*ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಚಲಿತ ಘಟನೆಗಳ ಮೇಲೆ ಕೇಳಬಹುದಾದ ಪ್ರಮುಖ ಪ್ರಶ್ನೋತ್ತರಗಳು*
👇👇👇👇👇👇
1) ಎಸ್ಎಂ ಕೃಷ್ಣ ರವರ ಆತ್ಮಚರಿತ್ರೆ ಹೆಸರು?
*ಸ್ಮೃತಿ ವಾಹಿನಿ*
2) 2019ನೇ ಸಾಲಿನ "ಬಸವ ಕೃಷಿ" ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದವರು?
*ಪ್ರಕಾಶರಾವ್ ವೀರ ಮಲ್*( ತೆಲಂಗಾಣ)
3) 2020ರ ಗಣರಾಜ್ಯೋತ್ಸವಕ್ಕೆ ಕರ್ನಾಟಕದ ಸ್ತಬ್ಧಚಿತ್ರ?
*ಅನುಭವ ಮಂಟಪ*
4) ಕೇಂದ್ರ ಸರ್ಕಾರವು ಬಿಡುಗಡೆ ಮಾಡಿದ ಉತ್ತಮ ಆಡಳಿತ ನಡೆಸುವ ರಾಜ್ಯಗಳಲ್ಲಿ ಮೊದಲ ಸ್ಥಾನ ಪಡೆದ ರಾಜ್ಯ?
*ತಮಿಳುನಾಡು*( ಕರ್ನಾಟಕ- ಮೂರನೇ ಸ್ಥಾನ)
5) ದೇಶದ ಮೊದಲ "ತೃತೀಯ ಲಿಂಗಿಗಳಿಗೆ" ಆರಂಭವಾದ ವಿಶ್ವವಿದ್ಯಾಲಯ ಎಲ್ಲಿದೆ?
*ಉತ್ತರಪ್ರದೇಶದ ಕುಶಿನಗರ*
6) ವಿಶ್ವದ ಅತಿ ಉದ್ದದ ಸುರಂಗ ಮಾರ್ಗ ವಾದ ಹಿಮಾಚಲಪ್ರದೇಶದ ರೋಹ್ತಂಗ್ ಪಾಸಿಗೆ ಯಾರ ಹೆಸರು ಇಡಲಾಯಿತು?
*ಅಟಲ್ ಬಿಹಾರಿ ವಾಜಪೇಯಿ*
7) ಇತ್ತೀಚಿಗೆ ಯಾವ ದೇಶದ ಚಿರತೆಯನ್ನು ಭಾರತಕ್ಕೆ ತರಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ?
*ಆಫ್ರಿಕಾದ ಚರಿತೆಯನ್ನು*
8) 2020 ರ ರಾಷ್ಟ್ರೀಯ ಪ್ರವಾಸೋದ್ಯಮ ಸಮ್ಮೇಳನವನ್ನು ಎಲ್ಲಿ ಆಯೋಜಿಸಲಾಗಿದೆ?
*ಕೊನಾರ್ಕ್*
9) ಪ್ರವಾಹ ಪೀಡಿತ ಮಡಗಾಸ್ಕರ್ ಗೆ ನೆರವು ನೀಡಿದ ಭಾರತದ ಕಾರ್ಯಚರಣೆ ಹೆಸರು?
*ಆಪರೇಷನ್ ವೆನಿಲ್ಲಾ*
10) ಇತ್ತೀಚಿಗೆ ಹತ್ತು ರೂಪಾಯಿಗೆ ಊಟ ನೀಡುವ "ಶಿವ ಭೋಜನ" ಯೋಜನೆಯನ್ನು ಪ್ರಾರಂಭಿಸಿದ ರಾಜ್ಯ?
*ಮಹಾರಾಷ್ಟ್ರ*
11) ಇತ್ತೀಚಿಗೆ ಕೇಂದ್ರ ಸಾರಿಗೆ ಸಚಿವಾಲಯ ರಸ್ತೆ ಯೋಜನೆಗಳ ಮೇಲ್ವಿಚಾರಣೆಗಾಗಿ ಯಾವ ಆನ್ಲೈನ್ ಪೋರ್ಟಲ್ ಪ್ರಾರಂಭಿಸಿದೆ?
*ಗತಿ ಪೋರ್ಟಲ್*
12) ವಿಶ್ವದ ಅತ್ಯಂತ ಮಾಲಿನ್ಯಕಾರಕ ನಗರಗಳ ಪಟ್ಟಿಯಲ್ಲಿರುವ ಭಾರತದ ನಗರಗಳು ಯಾವುವು?
*ಗುರುಗ್ರಾಮ ಮತ್ತು ಗಾಜಿಯಾಬಾದ್*
13) ಇತ್ತೀಚಿಗೆ ಭಾರತೀಯ ವಾಯುಸೇನೆ ಯು ಯಾವ ವಿಮಾನ ಸೇವೆಯನ್ನು ರದ್ದುಗೊಳಿಸಿದರು?
*ಮಿಗ್ 27*
14)2019-20ನೇ ಸಾಲಿನ ಪಂಪ ಪ್ರಶಸ್ತಿಗೆ ಆಯ್ಕೆಯಾದವರು?
*ಡಾಕ್ಟರ್ ಸಿದ್ದಲಿಂಗಯ್ಯ*
15) ಪೌರತ್ವ ತಿದ್ದುಪಡಿ ಕಾಯ್ದೆ(CAA) ವಿರುದ್ಧ ನಿರ್ಣಯ ಅಂಗೀಕರಿಸಿದೆ ದೇಶದ ಮೊದಲ ಮಹಾನಗರ ಪಾಲಿಕೆ?
*ಹೈದರಾಬಾದ್*
16) ಇತ್ತೀಚಿಗೆ ಅಂತರಾಷ್ಟ್ರೀಯ ಗಾಂಧಿ ಪ್ರಶಸ್ತಿಗೆ ಯಾರನ್ನು ನಾಮನಿರ್ದೇಶನ ಮಾಡಲಾಗಿದೆ?
*ಡಾಕ್ಟರ್ ಎಂ.ಎಸ್ ಧರ್ಮಶಕ್ತು*
17) ಅತ್ಯಾಚಾರ ಹಾಗೂ ಮಹಿಳಾ ದೌರ್ಜನ್ಯದ ಪ್ರಕರಣಗಳ ಇತ್ಯರ್ಥಗೊಳಿಸಲು ಆಂಧ್ರ ಸರ್ಕಾರ ಯಾವ ಹೆಸರಿನ ಪೊಲೀಸ್ ಠಾಣೆಗಳನ್ನು ತೆರೆಯಲು ನಿರ್ಣಯಿಸಿದೆ?
*ದಿಶಾ ಪೊಲೀಸ್ ಠಾಣೆ*
18)2020-21ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ "ಬೀಜ ಸಂರಕ್ಷಣೆಗೆ" ಮುಂದಾಗುವ ಮಹಿಳಾ ಸ್ವಸಹಾಯ ಸಂಘಗಳಿಗೆ ಹಣಕಾಸಿನ ನೆರವು ಕಲ್ಪಿಸಲು ಯಾವ ಯೋಜನೆ ಪ್ರಕಟಿಸಲಾಗಿದೆ?
*ಧಾನ್ಯಲಕ್ಷ್ಮಿ ಯೋಜನೆ*
19) ಹಣದುಬ್ಬರವನ್ನು ನಿಭಾಯಿಸಲು ಯಾವ ದೇಶವು ಹೊಸ ಕರೆನ್ಸಿ ಯೊಂದಿಗೆ ತನ್ನ ಕರೆನ್ಸಿಯನ್ನು ಬದಲಾಯಿಸುತ್ತದೆ?
*ಇರಾನ್*
20) ಇತ್ತೀಚಿಗೆ ಮುಂಬೈ ಕರಾವಳಿಗೆ ಅಪ್ಪಳಿಸಿದ ಚಂಡಮಾರುತ?
*ನಿಸರ್ಗ ಚಂಡಮಾರುತ*
21) 2020 ನೇ ಸಾಲಿನ "ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಪ್ರಶಸ್ತಿ" ಪಡೆದ ವಿಮಾನ ನಿಲ್ದಾಣ?
*ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ*
22) ಇತ್ತೀಚಿಗೆ ರಜತಮಹೋತ್ಸವ ಆಚರಿಸಿಕೊಂಡ ವಿಶ್ವವಿದ್ಯಾಲಯ?
*ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ*
23) ಕರ್ನಾಟಕದಲ್ಲಿ ಮನೆರೇಗಾ ಯೋಜನೆಯಲ್ಲಿ 100 ಮಾನವ ದಿನಗಳನ್ನು ಎಷ್ಟು ದಿನಕ್ಕೆ ಹೆಚ್ಚಿಸಲಾಗಿದೆ?
*150 ದಿನಗಳಿಗೆ*(FDA-2021.? )
24) ದೇಶದ ಅತಿ ಎತ್ತರದ ಕಟ್ಟಡ ಎಂಬ ಖ್ಯಾತಿಗೆ ಪಾತ್ರವಾದ ಕಟ್ಟಡ?
*"ದಿ 42"*( ಕೊಲ್ಕತ್ತಾದಲ್ಲಿ 268ಮೀಟರ್)
25) ಕರ್ನಾಟಕ ರಾಜ್ಯದ ಮೊದಲ ತೋಳ ಸಂರಕ್ಷಿತ ಅರಣ್ಯ ಎಂದು ಯಾವ ಅರಣ್ಯವನ್ನು ಘೋಷಿಸಲು ಸರ್ಕಾರ ನಿರ್ಧರಿಸಿದೆ?
*ಕೊಪ್ಪಳ ಜಿಲ್ಲೆಯಲ್ಲಿ ಗಂಗಾವತಿಯ ಬಂಕಾಪುರ ಅರಣ್ಯ*
26) "ಮೇಳಾ ಖೀರ್" ಭವಾನಿ ಉತ್ಸವ ಯಾವ ರಾಜ್ಯದಲ್ಲಿ ಇತ್ತೀಚಿಗೆ ನಡೆಯಿತು?
*ಜಮ್ಮು ಮತ್ತು ಕಾಶ್ಮೀರ*
27) ಇತ್ತೀಚಿಗೆ "ಒನ್ ಫ್ಯಾಮಿಲಿ ಒನ್ ಜಾಬ್" ಯೋಜನೆಯನ್ನು ಯಾವ ರಾಜ್ಯದಲ್ಲಿ ಜಾರಿಗೆ ತಂದಿದ್ದಾರೆ?
*ಸಿಕ್ಕಿಂ*
28) 2022 ರ ಕಾಮನವೇಲ್ತ್ ಕ್ರೀಡಾಕೂಟಕ್ಕೆ ಸೇರ್ಪಡೆಯಾದ ಕ್ರೀಡೆ?
*ಮಹಿಳಾ ಕ್ರಿಕೆಟ್*
29)2020 ರ ಜಾನಪದ ಉತ್ಸವವನ್ನು ಯಾವ ಜಿಲ್ಲೆಯಲ್ಲಿ ನಡಸಿದ್ದಾರೆ?
*ಬೀದರ*
30) ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರವನ್ನು ಯಾವ ಶೈಲಿಯಲ್ಲಿ ನಿರ್ಮಿಸಲಾಗುತ್ತದೆ?
*ನಾಗರ ಶೈಲಿ*
No comments:
Post a Comment