Saturday 13 February 2021

Newton's laws of motion

  MahitiVedike Com       Saturday 13 February 2021
*ನ್ಯೂಟನ್ನನ ಚಲನೆಯ ನಿಯಮಗಳು*
                 👇👇👇👇👇
1. *ಮೊದಲನೆಯ ನಿಯಮ:* 

"ಪ್ರತಿ ಕಾಯವು, ಅದರ ಮೇಲೆ ಪ್ರಯೋಗವಾದ ಬಲಗಳಿಂದ ತನ್ನ ಸ್ಥಿತಿಯನ್ನು ಬದಲಿಸುವಂತೆ ಬಲಾತ್ಕರಿಸಲ್ಪಡದೇ ಇದ್ದರೆ, ಅದು ನಾನು ಇದ್ದ ವಿಶ್ರಾಂತ ಸ್ಥಿತಿಯಲ್ಲಿ ಅಥವಾ ಸರರೇಖೆಯಲ್ಲಿ ಏಕರೀತಿಯ ಚಲನೆಯ ಸ್ಥಿತಿಯಲ್ಲಿ ಮುಂದುವರಿಯುತ್ತದೆ.

 ನಿದರ್ಶನಗಳು-  
*ಬಸ್ಸು ದೀಡಿರನೆ ಮುಂದಕ್ಕೆ ಚಲಿಸಿದಾಗ ಬಸ್ಸಿನಲ್ಲಿರುವ ಪ್ರಯಾಣಿಕರು ಹಿಂದಕ್ಕೂ, ಚಲಿಸುತ್ತಿರುವ ಬಸ್ಸು ದಿಡೀರನೆ ನಿಂತಾಗ ಪ್ರಯಾಣಿಕರು ಮುಂದಕ್ಕೆ ವಾಲುತ್ತಾರೆ.*
*ಚಲಿಸುತ್ತಿರುವ ಬಸ್ಸಿನಿಂದ ಹಾರಿ ಇಳಿದರೂ ಮುಂದಕ್ಕೆ ಮುಗ್ಗರಿಸಿ ಬಿದ್ದು ತೀವ್ರ ಗಾಯವಾಗುತ್ತದೆ.*

2. *ಎರಡನೆಯ ನಿಯಮ*

 " ಯಾವುದೇ ಕಾಯದ ವೇಗೋತ್ಕರ್ಷವು, ಆ ಕಾಯದ ಮೇಲೆ ಪ್ರಯೋಗವಾದಾಗ ಬಲದ ದಿಕ್ಕಿನಲ್ಲಿ, ಬಲಕ್ಕೆ ನೇರ ಅನುಪಾತದಲ್ಲಿಯೂ ಕಾಯದ ರಾಶಿಗೆ ವಿಲೋಮ ಅನುಪಾತದಲ್ಲಿಯೂ ಇರುತ್ತದೆ".

ನಿದರ್ಶನಗಳು- 
*ಒಂದು ದೊಡ್ಡ ಮರದ ತುಂಡಿಗೆ ಒಮದು ಬಂದೂಕಿನಿಂದ ಗುಂಡನ್ನು ಹಾರಿಸಲಾಗಿದೆ. ಗುಂಡಿನ ದ್ರವ್ಯರಾಶಿ ಚಿಕ್ಕದಾಗಿದ್ದರೂ ಅದು ಮರದೊಳಗೆ ಹೆಚ್ಚಿನ ದೂರ ಕ್ರಮಿಸುತ್ತದೆ. ಏಕೆಂದರೆ ಅದರ ವೇಗೋತ್ಕರ್ಷ ಹೆಚ್ಚಾಗಿರುತ್ತದೆ.*

ನ್ಯೂಟನ್ನನ ಚಲನೆಯ ಎರಡನೇಯ ನಿಯಮವನ್ನು ಹೀಗೂ ನಿರೂಪಿಸಬಹುದು,.(ಸಂವೇಗ ನಿಯಮ) “ ಸಂವೇಗದ ಬದಲಾವಣೆಯ ದರವು, ಕಾಯದ ಮೇಲೆ ಪ್ರಯೋಗವಾದ ಬಲಕ್ಕೆ ನೇರ ಅನುಪಾತದಲ್ಲಿಯೂ ಮತ್ತು ಪ್ರಯೋಗವಾದ ಬಲದ ದಿಕ್ಕಿನಲ್ಲಿಯೂ ಇರುತ್ತದೆ.

3. *ಮೂರನೇ ನಿಯಮ*

  "ಪ್ರತಿಯೊಂದು ಕ್ರಿಯೆಗೆ ಸಮನಾದ ಮತ್ತು ವಿರುದ್ಧವಾದ ಪ್ರತಿಕ್ರಿಯೆ ಯಾವಾಗಲೂ ಇರುತ್ತದೆ.
ನಿದರ್ಶನಗಳು-
*ವ್ಯಕ್ತಯೊಬ್ಬನು ಈಜುತ್ತಿರುವಾಗ ನೀರನ್ನು ಹಿಂದಕ್ಕೆ ತಳ್ಳಬೇಕಾಗುತ್ತದೆ ಅದೇ ಸಮಯದಲ್ಲಿ ನೀರು ಸಮ ಪ್ರತ್ತಿಕ್ರಿಯೆಯನ್ನು ವಿರುದ್ಧ ದಿಕ್ಕಿನಲ್ಲಿ ಪ್ರಯೋಗಿಸುತ್ತದೆ.*
 ಇದು ನಾವು ಮುಂದಕ್ಕೆ ಚಲಿಸಲು ಸಹಾಯವಾಗುತ್ತದೆ.
ಈ ತತ್ವವನ್ನು *ರಾಕೆಟ್‍ಗಳ ಉಡಾವಣೆಯಲ್ಲಿ ಜೆಟ್ ವಿಮಾನಗಳಲ್ಲಿ ಬಳಸಿಕೊಳ್ಳಲಾಗಿದೆ.*

logoblog

Thanks for reading Newton's laws of motion

Previous
« Prev Post

No comments:

Post a Comment