Wednesday 10 March 2021

Brief information on Vijayapur district,

  MahitiVedike Com       Wednesday 10 March 2021


 ವಿಜಯಪುರ ಜಿಲ್ಲೆಯ ಬಗ್ಗೆ ಸಂಕ್ಷಿಪ್ತ ಮಾಹಿತಿ,

 
ರಚನೆಯಾದ ವರ್ಷ- ನಂಬರ್1,  1956,

  ವಿಜಯಪುರ ಜಿಲ್ಲೆಯು 1956 ಕಿಂತ ಮುಂಚೆ ಮುಂಬೈ ಪ್ರಾಂತ್ಯದಲ್ಲಿ ಇತ್ತು, 

 ವಿಜಯಪುರ ಜಿಲ್ಲೆಯನ್ನು ಪಂಚನದಿಗಳ ಜಿಲ್ಲೆ ಎಂದು ಕರೆಯುತ್ತಾರೆ, ಕಾರಣ=( ಕೃಷ್ಣ,  ಮಲಪ್ರಭಾ,  ಘಟಪ್ರಭಾ,  ಧೋನಿ,  ಭೀಮ,  ನದಿಗಳು ಹರಿಯುದರಿಂದ, )

 ಬಿಜಾಪುರ ಜಿಲ್ಲೆಯನ್ನು ಕರ್ನಾಟಕದ ಪಂಜಾಬ್ ಎಂದು ಕರೆಯುತ್ತಾರೆ,

 ವಿಜಯಪುರ ಜಿಲ್ಲೆಯಲ್ಲಿ ಕೂಡಗಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪಿಸಲಾಗಿದೆ, 

 ವಿಜಯಪುರ ಜಿಲ್ಲೆಯಲ್ಲಿ  ಮಹಿಳಾ ವಿಶ್ವವಿದ್ಯಾಲಯ ಇದೆ, ( ಕರ್ನಾಟಕದಲ್ಲಿಯೇ ಮೊದಲ ಮಹಿಳಾ ವಿಶ್ವವಿದ್ಯಾಲ ಇದನ್ನು2003 ರಲ್ಲಿ ಸ್ಥಾಪಿಸಲಾಯಿತು, )

 ಮಹಿಳಾ ವಿಶ್ವವಿದ್ಯಾಲಯವನ್ನು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಎಂದು 2017ರಲ್ಲಿ ನಾಮಕರಣ ಮಾಡಲಾಯಿತು, 

 ವಿಜಯಪುರ ಜಿಲ್ಲೆಯಲ್ಲಿ ಆಲಮಟ್ಟಿ ಜಲಾಶಯ ಅಥವಾ ಲಾಲ್ ಬಹುದ್ದೂರ್ ಶಾಸ್ತ್ರಿ ಜಲಾಶಯನ್ನು  ಕೃಷ್ಣ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ.

 ವಿಜಯಪುರ ಜಿಲ್ಲೆಯ ಕರ್ನಾಟಕದಲ್ಲಿ ಅತಿ ಕಡಿಮೆ ಅರಣ್ಯ ಹೊಂದಿದ ಜಿಲ್ಲೆಯಾಗಿದೆ, ( ಅತಿ ಹೆಚ್ಚು ಅರಣ್ಯ ಹೊಂದಿರುವ ಜಿಲ್ಲೆ "ಉತ್ತರ ಕನ್ನಡಜಿಲ್ಲೆ" )

 ವಿಜಯಪುರ ಜಿಲ್ಲೆಯನ್ನು ಕರ್ನಾಟಕದ ಸೈಕ್ಲಿಂಗ್ ಕ್ಯಾಪಿಟಲ್ ಎಂದು ಕರೆಯುತ್ತಾರೆ,(PC/PSI, KSRP.FDA.

 ವಿಜಯಪುರ ಜಿಲ್ಲೆಯಲ್ಲಿ ನವರಸಪುರ ಉತ್ಸವ ನಡೆಯುತ್ತದೆ,

 ನವರಸಪುರ ಉತ್ಸವ ಸಂಗೀತಕ್ಕೆ ಸಂಬಂಧಿಸಿದೇ,

 ವಿಜಯಪುರ ಜಿಲ್ಲೆಯ ಕೋಟೆಯಲ್ಲಿ ಮಲಿಕ-ಇ-ತೊಪ್  ಮೈದಾನದ ಇಡಲಾಗಿದೆ.( ಈ ತೋಪವನ್ನು "ಅಂಬರದ ರಾಣಿ" ಚಾಂದ್ ಬೇಬಿ ತಂದಳು)

 ಬಿಜಾಪುರ ಜಿಲ್ಲೆಯಲ್ಲಿ ಗಗನ್ ಮಹಲ್,  ಗೋಲ್ ಗುಮಟ್,  ಇಬ್ರಾಹಿಂ ರೋಜಾ,  ಬಾರಾಕಮಾನ್,  ಎಂಬ ಪ್ರಸಿದ್ಧ ಐತಿಹಾಸಿಕ ಕಟ್ಟಡಗಳಿವೆ,  

 "ಗೋಲ್ ಗುಮ್ಮಟ್" ವಿಜಯಪುರ ಜಿಲ್ಲೆಯಲ್ಲಿ ಕಂಡು ಬರುತ್ತದೆ.(DAR-2020)
 
 ಗೋಲ್ ಗುಮ್ಮಟ ಭಾರತದ ಅತಿ ದೊಡ್ಡ ಗುಮ್ಮಟ ವಾಗಿದೆ,

 ಗೋಲಗುಮ್ಮಟವನ್ನು ಮಹಮದ್ ಆದಿಲ್ ಶಾ ಕಟ್ಟಿದನು, ಇದರಲ್ಲಿ ಮೊಮ್ಮದ್ ಆದಿಲ್- ಷಾನ ಸಮಾಧಿ ಇದೆ, 

 ಇಬ್ರಾಹಿಂ ರೋಜಾ ವನ್ನು ದಕ್ಷಿಣ ಭಾರತದ ತಾಜ್ ಮಹಲ್ ಎಂದು ಕರೆಯಲಾಗುತ್ತದೆ,

 ಇಬ್ರಾಹಿಂ ರೋಜಾ ಕಟ್ಟಡವನ್ನು ಎರಡನೇ ಇಬ್ರಾಹಿಂ ಆದಿಲ್ ಷಾ  ಕಟ್ಟಿಸಿದನು,

 ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯ ಬಸವಣ್ಣನವರ ಜನ್ಮಸ್ಥಳವಾಗಿದೆ, ಮತ್ತು ಬಸವನಬಾಗೇವಾಡಿಯಲ್ಲಿ ಬಸವೇಶ್ವರ ದೇವಸ್ಥಾನವಿದೆ,

 ವಿಜಯಪುರ ಜಿಲ್ಲೆಯ ತಾಳಿಕೋಟೆ ಅಥವಾ ರಕ್ಕಸತಂಗಡಿ ಯಲ್ಲಿ ವಿಜಯನಗರ ಅರಸರು ಮತ್ತು ಬಿಜಾಪುರದ ಶಾಹಿಗಳಿಗೆ / ಬಹುಮನಿ ಸುಲ್ತಾನರು ನಡುವೆ ಜನೆವರಿ 26, 1565 ರಲ್ಲಿ ತಾಳಿಕೋಟಿ ಅಥವಾ ರಕ್ಕಸತಂಗಡಿ ಕದನ ನಡೆಯಿತು, ಇದರಲ್ಲಿ ವಿಜಯನಗರ ಅರಸರು ಸೋತು ವಿಜಯನಗರ ಸಾಮ್ರಾಜ್ಯ ಪತನವಾಯಿತು

, ತಾಳಿಕೋಟಿ ಕದನ ನಡೆದಾಗ ವಿಜಯನಗರ ಸಾಮ್ರಾಜ್ಯ ಅರಸ ಸದಾಶಿವರಾಯ, (ಮಂತ್ರಿ ಅಳಿಯ ರಾಮರಾಯ,)

 ವಿಜಯಪುರ ಜಿಲ್ಲೆಯ ಕರ್ನಾಟಕದಲ್ಲಿ ಅತಿ ಹೆಚ್ಚು ದ್ರಾಕ್ಷಿ ಬೆಳೆಯುವ ಜಿಲ್ಲೆಯಾಗಿದೆ,

 ಬಿಜಾಪುರ ಜಿಲ್ಲೆಯ ಕರ್ನಾಟಕದಲ್ಲಿ ಅತಿ ಹೆಚ್ಚು ಜೋಳ ಬೆಳೆಯುವ ಜಿಲ್ಲೆಯಾಗಿದೆ,  

 ವಿಜಯಪುರ ಜಿಲ್ಲೆಯ ಇಂಡಿ ಎಂಬಲ್ಲಿ ಇತ್ತೀಚಿಗೆ ರಾಜ್ಯ ನಿಂಬೆ ಅಭಿವೃದ್ಧಿ ಮಂಡಳಿಯ ಸ್ಥಾಪಿಸಲಾಗಿದೆ,

logoblog

Thanks for reading Brief information on Vijayapur district,

Previous
« Prev Post

No comments:

Post a Comment