Monday, 1 March 2021

Brief about * State Director principles *

  MahitiVedike Com       Monday, 1 March 2021
 *ರಾಜ್ಯ ನಿರ್ದೇಶಕ ತತ್ವಗಳ* ಬಗ್ಗೆ ಸಂಕ್ಷಿಪ್ತ 
               👇👇👇👇👇👇          
 ಸಂವಿಧಾನದ = *36 ರಿಂದ 51ರ* ವಿಧಿಗಳು ರಾಜ್ಯ ನಿರ್ದೇಶಕ ತತ್ವಗಳ ಬಗ್ಗೆ ತಿಳಿಸಿಕೊಡುತ್ತವೆ, 

 ರಾಜ್ಯ ನಿರ್ದೇಶಕ ತತ್ವಗಳು *ಸಂವಿಧಾನದ "ನಾಲ್ಕನೇ" ಭಾಗದಲ್ಲಿ ಅಳವಡಿಸಲಾಗಿದೆ*, 

 ಈ ರಾಜ್ಯ ನಿರ್ದೇಶಕ ತತ್ವಗಳನ್ನು *ಐರ್ಲೆಂಡ್* ದೇಶದಿಂದ ಎರವಲು ಪಡೆಯಲಾಗಿದೆ, 

 ಭಾರತದ ಸಂವಿಧಾನದಲ್ಲಿ *ಕಲ್ಯಾಣ ರಾಜ್ಯ* ಆದರ್ಶವನ್ನು ರಾಜ್ಯ ನಿರ್ದೇಶಕ ತತ್ವಗಳಲ್ಲಿ ಅಳವಡಿಸಲಾಗಿದೆ, 

1935 ರ ಭಾರತ ಸರಕಾರದ ಶಾಸನದಲ್ಲಿರುವ *ಸೂಚನೆಯ ಉಪಕರಣಗಳನ್ನು* ರಾಜ್ಯ ನಿರ್ದೇಶಕ ತತ್ವಗಳಲ್ಲಿ ಅಳವಡಿಸಲಾಗಿದೆ, 

 ರಾಜ್ಯ ನಿರ್ದೇಶಕ ತತ್ವಗಳಲ್ಲಿ *ಗಾಂಧಿ ತತ್ವಗಳು* *ಸಮಾಜವಾದಿ ತತ್ವಗಳು* *ಉದಾರವಾದ ತತ್ವಗಳನ್ನು* ಅಳವಡಿಸಲಾಗಿದೆ, 

 "ಸಂವಿಧಾನದ 36ನೇ ವಿಧಿ"= *ರಾಜ್ಯ* ಎಂಬ ಪದ ಅರ್ಥ ನೀಡಿದೆ, 

 "ಸಂವಿಧಾನದ 37 ನೇ ವಿಧಿ"= *ರಾಜ್ಯ ನಿರ್ದೇಶಕ ತತ್ವಗಳಲ್ಲಿ ಇರುವ ನಿಯಮಗಳನ್ನು ಸರಕಾರ ಜಾರಿ ಮಾಡದಿದ್ದರೆ ನಾವು ನ್ಯಾಯಾಲಯಗಳಲ್ಲಿ ಪ್ರಶ್ನಿಸುವಂತಿಲ್ಲ,*

 "ಸಂವಿಧಾನದ 38 ನೇ ವಿಧಿ"= *ಸಾಮಾಜಿಕ ಅಸಮತೋಲನವನ್ನು ಹೋಗಲಾಡಿಸುವುದು,*

 "ಸಂವಿಧಾನದ 39 ನೇ ವಿಧಿ"= *ಸಮಾನ ಕೆಲಸಕ್ಕೆ ಸಮಾನ ವೇತನ*,

" ಭಾರತ ಸಂವಿಧಾನದಲ್ಲಿ *ಪುರುಷ ಮತ್ತು ಮಹಿಳೆ* ಇಬ್ಬರಿಗೂ ಸಮಾನ ಕೆಲಸಕ್ಕೆ ಸಮಾನ ವೇತನ ನಿಗದಿಪಡಿಸಲಾಗಿದೆ, 

  ಭಾರತದಲ್ಲಿ *1976 ರಲ್ಲಿ* "ಸಮಾನ ಕೆಲಸಕ್ಕೆ ಸಮಾನ ವೇತನ" ಕಾಯ್ದೆಯನ್ನು ಜಾರಿಗೊಳಿಸಲಾಗಿದೆ, 

 "ಸಂವಿಧಾನದ 40 ನೇ ವಿಧಿ"= *ಪಂಚಾಯಿತಿಗಳ ಸ್ಥಾಪನೆ*

 "ಸಂವಿಧಾನದ 41 ನೇ ವಿಧಿ"= *ಮಹಿಳೆಯರಿಗೆ,  ದುರ್ಬಲರಿಗೆ,  ವೃದ್ಧರಿಗೆ,  ಅಂಗವಿಕಲರಿಗೆ ಸಹಾಯ ಮಾಡುವುದು,* 

 ಮಹಿಳೆಯರಿಗೆ ಸಂಬಂಧಪಟ್ಟ ಪ್ರಮುಖ ಯೋಜನೆಗಳು
1) "ಸಂಧ್ಯಾ ಸುರಕ್ಷಾ ಯೋಜನೆ" *ವೃದ್ಧರಿಗೆ* ಸಂಬಂಧಿಸಿದೆ. 

2) "ಪ್ರಧಾನಮಂತ್ರಿ ವಯ ವಂದನ ಯೋಜನೆ"= *ಹಿರಿಯ ನಾಗರಿಕರಿಗೆ ಸಂಬಂಧಿಸಿದೆ*

3) "ಮೈತ್ರಿ ಯೋಜನೆ"= *ಲೈಂಗಿಕ ಅಲ್ಪಸಂಖ್ಯಾತರಿಗೆ ಸಂಬಂಧಿಸಿದೆ*, 

4) "ಮನಸ್ವಿನಿ ಯೋಜನೆ"= *ವಿಧವೆಯರಿಗೆ ಸಂಬಂಧಿಸಿದೆ*

 "ಸಂವಿಧಾನದ 42 ನೇ ವಿಧಿ"= *ಪ್ರಸೂತಿ ಸೌಲಭ್ಯ ನೀಡಲಾಗಿದೆ*

" ಪ್ರಸೂತಿ ಕ್ಷೇಮಾಭಿವೃದ್ಧಿ ಕಾಯ್ದೆಯನ್ನು 1961 ರಲ್ಲಿ ಜಾರಿಗೊಳಿಸಲಾಗಿದೆ.

 "ಸಂವಿಧಾನದ 43ನೇ ವಿಧಿ"= *ಕನಿಷ್ಠ ಕೂಲಿ ಕಾಯ್ದೆ*
" ಕನಿಷ್ಟ ಕೂಲಿ ಕಾಯಿದೆಯನ್ನು *1948 ರಲ್ಲಿ* ಜಾರಿಗೊಳಿಸಲಾಗಿದೆ, 

 "ಸಂವಿಧಾನದ 43(A) ವಿಧಿ"= *ಕಾರ್ಮಿಕರ ಸಂಘಗಳ ಸ್ಥಾಪನೆ*

 "ಸಂವಿಧಾನದ 44ನೇ ವಿಧಿ"= *ಏಕರೂಪ ನಾಗರಿಕ ಸಹಿತೆ*
( ಕಾಮನ್ ಸಿವಿಲ್ ಕೋಡ್)

 "ಸಂವಿಧಾನದ 45ನೇ ವಿಧಿ"= *6 ವರ್ಷದ ಒಳಗಿನ ಮಕ್ಕಳಿಗೆ ಪೂರ್ವಪ್ರಾಥಮಿಕ ಶಿಕ್ಷಣ ನೀಡಬೇಕು*

 "ಸಂವಿಧಾನದ 46ನೇ ವಿಧಿ"= *ಪರಿಶಿಷ್ಟ ಜಾತಿ,  ಪರಿಶಿಷ್ಟ ಪಂಗಡ,  ಹಿಂದುಳಿದ ವರ್ಗದವರಿಗೆ ಸಹಾಯ ನೀಡಬೇಕು*, 

 "ಸಂವಿಧಾನದ 47 ನೇ ವಿಧಿ"= *ಮಧ್ಯಪಾನ ನಿಷೇಧ ಮತ್ತು ಮಾದಕ ವಸ್ತುಗಳ ನಿಷೇಧ ಮಾಡಬೇಕು*

 "ಸಂವಿಧಾನದ 48ನೇ ವಿಧಿ"= *ಗೋಹತ್ಯೆಯನ್ನು ನಿಷೇಧಿಸಬೇಕು, ಅಥವಾ ಹಸು ಮತ್ತು ಕರುಗಳ ಮತ್ತು ಇತರೆ ಕರಾವಿನ ಬಾರ ಎಳೆಯುವ ದನಕರುಗಳನ್ನು ಕಡಿಯುವುದನ್ನು ನಿಷೇಧಿಸುತ್ತದೆ*, 

 "ಸಂವಿಧಾನದ 48(A) ವಿಧಿ"= *ಪರಿಸರವನ್ನು ರಕ್ಷಣೆ ಮಾಡಬೇಕು*
" ಭಾರತದಲ್ಲಿ ವನ್ಯಜೀವಿಗಳ ರಕ್ಷಣಾ ಕಾಯ್ದೆಯನ್ನು *1972 ರಲ್ಲಿ* ಜಾರಿಗೊಳಿಸಲಾಗಿದೆ, 

 "ಸಂವಿಧಾನದ 49 ನೇ ವಿಧಿ"= *ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಮಾಡಬೇಕು*

 "ಸಂವಿಧಾನದ 50 ನೇ ವಿಧಿ"= *ನ್ಯಾಯಾಂಗವನ್ನು ಕಾರ್ಯಾಂಗ ದಿಂದ ಪ್ರತ್ಯೇಕಿಸುವುದು*

 "ಸಂವಿಧಾನದ 51 ನೇ ವಿಧಿ"= *ಅಂತರಾಷ್ಟ್ರೀಯ ಶಾಂತಿ ಹಾಗೂ ಸುರಕ್ಷತೆ ಕಾಪಾಡುವುದು*
=====================
logoblog

Thanks for reading Brief about * State Director principles *

Previous
« Prev Post

No comments:

Post a Comment