Wednesday 10 March 2021

Questionnaires related to microorganisms useful for fDA / SDA tests

  MahitiVedike Com       Wednesday 10 March 2021


FDA/SDA ಪರೀಕ್ಷೆಗಳಿಗೆ ಉಪಯುಕ್ತ ವಾಗುವ ಸೂಕ್ಷ್ಮಾಣುಜೀವಿಗಳಿಗೆ ಸಂಬಂಧಿಸಿದ ಪ್ರಶ್ನೋತ್ತರಗಳು


1)ಬರಿಗಣ್ಣಿಗೆ ಕಾಣದ ಜೀವಿಗಳು –  “ಸೂಕ್ಷ್ಮಾಣು ಜೀವಿಗಳು”

2. ಸೂಕ್ಷ್ಮಾಣು ಜೀವಿಗಳನ್ನು ನೋಡಲು ಬಳಸುವ ಉಪಕರಣ-  “ಸೂಕ್ಷ್ಮದರ್ಶಕ”

3. ಸೂಕ್ಷ್ಮಾಣುಜೀವಿಗಳ ಬಗ್ಗೆ ಅಧ್ಯಯನ ಮಾಡುವ ಜೀವಶಾಸ್ತ್ರದಶಾಖ “ಸೂಕ್ಷ್ಮಣುಜೀವಶಾಸ್ತ್ರ (ಮೈಕ್ರೋಬಯೋಲಜಿ)

4. ಸೂಕ್ಷ್ಮಾಣುಜೀವಿಗಳನ್ನು ಅಳೆಯುವ ಜೀವಮಾನ-  “ಮೈಕ್ರಾನ್”

5. ಸೂಕ್ಷ್ಮಾಣು ಜೀವಶಾಸ್ತ್ರದ ಪಿತಾಮಹಾ-  “ಲೂಯಿಪಾಶ್ಚರ್”.

6. ಸೂಕ್ಷ್ಮಾಣು ಜೀವಿಗಳ ಬಗೆಗಳು –
ವೈರಸ್‍ಗಳು, ಬ್ಯಾಕ್ಟೀರಿಯಾ, ಶೀಲಿಂಧ್ರ, ಪ್ರೋಟೋಜೋವಾ (ಏಕಕೋಶಜೀವಿಗಳು), ಮತ್ತು ಶೈವಲಗಳು.

7. ಇವು ಸಜೀವಿ ಮತ್ತು ನಿರ್ಜೀವಿಗಳ ನಡುವಿನ ಕೊಂಡಿಯಾಗಿದ್ದು, ಅತ್ಯಂತ ಚಿಕ್ಕ ಸೂಕ್ಷ್ಮಾಣುಜೀವಿಗಳಾಗಿವೆ- ವೈರಸ್‍ಗಳು

8. ಜೀವಿಗಳ 5 ಸಾಮ್ರಾಜ್ಯಕ್ಕೆ ಸೇರದ ಜೀವಿಗಳು –  ವೈರಸ್‍ಗಳು

9. ಒಂದು ವೈರಸ್ ಯಾವುದೇ ಜೀವಿಯ ಕೋಶದ ಸಂಪರ್ಕಕ್ಕೆ ಬಂದಾಗ ವೈರಸ್‍ನ ಇದು ಮಾತ್ರ ಪೋಷಕ ಜೀವಿಯೊಳಗೆ ಪ್ರವೇಶವಾಗುತ್ತದೆ-    “ನ್ಯೂಕ್ಲಿಕ್ ಆಮ್ಲ”

10. ವೈರಸ್‍ಗಳು ಯಾವ ಸೂಕ್ಷ್ಮದರ್ಶಕದ ಮೂಲಕ ಮಾತ್ರ ಕಾಣುತ್ತವೆ-   ಎಲೆಕ್ಟ್ರಾನ್ ಸೂಕ್ಷ್ಮದರ್ಶಕ

11. ವೈರಸ್‍ಗಳ ಗಾತ್ರ –   0.015 ರಿಂದ 0.2 ಮೈಕ್ರಾನ್
.
12. ವೈರಸ್‍ಗಳ ವಿಧಗಳು –   ಸಸ್ಯವೈರಸ್, ಪ್ರಾಣಿವೈರಸ್, ಬ್ಯಾಕ್ಟಿರಿಯೋ ಪೇಜ್

13. ‘ಬ್ಯಾಕ್ಟೀರಿಯೋ ಪೇಜ್’ ಎಂದರೆ –  ಬ್ಯಾಕ್ಟಿರಿಯಾಗಳಿಗೆ ಸೋಂಕನ್ನು ಉ0ಟುಮಾಡುವ ವೈರಸ್

14. ವೈರಸ್‍ಗಳಿಂದ ಉಂಟಾಗುವ ರೋಗಗಳು –  ನೆಗಡಿ, ದಡಾರ, ಸಿಡುಬು, ಪೋಲಿಯೋ, ಇನ್‍ಪ್ಲೂಯೆಂಜಾ, ಏಡ್ಸ್, ಕಾಮಾಲೆ , ಮಂಗನಬಾವು, ಕರೋನಾ ಇತ್ಯಾದಿ.

15. ಬ್ಯಾಕ್ಟೀರಿಯಾಗಳ ಗಾತ್ರ-   0.2 ರಿಂದ1.0 ಮೈಕ್ರಾನ್‍ಗಳು.

16. ಬ್ಯಾಕ್ಟೀರಿಯಾಗಳ ಕೋಶಭೀತ್ತಿ ಇವುಗಳಿಂದ ರಚಿತವಾಗಿದೆ-  ಪ್ರೋಟಿನ್ ಮತ್ತು ಕಾರ್ಬೋಹೈಡ್ರೇಟ್

17. ಬ್ಯಾಕ್ಟೀರಿಯಾ ಶಾಸ್ತ್ರದ ಪಿತಾಮಹಾ –  ರಾಬರ್ಟ್ ಕೋಚ್

18. ಒಂದು ಬ್ಯಾಕ್ಟೀರಿಯಾ ವಿಭಜಿಸಿ 2 ಮರಿಕೋಶಗಳಾಗಲು ತೆಗೆದುಕೊಳ್ಳುವ ಸಮಯ –  20 ನಿಮಿಷ

19. ಯಾವ ಅಂಶಗಳು ಬ್ಯಾಕ್ಟೀರಿಯಾಗಳ ಬೆಲವಣಿಗೆಗೆ ಅನೂಕೂಲವಾಗಿದೆ-   ಉಷ್ಣ ಮತ್ತು ತೇವಾಂಶ

20. ಮೊಸರಿನಲ್ಲಿರುವ ಬ್ಯಾಕ್ಟೀರಿಯಾ –    ಲ್ಯಾಕ್ಟೋಬ್ಯಾಸಿಲಿಸ್

21. ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಅನೂಕೂಲವಾದ ಉಷ್ಣಾಂಶ – 30-35 ಡಿಗ್ರಿ ಸೆಲ್ಸಿಯಸ್

22. ಬ್ಯಾಕ್ಟೀರಿಯಾದ ಆಕಾರಗಳು –
• ದಂಡಾಕಾರ -ಬ್ಯಾಸಿಲ್ಲೆ
• ದುಂಡಾಕಾರ – ಕಾಕೈ
• ಸುರುಳಿಯಾಕಾರ – ಸ್ಫೈರಿಲ್ಲೈ
• ಕಾಮಾ ಆಕಾರ – ವಿಬ್ರಿಯೋ

23. ಬ್ಯಾಕ್ಟೀರಿಯಾಗಳಿಂದ ಉಂಟಾಗುವ ರೋಗಗಳು – ನ್ಯೂಮೋನಿಯಾ, ಕ್ಷಯ, ಕಾಲರಾ, ಟೈಪಾಯ್ಡ್, ಧನುರ್ವಾಯು, ಡಿಪ್ತೀರಿಯಾ, ಅಂಥ್ರಾಕ್ಸ್, ಸಿಫಿಲಿಸ್ ಮತ್ತು ಗೋನಿರಿಯಾ ಇತ್ಯಾದಿ.

24. ಯಾವ ಬ್ಯಾಕ್ಟೀರಿಯಾ ಲೆಗ್ಯೂಮ್ ಸಸ್ಯಗಳಲ್ಲಿ ನೈಟ್ರೋಜನ್ ಸ್ಥೀರಿಕರಣ ಉಂಟುಮಾಡುವುದರ ಮೂಲಕ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ.-     “ ರೈಸೋಬಿಯಂ ಬ್ಯಾಕ್ಟೀರಿಯಾ”

25. ಸತ್ತ ಜೀವಿಗಳ ದೇಹವನ್ನು ಮತ್ತು ಕೊಳೆಯುತ್ತಿರುವ ವಸ್ತುಗಳನ್ನು ವಿಘಟಿಸುವ ಸೂಕ್ಷ್ಮಾಣುಜೀವಿಬ್ಯಾಕ್ಟೀರಿಯಾಗಳು

26. ಒಂದೇ ಒಂದು ಜೀವಕೋಶವನ್ನು ಹೊಂದಿರುವ ಜೀವಿಗಳು –   “ಏಕಕೋಶ ಜೀವಿಗಳು” (ಪ್ರೋಟೋಜೋವಾಗಳು)

27. ಏಕಕೋಶಜೀವಿಗಳ ಗಾತ್ರ –     -2 ರಿಂದ 200 ಮೈಕ್ರಾನ್

28. ಏಕಕೋಶ ಜೀವಿಗಳಿಗೆ ಉದಾ – ಅಮೀಬಾ,ಯೂಗ್ಲೀನಾ,ಪ್ಯಾರಾಮೀಸಿಯಂ,ಎಂಟಮೀಬಾ,ಟ್ರೈಪನೋಸೋಮಾ, ಇತ್ಯಾದಿ.

29. ಏಕಕೋಶ ಜೀವಿಗಳಿಂದ ಬರುವ ರೋಗಗಳು – ಮಲೇರಿಯಾ, ಅಮಶಂಕೆ, ನಿದ್ರಾರೋಗ ಇತ್ಯಾದಿ.

30. ಶೀಲಿಂಧ್ರಗಳ ಲಕ್ಷಣಗಳು –
 ಇವು ಪತ್ರಹರಿತ್ತನ್ನು ಹೊಂದಿರುವುದಿಲ್ಲ.
 ಇವು ಕೊಳೆತಿನಿಗಳು
 ಇವುಗಳ ಬೀಜಾಣುಗಳು ಗಾಳಿಯಲ್ಲಿ ಹರಡಿ ವಸ್ತುಗಳ ಮೇಲೆ ಬೆಳೆಯುತ್ತವೆ.

31. ಶೀಲಿಂಧ್ರಗಳ ವಿಧಗಳು –   ಯೀಸ್ಟ್, ಬೂಸ್ಟ್ ಮತ್ತು ಅಣಬೆ

32. ಇದೊಂದು ಏಕಕೋಶ ಶೀಲಿಂಧ್ರವಾಗಿದೆ –  ಯೀಸ್ಟ್

33. ಯೀಸ್ಟ್ ಕೋಶದ ಕೋಶಭೀತ್ತಿಯು ಯಾವುದರಿಂದ ಮಾಡಲ್ಪಟ್ಟಿದೆ –  “ಕೈಟಿನ್”

34. ಬೇಕರಿ ಪದಾರ್ಥಗಳ ಉತ್ಪಾದನೆಯಲ್ಲಿ ಬಳಸುವ ಶೀಲಿಂಧ್ರ –  ಯೀಸ್ಟ್

35. ಶೀಲಿಂಧ್ರಗಳಿಂದ ಮಾನವನಲ್ಲಿ ಉಂಟಾಗುವ ರೋಗಗಳು – ಅಥ್ಲೆಟ್ಸ್‍ಪುಟ್ ಮತ್ತು ಹುಳು ಕಡ್ಡಿರೋಗ

36. ಪೆನ್ಸಿಲಿನ್ ಜೀವನಿರೋಧಕವನ್ನು ಈ ಶೀಲಿಂಧ್ರದಿಂದ ತಯಾರಿಸಲಾಯಿತು. –“ ಪೆನ್ಸಿಲಿಯಂ ನೋಟೇಟಂ”

37. ಆಹಾರವಾಗಿ ಬಳಸಲ್ಪಡುವ ಶೀಲಿಂಧ್ರ –  ಅಣಬೆ

38. ಶೈವಲಗಳ ಗಾತ್ರ –    
1.0 ಮೈಕ್ರಾನ್

39. ಏಕಕೋಶಿಯ ಶೈವಲಕ್ಕೆ ಉದಾ –  “ಕ್ಲಾಮೀಡೋಮೊನಾಸ್”

40.ಅಗಾರ್ ಮತ್ತು ಲಿನಿಕ್ ಆಮ್ಲಗಳನ್ನು ಯಾವುದರಿಂದ ತಯಾರಿಸುತ್ತಾರೆ –   ಶೈವಲಗಳಿಂದ

41. ಸಮುದ್ರದ ದಡದಲ್ಲಿ ಸುಮಾರು 60 ಮೀಟರ್‍ಗಳವರೆಗೆ ಬೆಳೆಯುವ ಕಂದು ಶೈವಲ –   “ ಕೆಲ್ಫ್”

42. ಸಮುದ್ರದಲ್ಲಿ ಶೈವಲಗಳ ಪ್ರಮಾಣ ಹೆಚ್ಚಾದರೆ ಅವುಗಳನ್ನು ಹೀಗೆನ್ನುವರು –    ಸಮುದ್ರ ಕಳೆ

43. ನೈಟ್ರೋಜನ್ ಸ್ಥೀರಿಕರಣ ಕ್ರಿಯೆಯಲ್ಲಿ ಉಪಯುಕ್ತವಾದ ಶೈವಲಗಳು –  
  ನ್ಯಾಸ್ಟಾಕ್, ಅಜೋಲಾ

44. ಯಾವ ವಿಧಧ ಶೈವಲಗಳನ್ನು ಚೀನಾ ಮತ್ತು ಜಪಾನ್ ದೇಶದವರು ಆಹಾರಕ್ಕಾಗಿ ಬಳಸುವರು –  ಕೆಂಪು ಶೈವಲ

45. ಸಮುದ್ರದ ಜೈವಿಕ ಮೀನುಗಾರಿಕೆಗೆ ಕಾರಣವಾದ ಶೈವಲಗಳು –    ಕಂದು ಶೈವಲಗಳು

logoblog

Thanks for reading Questionnaires related to microorganisms useful for fDA / SDA tests

Previous
« Prev Post

No comments:

Post a Comment