ಭಾರತದ ಪ್ರಮುಖ *ಬಂದರುಗಳ* ಬಗ್ಗೆ ಸಂಕ್ಷಿಪ್ತ ಮಾಹಿತಿ
👇👇👇👇👇
ಭಾರತದಲ್ಲಿ 12 ಪ್ರಮುಖ ಬಂದರುಗಳು ಹಾಗೂ 185 ಸಣ್ಣ ಬಂದರುಗಳಿವೆ.
* ಮಹಾರಾಷ್ಟ್ರವು ಅತಿ ಹೆಚ್ಚು ಬಂದರುಗಳನ್ನೊಳಗೊಂಡಿರುವ ರಾಜ್ಯ.*
*ಮುಂಬಯಿ ಬಂದರು*
# ಸ್ಥಾಪನೆ= *1869*
#ರಾಜ್ಯ: *ಮಹಾರಾಷ್ಟ್ರ*
#ವಿಶೇಷ: ಇದು ಸ್ವಾಭಾವಿಕ ಬಂದರಾಗಿದ್ದು *ದೇಶದಲ್ಲೇ ಅತಿ ದೊಡ್ಡದು.*( ಭಾರತದ ಹೆಬ್ಬಾಗಿಲು ಎಂದು ಕರೆಯುತ್ತಾರೆ.
#ರಪ್ತು: *ಕಚ್ಚಾ ಹತ್ತಿ, ಬಟ್ಟೆ, ಯಂತ್ರೋಪಕರಣಗಳು*
#ಆಮದು: *ಪೆಟ್ರೋಲಿಯಂ ಮತ್ತು ಅದರ ಉತ್ಪನ್ನಗಳು, ರಸಗೊಬ್ಬರ, ರಾಸಾಯನಿಕ ವಸ್ತು, ಕಚ್ಚಾ ಹತ್ತಿ, ಕಾಗದ ಲೋಹ ಮತ್ತು ಕಚ್ಚಾ ಸಾಮಗ್ರಿಗಳು*
*ಚೆನ್ನೈ ಬಂದರು*
ಸ್ಥಾಪನೆ= *1875*
ರಾಜ್ಯ : *ತಮಿಳುನಾಡು*
ವಿಶೇಷ : *ಪೂರ್ವ ಕರಾವಳಿಯ ಕೃತಕ ಬಂದರು.*
ರಫ್ತು: *ಕಬ್ಬಿಣದ ಅದಿರು, ಚರ್ಮ ಹಾಗೂ ಚರ್ಮ ಉತ್ಪನ್ನ, ಅರಿಶಿಣ, ತಂಬಾಕು, ಆಭ್ರಕ ಮತ್ತು ಬಟ್ಟೆ.*
ಆಮದು: *ಪೆಟ್ರೋಲಿಯಂ, ಅಡುಗೆ ಎಣ್ಣೆ, ಲೋಹ, ಮರದ ದಿಮ್ಮಿಗಳು, ಯಂತ್ರೋಪಕರಣ ಮತ್ತು ರಾಸಾಯನಿಕ ವಸ್ತು.*
=====================
*ಕೊಲ್ಕತ್ತ ಬಂದರು*
ರಾಜ್ಯ : *ಪಶ್ಚಿಮ ಬಂಗಾಳ*
ವಿಶೇಷ: *ಹೂಗ್ಲಿ ನದಿಯ ದಂಡೆಯ ಬಂದರಾಗಿದೆ. ನೌಕಾಯಾನಕ್ಕೆ ಗಂಗಾ ನದಿಯ ಫರಕ್ಕಾ ಬ್ಯಾರೇಜ್‍ನಿಂದ ನೀರನ್ನು ಹರಿಸಲಾಗುತ್ತದೆ.*
( ಇತ್ತೀಚಿಗೆ ಈ ಬಂದರಿಗೆ *ಶ್ಯಾಂ ಪ್ರಸಾದ್ ಮುಖರ್ಜಿ* ಬಂದರಾಗಿ ಮರುನಾಮಕರಣ ಮಾಡಲಾಗಿದೆ)
ರಫ್ತು : *ಸೆಣಬು ಉತ್ಪನ್ನ, ಕಲ್ಲಿದ್ದಲು, ಟೀ ಸಕ್ಕರೆ, ಚರ್ಮ ಉತ್ಪನ್ನ, ಆಭ್ರಕ, ಕಬ್ಬಿಣದ ಅದಿರು,*
ಆಮದು: *ಲೋಹಗಳು, ರಾಸಾಯನಿಕ ವಸ್ತುಗಳು, ಅಡುಗೆ ಎಣ್ಣೆ, ರಸಗೊಬ್ಬರ, ಪೆಟ್ರೋಲ್ ಉತ್ಪನ್ನ.*
=====================
*ವಿಶಾಖಪಟ್ಟಣ ಬಂದರು*
ಸ್ಥಾಪನೆ= *1933*
ರಾಜ್ಯ : *ಆಂಧ್ರಪ್ರದೇಶ*
ವಿಶೇಷ : *ಅತಿ ಆಳವಾದ ಭೂಮಿಯಿಂದ ಸುತ್ತುವರಿದ ಬಂದರು*
ರಫ್ತು : *ಕಬ್ಬಿಣದ ಅದಿರು, ಆಹಾರ ಧಾನ್ಯ, ಮರದ ದಿಮ್ಮಿ, ಚರ್ಮ ಉತ್ಪನ್ನ,*
ಆಮದು : *ಪೆಟ್ರೋಲಿಯಂ, ರಾಸಾಯನಿಕಗಳು, ರಸಗೊಬ್ಬರ ಮತ್ತು ಯಂತ್ರೋಪಕರಣ*
=====================
*ಮರ್ಮಗೋವಾ*
ರಾಜ್ಯ : *ಗೋವಾ*
ವಿಶೇಷ: *ಸ್ವಾಭಾವಿಕ ಬಂದರಾಗಿದೆ.*
ರಫ್ತು : *ಕಬ್ಬಿಣದ ಅದಿರು, ಮ್ಯಾಂಗನೀಸ್ ಅದಿರು, ಗೋಡಂಬಿ, ಉಪ್ಪು,*
ಆಮದು: *ತೈಲ, ಸಿಮೆಂಟ್, ರಸಗೊಬ್ಬರ ಮತ್ತು ಆಹಾರ ಧಾನ್ಯ*
=====================
*ಕೊಚ್ಚಿನ್*
ಸ್ಥಾಪನೆ= *1972*
ರಾಜ್ಯ: *ಕೇರಳ*
ವಿಶೇಷ: *ಹಡಗುಕಟ್ಟೆಯ ಬಂದರು, ಸ್ವಾಭಾವಿಕ ಬಂದರು.*
ರಫ್ತು : *ನಾರು ಉತ್ಪನ್ನ, ಕೊಬ್ಬರಿ, ತೆಂಗಿನಕಾಯಿ, ರಬ್ಬರ್, ಟೀ ಮತ್ತು ಗೋಡಂಬಿ.*
ಆಮದು : *ಪೆಟ್ರೋಲಿಯಂ, ಲೋಹಗಳು, ರಾಸಾಯನಿಕ ರಸಗೊಬ್ಬರ ಹಾಗೂ ಅಡುಗೆ ಎಣ್ಣೆ.*
=====================
*ಕಾಂಡ್ಲಾ ಬಂದರು*
ಸ್ಥಾಪನೆ= *1955*
ರಾಜ್ಯ : *ಗುಜರಾತ್*
ವಿಶೇಷ : *ಸ್ವಾತಂತ್ರ್ಯಾನಂತರ ಅಭಿವೃದ್ಧಿ ಪಡಿಸಿದ ಪ್ರಥಮ ಬಂದರು.*
ರಫ್ತು : *ಉಪ್ಪು, ಹತ್ತಿ, ಮೂಳೆ, ನ್ಯಾಫ್ತ, ನುಣುಪು ಕಲ್ಲು ಹಾಗೂ ಕೈಗಾರಿಕಾ ವಸ್ತು.*
ಆಮದು: *ಪೆಟ್ರೋಲಿಯಂ, ರಸಗೊಬ್ಬರ, ಫಾಸ್ಫೇಟ್, ಗಂಧಕ ಮತ್ತು ಯಂತ್ರೋಪಕರಣ.*
=====================
*ಪಾರಾದೀಪ*
ಸ್ಥಾಪನೆ= *1966*
ರಾಜ್ಯ: *ಒರಿಸ್ಸಾ*
ವಿಶೇಷ : *ಕಬ್ಬಿಣದ ಅದಿರು ಹಾಗೂ ಕಲ್ಲಿದ್ದಲು ರಫ್ತಿನ ಪ್ರಮುಖ ಬಂದರು.*
ರಫ್ತು : *ಕಬ್ಬಿಣದ ಅದಿರು, ಮ್ಯಾಂಗನೀಸ್ ಅದಿರು, ಆಭ್ರಕ ಮತ್ತು ಕಲ್ಲಿದ್ದಲು*
ಆಮದು: *ಯಂತ್ರಗಳು*,
=====================
*ನವ ಮಂಗಳೂರು*
ರಾಜ್ಯ: *ಕರ್ನಾಟಕ*
ವಿಶೇಷ : *ಕಬ್ಬಿಣದ ಅದಿರಿನ ರಫ್ತಿನ ಪ್ರಮುಖ ಬಂದರು.*( "ಕರ್ನಾಟಕದ ಹೆಬ್ಬಾಗಿಲು" ಎಂದು ಕರೆಯುತ್ತಾರೆ)
ರಫ್ತು : *ಕಬ್ಬಿಣದ ಅದಿರು, ಕಾಫಿ, ಗಂಧದ ಮರ, ರಬ್ಬರ್, ಸಾಂಬಾರ ಪದಾರ್ಥಗಳು.*
ಆಮದು : *ಯಂತ್ರಗಳು, ರಸಗೊಬ್ಬರ, ಪೆಟ್ರೋಲಿಯಂ ಉತ್ಪನ್ನ ಹಾಗೂ ಅಡುಗೆ ಅನಿಲ.*
=====================
*ಟುಟಿಕಾರಿನ್*
ರಾಜ್ಯ: *ತಮಿಳುನಾಡು*
ವಿಶೇಷ : *ಭಾರತದ ದಕ್ಷಿಣದ ತುದಿಯ ಪ್ರಮುಖ ಬಂದರು.* (ಭಾರತದ ದಕ್ಷಿಣ ಭಾಗದ ಕೊನೆಯ ಬಂದರು)
ರಫ್ತು : *ಹತ್ತಿ ಬಟ್ಟೆಗಳು, ಟೀ ಮತ್ತು ಸಾಂಬಾರ ಪದಾರ್ಥಗಳು*
ಆಮದು: *ಯಂತ್ರಗಳು, ರಸಗೊಬ್ಬರ, ಪೆಟ್ರೋಲಿಯಂ ಉತ್ಪನ್ನಗಳು*
=====================
*ನವಶೇವಾ* (ಜವಾಹರ್ ಲಾಲ್ ನೆಹರು ಬಂದರು)
ರಾಜ್ಯ: *ಮಹಾರಾಷ್ಟ್ರ*
ವಿಶೇಷ : *ಮುಂಬೈ ಬಂದರಿನ ಒತ್ತಡವನ್ನು ತಪ್ಪಿಸಲು ನಿರ್ಮಿಸಿದ ಬಂದರು*.
ವಿಶೇಷ ಅಂಶಗಳು
1) ಭಾರತದ ಅತಿ ದೊಡ್ಡ ಬಂದರು= *ಮುಂಬೈ ಬಂದರು*
2) ಭಾರತದಲ್ಲಿ ಹಾಡು ಹೊಳೆಯುವ ಬಂದರು= *ಅಲಾಂಗ್*( ಗುಜರಾತ್)
3) ಭಾರತದ ಅತ್ಯಂತ ಹಳೆಯ ಬಂದರು= *ಕಲ್ಕತ್ತಾ ಬಂದರು*
4) ಭಾರತ ಕೃತಕ ಬಂದರು= *ಎನ್ನೋರು ಅಥವಾ ಕಾಮರಾಜು ಬಂದರು*
5) ಭಾರತದ ಅತಿ ಆಳವಾದ ಬಂದರು= *ಗಂಗಾವರಂ*( ಆಂಧ್ರ ಪ್ರದೇಶ್)
6) ಸೀಬರ್ಡ್ ನೌಕಾನೆಲೆ= *ಕರ್ನಾಟಕದ ಕಾರವಾರದಲ್ಲಿ*
7) ಭಾರತದ ಏಕೈಕ ನದಿ ತೀರದ ಬಂದರು= *ಕೊಲ್ಕತ್ತಾ ಬಂದರು*( ಹೂಗ್ಲಿ ನದಿ)
8) ಕರ್ನಾಟಕದ ಹೆಬ್ಬಾಗಿಲು= *ನವ ಮಂಗಳೂರು*
9) ಭಾರತದ ಹೆಬ್ಬಾಗಿಲು= *ಮುಂಬೈ ಬಂದರು*
10) ಅರೇಬಿಯನ್ ಸಮುದ್ರದ ರಾಣಿ= *ಕೊಚ್ಚಿನ್*( ಕೇರಳ)
11) ಭಾರತದ ಹೈಟೆಕ್ ಬಂದರು= *ನವ ಸೇವಾ ಬಂದರು*
12) ಪೋರ್ಚುಗೀಸರು ಸ್ಥಾಪಿಸಿದ ಬಂದರು= *ಮರ್ಮಗೋವಾ*
13) ದ್ವೀಪದಲ್ಲಿರುವ ಬಂದರು= *ಪೋರ್ಟ್ ಬ್ಲೇರ್*
14) ಜಗತ್ತಿನಲ್ಲಿ ಕಲ್ಲಿದ್ದಲು ಆಮದು ಮಾಡಿಕೊಳ್ಳುವ ಬಂದರು= *ಮಾಂಡ್ರಾ ಬಂದರು*
No comments:
Post a Comment