Saturday 6 March 2021

Current events

  MahitiVedike Com       Saturday 6 March 2021

ಪ್ರಚಲಿತ ಘಟನೆಗಳು

ಗುರುವಾರ, ಫೆಬ್ರವರಿ 7, 2019
ಕರ್ನಾಟಕದ ಕೆಲವು ಪ್ರಶ್ನೋತ್ತರಗಳು
1) ದೇವನಹಳ್ಳಿ ಕೋಟೆಯನ್ನು ಕಟ್ಟಿಸಿದವರು ಯಾರು?
            
 ಮಲ್ಲಬೈರೆಗೌಡ.

2) ಭಾರತದಲ್ಲಿ ಮೊದಲಬಾರಿಗೆ ಕ್ಷಿಪಣಿಯ ಪ್ರಯೋಗ ಯಾರು ಮಾಡಿದರು?
             ಟಿಪ್ಪು ಸುಲ್ತಾನ್.

3) ಭಾರತದ ಇತಿಹಾಸದಲ್ಲಿ ಅಬೇದ್ಯ ಎಂದು ಕರೆಯಲ್ಪಡುವ ಕೋಟೆ ಯಾವುದು?
             ಚಿತ್ರದುರ್ಗ.

4) "ಕರ್ನಾಟಕ ರತ್ನ ರಮಾರಮಣ" ಎಂಬ ಬಿರುದು ಯಾರಿಗೆ ದೊರಕಿತ್ತು?
            ಕೃಷ್ಣದೇವರಾಯ.

5) ತುಂಗಾ ನದಿಗೆ ಇದ್ದ ಇನ್ನೊಂದು ಹೆಸರೇನು?
            ಪಂಪಾನದಿ.

6) "ಸ್ಟೇಟ್ ಬ್ಯಾಂಕ್ ಆಫ್ ಮೈಸೂರು" ಇದರ ಸಂಸ್ಥಾಪಕರು ಯಾರು?
             ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ.

7) ಕೈಗಾರಿಕಾ ಕ್ರಾಂತಿಗೆ ಒತ್ತು ಕೊಟ್ಟ ಮೊದಲ ರಾಜ ಯಾರು?
             ಹೈದರಾಲಿ.

8) ಕರ್ನಾಟಕದ ಮೊದಲ ಸಕ್ಕರೆ ಕಾರ್ಖಾನೆಯನ್ನು ಎಲ್ಲಿ ಸ್ಥಾಪಿಸಲಾಯಿತು?
            ಶ್ರೀರಂಗ ಪಟ್ಟಣದ ಪಾಲಹಳ್ಳಿ.

9) ಕೆಂಪೇಗೌಡರು ಕಟ್ಟಿಸಿದ ಬೆಂಗಳೂರುಕೋಟೆ ಯಾವ ಊರಿನಲ್ಲಿದೆ?
ಕಲಾಸಿಪಾಳ್ಯ.

10) ವಿಧಾನ ಸೌದ"ವನ್ನು ಕಟ್ಟಿಸಿದವರು ಯಾರು?
ಕೆಂಗಲ್ ಹನುಮಂತಯ್ಯ.

11) ಕನ್ನಡಕ್ಕೆ ಒಟ್ಟು ಎಷ್ಟು "ಜ್ಞಾನಪೀಠ" ಪ್ರಶಸ್ತಿ ದೊರೆತಿದೆ?
7

12) ಮೈಸೂರಿನಲ್ಲಿರುವ "ಬೃಂದಾವನ"ದ ವಿನ್ಯಾಸಗಾರ ಯಾರು?
 "ಸರ್. ಮಿರ್ಜಾ ಇಸ್ಮಾಯಿಲ್"

13) ಕರ್ನಾಟಕದಲ್ಲಿ ಸತತವಾಗಿ ಮೂರು ಸಾರಿ ಮುಖ್ಯಮಂತ್ರಿಯಾಗಿ ಯಾರು ಆಯ್ಕೆಯಾಗಿದ್ದರು?
   
          ರಾಮಕೃಷ್ಣ ಹೆಗ್ಗಡೆ.
14) "ಯುಸುಫಾಬಾದ್" ಎಂದು ಈಗಿನ ಯಾವ ಪ್ರದೇಶವನ್ನು ಕರೆಯುತಿದ್ದರು?
 ದೇವನಹಳ್ಳಿ (ದೇವನದೊಡ್ಡಿ)

15) ಕರ್ನಾಟಕದ ಯಾವ ಸಾಮ್ರಾಜ್ಯ ವೈಭವಕ್ಕೆ ಹೆಸರುವಾಸಿಯಾಗಿತ್ತು?
 ವಿಜಯನಗರ ಸಾಮ್ರಾಜ್ಯ.

16) ಶ್ರೀರಂಗ ಪಟ್ಟಣದ ಶ್ರೀ ರಂಗನಾಥ ಸ್ವಾಮಿಯ ಮೂಲ ದೇಗುಲವನ್ನು ಯಾರು ಕಟ್ಟಿಸಿದರು?
            ತಿರುಮಲಯ್ಯ.

17"ಯದುರಾಯ ರಾಜ ನರಸ ಒಡೆಯರ್" ಕಟ್ಟಿಸಿದ ಕೋಟೆ ಯಾವುದು?
- ಶ್ರೀರಂಗ ಪಟ್ಟಣದ ಕೋಟೆ.

18) ಕರ್ನಾಟಕದಲ್ಲಿ ಸಂಪೂರ್ಣವಾಗಿ ಸಂಸ್ಕೃತ ಭಾಷೆಯನ್ನು ಮಾತನಾಡುವ ಹಳ್ಳಿ ಯಾವುದು?
- ಶಿವಮೊಗ್ಗ ಜಿಲ್ಲೆಯ ಮತ್ತೂರ್.

19) ಕರ್ನಾಟಕದ ಅತಿ ದೊಡ್ಡ ಜಾತ್ರೆ ಯಾವುದು?
- ಶಿರಸಿಯ ಮಾರಿಕಾಂಬ ಜಾತ್ರೆ.

20) ಅಂಗ್ಲ ಭಾಷೆಯ ಸಾಫ್ಟ್ ವೇರ್ ಮತ್ತು ಹಾರ್ಡ್ ವೇರ್ ಪದಗಳಿಗೆ ಕನ್ನಡದ ತಂತ್ರಂಶ ಮತ್ತು ಯಂತ್ರಾಂಶ ಎನ್ನುವ ಪದಗಳನ್ನು ಕೊಟ್ಟವರು ಯಾರು?
- ಹೆಚ್.ಎಸ್.ಕೃಷ್ಣ ಸ್ವಾಮಿ ಅಯ್ಯಂಗಾರ್. (ಹೆಚ್.ಎಸ್.ಕೆ)

21) ರಾಯಚೂರಿನ ಮೊದಲ ಹೆಸರೇನು?
- ಮಾನ್ಯಖೇಟ.

22) ಕನ್ನಡದ ಮೊದಲ ಕೃತಿ ಯಾವುದು?
- ಕವಿರಾಜ ಮಾರ್ಗ

23) ಪಂಪಾಪುರ ಎಂದು ಯಾವ ಪ್ರದೇಶವನ್ನು ಕರೆಯುತ್ತಿದ್ದರು.
ಹಂಪೆ.

24) ಜಗತ್ತಿನ ಎತ್ತರವಾದ ಏಕ ಶಿಲಾ ವಿಗ್ರಹ ಯಾವುದು?
- ಶ್ರಾವಣಬೆಳಗೊಳದ ಗೊಮ್ಮಟೇಶ್ವರ.

25) ಕರ್ನಾಟಕಕ್ಕೆ "ಪರಮವೀರ ಚಕ್ರ" ತಂದುಕೊಟ್ಟ ವೀರ ಕನ್ನಡಿಗ ಯಾರು?
- ಕರ್ನಲ್ ವಸಂತ್.

26) ಕರ್ನಾಟಕದ ಅತಿದೊಡ್ಡ ದೇವಾಲಯ ಯಾವುದು?
- ನಂಜನಗೂಡಿನ ಶ್ರೀ ಕಂಠೇಶ್ವರ ದೇವಾಲಯ.

27) ಕರ್ನಾಟಕದ ಅತಿ ಎತ್ತರವಾದ ಶಿಖರ ಯಾವುದು?
- ಮುಳ್ಳಯ್ಯನ ಗಿರಿ.

28) ಮೈಸೂರು ಅರಮನೆಯ ಹೆಸರೇನು?
- ಅಂಬಾವಿಲಾಸ ಅರಮನೆ.

29) ಕರ್ನಾಟಕಕ್ಕೇ ಮೊದಲು ಕಾಫಿ ಬೀಜವನ್ನು ತಂದವರು ಯಾರು?
            - ಬಾಬಾ ಬುಡನ್ ಸಾಹೇಬ.

30) "ಕರ್ಣಾಟಕದ ಮ್ಯಾಂಚೆಸ್ಟಾರ್ " ಎಂದು ಯಾವ ಜಿಲ್ಲೆಯನ್ನು ಕರೆಯಲಾಗುತ್ತದೆ?
            - ದಾವಣಗೆರೆ.

31) ಕರ್ನಾಟಕದಲ್ಲಿ ಅತಿಹೆಚ್ಚು ಮಳೆ ಬೀಳುವ ಪ್ರದೇಶ ಯಾವುದು?
            - ಆಗುಂಬೆ.

32) ಕರ್ನಾಟಕದ ಅತಿ ಚಿಕ್ಕ ಜಿಲ್ಲೆ ಯಾವುದು?
ಬೆಂಗಳೂರು ನಗರ ಜಿಲ್ಲೆ.

33) ಕರ್ನಾಟಕದ ಮೊದಲ ಉಪಲಬ್ದ ಶಾಸನ ಯಾವುದು?
            - ಹಲ್ಮಿಡಿ ಶಾಸನ.

34) ಕರ್ನಾಟಕದ ರಾಜ್ಯ ಪಕ್ಷಿ ಯಾವುದು?
            - ನೀಲಕಂಠ ಪಕ್ಷಿ.

35) ಕರ್ನಾಟಕದ ಮೊದಲ ಮುಖ್ಯಮಂತ್ರಿ ಯಾರು?
            - ಕೆ.ಸಿ.ರೆಡ್ಡಿ.

36) ಕರ್ನಾಟಕದ ಮೊದಲ ರಾಜ ಪ್ರಮುಖರು (ರಾಜ್ಯಪಾಲರು) ಯಾರು?
- ಶ್ರೀ ಜಯಚಾಮರಾಜ ಒಡೆಯರು.

37) ಕರ್ನಾಟಕದ ಮೊದಲ ಕವಯತ್ರಿ ಯಾರು?
            - ಅಕ್ಕಮಹಾದೇವಿ.

38) ಕನ್ನಡದ ಮೊದಲ ಉಪಲಬ್ದ ಗದ್ಯಕೃತಿ ಯಾವುದು?
            - ವಡ್ಡರಾದನೆ.

39) ಕರ್ನಾಟಕದ ಮೊದಲ ವಿಶ್ವವಿದ್ಯಾನಿಲಯ ಯಾವುದು?
            - ಮೈಸೂರು ವಿಶ್ವವಿಧ್ಯಾನಿಲಯ.

40) ಕನ್ನಡದ ಮೊದಲ ವ್ಯಾಕರಣ ಗ್ರಂಥ ಯಾವುದು? ಬರೆದವರು ಯಾರು?
            - "ಕೇಶಿರಾಜ ವಿರಚಿತ" "ಶಬ್ದಮಣಿ ದರ್ಪಣಂ"

41) "ಕರ್ನಾಟಕ ಶಾಸ್ತ್ರೀಯಾ ಸಂಗೀತ"ದ ಪಿತಾಮಹ ಯಾರು?
            - ಪುರಂದರ ದಾಸರು.

42) ಕರ್ನಾಟಕದ ಯಾವ ಜಿಲ್ಲೆಯಲ್ಲಿ ಉಷ್ಣ ವಿದ್ಯುತ್ ಸ್ಥಾವರವಿದೆ?
            - ರಾಯಚೂರು ಜಿಲ್ಲೆ.

43) ಕರ್ನಾಟಕದ ರೇಷ್ಮೆ ಜಿಲ್ಲೆ ಯಾವುದು?
            - ರಾಮನಗರ.

44) ಕರ್ನಾಟಕದ ಸಕ್ಕರೆ ಜಿಲ್ಲೆ ಯಾವುದು?
            - ಮಂಡ್ಯ ಜಿಲ್ಲೆ.

45) ಕಾವೇರಿ ನದಿಯು ತನ್ನ ಪಾತ್ರದಲ್ಲಿ ಎಷ್ಟು ಜಲಪಾತಗಳನ್ನು ಸೃಷ್ಟಿಸುತ್ತದೆ? ಅವು ಯಾವುದು?
            - ಮೂರು ಜಲಪಾತಗಳು. (೧) ಚುಂಚನ ಕಟ್ಟೆ ಜಲಪಾತ, (೨) ಶಿವನ ಸಮುದ್ರ (೩) ಹೋಗನೆಕಲ್ ಜಲಪಾತ.

46) ಕರ್ನಾಟಕ ರಾಜ್ಯದ ಧ್ವಜದಲ್ಲಿರುವ ಬಣ್ಣಗಳ ಸಂಕೇತ ಏನು?-
            ಹಳದಿ: ಶಾಂತಿಯ ಸಂಕೇತ.ಕೆಂಪು: ಕ್ರಾಂತಿಯ ಸಂಕೇತ

47) ರಾಷ್ಟ್ರ ಧ್ವಜವನ್ನು ನೇಯುವ ಏಕಮಾತ್ರ ಸ್ಥಳ ಕರ್ನಾಟಕದಲ್ಲಿದೆ. ಇದು ಯಾವ ಊರು?
            - ಗರಗ,

48) ಕರ್ನಾಟಕದ ಯಾವ ಜಿಲ್ಲೆಗೆ ರೈಲ್ವೆ ಮಾರ್ಗವಿಲ್ಲ?
            - ಕೊಡಗು.

49) ಕರ್ನಾಟಕದ ಅತಿದೊಡ್ಡ ಅಣೆಕಟ್ಟು ಯಾವುದು?
            - ಲಿಂಗನಮಕ್ಕಿ ಅಣೆಕಟ್ಟು.


50) ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟವರು ಯಾರು?
- ಕುವೆಂಪು.

ಪೋಸ್ಟ್ ಮಾಡಿದವರು Raghavendra S ರಲ್ಲಿ 03:11 ಪೂರ್ವಾಹ್ನ  
ಇದನ್ನು ಇಮೇಲ್ ಮಾಡಿ
ಇದನ್ನು ಬ್ಲಾಗ್ ಮಾಡಿ!
Twitter ಗೆ ಹಂಚಿಕೊಳ್ಳಿ
Facebook ಗೆ ಹಂಚಿಕೊಳ್ಳಿ
Pinterest ಗೆ ಹಂಚಿಕೊಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಪೋಸ್ಟ್ಹಳೆಯ ಪೋಸ್ಟ್ಮುಖಪುಟ
ಇದಕ್ಕೆ ಸಬ್‌ಸ್ಕ್ರೈಬ್‌ ಆಗಿ: ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ (Atom)
ಬ್ಲಾಗ್ ಆರ್ಕೈವ್
▼  2019 (22)
▼  ಫೆಬ್ರವರಿ (21)
FAMOUS HISTORICAL MONUMENTS OF INDIA
REVOLUTION IN INDIA
G.K BULLET POINTS
Biggest, Highest, Largest, Longest In the World
ABBREVIATIONS
First in Awards and Titles World Wide
GK NOTES in Banking
International Organisations and their Headquarters
INDIAN GEOGRAPHY - NICK NAMES OF SOME PLACES
BOOKS AND AUTHORS
IMPORTANT RIVER VALLEY PROJECTS IN INDIA
Lakes of India
Information Technology Abbreviations :
Expand
COUNTRIES & ITS PARLIAMENT
First Women of India With Their Achievements
First in India
Heads of Different Institutions
SPORTS:
TERMS ASSOCIATED WITH SPORTS
ಕರ್ನಾಟಕದ ಕೆಲವು ಪ್ರಶ್ನೋತ್ತರಗಳು
►  ಜನವರಿ (1)
►  2018 (2)
►  2016 (1)
►  2014 (1)
►  2012 (1)
►  2011 (25)
ನನ್ನ ಬಗ್ಗೆ
Raghavendra S
ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ
ಸರಳ ಥೀಮ್. Blogger ನಿಂದ ಸಾಮರ್ಥ್ಯಹೊಂದಿದೆ.
logoblog

Thanks for reading Current events

Previous
« Prev Post

No comments:

Post a Comment