದ ಆಗುತಿತ್ತು ಹಾಗೂ ಬಳಕೆಯ ನಂತರ ನೀರನ್ನು ಹೊರಗೆ ಬಿಡಲಾಗುತ್ತಿತ್ತು. ಪ್ರಾಯಶಃ ಈ ಕೊಳದಲ್ಲಿ ಬಹು ಮುಖ್ಯ ವ್ಯಕ್ತಿಗಳು ವಿಶೇಷವಾದ ಸಂದರ್ಭಗಳಲ್ಲಿ ಸ್ನಾನಮಾಡುತ್ತಿದ್ದಿರಬಹುದು

ಕಾಲಿಬಂಗನ್ ಮತ್ತು ಲೋಥಾಲ್ಗಳಲ್ಲಿ ಬೆಂಕಿಯ ಒಲೆಗಳು ಕಂಡುಬಂದಿವೆ

ಮೊಹೆಂಜೋದಾರೊ, ಹರಪ್ಪ ಹಾಗೂ ಲೋಥಾಲದಲ್ಲಿ ಸುವ್ಯವಸ್ಥಿತವಾದ ಸಂಗ್ರಹಣೆಯ ಕೊಠಡಿಗಳನ್ನು ನಿರ್ಮಿಸಿದ್ದರು.

ನಗರ ಯೋಜನೆ
ನಗರದ ತಳ ಪ್ರದೇಶದಲ್ಲಿರುವ ಕೆಳಗಿನ ಗ್ರಾಮವು ಜನವಸತಿ ಜಾಗವಾಗಿತ್ತು.

ಅದನ್ನು ಅತ್ಯಂತ ವ್ಯವಸ್ಥಿತವಾದ ರೀತಿಯಲ್ಲಿ ರಚಿಸಲಾಗಿತ್ತು. ಕ್ರಮಬದ್ಧವಾಗಿ ನಿರ್ಮಿಸಲಾದ ಮನೆಗಳನ್ನು ರಸ್ತೆಗಳನ್ನು ಹಾಗೂ ಚರಂಡಿಗಳನ್ನು ನಾವು ಇಲ್ಲಿ ಕಾಣಬಹುದು.

ಸಾಮಾನ್ಯವಾಗಿ ಜನರು ಒಂದು ಅಥವಾ ಎರಡು ಅಂತಸ್ತಿನ ಮನೆಯನ್ನು ಹೊಂದಿದ್ದರು. ಮನೆಗಳು ಇಟ್ಟಿಗೆಗಳಿಂದ ಕಟ್ಟಲ್ಪಟಿದ್ದು, ಅವುಗಳ ಗೋಡೆಯು ಭದ್ರವಾಗಿದ್ದವು. ಒಳಾಂಗಣದ ಸುತ್ತ ಕೊಠಡಿಗಳು ಇದ್ದವು. ಮನೆಯ ದ್ವಾರವು ರಸ್ತೆಯ ಮಗ್ಗಲಿನಲ್ಲಿದ್ದವು. ಯಾವ ಕಿಟಕಿಗಳೂ ಕೂಡ ರಸ್ತೆಗೆ ಮುಖಮಾಡಿರಲಿಲ್ಲ. ಮನೆಗಳು ಸ್ನಾನದ ಕೊಠಡಿಗಳನ್ನು ಹೊಂದಿದ್ದವು.

ಕೆಲವೊಂದರಲ್ಲಿ ಬಾವಿಗಳಿದ್ದು ಅವುಗಳಿಂದ ನೀರಿನ ಪೂರೈಕೆಯಾಗುತ್ತಿತ್ತು. ನಗರಗಳು ಒಳಚರಂಡಿ ವ್ಯವಸ್ಥೆಯನ್ನು ಹೊಂದಿದ್ದವು. ಇಟ್ಟಿಗೆಯಿಂದ ನಿರ್ಮಿಸಲಾಗಿದ್ದ ಚರಂಡಿಯನ್ನು ಚಪ್ಪಡಿಗಳಿಂದ ಮುಚ್ಚಲಾಗಿತ್ತು.

ಮನೆಯ ಮೋರಿಗಳನ್ನು ಹೊರಗಿನ ಚರಂಡಿಗೆ ಹೊಂದಿಸಲಾಗಿತ್ತು. ಮನೆ ಬಳಕೆಯ ಹಾಗೂ ಸ್ನಾನದಲ್ಲಿ ಬಳಸಿದ ಕಲುಷಿತ ನೀರು ಮೋರಿಯ ಮೂಲಕ ಚರಂಡಿಗೆ ಬಂದು ಸೇರುತ್ತಿದ್ದವು. ಚರಂಡಿಗಳನ್ನು ಕಾಲದಿಂದ ಕಾಲಕ್ಕೆ ಶುಚಿಯಾಗಿಡಲು ಅಲ್ಲಲ್ಲಿ ರಂಧ್ರಗಳನ್ನು ನಿರ್ಮಿಸಿದ್ದರು.

ನಗರ ಜೀವನ
ಕಟ್ಟಡಗಳನ್ನು ಹೊರತುಪಡಿಸಿ ದೊರೆತಿರುವ ವಸ್ತುಗಳಲ್ಲಿ ನಾವು ಲೋಹ ಹಾಗೂ ಬೆಲೆಬಾಳುವ ಹರಳುಗಳನ್ನು ಕಾಣುತ್ತೇವೆ.

ಅತಿ ಹೆಚ್ಚಿನದಾಗಿ ದೊರೆತಿರುವ ವಸ್ತುಗಳಲ್ಲಿ ಮಣಿಗಳನ್ನು ಹಾಗೂ ಮುದ್ರೆಗಳನ್ನು ನಾವು ಕಾಣಲು ಸಾಧ್ಯ.

ಬೆಲೆಬಾಳುವ ಲೋಹಗಳನ್ನು, ಹರಳುಗಳನ್ನು ಮತ್ತು ಆಭರಣಗಳನ್ನು ಇವರು ಬಳಸಿರಬೇಕು. ಮಣಿಗಳನ್ನು ಜನಸಾಮಾನ್ಯರು ಬಳಸಿರಬೇಕು. ಮುದ್ರೆಗಳ ಮೇಲೆ ಇಲ್ಲಿಯವರೆಗೂ ಅರಿಯಲಾಗದ ಲಿಪಿಯಿದೆ. ಇದರಿಂದ ಅಕ್ಷರ ಕಲಿತಿದ್ದ ಜನಗಳಿಗೇನು ಕೊರತೆಯಿರಲಿಲ್ಲ ಎಂದೆನ್ನಬಹುದು. ಹೀಗಾಗಿ ಸಾವಿರಾರು ಮುದ್ರೆಗಳ ಮೇಲೆ ಲಿಪಿಗಳನ್ನು ಮೂಡಿಸಲು ಸಾಧ್ಯವಾಯಿತು.

ಹರಪ್ಪ ಸಂಸ್ಕøತಿಯ ಜನ ಕೃಷಿ ಮತ್ತು ವ್ಯಾಪಾರವನ್ನು ಅವಲಂಬಿಸಿದ್ದರು.

ಗೋಧಿ, ಬಾರ್ಲಿ, ಕಾಳು ಹಾಗೂ ಸಾಸಿವೆ ಇವರ ಮುಖ್ಯ ಬೆಳೆಯಾಗಿತ್ತು. ಹತ್ತಿಯನ್ನು ಬೆಳೆದು ಉಡುಪು ತಯಾರಿಸುವುದನ್ನು ಸಹ ಇವರು ಕಲಿತಿದ್ದರು.

ಹಲವು ನಗರಗಳು ನದಿಯ ದಂಡೆಯ ಮೇಲೆ ಇದ್ದ ಕಾರಣ ಅವರು ನೀರಾವರಿ ಬಲ್ಲವರಾಗಿದ್ದರೆನ್ನಬಹುದು. ಇವರು ಡುಬ್ಬದ ಗೂಳಿ, ದನಗಳು, ಎಮ್ಮೆ, ಕುರಿ, ಮೇಕೆ, ನಾಯಿ ಹಾಗೂ ಕೋಳಿಗಳ ಪಶುಸಂಗೋಪನೆಯಲ್ಲಿ ತೊಡಗಿದ್ದರು. ಎತ್ತುಗಳನ್ನು ಹೊರೆ ಒಯ್ಯಲು ಬಳಸಲಾಗುತ್ತಿತ್ತು.

ಕೃಷಿಯ ಜೊತೆಯಲ್ಲಿ ವ್ಯಾಪಾರ ವಾಣಿಜ್ಯಗಳು ಪ್ರಮುಖ ಸ್ಥಾನವನ್ನು ಪಡೆದುಕೊಂಡಿದ್ದವು. ಇಲ್ಲಿನ ನಗರಗಳು ಗ್ರಾಮೀಣ ಪ್ರದೇಶಗಳ ಜೊತೆಯಲ್ಲಿ ವ್ಯಾಪಾರ ಸಂಪರ್ಕ ಹೊಂದಿದ್ದವು. ಬಲೂಚಿಸ್ತಾನ, ಸೌರಾಷ್ಟ್ರ ಹಾಗೂ ದಖನ್ ಪ್ರದೇಶಗಳು ಇವುಗಳಲ್ಲಿ ಕೆಲವು.

ಮೆಸಪಟೊಮಿಯಾದಲ್ಲಿ ಲಭ್ಯವಾಗಿರುವ ಸಿಂಧೂಕಣಿವೆ ನಾಗರಿಕತೆಗೆ ಸಂಬಂಧಿಸಿದ ಹಲವು ಮುದ್ರೆಗಳು ಅವುಗಳು ಪರಸ್ಪರ ಹೊಂದಿದ್ದ ಸಂಬಂಧವನ್ನು ಸೂಚಿಸುತ್ತವೆ.

ನಗರಗಳ ಅವನತಿ
ಸುಮಾರು 4000 ವರ್ಷಗಳ ಹಿಂದೆ ಇಲ್ಲಿನ ವ್ಯವಸ್ಥೆ ಬದಲಾಗತೊಡಗಿತು. ಅವನತಿಗೆ ಪ್ರಾಕೃತಿಕ ಕಾರಣಗಳೂ ಸೇರಿದಂತೆ ವಿವಿಧ ಕಾರಣಗಳಿದ್ದವು.

ಹರಪ್ಪದ ಕೋಟೆಯ ಸುತ್ತಲಿನ ಗೋಡೆಗಳನ್ನು ಮತ್ತಷ್ಟು ಭದ್ರಪಡಿಸಲಾಯಿತು. ಈ ನಗರದ ಕಡೆಯ ದಿನಗಳಲ್ಲಿ ಅದರ ಪಶ್ಚಿಮ ದ್ವಾರವನ್ನು ಸಂಪೂರ್ಣವಾಗಿ ಮುಚ್ಚಲಾಯಿತು.

ಮೊಹೆಂಜೋದಾರೊವಿನ ವಿಶಾಲ ಕೋಣೆಗಳು ಈಗ ಕಿರಿದಾದವು. ಬೃಹತ್ ಕಟ್ಟಡಗಳು ಈಗ ಕುಟೀರಗಳಾದವು.

ನಗರ ಯೋಜನೆಯಾಗಲಿ, ರಸ್ತೆ ಯೋಜನೆಯಾಗಲಿ ಈ ಸಂದರ್ಭದಲ್ಲಿ ವ್ಯವಸ್ಥಿತವಾಗಿ ಉಳಿಯಲಿಲ್ಲ. ಚರಿತ್ರೆಕಾರರು ನಗರಗಳ ಅವನತಿಗೆ ಅನೇಕ ವಿವರಣೆಗಳನ್ನು ನೀಡಿದ್ದಾರೆ.

ಕೆಲವರು ಬತ್ತಿಹೋದ ನದಿಗಳು, ದಿಕ್ಕು ಬದಲಾದ ನದಿಗಳು ಇದಕ್ಕೆ ಕಾರಣವೆಂದಿದ್ದಾರೆ. ಇನ್ನೂ ಕೆಲವರು ಕಾಡಿನ ನಾಶ ಇದಕ್ಕೆ ಕಾರಣವೆಂದಿದ್ದಾರೆ. ಪ್ರವಾಹಗಳಿಂದ ಜಲಾವೃತಗೊಂಡಿರುವುದು ಇದರ ನಾಶಕ್ಕೆ ಕಾರಣವಿರಬಹುದು.

ಸಿಂಧು ಮತ್ತು ಪಶ್ಚಿಮ ಪಂಜಾಬಿನ ಕೆಲವು ನಿವೇಶನಗಳಲ್ಲಿನ ಜನರು ಆ ಪ್ರದೇಶವನ್ನೇ ಬಿಟ್ಟು ಪೂರ್ವ ಮತ್ತು ದಕ್ಷಿಣದ ಹೊಸ ಪ್ರದೇಶಗಳಿಗೆ ವಲಸೆ ಹೋಗಿರಬಹುದು.

ಗುಜರಾತಿನಲ್ಲಿರುವ ಲೋಥಾಲ್ನ ನಗರದಲ್ಲಿ ಈ ನಾಗರಿಕತೆಯ ಪ್ರಕಿ ್ರಯೆ ಇನ್ನೂ ಅನೇಕ ವರ್ಷಗಳು ಮುಂದುವರೆಯಿತು.

ಮೆಹಂಜೊದಾರೋ: ಮೆಹಂಜೊದಾರೋ ಎಂದರೆ ಮಾಡಿದವರ ದಿಬ್ಬ ಎಂದರ್ಥ.ಇದು ಸಿಂಧ್ ಪ್ರದೇಶದಲ್ಲಿದೆ
ಕಾಲಿಬಂಗನ್: ಇದು ರಾಜಸ್ಥಾನ್‍ನ ಉತ್ತರಭಾಗದಲ್ಲಿ ಒತ್ತಿಹೋಗಿರುವ ಸರಸ್ವತಿ ನದಿ ದಡದಲ್ಲಿದೆ.
ಬನವಾಲಿ: ಹರ್ಯಾಣ ರಾಜ್ಯಕ್ಕೆ ಸೇರಿದ ಸರಸ್ವತಿ ನದಿ ಕಣಿವೆಯಲ್ಲಿನ ಬನವಾಲಿನಗರ ಸಿಂಧೂ ನಾಗರಿಕತೆಯ ಅವಶೇಷಗಳ ಮತ್ತೋಂದು ಕೇಂದ್ರವಾಗಿದೆ.
ಲೋಥಾಲ್:ಗುಜರಾತ್‍ನ ಕ್ಯಾಂಬೆಕೊಲ್ಲಿಯಲ್ಲಿ ಸಮುದ್ರದಿಂದ ಸುಮಾರು 20 ಮೈಲು ದೂರದಲ್ಲಿರುವ ಸಬರ್ ಮತಿ ಮತ್ತು ಮಾಹಿ ನದಿಗಳು ಅದನ್ನು ಸಮೀಪಿಸುತ್ತವೆ.
ದೊಲವೀರನಗರ: ಕಚ್ ನಲ್ಲಿದೆ ಇದು ಹರಪ್ಪ ಮೊಹೆಂಜೊದಾರೋಗಳಂತೆ ಸುಂದರವಾದ ನಗರ ವಿನ್ಯಾಸವುಳ್ಳದ್ದಾಗಿದೆ.

ಸಿಂಧೂ ಸಂಸ್ಕೃತಿ
ಸಿಂಧೂ ನಿವಾಸಿಗಳಲ್ಲಿ ಪಶುಪತಿ ಆರಾಧನೆ ರೂಢಿಯಲ್ಲಿದ್ದಿತು.

ಮಾತೃದೇವತಾರಾಧನೆ ಇವರ ಧಾರ್ಮಿಕ ಜೀವನದಲ್ಲಿ ಪ್ರಧಾನವಾದುದು.

ಅನೇಕ ಮುದ್ರೆಗಳಲ್ಲಿ ಗೂಳಿ ಚಿತ್ರಕಂಡುಬರುತ್ತದೆ.

ದೊರೆತಿರುವ ಯುದ್ದೋಪಕರಣಗಳು ತಾಮ್ರ ಹಾಗೂ ಕಂಚಿನಿಂದ ಮಾಡಲಾದವು.

ವ್ಯಾಪಾರಿಗಳಿದ್ದರು. ಇವರ ವಿದೇಶಿ ವ್ಯಾಪಾರ ಮೆಸಪಟೋಮಿಯಾ ಮತ್ತು ಈಜಿಪ್ಟ್ ದೇಶಗಳೊಂದಿಗಹಡಗುಗಳ ಮೂಲಕ ನಡೆಯುತ್ತಿತ್ತು.

ಪಶುಪಾಲನೆ ಪ್ರಧಾನವಾಗಿರಲಿಲ್ಲ.

ಹರಪ್ಪ ಮತ್ತು ಮೊಹೆಂಜೋದಾರೊಗಳು ಕೈಗಾರಿಕಾನಗರಗಳಾಗಿದ್ದವೆಂದು ಅವಶೇಷಗಳಿಂದಗುರುತಿಸಬಹುದು.

ಸಂಗೀತ, ನೃತ್ಯ ಮುಂತಾದ ಒಳಾಂಗಣ ಆಟಗಳಲ್ಲಿ ಹೆಚ್ಚುಆಸಕ್ತಿಯುಳ್ಳವರಾಗಿದ್ದರು.

ಚಪ್ಪಟೆ ಮೂಗು, ಕಪ್ಪುಬಣ್ಣದ ಮುಖ ಛಾಯೆಯ - ಕುಳ್ಳದೇಹವುಳ್ಳವರು.

ತಮ್ಮದೇ ಆದ ಲಿಪಿಯನ್ನು ಹೊಂದಿದ್ದರು. ಇವರ ಬರವಣಿಗೆ ಬಲದಿಂದ ಎಡಕ್ಕೆ ಹಾಗೂ ಎಡದಿಂದ - ಬಲಕ್ಕೆ

ಅಗ್ನಿಯನ್ನು ಪವಿತ್ರವಾದುದೆಂದು ಪರಿಗಣಿಸಲಿಲ್ಲಾ

ಇವರ ಕಾಲನಿರ್ಣಯದ ಪ್ರಕಾರ ಕ್ರಿಸೂ.3000 ಹರ್ಷವೆಂದು ತಿಳಿಯಲಾಗಿದೆ.

ಇದು ಕಂಚಿನ ಯುಗಕ್ಕೆ ಸೇರಿದೆ

ವಲಸೆಯ ಬದುಕು ಸ್ಥಿರಗೊಂಡಾಗ
ಇವತ್ತಿನ ಕಾಶ್ಮೀರದಲ್ಲಿನ ಬರ್ಜುಹೊಂನಲ್ಲಿ ನೆಲಮನೆಯನ್ನು ಗುರುತಿಸಿದ್ದಾರೆ.

ಅಂದಿನ ಜನ ಭೂಮಿಯೊಳಗೆ ರಂಧ್ರದಂತೆ ಗುಂಡಿಯನ್ನು ತೋಡಿಕೊಂಡು ಅದರೊಳಗೆ ಬದುಕುತ್ತಿದ್ದರು.

ಗುಂಡಿಯೊಳಗೆ ಹೋಗಲು ಮೆಟ್ಟಿಲುಗಳಿದ್ದವು. ಚಳಿ ಹಾಗೂ ಕ್ರೂರ ಮೃಗಗಳಿಂದ ರಕ್ಷಿಸಿಕೊಳ್ಳಲು ಅವರು ಹೀಗೆ ಮಾಡಿಕೊಂಡಿದ್ದರು.

ಇಂತಹ ಗೂಡುಗಳ ಹೊರಗೂ ಹಾಗೂ ಒಳಗೂ ಮಣ್ಣಿನ ಕುಡಿಕೆಗಳು ದೊರೆತಿವೆ. ಇವುಗಳನ್ನು ವಾತಾವರಣಕ್ಕೆ ಅನುಗುಣವಾಗಿ ಗೂಡುಗಳ ಹೊರಗೆ ಹಾಗೂ ಒಳಗೆ ಅಡುಗೆ ಮಾಡಿಕೊಳ್ಳಲು ಉಪಯೋಗಿಸುತ್ತಿದ್ದರು.

ಇರಾನ್ಗೆ ಸಾಗಿಹೋಗುವ ಮಾರ್ಗವಾದ ಬೊಲನ್ಪಾಸಿನ ಫಲವತ್ತಾದ ಮೈದಾನದ ಸಮೀಪದಲ್ಲಿ ಮೆಹರ್ಗರ್ ಎಂಬ ನೆಲೆಯಿದೆ.

ಮೆಹರ್ಗರ್ನ ಜನ ಬಾರ್ಲಿ ಮತ್ತು ಗೋಧಿಯನ್ನು ಬೆಳೆಯುವುದನ್ನು ಹಾಗೂ ಕುರಿ ಮತ್ತು ಮೇಕೆ ಸಾಕುವುದನ್ನು ಕಲಿತಿದ್ದರು. ಇದು ಪ್ರಾಕ್ತನಶಾಸ್ತ್ರಜ್ಞರ ಗಮನಕ್ಕೆ ಬಂದಿರುವ ಮೊಟ್ಟಮೊದಲ ಹಳ್ಳಿ.

ಮೆಹರ್ಗರ್ನ ಜನ ಮನೆಗಳಲ್ಲಿ ವಾಸಿಸುತ್ತಿದ್ದರು. ಕೆಲವು ಮನೆಗಳು ನಾಲ್ಕು ಹಾಗೂ ಹೆಚ್ಚಿನ ಕೊಠಡಿಗಳನ್ನು ಹೊಂದಿದ್ದವು.

ಪ್ರಾಣಿಗಳ ಪಳೆಯುಳಿಕೆಗಳಲ್ಲದೆ ಹಲವು ಸಮಾಧಿಗಳ ನೆಲೆಗಳೂ ಇಲ್ಲಿ ದೊರೆತಿವೆ. ಮನುಷ್ಯರ ಜೊತೆಯಲ್ಲಿಯೇ ಪ್ರಾಣಿಗಳನ್ನು ಇಲ್ಲಿ ಹೂಳುತ್ತಿದ್ದರು

ಗಡಿಗಳು
ಏಚ್ಉತ್ತರದ ತುದಿಯಲ್ಲಿ - ಮಾಂಡ
ಪೂರ್ವದ ತುದಿಯಲ್ಲಿ - ಅಮಲ್ಗಿಪುರ್
ಪಶ್ಚಿಮ ತುದಿಯಲ್ಲಿ - ಸುತ್ಕಜೇಂದರ್
ದಕ್ಷಿಣದ ತುದಿಯಲ್ಲಿ - ದೈಮಾಬಾದ್
ಪ್ರಾಣಿಗಳು:
• ಹುಲ್ಲು, ಗೂಳಿ, ಒಂಟೆ, ಬೆಕ್ಕು, ನಾಯಿ, ಆನೆ, ಕೋಳಿ, ಮೇಕೆ, ಕುದುರೆ, ಪಾರಿವಾಳ, ಹಂದಿ, ಖಡ್ಗಮೃಗ, ಕುರಿ, ಹುಲಿ, ಆಮೆ, ಕೋತಿ

• ಹಸು ಮತ್ತು ಸಿಂಹಗಳ ಯಾವುದೇ ಕುರುಹುಗಳಿಲ್ಲ
ಬೆಳೆಗಳು: • ಗೋಧಿ, ಬಾರ್ಲಿ, ಅಕ್ಕಿ, ಸಾಸಿವೆ, ಬೀಜಗಳು, ಹತ್ತಿ ಮತ್ತು ಒಣ ಹಣ್ಣುಗಳು ವಸಾಹತುಗಳು ಮತ್ತು ನದಿಗಳು:
ಐಎಎಸ್ ಕೆಎಎಸ್ ಪರೀಕ್ಷೆಗಳ ಬಗ್ಗೆ ಹೆಚ್ಚು ಪ್ರಮುಖವಾದ ಅಂಶಗಳು
logoblog

Thanks for reading Harappa or the civilization of the Indus plain

Previous
« Prev Post

No comments:

Post a Comment