Monday, 22 March 2021

Elementary School Teachers Recruitment Competitive Competitive Examination 2001 2002

  MahitiVedike Com       Monday, 22 March 2021

ಪ್ರಾಥಮಿಕ ಶಾಲಾ ಶಿಕ್ಷಕ / ಶಿಕ್ಷಕಿಯರ ನೇಮಕಾತಿ  ಸ್ಪರ್ಧಾತ್ಮಕ  ಪರೀಕ್ಷೆ 2001 -2002

 ಸಾಮಾನ್ಯ ಜ್ಞಾನ

  ಫ್ರಾನ್ಸಿನ ಕ್ರಾಂತಿಯು  ಆರಂಭವಾದ ವರ್ಷ
1789

  ಮೊಟ್ಟ ಮೊದಲಿಗೆ ಭಾರತದಲ್ಲಿ ಬಂದು ನೆಲೆಸಿದ ಯುರೋಪಿಯನ್ನರು? 
 ಪೋರ್ಚುಗೀಸರು

  ಅಂತರರಾಷ್ಟ್ರೀಯ ನ್ಯಾಯಾಲಯ ಇರುವ ಸ್ಥಳ? 
 ಹೇಗ್ 

ಭಾರತದ ಸಿಲಿಕಾನ್ ವ್ಯಾಲಿ ಎಂದು ಪ್ರಖ್ಯಾತಿ ಹೊಂದಿರುವ ರಾಜ್ಯ? 
 ಕರ್ನಾಟಕ

  ಥಾಯ್ ಲ್ಯಾಂಡ್ ದೇಶದ ನಾಣ್ಯದ ಹೆಸರು? 
ಬಾಹಟ್ 

 ಬಾಯ್ ಸ್ಕೌಟ್ ಸ್ಥಾಪಿಸಿದವರು 
ಬೇಡನ್ ಪೊವೆಲ್ 

  ಮೊದಲ ಆಧುನಿಕ ಒಲಂಪಿಕ್ ಪಂದ್ಯ ನಡೆದ ಸ್ಥಳ
 ಅಥೇನ್ಸ್ 

  ಭಾರತದ ಕರ್ನಮ್  ಮಲ್ಲೇಶ್ವರಿಗೆ ಒಲಂಪಿಕ್ ಪ್ರಶಸ್ತಿ ದೊರೆಕಿದ  ಕ್ರೀಡೆ
 ವೈಟ್ ಲಿಫ್ಟಿಂಗ್

  ಅತಿ ಹೆಚ್ಚು ಮುಸ್ಲಿಂ ಜನಾಂಗ ಇರುವ ದೇಶ
 ಇಂಡೋನೀಷಿಯಾ

  ಭಾರತದ ಅಮರ್ತ್ಯ ಸೇನ್ ರವರಿಗೆ ನೋಬೆಲ್ ಪಾರಿತೋಷಕ ದೊರಕಿದ ಕ್ಷೇತ್ರ
 ಅರ್ಥಶಾಸ್ತ್ರ

  ಭಾರತದಲ್ಲಿ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿದ್ದವರು
 ಜ್ಯೋತಿ ಬಸು

  ಅರಬಿಂದೊ ಆಶ್ರಮ ಇರುವ ಸ್ಥಳ
 ಪಾಂಡಿಚೇರಿ

 ಅಂತರಾಷ್ಟ್ರೀಯ ಸಾಕ್ಷರತಾ ದಿನವನ್ನು ಆಚರಿಸುವ ತಾರೀಖು 
 ಸೆಪ್ಟೆಂಬರ್ 8ಪ್ರಾಥಮಿಕ ಶಾಲಾ ಶಿಕ್ಷಕ / ಶಿಕ್ಷಕಿಯರ ನೇಮಕಾತಿ  ಸ್ಪರ್ಧಾತ್ಮಕ  ಪರೀಕ್ಷೆ 2001 -2002 
ಸಮಾಜ ವಿಜ್ಞಾನ 

 
 ಸಮಾಜವಾದಕ್ಕೆ ಹೋರತಾದ ವ್ಯಕ್ತಿಯಾರೆಂದರೆ?  
ಕೆನಡಿ ಜೆ. ಎಫ್  
 
 ಒಂದು ದೇಶದ ಆರ್ಥಿಕ ಮಟ್ಟವನ್ನು ತಲಾದಾಯಾವು ನಿರ್ಧರಿಸುತ್ತದೆ. ಆಯಾ ದೇಶಗಳಿಗೆ ಸಂಬಂಧಿಸಿದ ತಲಾದಾಯಾವನ್ನಾ ಧರಿಸಿ ಇಳಿಮುಖವಾಗಿರುವ ದೇಶಗಳು? 
ಅ. ಸಂ. ಸ್ಥಾ. ಬ್ರೆಜಿಲ್. ಭಾರತ 

  ಭಾರತದ ರಿಸರ್ವ್ ಬ್ಯಾಂಕಿನ ಕಾರ್ಯಗಳಿಗೆ ಹೊರತಾದದು..... 
 ಕೈಗಾರಿಕೆಗಳ ನಿತ್ಯದ ಹಣಕಾಸನ್ನು ನಿಭಾಯಿಸುವುದು

  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಸ್ತಿತ್ವಕ್ಕೆ ಬಂದ ಇಸವಿ? 
 1955

  ಭಾರತದ 8 ನೇ ಪಂಚವಾರ್ಷಿಕ ಯೋಜನೆಯ ಅವಧಿಯು ಎಲ್ಲಿಂದ ಎಲ್ಲಿಯವರೆಗೆ ಇದೆ? 
 1992-97 

  ಪ್ರಖ್ಯಾತ ಪ್ರೈರಿ ಹುಲ್ಲುಗಾವಲುಗಳನ್ನು ಹೆಚ್ಚಿರುವುಡಲ್ಲೆಂದರೆ? 
 ಅ. ಸಂ. ಸ್ಥಾ ಮತ್ತು ಕೆನಡಾ

 ಜರ್ಮನಿ ದೇಶದ  ರೂರ್   ಕೈಗಾರಿಕಾ ಪ್ರದೇಶವು ಯಾವ ನದಿಯ ದಡದಲ್ಲಿದೆ? 
 ರೈನ್ 

 ಭೂಮಿಯ ವಾಯುಮಂಡಲದಲ್ಲಿ ಉಷ್ಣಾಂಶ ಮತ್ತು ಒತ್ತಡಗಳೆರಡೂ? 
 ಎತ್ತರ ಹೆಚ್ಚಾದಂತೆಲ್ಲಾ ಅವು  ಕಡಿಮೆಯಾಗುವುವು

  ಭಾರತದಲ್ಲಿ ಆಗುವ ಹೆಚ್ಚಿನ ಮಳೆಯು  ಯಾವ ಬಗೆಯದಾಗಿದೆ? 
 ಭೂಸ್ವರೂಪ ತಡೆಯುವಿಕೆಯಿಂದಾಗುವುದು

 ಆರ್ಟೀಸಿಯನ್ ಬಾವಿಗಳು ಸಾಮಾನ್ಯವಾಗಿ ಕಂಡುಬರುವುದು? 
 ಆಗ್ನೇಯ ಆಸ್ಟ್ರೇಲಿಯಾದ ಸೌಥ್  ವೇಲ್ಸ್ ಪ್ರಾಂತ್ಯದಲ್ಲಿ

 ಮುಗಿದು ಹೋಗದಿರುವ ಸಂಪನ್ಮೂಲಕ್ಕೆ ಉದಾಹರಣೆ ಯಾವುದು? 
 ಕುಲ ವಿದ್ಯುತ್

  ಮಾನವನ ಪ್ರಥಮ ಬಗೆಯ ಉದ್ಯೋಗಗಳಿಗೆ ಹೊರತಾದುದದಾವುದೆಂದರೆ? 
 ಖನಿಜ ಸಂಪತ್ತುಗಳು 

  ಸುಂದರಿ ಮರವು ಯಾವ ಬಗೆಯ ಕಾಡುಗಳಲ್ಲಿ ಕಂಡು ಬರುತ್ತದೆ? 
 ಮ್ಯಾನ್ ಗ್ರೋವ್ ಬಗೆಯ ಕಾಡುಗಳಲ್ಲಿ

  ಪ್ರಪಂಚದಲ್ಲಿ ಭಾರತವು ಪ್ರಥಮ ಸ್ಥಾನದಲ್ಲಿ ಉತ್ಪಾದಿಸುವವು? 
 ಮೈಕಾ  ಮತ್ತು ಚಹಾ

  ಈಶಾನ್ಯ ರೈಲ್ವೆಯ ಕೇಂದ್ರ ಕಚೇರಿ ಎಲ್ಲಿದೆ? 
 ಗೋರಖಪುರ 

 'ಸೊಸೈಟಿ ಆಫ್ ಜೀಸಸ್ 'ನ ಸಂಸ್ಥಾಪಕರು ಯಾರು? 
 ಇಗ್ನೇಸಿಯಸ್ ಲಯೋಲ

  ಆಫ್ರಿಕಾ ಖಂಡದ ದಕ್ಷಿಣ ತುದಿಯನ್ನು 'ಕೇಪ್ ಆಫ್ ಸ್ಟಾರ್ಮ್ಸ್ ' ಎಂದು ಕರೆದ ಪೋರ್ಚುಗೀಸ್ ನಾವಿಕ ಯಾರು? 
 ಬಾರ್ತ ಲೋಮಿಯೋ ಡಯಾಜ್

  ಬಂಗಾಳದ 24 ಪರಗಣಗಳನ್ನು ಬ್ರಿಟಿಷರಿಗೆ ಕೊಟ್ಟವಾನರೆಂದರೆ? 
 ಮೀರಜಾಫರ್

  'ಸತಿ 'ಪದ್ಧತಿಯನ್ನು ನಿಷೇಧಿಸಿದುದು ಯಾರ ಕಾಲದಲ್ಲಿ? 
 ವಿಲಿಯಂ ಬೆಂಟಿಕ್ಸ್ 

 ಕ್ಯೂನಿಫಾರಂ'  ಬಗೆಯ ಚಿನ್ಹಧಾರಿತ  ಭಾಷೆಯನ್ನು ಬಳಸಿದರು ಯಾರು? 
 ಮೆಸಪಟೋಮಿಯಾದವರು

 "ಕವಿರಾಜಮಾರ್ಗ"ವು ಹಿಂದಿನ  ಕನ್ನಡದ ಶ್ರೇಷ್ಠ ಸಾಹಿತ್ಯವಾಗಿದ್ದು, ಅದು ರಚನೆಯಾದದ್ದು ಯಾವ ರಾಜ್ಯವಂಶರ  ಕಾಲದಲ್ಲಿ? 
 ಲಟ್ಟಲೂರಿನ (ಲಾತೂರ)  ರಾಷ್ಟ್ರಕೂಟರು

 ಭಾರತದ ಸಂವಿಧಾನವು ಜಾರಿಗೆ ಬಂದ ತಾರೀಖು  ಯಾವುದು? 
 26 ನೇ ಜನೆವರಿ  1951

  ರಾಜ್ಯಗಳ ನ್ಯಾಯಾಂಗದ ಜಿಲ್ಲಾ ಮಟ್ಟದ ಕೋರ್ಟಿನ ಹೆಸರಾವುದೆಂದರೆ? 
 ಸೆಷನ್ಸ್ ಕೋರ್ಟ್

ವಿಶ್ವ ಸಂಸ್ಥೆಯು (ಯು. ಎನ್. ಒ ) ಸ್ಥಾಪನೆಯಾದ ತಾರೀಖು.... 
 24ನೇ ಅಕ್ಟೋಬರ್ 1945ಪ್ರಾಥಮಿಕ ಶಾಲಾ ಶಿಕ್ಷಕ ಶಿಕ್ಷಕಿಯರ ನೇಮಕಾತಿ ಸಂಯುಕ್ತ ಸ್ಪರ್ಧಾತ್ಮಕ  ಪರೀಕ್ಷೆ 2001 2002 

ವಿಜ್ಞಾನ 

   ದ್ಯುತಿ ಸಂಶ್ಲೇಷಣ ಕ್ರಿಯೆಗೆ ಬೇಕಾಗುವ ಶಕ್ತಿಯ ಮೂಲ 
 ಸೂರ್ಯನ ಬೆಳಕು

 ವಿಟಮಿನ್ ' ಸಿ' ಕೊರತೆಯಿಂದ ಉಂಟಾಗುವ ಅನಾರೋಗ್ಯ
 ಸ್ಕರ್ವಿ

  ಟೆಲಿಫೋನ್ ಕಂಡು ಹಿಡಿದಂತಹ ವಿಜ್ಞಾನಿ
 ಗ್ರಹಾಂಬೆಲ್

 ಯಾವ ಕ್ಷೇತ್ರಕ್ಕೆ ಆಕಾಶಕಾಯಗಳ ಅಧ್ಯಯನ ಸಂಬಂಧಿಸಿದೆ
 ಖಗೋಳಶಾಸ್ತ್ರ

  ವಿದ್ಯುತ್ ಪ್ರವಾಹವನ್ನು ಅಳೆಯುವ ಮಾಪಕ ಯಂತ್ರ
 ಗ್ಯಾಲ್ವನೋಮೀಟರ್

  ಜೈವಿಕ ವಿಕಸನದ ಪರಿಕಲ್ಪನೆಯನ್ನು ಪ್ರತಿಪಾದಿಸಿದವರು? 
 ಚಾರ್ಲ್ ಸ್  ಡಾರ್ವಿನ್

  ದೇಹದ ಯಾವ ಅಂಗವು  ಕ್ಷಯರೋಗಕ್ಕೆ ತುತ್ತಾಗುತ್ತದೆ? 
 ಶ್ವಾಸಕೋಶ

 ದ್ವಿದಳ ಧಾನ್ಯ ದಲ್ಲಿ ಇದು ಯಥೇಚ್ಚರವಾಗಿರುತ್ತದೆ? 
 ಪ್ರೊಟೀನ್

 ಗಳಗಂಡ ಕಾಯಿಲೆಯು ಯಾವ ಕೊರತೆಯಿಂದ ಉಂಟಾಗುತ್ತದೆ? 
 ಆಯೋಡಿನ್

  ಕೋಶದ 'ಶಕ್ತಿ ಗೃಹ'? 
  ಮೈಟೋಕಾಂಡ್ರಿಯಾ

  92 U 235 ನ ಪರಮಾಣು ಬೀಜದಲ್ಲಿನ ಎಲೆಕ್ಟ್ರಾನ್ ಗಳ ಸಂಖ್ಯೆ? 
ಸೊನ್ನೆ 

  ಒಂದು ಖಾಲಿ ಪ್ಲಾಸ್ಕಿನ್ ತೂಕ 17ಗ್ರಾಂ. ಪೂರ್ತಿಮದ್ಯಸಾರದಿಂದ ತುಂಬಿದಾಗ 193 ಗ್ರಾಂ. ತೂಗುತ್ತದೆ. ಮಧ್ಯ ಸಾರದ ಸಾಂದ್ರತೆ 0.80 ಗ್ರಾಂ ಸೆಂ. ಮೀ 3. ಆದರೆ ಪ್ಲಾಸ್ಕಿನ ಗಾತ್ರ. 
220 ಸೆಂ. ಮೀ 3 

 ಕ್ಲೋರಿನ್ ಮೂರು  ಅಣುಗಳನ್ನು ಸರಿಯಾಗಿ ಸೂಚಿಸುವ ರೀತಿ
3CI2

  ವಾಯುಭಾರಮಾಪಕವನ್ನು ಕಲ್ಲಿದ್ದಲು ಗಣಿಯೊಳಗೆ ತೆಗೆದುಕೊಂಡು ಹೋದಾಗ,  ಪಾದರಸದ ಮಟ್ಟವು
 ಏರುತ್ತದೆ 

 ದ್ಯುತಿಸಂಶ್ಲೇಷಣೆ ಮುಂದುವರಿಯಲು, ಅವಶ್ಯಕತೆ ಇಲ್ಲದಿರುವ ಅಂಶ
 ಆಮ್ಲಜನಕ

  ಸೂರ್ಯನಿಗೆ ಅತಿ ಸಮೀಪದ ಗ್ರಹ
 ಬುಧ

  ಕರ್ಪೂರವನ್ನು ಉರಿಸಿದಾಗ
 ದ್ರವರೂಪಕ್ಕೆ ಬಾರದೇ  ಅನಿಲವಾಗುತ್ತದೆ

  ಹುಚ್ಚು ನಾಯಿ ಕಡಿತದಿಂದ ಬರುವ ರೋಗ
 ರೇಬಿಸ್

  ಲೋಹಾಂಶವಿಲ್ಲದ ಕ್ಷಾರ
 ಅಮೋನಿಯಂ ಹೈಡ್ರಾಕ್ಸೈಡ್

  ಮಧ್ಯವರ್ತಿಯ ಅವಶ್ಯಕತೆ ಇಲ್ಲದೆ ಶಾಖ  ಪ್ರಸಾರವಾಗುವ ಬಗೆ. 
 ಉಷ್ಣ ವಿಕಿರಣ

  ಅಕಶೇರುಕಕ್ಕೆ  ಉದಾಹರಣೆ
ಎರೆಹುಳು 

  ಯಾವುದು ರಾಸಾಯನಿಕ ಬದಲಾವಣೆ? 
 ಬೆಣ್ಣೆ ತುಪ್ಪವಾಗುವುದು

 'ಡಿ 'ಜೀವಸತ್ವದ ಕೊರತೆಯಿಂದ ಉಂಟಾಗುವುದು.
 ರಿಕೆಟ್ಸ್

  ಅಡುಗೆ ಸೋಡಾದ ಮತ್ತೊಂದು ಹೆಸರು
 ಸೋಡಿಯಂ ಬೈಕಾರ್ಬೊನೇಟ್

  ಯಾವುದನ್ನು ಅಳೆಯಲು ಜ್ಯೋತಿರ್ವರ್ಷವನ್ನು  ಮೂಲ ಮಾನವಾಗಿ ಬಳಸುವರು
ದೂರ 

 ಸೂಕ್ಷ್ಮಾಣು ಜೀವಿಗಳಲ್ಲಿ ಅತಿ ಸಣ್ಣದು
 ವೈರಸ್

  1.5 ಅಂಪೇರ್ ವಿದ್ಯುತ್ ಪ್ರವಾಹ, 12 ಓಲ್ಡ್ ಕಾರಿನ ದೀಪದ ಮೂಲಕ ಹರಿದರೆ, ಆ ದೀಪದ ಸಾಮರ್ಥ್ಯವು
 18 ವ್ಯಾಟ್

  ಯಾವುದು ಅರೆವಾಹಕ? 
 ಸಿಲಿಕಾನ್

  ಮಾನವನ ದೇಹದ ನಿರುಪಯುಕ್ತ ಅಂಗ
 ಅಪೆಂಡಿಕ್ಸ್

  ಒಂದು ವಸ್ತುವಿನ ಮೇಲೆ 15 ನ್ಯೂಟನ್ ಬಲಪ್ರಯೋಗವಾದಾಗ, 60 ಮೀ. ಸೆಂ2  ವೇಗೋತ್ಕರ್ಷ ಉಂಟಾದರೆ, ಆ ವಸ್ತುವಿನ ದ್ರವ್ಯರಾಶಿ.
0.25ಕಿ ಗ್ರಾಂ. 

  ಆಲ್ಕೈನುಗಳ  ಸಾಮಾನ್ಯ ಸೂತ್ರ
CnH2n-2

  ಅಣುರೂಪದಲ್ಲಿರುವ  ಸಾರಜನಕವನ್ನು ಯಾವುದು ಹೀರಿಕೊಳ್ಳುವ ಶಕ್ತಿ ಹೊಂದಿದೆ? 
 ಬ್ಯಾಕ್ಟೀರಿಯಾ

  ಕತ್ತಲಿನಲ್ಲಿ ವಸ್ತುಗಳನ್ನು ನೋಡಲು ಬಳಸುವ ವಿಕಿರಣ
 ರಕ್ತಾತೀತವಿಕಿರಣ

  ಪ್ರಸಾರವಾಗುತ್ತಿರುವ ಅಡ್ಡಲೆಯ ಒಂದು ಉಬ್ಬು  ಮತ್ತು ಅದರ ಪಕ್ಕದ ತಗ್ಗುಗಳಿರುವ  ದೂರ 0.5 ಮೀ. ಅಲೆಯ ತರಂಗದೂರ. 
1ಮೀ.

logoblog

Thanks for reading Elementary School Teachers Recruitment Competitive Competitive Examination 2001 2002

Previous
« Prev Post

No comments:

Post a Comment