Wednesday, 14 September 2022

Karnataka Open School Supplementary Exam Result Announced.. Here is the method to check the result

  MahitiVedike Com       Wednesday, 14 September 2022

ಕರ್ನಾಟಕ ಮುಕ್ತ ಶಾಲೆ ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟ.. ರಿಸಲ್ಟ್ ಚೆಕ್‌ ಮಾಡುವ ವಿಧಾನ ಇಲ್ಲಿದೆ


ಆಗಸ್ಟ್-2022 ಮಾಹೆಯಲ್ಲಿ ನಡೆದ ಕರ್ನಾಟಕ ಮುಕ್ತ ಶಾಲೆ (ಕೆ.ಓ.ಎಸ್‌) ಪೂರಕ ಪರೀಕ್ಷೆಯ ಫಲಿತಾಂಶವನ್ನು ಇಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಅಧಿಕೃತ ವೆಬ್‌ಸೈಟ್‌ ನಲ್ಲಿ ಬಿಡುಗಡೆ ಮಾಡಿದೆ. ಹಾಗೂ 13-09-2022 ರಂದು ಸಂಬಂಧಿಸಿದ ಕಲಿಕಾ ಕೇಂದ್ರಗಳ ಲಾಗಿನ್ ಗಳಲ್ಲಿ ಫಲಿತಾಂಶವನ್ನು ಪ್ರಕಟವಾಗಲಿದೆ.


ಕರ್ನಾಟಕ ಮುಕ್ತ ಶಾಲೆ ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟ.. ರಿಸಲ್ಟ್ ಚೆಕ್‌ ಮಾಡುವ ವಿಧಾನ ಇಲ್ಲಿದೆ

ಆಗಸ್ಟ್-2022 ಮಾಹೆಯಲ್ಲಿ ನಡೆದ ಕರ್ನಾಟಕ ಮುಕ್ತ ಶಾಲೆ (ಕೆ.ಓ.ಎಸ್‌) ಪೂರಕ ಪರೀಕ್ಷೆಯ ಫಲಿತಾಂಶವನ್ನು ಇಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಬಿಡುಗಡೆ ಮಾಡಿದೆ. ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಫಲಿತಾಂಶವನ್ನು ಚೆಕ್‌ ಮಾಡಬಹುದಾಗಿದೆ.

ಆಗಸ್ಟ್-2022 ಮಾಹೆಯಲ್ಲಿ ನಡೆದ ಕರ್ನಾಟಕ ಮುಕ್ತ ಶಾಲೆ (ಕೆ.ಓ.ಎಸ್‌) ಪೂರಕ ಪರೀಕ್ಷೆಯ ಫಲಿತಾಂಶವನ್ನು ಇಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಅಧಿಕೃತ ವೆಬ್‌ಸೈಟ್‌
https://kseeb.karnataka.gov.in/kosresult/ ನಲ್ಲಿ ಬಿಡುಗಡೆ ಮಾಡಲಾಗಿದೆ. ಹಾಗೂ 13-09-2022 ರಂದು ಸಂಬಂಧಿಸಿದ ಕಲಿಕಾ ಕೇಂದ್ರಗಳ ಲಾಗಿನ್ ಗಳಲ್ಲಿ ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಕೆಒಎಸ್‌ ಪೂರಕ ಪರೀಕ್ಷೆ ಫಲಿತಾಂಶವನ್ನು ಚೆಕ್‌ ಮಾಡುವ ವಿಧಾನ

 • ಅಧಿಕೃತ ವೆಬ್‌ಸೈಟ್‌ https://kseeb.karnataka.gov.in/kosresult/ ಗೆ ಭೇಟಿ ನೀಡಿ.
 • ಓಪನ್‌ ಆದ ಪುಟದಲ್ಲಿ ರಿಜಿಸ್ಟರ್ ನಂಬರ್, ಜನ್ಮ ದಿನಾಂಕವನ್ನು ನಮೂದಿಸಿ.
 • ನಂತರ 'VIEW'ಎಂಬಲ್ಲಿ ಕ್ಲಿಕ್ ಮಾಡಿ.
 • ಆಗ ನಿಮಗೆ ಪರದೆಯ ಮೇಲೆ ಫಲಿತಾಂಶ ಪ್ರಕಟವಾಗುತ್ತದೆ.
 • ನಂತರ ಫಲಿತಾಂಶವನ್ನು ಡೌನ್‌ಲೋಡ್‌ ಮಾಡಿಕೊಂಡು ಪ್ರಿಂಟ್‌ ಔಟ್‌ ತೆಗೆದುಕೊಳ್ಳಿ.
Karnataka 2nd PUC Supplementary Result : ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ.. ರಿಸಲ್ಟ್ ಚೆಕ್ ಮಾಡಲು ಲಿಂಕ್ ಇಲ್ಲಿದೆ
ಒಂದು ವೇಳೆ ಯಾವುದಾದರೂ ವಿದ್ಯಾರ್ಥಿಗಳ ಫಲಿತಾಂಶ ಬಾರದಿದಲ್ಲಿ, ಫಲಿತಾಂಶ ತಡೆಹಿಡಿದಿದ್ದಲ್ಲಿ, ಫಲಿತಾಂಶ ಪ್ರಕಟಿಸಿದ ಹದಿನೈದು ದಿನಗಳೊಳಗಾಗಿ ಸಕಾರಣಗಳೊಂದಿಗೆ ಮಂಡಳಿಗೆ ಪತ್ರ ಬರೆದು ಫಲಿತಾಂಶವನ್ನು ಪಡೆದುಕೊಳ್ಳಲು ತಿಳಿಸಿದೆ.

ಫಲಿತಾಂಶ ಪ್ರಕಟವಾಗಿ 15 ದಿನಗಳ ನಂತರ ಈ ಬಗ್ಗೆ ಯಾವುದೇ ಕೋರಿಕೆ ಬಂದಲ್ಲಿ ಅದನ್ನು ಸ್ವೀಕರಿಸಲಾಗುವುದಿಲ್ಲ. ಮುಂದಿನ ಆಗುಹೋಗುಗಳಿಗೆ ಸಂಸ್ಥೆಯ ಮುಖ್ಯಸ್ಥರೇ ಜವಾಬ್ದಾರರಾಗಿರುತ್ತಾರೆ ಎಂದು ಮಂಡಳಿ ತಿಳಿಸಿದೆ.

ಅಭ್ಯರ್ಥಿಯ ಹೆಸರು, ತಂದೆಯ ಹೆಸರು, ಜನ್ಮ ದಿನಾಂಕ ಇತ್ಯಾದಿ ಸಣ್ಣಪುಟ್ಟ ತಿದ್ದುಪಡಿಗಳಿದ್ದಲ್ಲಿ, ಅರ್ಜಿಯನ್ನು ಪೂರಕ ದೃಢೀಕೃತ ದಾಖಲೆಗಳೊಂದಿಗೆ ರೂ. 200 ದಂಡ ಶುಲ್ಕವನ್ನು ಮಂಡಳಿಗೆ ಪಾವತಿಸಲಾಗಿರುವ NEFT Challan ಮೂಲ ಪ್ರತಿಯೊಂದಿಗೆ ಸಲ್ಲಿಸತಕ್ಕದ್ದು ಎಂದು ಸೂಚಿಸಿದೆ.

ಉತ್ತರ ಪತ್ರಿಕೆ ಸ್ಕ್ಯಾನ್ ಪ್ರತಿ, ಮರುಮೌಲ್ಯಮಾಪನ ಹಾಗೂ ಮರು ಎಣಿಕೆಗಾಗಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ. ವಿದ್ಯಾರ್ಥಿಗಳು ನಿಗಧಿತ ದಿನಾಂಕದೊಳಗೆ ಅರ್ಜಿ ಅಲ್ಲಿಸಬಹುದಾಗಿದೆ.

ಪ್ರಮುಖ ದಿನಾಂಕಗಳು
 • ಆಗಸ್ಟ್ -22 ಉತ್ತರ ಪತ್ರಿಕೆ ಸ್ಕ್ಯಾನ್‌ ಪ್ರತಿ ಪಡೆಯಲು ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ- 15-09-2022
 • ಉತ್ತರ ಪತ್ರಿಕೆ ಸ್ಕ್ಯಾನ್‌ ಪ್ರತಿ ಪಡೆಯಲು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ - 20-09-2022
 • ಮರುಮೌಲ್ಯಮಾಪನ ಹಾಗೂ ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ- 16-09-2022
 • ಮರುಮೌಲ್ಯಮಾಪನ ಹಾಗೂ ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ -21-09-2022
ಶುಲ್ಕ ವಿವರ
 • ಉತ್ತರ ಪತ್ರಿಕೆಗಳ ಜೆರಾಕ್ಸ್ ಪ್ರತಿ ಪಡೆಯಲು ಒಂದು ವಿಷಯಕ್ಕೆ - 500 ರೂಪಾಯಿ.
 • ಮರುಮೌಲ್ಯಮಾಪನಕ್ಕೆ ಶುಲ್ಕ ಒಂದು ವಿಷಯಕ್ಕೆ - 800 ರೂಪಾಯಿ.
 • ಉತ್ತರ ಪತ್ರಿಕೆಗಳ ಅಂಕಗಳ ಮರುಎಣಿಕೆಗಾಗಿ ಶುಲ್ಕ ಒಂದು ವಿಷಯಕ್ಕೆ - 150 ರೂಪಾಯಿ.
logoblog

Thanks for reading Karnataka Open School Supplementary Exam Result Announced.. Here is the method to check the result

Previous
« Prev Post

No comments:

Post a Comment