*ಜನಪ್ರಿಯ ಒಗಟುಗಳು*
👇👇👇👇👇
ಪ್ರಕಾರ ಪಚ್ಚೆಕಲ್ಲು, ಗರ್ಭಗುಡಿ ಬಂಗಾರ ಮೂಲವಿಗ್ರಹ ಬೆಳ್ಳೆಯೇ ಬೆಳ್ಳೆ ಏನದು? ( *FDA-2018*)
*ತೆಂಗು*
ಸಾವಿರಾರು ಸೈನಿಕರನ್ನು ನೀರಿನಲ್ಲಿ ಮುಳುಗಿಸಿ, ಬಿಗಿ ಕಟ್ಟು ಕಟ್ಟುತ್ತಾರೆ. ಕಿರೀಟ ತೊಡಿಸಿ ಹೊರಗೆ ಬಿಡ್ತಾರೆ? *FDA-2018*
*ಮೊಳಕೆ ಕಾಳು*,
ಸರದಾರ ಸಾಬರ ತೋಟದಲ್ಲಿ ಬರದಾರ ಸಾಬರ ಬೆಳ್ಳುಳ್ಳಿ ಆಗಿದ್ದರೆ ಸಿಪ್ಪೆಯಿಲ್ಲ ನುಂಗಿದರೆ ಬೀಜವಿಲ್ಲ ( *FDA-2018*)
*ಆಲಿಕಲ್ಲು/ ಆನೆಕಲ್ಲು*
೧. ಗೂಡಿನಲ್ಲಿನ ಪಕ್ಷಿ ನಾಡೆಲ್ಲ ನೋಡುತ್ತದೆ- *ಕಣ್ಣು*
೨. ಕಾಸಿನ ಕುದುರೆಗೆ ಬಾಲದ ಲಗಾಮು- *ಸೂಜಿ ದಾರ*
೩. ಎಲೆ ಇಲ್ಲ, ಸುಣ್ಣ ಇಲ್ಲ, ಬಣ್ಣವಿಲ್ಲ ತುಟಿ ಕೆಂಪಗಾಗಿದೆ, ಮಳೆಯಿಲ್ಲ , ಬೆಲೆಯಿಲ್ಲ , ಮೈ ಹಸಿರಾಗಿದೆ- *ಗಿಳಿ*
೪. ಮನೆ, ಮನೆಗೆರಡು ಬಾಗಿಲು, ಬಾಗಿಲ ಮುಂದೆ , ಮುಚ್ಚಿದರೆ ಹಾನಿ ಇದೇನು?- *ಮೂಗು, ಬಾಯಿ*
೫. ಸುತ್ತ ಮುತ್ತ ಸುಣ್ಣದ ಗೋಡೆ, ಎತ್ತ ನೋಡಿದರೂ ಬಾಗಿಲಿಲ್ಲ ಇದು ಏನು?- *ಮೊಟ್ಟೆ*
೬. ಅಂಗಳದಲ್ಲಿ ಹುಟ್ಟುವುದು, ಅಂಗಳದಲ್ಲಿ ಬೆಳೆಯುವುದು, ತನ್ನ ಮಕ್ಕಳ ಹಂಗಿಸಿ ಮಾತಾಡುವುದು ಇದು ಏನು? *ಕೋಳಿ*
೭. ಇದ್ದಲು ನುಂಗುತ್ತ , ಗದ್ದಲ ಮಾಡುತ್ತಾ, ಉದ್ದಕ್ಕೂ ಓಡುತ್ತಾ ಮುಂದಕ್ಕೆ ಸಾಗುವ ನಾನ್ಯಾರು?- *ರೈಲು*
೮. ಊಟಕ್ಕೆ ಕುಳಿತವರು ಹನ್ನೆರಡು ಜನರು, ಬಡಿಸುವವರು ಇಬ್ಬರು, ಒಬ್ಬನು ಒಬ್ಬರಿಗೆ ಬಡಿಸುವಸ್ಟರಲ್ಲಿ ಇನ್ನೊಬ್ಬನು ಹನ್ನೆರಡು ಜನಕ್ಕೂ ಬಡಿಸಿರುತ್ತಾನೆ- *ಗಡಿಯಾರ*
೯. ಹಸಿರು ಹಾವರಾಣಿ, ತುಂಬಿದ ತತ್ರಾಣಿ, ಹೇಳದಿದ್ದರೆ ನಿಮ್ಮ ದೇವರಾಣಿ- *ಕಲ್ಲಂಗಡಿ ಹಣ್ಣು*
೧೦. ಮೊಟ್ಟೆ ಒಡೆಯೋ ಹಾಗಿಲ್ಲ ಕೊಡ ಮುಳುಗಿಸೋ ಹಾಗಿಲ್ಲ ಬರಿ ಕೊಡೆ ತಗೊಂಡು ಬಾರೋ ಹಾಗಿಲ್ಲ- *ತೆಂಗು*
೧೨. ಕಡಿದರೆ ಕಚ್ಚೋಕೆ ಆಗೋಲ್ಲ , ಹಿಡದ್ರೆ ಮುಟ್ಟೋಕೆ ಸಿಗೋಲ್ಲ- *ನೀರು*
೧೩.ಒಂದು ರುಮಾಲು ನಮ್ಮಪ್ಪನೂ ಸುತ್ತಲಾರ. *-ದಾರಿ*
೧೪. ಅಬ್ಬಬ್ಬ ಹಬ್ಬ ಬಂತು, ಸಿಹಿಕಹಿ ಎರಡೂ ತಂತು.- *ಯುಗಾದಿ*
೧೫. ಹುಟ್ಟುತ್ತಲೇ ಹುಡುಗ ತಲೆಯಲ್ಲಿ ಟೋಪಿ ಹಾಕಿರುತ್ತೆ .- *ಬದನೆಕಾಯಿ*.
೧೬. ಸಾಗರ ಪುತ್ರ ,ಸಾರಿನ ಮಿತ್ರ.- *ಉಪ್ಪು*
೧೭. ಸಾವಿರಾರು ಹಕ್ಕಿಗಳು, ಒಂದೇ ಬಾರಿಗೆ ನೀರಿಗಿಳಿತವೆ.- *ಅಕ್ಕಿ*
೧೮. ಗುಡುಗು, ಗುಡುಗಿದರೆ ಸಾವಿರ ನಯನಗಳು ಅರಳುವುದು.- *ನವಿಲು.*
೧೯. ಕಣ್ಣಿಲ್ಲ, ಕಾಲಿಲ್ಲ ,ಆದರು ಚಲಿಸುತಿದೆ ಯಾವುದು ಎಲ್ಲಿದೆ ಬಲ್ಲಿದನ ಹೇಳಿರಲ.- *ನದಿ*
೨೦. ಹಲ್ಲಿಲ್ಲದ ಹಕ್ಕಿಗೆ ಗೂಡು ತುಂಬ ಮರಿಗಳು.- *ಕೋಳಿ*
೨೧. ಮೋಟು ಗೋಡೆ ಮೇಲೆ, ದೀಪ ಉರೀತಿದೆ.- *ಮೂಗುಬೊಟ್ಟು*
೨೨. ಹೊಂಚು ಹಾಕಿದ ದೆವ್ವ, ಬೇಡ ಬೇಡ ಎಂದರೂ ಜೂತೆಯೇ ಬರುತ್ತೆ.- *ನೆರಳು*
೨೩. ಮರನು ಮರನೇರಿ ಮತ್ತೆ ಮರನೇರಿ ಬಸವನಾ ಕತ್ತೇರಿ ತಿರುಗುತ್ತಿದೆ- *ಗಾಣ*
೨೪. ಹೊಕ್ಕಿದ್ದು ಒಂದಾಗಿ ಹೊರಟಿದ್ದು ಅದು ನೂರಾಗಿ- *ಶ್ಯಾವಿಗೆ*
೨೫. ಮಣ್ಣು ಆಗಿದೆ ಕಲ್ಲು ಸಿಕ್ಕಿತು, ಕಲ್ಲು ಆಗಿದೆ ಬೆಳ್ಳಿ ಸಿಕ್ಕಿತು, ಬೆಳ್ಳಿ ಒಡೆದ ನೀರು ಸಿಕ್ಕಿತು- *ತೆಂಗಿನಕಾಯಿ*
೨೬. ಕತ್ತಲೆ ಮನೆಯಲಿ ಕಾಳವ್ವ ಕುಂತವ್ಳೆ ಕುಯ್ಯೋ, ಮರ್ರೋ ಅಂತವಳೇ- *ತಂಬೂರಿ*
೨೭. ಹಾರಿದರೆ ಹನುಮಂತ, ಕೂತರೆ ಮುನಿ, ಕೂಗಿದರೆ ಕಾಡಿನ ಒಡೆಯ- *ಕಪ್ಪೆ*
೨೮. ಕೈಲಿದ್ದಾಗ ಗುದಿಸಾಡುತ್ತೇನೆ, ಕೈ ಬಿಟ್ಟಾಗ ಗೊರಕೆ ಒಡೆಯುತ್ತೇನೆ- *ಕಸಪೊರಕೆ*
೨೯. ಗಿಡ ಕೊಡಲಾರದು, ಮರ ಬೆಳೆಸಲಾರದು ಅದಿಲ್ಲದೆ ಊಟ ಸೇರಲಾರದು- *ಉಪ್ಪು*
೩೦. ನೀರಿಲ್ಲದ ಸಮುದ್ರ, ಜನರಿಲ್ಲದ ಪಟ್ಟಣ, ಸಂಚಾರವಿಲ್ಲದ ಮಾರ್ಗಗಳು ಎಲ್ಲಿ?- *ನಕ್ಷೆ*
೩೧. ಒಬ್ಬನನ್ನು ಹಿಡಿದರೆ ಎಲ್ಲಾರ ಮರ್ಜಿಯು ಗೊತ್ತಾಗುತ್ತದೆ.- *ಅನ್ನದ ಅಗುಳು*.
೩೨. ಮೇಲೆ ನೋಡಿದರೆ ನಾನಾ ಬಣ್ಣ, ಉಜ್ಜಿದರೆ ಒಂದೇ ಬಣ್ಣ.- *ಸಾಬೂನು*.
೩೩. ಒಂದು ಕೊಂಬಿನ ಗುಳಿ ಅದರ ತಲೆಯೆಲ್ಲಾ ಮುಳ್ಳು.- *ಬದನೆಕಾಯಿ*.
೩೪. ನಾನು ತುಳಿದೆ ಅದನ್ನ, ಅದು ತುಳಿಯೆತು ನನ್ನನ್ನ.- *ನೀರು*
೩೫. ಕೊಳದ ಒಳಗೆ ಒಂದು ಮರ ಹುಟ್ಟಿ ,ಬೇರು ಇಲ್ಲ ,ನೀರು ಇಲ್ಲ.- *ಎಣ್ಣೆ ದೀಪ*.
೩೬. ಬಡ ಬಡ ಬಂದ ಅಂಗಿ ಕಳಚಿದ ,ಬಾವಿಯೊಳಗೆ ಬಿದ್ದ.- *ಬಾಳೆ ಹಣ್ಣು*.
೩೭. ನೋಡಿದರೆ ನೋಟಗಳು ,ನಕ್ಕರೆ ನಗುಗಳು ,ಒಡೆದರೆ ತುಂಡುಗಳು.- *ಕನ್ನಡಿ*
೩೮. ಅಕ್ಕ ಪಕ್ಕ ಚದುರಂಗ ,ಅದರ ಹೂವು ಪದುರಂಗ ಅದರ ಹೆಸರು ಅಯ್ಯಯ್ಯಪ್ಪ .ಇದು ಏನು?- *ದತ್ತುರಿಯ ಮುಳ್ಳು*.
೩೯. ವನದಲ್ಲಿ ಹುಟ್ಟಿ ,ವನದಲ್ಲಿ ಬೆಳೆದು ,ವನದಿಂದ ಹೊರಟು ವನಜಲೊನೆ ಶಿರಕ್ಕೆರುವರು.- *ಕಮಲ*.
೪೦. ಕಲ್ಲು ಕೋಳಿ ಕುಗುತ್ತದೆ, ಮುಲ್ಲ ಚೂರಿ ಹಾಕುತ್ತಾನೆ.- *ಗಿರಣಿ*
೪೧. ಸಾವಿರ ತರುತ್ತೆ ಲಕ್ಷ ತರುತ್ತೆ ನೀರಿನಲ್ಲಿ ಹಾಕಿದರೆ ಸಾಯುತ್ತೆ.- *ದುಡ್ಡು.*
೪೨. ತಕ್ಕಡೀಲಿ ಇಟ್ಟು ಮಾರೋ ಹಾಗಿಲ್ಲ, ಅದಿಲ್ಲದೆ ಹಬ್ಬ ಅಗೋ ಹಾಗಿಲ್ಲ.- *ಸಗಣಿ*.
೪೩. ಚರಚರ ಕೊಯ್ತದೆ ಕತ್ತಿ ಅಲ್ಲ, ಮಿಣಿಮಿಣಿ ಮಿಂಚುತ್ತದೆ ಮಿಂಚಲ್ಲ, ಪೆಟ್ಟಿಗೆಗೆ ತುಂಬ್ತದೆ ದಾಗಿನ ಅಲ್ಲ.- *ಗರಗಸ*.
೪೪. ಕಡ್ಲೆ ಕಾಳಷ್ಟು ಹಿಂಡಿ ೩೨ ಮನೆ ಸಾರಿಸಿ ಬಚ್ಚಲ ಪಾಲು ಆಗುತ್ತೆ.- *ಹಲ್ಲುಪುಡಿ*.
೪೫. ಕರಿ ಗುಡ್ಡ-ಬಿಳಿ ನೀರು ಅದ್ರಾಗೆ ಕುಂತವಳೇ ಚಂಪರಾಣಿ.- *ಗಡಿಗೆಮಜ್ಜಿಗೆ*.
೪೬. ಕೆಂಪು ಕುದುರೆ ಮೇಲೆ ಒಬ್ಬ ಏರುತ್ತಾನೆ, ಒಬ್ಬ ಇಳಿಯುತ್ತಾನೆ .- *ರೊಟ್ಟಿ, ದೋಸೆ*
೪೭. ಕೆಂದ ಕುದುರೆ ,ಬಿಳಿ ತಡಿ, ಕರೆ ಲಗಾಮು, ಅಣ್ಣ ಅತ್ತಾನೆ, ತಮ್ಮ ಇಳಿತ್ತಾನೆ- *ಬೆಂಕಿ, ಸುಣ್ಣ ಹಚ್ಚಿದ ಹಂಚು, ಹೊಗೆ, ರೊಟ್ಟಿ*
೪೮. ಕಂಬ ಕಂಬದ ಮೇಲೆ ದಿಂಬ, ದಿಂಬದ ಮೇಲೆ ಲಾಗಲೂಟೆ, ಲಾಗಲೂಟೆ ಮೇಲೆ ಎರಡು ಹುಡ್ಗರು ಓಡ್ಯಾಡುತಾರೆ.- *ಕಣ್ಣು.*
೪೯. ಶತ್ತಗಿಂಡಿ, ಶಾರಾಗಿಂಡಿ, ನೀರಾbಗಿ ಹಕ್ಕಿದರೆ ಮುಳುಗದು ಮುತ್ತಿನ ಗಿಂಡಿ.- *ಬೆಣ್ಣೆ ಉಂಡೆ*.
೫೦.ಕುತ್ತಿಗೆ ಇದೆ ತಲೆ ಇಲ್ಲ, ತೋಳಿದೆ ಬೆರಳಿಲ್ಲ, ದಡಾ ಇದೆ, ಕಾಲಿಲ್ಲ.- *ಅಂಗಿ*.
No comments:
Post a Comment