Tuesday 9 February 2021

fDA. SDA. * Very useful information for exams

  MahitiVedike Com       Tuesday 9 February 2021

 *FDA. SDA.* ಪರೀಕ್ಷೆಗಳಿಗೆ ಅತ್ಯಂತ ಉಪಯುಕ್ತವಾದ ಮಾಹಿತಿ
              👇👇👇👇👇👇

 *ಕನ್ನಡ ಸಾಹಿತ್ಯದ ಕವಿ ನುಡಿಗಳು*

1) *ಕುವೆಂಪು*

 "ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ",
 
 "ಕುಮಾರವ್ಯಾಸ ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು", 

 "ಕನ್ನಡ ಎನೆ ಕುಣಿದಾಡುವುದೆನ್ನದೆ ಕನ್ನಡ ಎನೆ ಕಿವಿ ನಿಮಿರುವುದು", 

 "ಕನ್ನಡಕ್ಕೆ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ", 

 "ತೆರೆದಿದೆ ಮನೆ ಓ ಬಾ ಅತಿಥಿ,"
 
" ಏನಾದರೂ ಆಗು ಮೊದಲು ಮಾನವನಾಗು", 

2) *ದರಾ ಬೇಂದ್ರೆ*

" ಸರಸವೇ ಜೀವನ,  ವಿರಸವೇ ಮರಣ, ಸಮರಸವೇ ಜೀವನ," 

 "ಹಕ್ಕಿಹಾರುತಿದೆ ನೋಡಿದಿರಾ," 

" ನನ್ನ ಕೈ ಹಿಡಿದಾಕೆ ಅಳು ನುಂಗಿ ನಗು ಒಮ್ಮೆ",
 
 "ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು", 

 "ಉತ್ತರದ್ರುವದಿಂ, ದಕ್ಷಿಣದ್ರುವಕು ಚುಂಬಕ ಗಾಳಿಯು ಬೀಸುತಿದೆ", 

3) *ಹುಹಿಗೋಳ್  ನಾರಾಯಣರಾವ್* 

" ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು", 

4) *ಬಿಎಂ ಶ್ರೀಕಂಠಯ್ಯ*

 "ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ", 

 "ಕನ್ನಡ ತಾಯಿ ಭಾರತಾಂಬೆ ಹಿರಿಯ ಹೆಣ್ಣು ಮಗಳು", 

5) *ಡಿವಿಜಿ ಗುಂಡಪ್ಪ*

 "ಬದುಕು ಜಟಕಾಬಂಡಿ ವಿಧಿ ಅದರ ಸಾಹೇಬ", 

6) *ಜಿಎಸ್ ಶಿವರುದ್ರಪ್ಪ*

 "ಪ್ರೀತಿ ಇಲ್ಲದ ಮೇಲೆ ಏನನ್ನೂ ಮಾಡಲಾರೆ ದ್ವೇಷವನ್ನು ಕೂಡ", 

" ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ", 

7) *ಗೋವಿಂದ ಪೈ*

 "ತನು ಕನ್ನಡ ಮನ ಕನ್ನಡ ನುಡಿ ಕನ್ನಡ", 

8) *ಗೋಪಾಲಕೃಷ್ಣ ಅಡಿಗ*

 "ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು", 

9) *ನಿಸಾರ್ ಅಹಮದ್*

 "ತಾಯಿ ನಿನಗೆ ನಿತ್ಯೋತ್ಸವ",

10) *ನರಸಿಂಹಚಾರ* 

 "ಇಟ್ಟರೆ ಸಗಣಿಯಾದೆ ತಟ್ಟಿದರೆ ಕುರುಳಾದೆ", 

11) *ಚೆನ್ನವೀರ ಕಣವಿ*

 "ವಿದ್ಯಾ ವಿನೂತನ ವಿದ್ಯಾ ಚೇತನ ಸರ್ವ ಹೃದಯ ಸಂಸ್ಕಾರಿ", 

 "ಮೂರು ದಿನದ ಬಾಳು ಮಗಮಗಿಸುತಿರಲಿ", 

12) *ಕೆ ಎಸ್ ನರಸಿಂಹಸ್ವಾಮಿ*

" ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು", 

13) *ಮುದ್ದಣ್ಣ*

 "ಪದ್ಯಂ ವದ್ಯಂ ಗದ್ಯಂ ಹೃದ್ಯಂ"

 "ಕನ್ನಡಂ ಕತ್ತುರಿಯಂತೆ".

 "ನೀರಿಳಿಯದ ಗಂಟಲೊಳ್ ಕಡುಬು ತುರುಕಿದಂತಾಯಿತು", 

14) *ಪಂಪ*

 "ಮಾನವ ಜಾತಿ ತಾನೊಂದೆ ವಲಂ," 

15) *ಬಸವಣ್ಣ*

 "ಉಳ್ಳವರು ಶಿವಾಲಯ ಮಾಡುವರು", 

 "ಕಳಬೇಡ ಕೊಲಬೇಡ ಹುಸಿಯ ನುಡಿಯಲುಬೇಡ", 

 "ದಯವೇ ಧರ್ಮದ ಮೂಲವಯ್ಯ", 

 "ಮರಣವೇ ಮಹಾನವಮಿ,"
 
 "ಆಚಾರವೇ ಸ್ವರ್ಗ ಅನಾಚಾರವೇ ನರಕ,"
 
 "ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ", 

16) *ಜೆ ಪಿ ರಾಜರತ್ನಂ,*

 "ಪರಪಂಚ ಇರೋತನಕ ಕನ್ನಡದ ಪದಗಳ್ ನುಗ್ಲಿ ನರಕಕ್ಕಿಲ್ಸಿ. ನಾಲಿಗೆ ಸೀಳ್ಸಿ.ಬಾಯಿ ಒಲ್ಸಾಕಿದ್ರೋನ್ವೇ ಮೂಗ್ನಲ್ ಕನ್ನಡ ಪದವಾಡ್ತೀನಿ," 

17) *ಜೇಡರ ದಾಸಿಮಯ್ಯ*

 "ಮಠದೊಳಗಿನ ಬೆಕ್ಕು ಇಲಿಯ ಕಂಡು ಪುಟನಗೆದಂತಾಯ್ತು."

 "ಬುರುಸಠಗನ ಭಕ್ತಿ ದಿಟವೆಂದು ನಂಬಲು ಬೇಡ", 

 "ಹರಿದ ಗೋಣಿಯಲೊಬ್ಬ ಕಳವೆ ಯಾ ತುಂಬಿ ಇರುಳೆಲ್ಲ ನಡೆದ ಸುಂಕಕಂಜಿ".

18) *ಅಲ್ಲಂಪ್ರಭು*

 "ಬೆಟ್ಟದ ನೆಲ್ಲಿಕಾಯಿ ಸಮುದ್ರದೊಳಗಣ ಉಪ್ಪು ಎತ್ತಣಿಂದೆತ್ತ ಸಂಬಂಧವಯ್ಯ,"
 
 "ತನ್ನ ತಾನರಿದರೆ ನುಡಿಯಲ್ಲ ಪರತತ್ವ ನೋಡ",
 
 "ಮಾತೆಂಬುದು ಜ್ಯೋತಿರ್ಲಿಂಗ," 

19) *ರನ್ನ*

 "ನೀರೊಳಗಿರ್ದುಂ ಬೆಮರ್ತನುರಗಪತಾಕಂ", 

20) *ಪುರಂದರದಾಸರು*

 "ಈಸಬೇಕು ಇದ್ದು ಜೈಸಬೇಕು", 

 "ಮಾನವ ಜನ್ಮ ದೊಡ್ಡದು ಹಾನಿ ಮಾಡಿ ಕೊಳ್ಳಬೇಡಿ ಹುಚ್ಚಪ್ಪಗಳಿರಾ", 

 "ದುಗ್ಗಾಣಿ ಎಂಬುದು ದುರ್ಜನ ಸಂಗ", 

21) *ಸರ್ವಜ್ಞ*

 "ನಡೆಯುವುದೊಂದೇ ಭೂಮಿ ಕುಡಿಯುವುದೊಂದೇ ನೀರು,"
 
 "ಜಾತಿಹೀನನ ಮನೆಯ ಜ್ಯೋತಿ ತಾ ಹೀನವೇ", 

22) *ಸಂಚಿಹೊನ್ನಮ್ಮ*

 "ಪೆಣ್ಣಲ್ಲವೆ ತಮ್ಮೆಲ್ಲ ಹಡೆದ ತಾಯಿ,"

23) *ಕನಕದಾಸರು*

 "ಕುಲಕುಲವೆಂದು ಹೊಡೆದಾಡದಿರಿ,"
 
 "ಬಾಗಿಲನು ತೆರೆದು ಸೇವೆಯನು ಕೊಡೊ ನರ ಹರಿಯೇ," 

24) *ನೇಮಿಚಂದ್ರ* 

 "ಶ್ರೀ ರೂಪಮo ರೂಪಂ ಶೃಂಗಾರಮೆ ರಸಂ," 

25)  *ಶ್ರೀವಿಜಯ*"

 "ಕುರಿತೋದದೆಯಂ ಕಾವ್ಯಪ್ರಯೋಗ ಪರಿಣತಮತಿಗಳ್." 

26) *ಈಶ್ವರ್ ಸನಕಲ್*

 "ಜಗವೆಲ್ಲ ನಗುತಿರಲಿ ಜಗದಳುವು ನನಗಿರಲಿ," 

27) *ಅಕ್ಕಮಹಾದೇವಿ*

 "ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದೊಡೆಂತಯ್ಯ,"
 
 "ಇಳೆನಿಂಬೆ ಮಾವು ಮಾದಲಕ್ಕೆ ಹುಳಿ ನೀರೆರೆದವರು ಯಾರು," 

28) *ಇಂದೋರ್ ಹೊನ್ನಾಪುರ*

 "ಕಪ್ಪು ಮನುಜರು ನಾವು ಕಪ್ಪು ಮನುಜರು," 

29) *ದ.ಬಾ  ಕುಲಕರ್ಣಿ.* 

 "ಸೋಮವಾರ ಚಿಂತೆ ಮಂಗಳವಾರ ಸಂತೆ ಬುದುವಾರ ನಿಶ್ಚಿಂತೆ," 

30) *ಮಹಲಿಂಗರಂಗ*

"ಸುಲಿದ ಬಾಳೆಯ ಹಣ್ಣಿನಂದದಿ"
"ಕಳೆದ ಸಿಗುರಿನ ಕಬ್ಬಿನಂದದಿ"
"ಅಳಿದ ಉಷ್ಣದ ಹಾಲಿನಂದದಿ" ಸುಲಭವಾಗಿರ್ಪ ಕನ್ನಡಬಾಷೆಯೊಳ್"
logoblog

Thanks for reading fDA. SDA. * Very useful information for exams

Previous
« Prev Post

No comments:

Post a Comment