"PSI" ಮತ್ತು"FDA" ಪರೀಕ್ಷೆಯಲ್ಲಿ ಕೇಳಿರುವ ಭೂಗೋಳ ಶಾಸ್ತ್ರದ ಪ್ರಶ್ನೋತ್ತರಗಳು
1) "ಬಿರುಕು ಕಮರಿಯಲ್ಲಿ" ಹರಿಯುವ ನದಿ ಯಾವುದು?
ನರ್ಮದಾ ನದಿ
2) ಗಂಗಾ ನದಿಯ ಅತಿ ದೊಡ್ಡ ಉಪನದಿ ಯಾವುದು?
ಯಮುನಾ ನದಿ
3) ಅರಬ್ಬಿ ಸಮುದ್ರದಲ್ಲಿರುವ ಭಾರತೀಯ ದ್ವೀಪಗಳ ಅತಿಪ್ರಮುಖ ಲಕ್ಷಣವೇನು?
ಅವುಗಳು ಹವಳದ ಮೂಲಗಳಾಗಿವೆ
4) ತಾಮ್ರದ ಅದಿರು ದೊರಕುವ "ಖೇತ್ರಿ" ಪ್ರದೇಶವು ಯಾವ ರಾಜ್ಯದಲ್ಲಿದೆ?
ರಾಜಸ್ಥಾನ್
6) ಭಾರತದ ದಕ್ಷಿಣದ ತುತ್ತ ತುದಿಯ ಪರ್ವತ ಶ್ರೇಣಿ ಯಾವುದು?
ಕಾರ್ಡಮಮ್ ಬೆಟ್ಟಗಳು
7) "ಟಿಬೆಟ್ ನ್ ಕೈಲಾಸ" ಪರ್ವತದಲ್ಲಿ ಉಗಮವಾಗುವ ನದಿಗಳು ಗುಂಪು?
ಬ್ರಹ್ಮಪುತ್ರ, ಸಟ್ಲೆಜ್ ಮತ್ತು ಸಿಂಧೊ
8) ದಕ್ಷಿಣ ಭಾರತದಲ್ಲಿ ಹರಿಯುವ ಅತಿ ಉದ್ದವಾದ ನದಿ ಯಾವುದು?
ಗೋದಾವರಿ
9) ಡಿಸೆಂಬರ್ ತಿಂಗಳಲ್ಲಿ ಯಾವ ಸ್ಥಳವು ಸೌರ ಶಕ್ತಿಯನ್ನು ಪಡೆಯುತ್ತದೆ?
ಚೆನ್ನೈ
10) ಭಾರತದ "ಸಕ್ಕರೆಯ ತೊಟ್ಟಿಲು" ಎಂದು ಯಾವ ರಾಜ್ಯವನ್ನು ಕರೆಯುತ್ತಾರೆ?
ಉತ್ತರಪ್ರದೇಶ
11) ಪಶ್ಚಿಮ ಬಂಗಾಳದ "ರಾಣಿಗಂಜ್" ಪ್ರದೇಶವು ಯಾವ ಖನಿಜದ ಉತ್ಪಾದನೆಗೆ ಪ್ರಸಿದ್ಧಿಯಾಗಿದೆ?
ಕಲ್ಲಿದ್ದಲು
12) "ತೋಡ ಬುಡಕಟ್ಟು ಜನಾಂಗವು" ಎಲ್ಲಿ ಕಂಡುಬರುತ್ತಾರೆ?
ತಮಿಳುನಾಡಿನ ನೀಲಗಿರಿ
13) "ವಜ್ರದ ಗಣಿಗಳು" ಯಾವ ರಾಜ್ಯದಲ್ಲಿವೆ?
ಮಧ್ಯ ಪ್ರದೇಶ್
14) ಭಾರತದಲ್ಲಿ ಅತಿ ಹೆಚ್ಚು ಉತ್ಪಾದನೆಯಾಗುವ ವಿದ್ಯುಚ್ಛಕ್ತಿಯಾವುದು?
ಶಾಖೋತ್ಪನ್ನ ವಿದ್ಯುಚಕ್ತಿ
15)"ಬಾರಾಮುಲ" ಜಲ ವಿದ್ಯುತ್ ಯೋಜನೆ ಯಾವ ಸ್ಥಳದಲ್ಲಿದೆ?
ಜಮ್ಮು ಮತ್ತು ಕಾಶ್ಮೀರ
16) ಪೊಂಗ್ ಆಣೆಕಟ್ಟನ್ನು ಯಾವ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ?
ಬಿಯಾಸ್ ನದಿ
17) ಗುಜರಾತಿನ "ಗಿರ್ ರಾಷ್ಟ್ರೀಯ ಉದ್ಯಾನವನವು" ಯಾವ ಪ್ರಾಣಿಗಳಿಗೆ ಹೆಸರುವಾಸಿಯಾಗಿದೆ?
ಸಿಂಹ
18) ಅಲಹಾಬಾದಿನಲ್ಲಿ ಸಂಗಮವಾಗುವ ನದಿಗಳು ಯಾವುವು?
ಗಂಗಾ, ಯಮುನಾ, ಮತ್ತು ಸರಸ್ವತಿ
19) "ಸಿಮಿಲಿಪಾಲ್ ರಾಷ್ಟ್ರೀಯ ಉದ್ಯಾನವನವು" ಯಾವ ರಾಜ್ಯದಲ್ಲಿದೆ?
ಓಡಿಸಾ
20) ಭಾರತದ ನೆರೆಯಲ್ಲಿರುವ "ಕುದುರೆ ಲಾಳಾಕಾರಾದ" ಹವಳದ ದ್ವೀಪಕ್ಕೆ ಉದಾಹರಣೆ ಎಂದರೆ?
ಲಕ್ಷದ್ವೀಪ
No comments:
Post a Comment