Thursday, 25 March 2021

big Breaking News: festival in Karnataka - break of public celebration

  MahitiVedike Com       Thursday, 25 March 2021
Subject : Breaking News 
Subject Language : Kannada
Which Department : all
Place : Karnataka
Announcement Date : 25/03/2021
Subject Format : PDF/JPJ 
Subject Size : 56kb
Pages : 1
Scanned Copy : Yes
Editable Text : NO
Password Protected : NO
Download Link : Yes
Copy Text : NO
Print Enable : Yes
Quality : High
Subject Size Reduced :NO
Password : NO
Cost : Free
For Personal Use Only
Save Environment!!!

Big Breaking News: ಕರ್ನಾಟಕದಲ್ಲಿ ಹಬ್ಬ - ಹರಿದಿನ ಸಾರ್ವಜನಿಕ ಆಚರಣೆಗೆ ಬ್ರೇಕ್, ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ, ಇಲ್ಲಿದೆ ಮಾಹಿತಿ




ಅವಿನಾಶ್‌ ಆರ್ ಭೀಮಸಂದ್ರ

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಕರೋನ ಕೇಸ್‌ ಅನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಬ್ಬ-ಹರಿದಿನ ಆಚರಣೆಗೆ ಸಂಬಂಧ ಪಟ್ಟಂತೆ ನೂತನ ಆದೇಶವನ್ನು ಹೊರಡಿಸಿದೆ. ಇದೇ ವೇಳೆ ಆದೇಶದಲ್ಲಿ ಯುಗಾದಿ ಹಬ್ಬ, ಹೋಳಿ ಹಬ್ಬ, ಗುಡ್ ಫ್ರೈಡೇ, ಶಬ್ ಎ ಬರಾತ್ ಮುಂಬರುವ ಹಬ್ಬಗಳನ್ನು ಸಾರ್ವಜನಿಕವಾಗಿ ಆಚರಣೆ ಮಾಡುವುದಕ್ಕೆ ಕೂಡ ನಿರ್ಬಂಧ ಹೇರಲಾಗಿದೆ.

ಹೊಸದಾಗಿ ಹೊರಡಿಸಿರುವ ಆದೇಶವನ್ನು ಉಲ್ಲಂಘನೆ ಮಾಡಿದ್ರೆ NDMA ಕಾಯ್ದೆಯಡಿ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಅಂತ ತಿಳಿಸಿದೆ. ಯುಗಾದಿ ಹಬ್ಬ, ಹೋಳಿ ಹಬ್ಬ, ಗುಡ್ ಫ್ರೈಡೇ, ಶಬ್ ಎ ಬರಾತ್ ಆಚರಣೆ ಮಾಡುವ ವೇಳೆಯಲ್ಲಿ ಹೆಚ್ಚಿನ ಮಂದಿ ಸೇರುವುದರಿಂದ ಕರೋನ ಸೊಂಕು ಹೆಚ್ಛಳವಾಗುವದನ್ನು ಮನಗಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆಯಂತೆ.


ಹೊಸದಾಗಿ ಜಾರಿಗೆ ತಂದಿರುವ ಆದೇಶವನ್ನು ಬಿಬಿಎಂಪಿ ಆಯುಕ್ತರು ಸೇರಿದಂತೆ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು ಆದೇಶ ಪತ್ರದಲ್ಲಿ ಸೂಚನೆ ನೀಡಿದ್ದಾರೆ.

ಅಂದ ಹಾಗೇ ರಾಜ್ಯದಲ್ಲಿ ಮತ್ತೆ ಕೊರೋನಾ ಆರ್ಭಟ ಮುಂದುವರೆದಿದೆ. ಕಳೆದ 24 ಗಂಟೆಯಲ್ಲಿ 2,523 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 9,78,478ಕ್ಕೆ ಏರಿಕೆಯಾಗಿದೆ. ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಯಲ್ಲಿ ಬೆಂಗಳೂರು ನಗರದಲ್ಲಿ 1,623 ಸೇರಿದಂತೆ ರಾಜ್ಯಾಧ್ಯಂತ 2,523 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಹೀಗಾಗಿ ಸೋಂಕಿತರ ಸಂಖ್ಯೆ 9,78,478ಕ್ಕೆ ಏರಿಕೆಯಾಗಿದೆ. ಇವರಲ್ಲಿ ಇಂದು 1,192 ಸೋಂಕಿತರು ಸೇರಿದಂತೆ ಇದುವರೆಗೆ 9,47,781 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರಿಂದಾಗಿ ಬೆಂಗಳೂರು ನಗರದಲ್ಲಿ 12,472 ಜನರು ಸೇರಿದಂತೆ ರಾಜ್ಯಾಧ್ಯಂತ 18,207 ಸಕ್ರೀಯ ಸೋಂಕಿತರು ಇರುವುದಾಗಿ ತಿಳಿಸಿದೆ. ಇನ್ನೂ ಇಂದು ಕಿಲ್ಲರ್ ಕೊರೋನಾ ಅಟ್ಟಹಾಸ ಮೆರೆದಿದ್ದು, ಬಳ್ಳಾರಿ 01, ಬೆಳಗಾವಿ 01, ಬೆಂಗಳೂರು ನಗರ 06 ಮತ್ತು ಮೈಸೂರು 02 ಜನರು ಸೇರಿದಂತೆ ಒಟ್ಟು 10 ಜನರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ ಬಲಿಯಾದವರ ಸಂಖ್ಯೆ 12,471ಕ್ಕೆ ಏರಿಕೆಯಾಗಿದೆ ಎಂಬುದಾಗಿ ತಿಳಿಸಿದೆ.




 
logoblog

Thanks for reading big Breaking News: festival in Karnataka - break of public celebration

Previous
« Prev Post

No comments:

Post a Comment