"FDA,SDA," ಪರೀಕ್ಷೆಗಳಲ್ಲಿ ಕೇಳಿರುವ, ಸಂಧಿಗಳ ಮೇಲಿನ ಉದಾಹರಣೆಗಳು
ಲೋಪ ಸಂಧಿಯ ಉದಾಹರಣೆಗಳು
1) ಊರಲ್ಲಿ= ಊರು+ ಅಲ್ಲಿ.
2) ಊರನ್ನು= ಊರು+ ಅನ್ನು,
3) ಬೇರೊಬ್ಬ= ಬೇರೆ+ ಒಬ್ಬ,
4) ಊರೂರು= ಊರು+ ಊರು.
5) ಊರೊಳಗೆ= ಊರು+ ಒಳಗೆ.
6) ಹುಚ್ಚೆದ್ದು= ಹುಚ್ಚು+ ಎದ್ದು,
7) ನಾವೆಲ್ಲಾ= ನಾವು+ ಎಲ್ಲಾ.
ಆಗಮ ಸಂಧಿ ಉದಾಹರಣೆಗಳು
1) ಕೈಯೆತ್ತು= ಕೈ+ ಎತ್ತು,
2) ಈಯಲು= ಈ+ ಅಲು.
3) ಕುಲವನ್ನು= ಕುಲ+ ಅನ್ನು.
4) ಗೋವಿಂದ= ಗೋ+ ಇಂದ,
A) ಯಕಾರಾಗಮ ಸಂಧಿ ಉದಾಹರಣೆಗಳು
1) ಮುದಿಯಪ್ಪ= ಮುದಿ+ ಅಪ್ಪ.
2) ಸ್ತ್ರೀಯರು= ಸ್ತ್ರೀ+ ಅರು.
3) ಕೆರೆಯಲ್ಲಿ= ಕೆರೆ+ ಅಲ್ಲಿ.
4) ಮಳೆಯಿಂದ= ಮಳೆ+ ಇಂದ.
5) ಚಳಿಯಲ್ಲಿ= ಚಳಿ+ ಅಲ್ಲಿ.
6) ಗಾಳಿಯನ್ನು= ಗಾಳಿ+ ಅನ್ನು.
7) ದೊರೆಯೆಂದು= ದೊರೆ+ ಎಂದು.
8) ಶಕ್ತಿಯನ್ನು= ಶಕ್ತಿ+ ಅನ್ನು.
9) ನಾಚಿಕೆಯಾದಿತ್ತು= ನಾಚಿಕೆ+ ಆದೀತು.
B) ವಕಾರಾಗಮ ಸಂಧಿ ಉದಾಹರಣೆಗಳು
1) ಗುರುವನ್ನು= ಗುರು+ ಅನ್ನು,
2) ಗುರುವಿಗೆ= ಗುರು+ ಇಗೆ.
3) ಪಿತೃವನ್ನು= ಪಿತೃ+ ಅನ್ನು.
4) ಹೂವಿಂದ= ಹೂ+ ಇಂದ.
5) ಸ್ಥಿರವಾಗಲಿ= ಸ್ಥಿರ+ ಆಗಲಿ.
6) ಜಗಳವಾಡು= ಜಗಳ+ಆಡು.
ಆದೇಶ ಸಂಧಿಯ ಉದಾಹರಣೆಗಳು
1) ಕಂಬನಿ= ಕಣ್+ಪನಿ.
2) ಮಳೆಗಾಲ= ಮಳೆ+ ಕಾಲ.
3) ಹಳೆಗನ್ನಡ= ಹಳೆ+ಕನ್ನಡ.
4) ಬೆಟ್ಟದಾವರೆ= ಬೆಟ್ಟ+ ತಾವರೆ,
5) ಕಂಗೆಟ್ಟು=ಕಣ್+ಕೆಟ್ಟು.
6) ಅಡಿಗಲ್ಲು= ಅಡಿ+ ಕಲ್ಲು,
7) ಕೆಳದುಟಿ= ಕೆಳ+ ತುಟಿ.
8) ಮನೆಗೆಲಸ= ಮನೆ+ ಕೆಲಸ.
9) ತಲೆಗೊದಲು= ತಲೆ+ ಕೂದಲು.
10) ಹೂಬುಟ್ಟಿ= ಹೂ= ಪುಟ್ಟಿ,
11)ಚಳಿಗಾಲ= ಚಳಿ+ ಕಾಲ.
12) ಹುಲ್ಲುಗಾವಲು= ಹುಲ್ಲು+ ಕಾವಲು.
13) ಮೈದೊಳೆ= ಮೈ+ ತೊಳೆ.
14) ಬೆಂಬತ್ತು= ಬೆನ್+ ಪತ್ತು,
15) ಎಳೆಗರು= ಎಳೆ+ ಕರು,
ಸವರ್ಣದೀರ್ಘ ಸಂಧಿ ಉದಾರಣೆಗಳು
1) ದೇವಾಸುರ= ದೇವ+ ಅಸುರ.
2) ಸುರಾಸುರ= ಸುರ+ ಅಸುರ.
3) ಮಹಾತ್ಮ= ಮಹ+ ಆತ್ಮ,
4) ಗಿರೀಶ= ಗಿರಿ+ ಈಶ,
5) ಕವಿಂದ್ರ= ಕವಿ+ ಇಂದ್ರ.
6) ಗುರೂಪದೇಶ= ಗುರು+ ಉಪದೇಶ,
7) ವಿದ್ಯಾಭ್ಯಾಸ= ವಿದ್ಯ+ ಅಭ್ಯಾಸ,
8) ಶುಭಾಶಯ= ಶುಭ+ ಆಶಯ.
9) ರವೀಂದ್ರ= ರವಿ+ ಇಂದ್ರ.
10) ಭೂಮಿಶ್ವರ= ಭೂಮಿ+ ಈಶ್ವರ,
11) ಜಲಜಾಕ್ಷಿ= ಜಲಜ+ ಅಕ್ಷಿ.
ಗುಣ ಸಂಧಿಯ ಉದಾಹರಣೆಗಳು
1) ಸುರೇಂದ್ರ= ಸುರ+ ಇಂದ್ರ.
2) ಧರೇಂದ್ರ= ಧರಾ+ ಇಂದ್ರ,
3) ಚಂದ್ರೋದಯ= ಚಂದ್ರ+ ಉದಯ.
4) ಸೂರ್ಯೋದಯ= ಸೂರ್ಯ+ ಉದಯ.
5) ಏಕೋನ= ಏಕ+ಊನ.
6) ದೇವರ್ಷಿ= ದೇವ+ ಋಷಿ.
7) ಮಹೇಶ= ಮಹಾ+ ಈಶ.
8) ಮಹರ್ಷಿ= ಮಹಾ+ ಋಷಿ.
9) ಸುರೇಶ= ಸುರ+ ಈಶ.
10) ಕಮಲೋದಯ= ಕಮಲ+ ಉದಯ.
ವೃದ್ಧಿ ಸಂಧಿಗೆ ಉದಾಹರಣೆಗಳು
1) ಏಕೈಕ= ಏಕ+ ಏಕ.
2) ಅಷ್ಟೈಶ್ವರ್ಯ= ಅಷ್ಟ+ ಐಶ್ವರ್ಯ.
3) ಘನೌದಾರ್ಯ= ಘನ+ಔದಾರ್ಯ.
4) ವನೌಷಧಿ= ವನ+ ಔಷಧಿ,
5) ಮಹೌನ್ನತ್ಯ= ಮಹಾ+ಔನ್ನತ್ಯ.
6) ಮಹೌದಾರ್ಯ= ಮಹಾ+ಔದಾರ್ಯ.
7) ಲೋಕೈಕವೀರ= ಲೋಕ+ ಏಕವೀರ.
8) ಶಿವೈಕ್ಯ= ಶಿವ+ ಐಕ್ಯ.
ಜಸ್ವ ಸಂಧಿ ಉದಾರಣೆಗಳು
1) ದಿಗಂತ= ದಿಕ್+ ಅಂತ.
2) ಅಜಂತ= ಅಚ್+ ಅಂತ,
3) ವಾಗ್ದೇವಿ= ವಾಕ್+ ದೇವಿ.
4) ಷಡಂಗ= ಷಟ್+ ಅಂಗ.
5) ಸದ್ಭಾವ= ಸತ್+ ಭಾವ,
6) ಚಿದಾನಂದ= ಚಿತ್+ ಆನಂದ,
7) ಅಬ್ದಿ= ಅಪ್+ದಿ.
8) ಷಡಾನನ= ಷಟ್+ ಆನನ.
9) ಸದಾನಂದ= ಸತ್+ ಆನಂದ.
No comments:
Post a Comment