Saturday, 13 February 2021

ಇತಿಹಾಸ * History section questionnaires heard in PSI exams in different years *

  MahitiVedike Com       Saturday, 13 February 2021
 *ವಿವಿಧ ವರ್ಷಗಳಲ್ಲಿ PSI ಪರೀಕ್ಷಯಲ್ಲಿ ಕೇಳಿರುವ ಇತಿಹಾಸ ವಿಭಾಗದ ಪ್ರಶ್ನೋತ್ತರಗಳು*
                 👇👇👇👇👇👇
1) ನರ್ಮದಾ ನದಿಯ ದಂಡೆಯ ಮೇಲೆ ನಡೆದ ಕದನದಲ್ಲಿ ರಾಜ ಹರ್ಷವರ್ಧನನನ್ನು ಸೋಲಿಸಿದ ಚಾಲುಕ್ಯ ದೊರೆ ಯಾರು? 
 *ಇಮ್ಮಡಿ ಪುಲಿಕೇಶಿ*

2) ಕರ್ನಾಟಕ ರಾಜ್ಯ( ಮೈಸೂರು) ದ ಪ್ರಥಮ ಮುಖ್ಯಮಂತ್ರಿ ಯಾರು? 
 *ಕೆಸಿ ರೆಡ್ಡಿ*

3) ಪ್ರಥಮ ಕನ್ನಡ ಶಾಸನ? 
 *ಹಲ್ಮಿಡಿ ಶಾಸನ*

4) "ಇಲ್ಬರ್ಟ್ ಬಿಲ್' ವಿವಾದಕ್ಕೆ ಸಂಬಂಧಿಸಿದ ವೈಸರಾಯರು? 
 *ಲಾರ್ಡ್ ರಿಪ್ಪನ್*

5) ಯಾವ ಕ್ರಾಂತಿಕಾರಿ ಓರ್ವ ತತ್ವಜ್ಞಾನಿಯಾಗಿ ಬದಲಾದರು? 
 *ಅರವಿಂದ್ ಘೋಷ್*

6) 19 22 ಫೆಬ್ರವರಿ 5ರಂದು ನಡೆದ ಚೌರಾ ಚೌರಿ ಘಟನೆ ನಡೆದ ಸ್ಥಳ? 
 *ಉತ್ತರಪ್ರದೇಶದ ಗೋರ್ಖಪೂರ್*

7)---ಯನ್ನು ಅನೇಕ ವೇಳೆ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಉಲ್ಲೇಖಿಸಲಾಗಿದೆ? 
 *1857*

8) ಗಡಿನಾಡಿನ ಗಾಂಧಿ ಎಂದು ಜನಪ್ರಿಯರಾದವರು ಯಾರು? 
 *ಖಾನ್ ಅಬ್ದುಲ್ ಗಫಾರ್ ಖಾನ್*

9) ಚಿತ್ರಾಂಗ ಶಸ್ತ್ರಗಾರ ದಾಳಿಯ ಹಿಂದಿದ್ದ ಆಲೋಚನೆಯ ಕೂಸು ಯಾವುದಾಗಿತ್ತು? 
 *ಸೂರ್ಯ ಸೇನಾ*

10)1929 ರ ಲಾಹೋರ್ ಕಾಂಗ್ರೆಸ್ ಅಧಿವೇಶನದಲ್ಲಿ ಪೂರ್ಣ ಸ್ವರಾಜ್ಯವನ್ನು ಘೋಷಿಸಿದವರು? 
 *ಜವಾಹರಲಾಲ್ ನೆಹರು*

11) ವಿಜಯಪುರದ ಆದಿಲ್ ಶಾಹಿ ವಂಶ ಸ್ಥಾಪಕ? 
 *ಯೂಸುಫ್ ಆದಿಲ್ ಶಾ*

12) ಶಂಕರಾಚಾರ್ಯರು ಜನಪ್ರಿಯ ತತ್ವ? 
 *ಅದ್ವೈತವ*

13) ಶ್ರೇಷ್ಠ ದೊರೆ ಕೃಷ್ಣದೇವರಾಯ ವಿಜಯನಗರ ಸಾಮ್ರಾಜ್ಯ ಆಳಿದ ಕಾಲ? 
 *1509-1529*

14) ಬ್ರಿಟಿಷರು ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ನಿರ್ಮಾಣಮಾಡಿದ  ಮೊದಲ ಕೋಟೆ ಯಾವುದು? 
 *ಫೋರ್ಟ್ ಸೇಂಟ್ ಜಾರ್ಜ್*

15) ಭಾರತದ ನವೋದಯ ಜನಕ ಎಂದು ಯಾರನ್ನು ಕರೆಯುತ್ತಾರೆ? 
 *ರಾಜಾರಾಮ್ ಮೋಹನ್ ರಾಯ್*

16) ಕರ್ನಾಟಕದ ಶ್ರವಣಬೆಳಗೊಳದ ಪಟ್ಟಣದಲ್ಲಿ ನಡೆದ ಮಹಾಮಸ್ತಾಭಿಷೇಕ ಕಾರ್ಯಕ್ರಮ ಸಂಬಂಧಿಸಿರುವುದು? 
 *ಬಾಹುಬಲಿ*

17) 1954 ರಲ್ಲಿ ಪಾಂಡಿಚೇರಿಯ ಸ್ವತಂತ್ರವಾಗುವ ಮೊದಲು ಯಾವ ಯುರೋಪಿಯನರ ಅಧಿಕಾರವು ಅದನ್ನು ಆಕ್ರಮಿಸಿಕೊಂಡಿತ್ತು? 
 *ಫ್ರೆಂಚರು*

18) ಯಾವ ವೇದಗಳಲ್ಲಿ ಮಾಂತ್ರಿಕ ಯಂತ್ರಗಳ( ಮಾಟ ಮಂತ್ರ) ಬಗ್ಗೆ ಹೇಳುತ್ತದೆ? 
 *ಅಥರ್ವಣ ವೇದ*

19) ಔರಂಗಜೇಬನಿಂದ ಮರಣದಂಡನೆಗೆ ಒಳಗಾದ ಸಿಖರ ಗುರು ಯಾರು? 
 *ತೇಜ್ ಬಹದ್ದೂರ್*

20) ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಸಿನ ಮೊದಲ ಮಹಿಳಾ ಅಧ್ಯಕ್ಷೆ ಯಾರು? 
  *ಅನಿಬೆಸೆಂಟ್*

21) ಒಬ್ಬಂಟಿಯಾಗಿ ಸತ್ಯಾಗ್ರಹ ಮಾಡುವುದಕ್ಕೆ ಆಯ್ಕೆಯಾದ ಮೊದಲ ಸತ್ಯಾಗ್ರಹಿ ಯಾರು? 
  *ವಿನೋಬ ಬಾವೆ*

22) 1857 ರಲ್ಲಿ ನಡೆದ ದಂಗೆಯಲ್ಲಿ ನಾನಾ ಸಾಹೇಬರು ಕೆಳಕಂಡ ಯಾವ ಸ್ಥಳದಿಂದ ಬಂದವರಾಗಿರುತ್ತಾರೆ? 
 *ಕಾನ್ಪುರ್*

23) ಗೀತಗೋವಿಂದ ಪುಸ್ತಕವನ್ನು ಬರೆದವರು? 
  *ಜಯದೇವ*

24) ಪಟ್ಟದಕಲ್ಲು ಮತ್ತು ಐಹೊಳೆ ಸುಂದರ ದೇಗುಲಗಳು ನಿರ್ಮಿಸಿದವರು ಯಾರು 
  *ಬಾದಾಮಿ ಚಾಲುಕ್ಯರು* (DAR-2020)

25) ಕಲ್ಯಾಣಿ ಚಾಲುಕ್ಯರಲ್ಲಿ "ಜಗದೇಕ ಮಲ್ಲ" ಎಂಬ ಬಿರುದು ಪಡೆದವರು? 
 *ಜಯಸಿಂಹ=2*

26) 1857 ರ ಪ್ರಥಮ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಭಾರತದ ಗವರ್ನರ್ ಜನರಲ್ ಯಾರಾಗಿದ್ದರು? 
 *ಲಾರ್ಡ್ ಕ್ಯಾನಿಂಗ್*

27) ಸಂಗಮ ಸಾಹಿತ್ಯವು--- ಆಗಿದೆ? 
 *ದಕ್ಷಿಣ ಭಾರತದ ಪ್ರಾಚೀನ ಇತಿಹಾಸದ ಗುಣ ಲಕ್ಷಗಳನ್ನು ಹೇಳುವ ಮುಂಚಿನ ತಮಿಳು ಸಾಹಿತ್ಯ*

28) ಬಾರ್ಡೋಲಿ ಸತ್ಯಾಗ್ರಹದ(1928) ನಾಯಕ ಯಾರಾಗಿದ್ದರು? 
 *ಸರ್ದಾರ್ ವಲ್ಲಬಾಯ್ ಪಟೇಲ್*

29) ಅಜಂತಾ ಗುಹೆಗಳು ಎಲ್ಲಿವೆ? 
 *ಮಹಾರಾಷ್ಟ್ರ*

30) 1946 ರಲ್ಲಿ ಭಾರತಕ್ಕೆ ಆಗಮಿಸಿದ ಕ್ಯಾಬಿನೆಟ್ ಮಿಷನ್ ಯಾರ  ಮುಂದಾಳತ್ವದಲ್ಲಿ ಇತ್ತು? 
 *ಲಾರ್ಡ್ ಫೆಥಿಕ್ ಲಾರೆನ್ಸ್*

31) ಗ್ರಾಂಡ್ ಟ್ರಂಕ್ ರಸ್ತೆ ಯನ್ನು ಯಾವ ಅಧಿಕಾರಿಯ ಆಳ್ವಿಕೆಯಲ್ಲಿ ನಿರ್ಮಿಸಲ್ಪಟ್ಟಿತು? 
 *ಶೇರ್ ಷಾ ಸೂರಿ*

32) ಮರಾಠ ಸಾಮ್ರಾಜ್ಯ ದಲ್ಲಿ ಮಂತ್ರಿಮಂಡಲದಲ್ಲಿ "ಪ್ರಧಾನಮಂತ್ರಿಯನ್ನು" ಎಂದು ಕರೆಯುತ್ತಿದ್ದರು? 
 *ಪೇಶ್ವೆಗಳು*

33) ಬೀದರಿನಲ್ಲಿ ಪ್ರಸಿದ್ಧವಾದ "ಮದರಸ" ಸ್ಥಾಪಿಸಿದವರು? 
 *ಮಹಮ್ಮದ್ ಗವಾನ್*

34) ಯಾರ ಅರಸರ ಕಾಲದಲ್ಲಿ ಚೀನಾದ ಬೌದ್ಧ ಯಾತ್ರಿಕ "ಹುಯೆನ್ ತ್ಸಾಂಗ್" ಕರ್ನಾಟಕ ಭೇಟಿ ನೀಡಿದ? 
 *ಚಾಲುಕ್ಯರ ಸಾಮ್ರಾಜ್ಯದ ಎರಡನೇ ಪುಲಿಕೇಶಿ*

35) "ಮೃಚ್ಛಕಟಿಕ" ಅಥವಾ ಲಿಟ್ಟಲ ಕ್ಲೇ ಕಾರ್ಟ್ ಅನ್ನು ಬರೆದ ಕವಿ? 
  *ಶೂದ್ರಕ*

36) ಉತ್ತರ ಭಾರತದಲ್ಲಿ ರಾಷ್ಟ್ರಕೂಟ ಸಾಮ್ರಾಜ್ಯ ದೊಡನೆ ಸ್ಪರ್ಧಿಸಲು ಮತ್ತು ಪ್ರಬಲವಾಗಿದ್ದವರು? 
 *ಪಾಲರು ಮತ್ತು ಪ್ರತಿಹಾರರು*

37) ಚಿತ್ತೋಡದ ಪ್ರಖ್ಯಾತ ವಿಜಯಸ್ಥಂಬ ಯಾರ ಕಾಲದಲ್ಲಿ ನಿರ್ಮಾಣವಾಯಿತು? 
 *ಗುಹಿಲರು*(TET-2020)

38) "ಮಾಡು ಇಲ್ಲವೇ ಮಡಿ" ಎಂಬ ಸ್ಲೋಗನ್ ಹಿಡಿದವರು?
 *ಮಹಾತ್ಮ ಗಾಂಧೀಜಿ* 

39) ಹರಪ್ಪದ ಯಾವ ಸ್ಥಳದಲ್ಲಿ ಅಕ್ಕಿಯ ಉಳಿಮೆ ಇತ್ತು? 
 *ಲೋಥಾಲ್*

40) ಕಾಳಿದಾಸನು ಯಾವ ರಾಜನ ಆಸ್ಥಾನದಲ್ಲಿದ್ದನು? 
 *ಎರಡನೇ ಚಂದ್ರಗುಪ್ತ*

41) ಬ್ರಿಟಿಷರ ಭೂಕಂದಾಯ ನೀತಿಗಳಿಂದ ಭಾರತದ ರೈತರು "ಸಾಲದಲ್ಲೇ ಹುಟ್ಟಿ ಸಾಲದಲ್ಲೇ ಬದುಕಿ ಸಾಲದಲ್ಲಿ ಸತ್ತರು" ಎಂದು ಹೇಳಿದವರು? 
 *ಚಾರ್ಲ್ಸ್ ಮೇಕಾಪ್*(TET-2020)

42) ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ಅಶೋಕನ ಶಾಸನವನ್ನು ಪತ್ತೆ ಮಾಡಿದವರು? 
 *ಚಾಲ್ಸ್ ಬೇಡನ್* (TET-2020)

43) ಮೊದಲೇ ಕರ್ನಾಟಿಕ್ ಯುದ್ಧ ಯಾವ ಒಪ್ಪಂದ ಮೂಲಕ ಕೊನೆಗೊಂಡಿತ್ತು? 
  *ಎಕ್ಸ-ಲಾ-ಚಾಪೆಲ್* (TET-2020)

44) ರೈತವಾರಿ ಪದ್ಧತಿಯನ್ನು "ಬಾರಾಮಹಲ್" ಪ್ರಾಂತ್ಯದಲ್ಲಿ ಮೊದಲಿಗೆ ಜಾರಿಗೊಳಿಸಿದವರು? 
 *ಅಲೆಗ್ಸಾಂಡರ್ ರೀಡ್*(TET-2020)

45)1893 ರಲ್ಲಿ ಮಹಾತ್ಮ ಗಾಂಧೀಜಿ ದಕ್ಷಿಣ ಆಫ್ರಿಕಾದ ನಟಾಲಿಗೆ ಹೋಗಲು ಕಾರಣ? 
 *ದಾದಾ ಅಬ್ದುಲ್ ಮತ್ತು ಕಂಪನಿಯ ವಕಾಲತ್ತು ವಹಿಸಲು*(TET-2020)

46) ಮಂದಗಾಮಿಗಳ ಗುಂಪು ಸರಿಯಾದದು? 
 *ಎಂಜಿ ರಾನಡೆ, ಸುರೇಂದ್ರನಾಥ್ ಬ್ಯಾನರ್ಜಿ, ಗೋಪಾಲಕೃಷ್ಣ ಗೋಖಲೆ, ದಾದಾಬಾಯಿ ನವರೋಜಿ,*(TET-2019)
logoblog

Thanks for reading ಇತಿಹಾಸ * History section questionnaires heard in PSI exams in different years *

Previous
« Prev Post

No comments:

Post a comment