Thursday 15 September 2022

Crop Damage Solution Released! Check the status if the money has reached your account

  MahitiVedike Com       Thursday 15 September 2022

ಬೆಳೆ ಹಾನಿ ಪರಿಹಾರ ಬಿಡುಗಡೆ ಆಗಿದೆ! ನಿಮ್ಮ ಖಾತೆಗೆ ಹಣ ಬಂದಿದಿಯಾ ಸ್ಟೇಟಸ್ ಚೆಕ್ ಮಾಡಿ

ಪ್ರಿಯ ರೈತರೇ, ಅತೀ ಹೆಚ್ಚು ಮಳೆಯಿಂದಾಗಿ ನಿಮ್ಮ ಬೆಳೆ ಹಾನಿ ಆಗಿರುವ ರೈತರ ಖಾತೆಗೆ ಪರಿಹಾರ ಹಣವನ್ನು ಜಮೆ ಮಾಡುತ್ತಿದ್ದಾರೆ.ಈ ಪರಿಹಾರ ಹಣವನ್ನು ಹೇಗೆ ಚೆಕ್ ಮಾಡಬೇಕು ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ. ಇತ್ತೀಚಿಗೆ ಅತೀ ಹೆಚ್ಚು ಮಳೆ ಆಗಿ ಬೆಳೆ ಹಾನಿ ಆದ ಕಾರಣದಿಂದ ಸರ್ಕಾರ ಹಾನಿಯಾದ ವಲಯಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿ ಪರಿಹಾರವನ್ನು ಕೊಡುತ್ತಿದೆ.

ನಿಮ್ಮ ಜಮೀನಿನಲ್ಲಿಯೂ ಕೂಡ ಬೆಳೆ ಹಾನಿ ಆಗಿದ್ದರೆ ಪರಿಹಾರ ಹಣ ಸಂದಾಯ ಆಗಿದೆಯಾ ಎಂಬುದನ್ನು ಈ ರೀತಿಯಾಗಿ ಪೇಮೆಂಟ್ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು.
1)ಮೊದಲನೆಯದಾಗಿ parihaara.karnataka.gov.in ಎಂಬ ಆಫೀಶಿಯಲ್ ವೆಬ್ಸೈಟ್ ಗೆ ಭೇಟಿ ನೀಡಬೇಕು. ಮೊಬೈಲ್ ನಲ್ಲಿಯೂ ಚೆಕ್ ಮಾಡಬಹುದು.
2) ವೆಬ್ಸೈಟ್ ಓಪನ್ ಆದ ತಕ್ಷಣ ಪರಿಹಾರ ಸೇವೆಗಳಲ್ಲಿ ಪರಿಹಾರ ಪಾವತಿ ಎಂಬ ಆಪ್ಷನ್ ಅನ್ನು ಕ್ಲಿಕ್ ಮಾಡಿದಾಗ, ಪರಿಹಾರ ಹಣ ಸಂದಾಯ ವರದಿ ಎಂಬ ಪೇಜ್ ತೆರೆಯುತ್ತದೆ.
3)ಪರಿಹಾರ ಹಣ ಸಂದಾಯ ವರದಿ ಎಂಬ ಪೇಜ್ ತೆರೆದಾಗ ಎರಡು ರೀತಿಯಾಗಿ ಚೆಕ್ ಮಾಡಬಹುದು. ಪರಿಹಾರ ನಮುದೆಯ ಸಂಖ್ಯೆ ಮತ್ತು ಆಧಾರ ಕಾರ್ಡ್ ಎಂಬ ಎರಡು ಆಪ್ಷನ್ ಇರುತ್ತದೆ.

3) ಯಾವುದಾದರೂ ಒಂದು ಆಪ್ಷನ್ ಮೇಲೆ ಕ್ಲಿಕ್ ಮಾಡಿದಾಗ ನಮಗೆ ಯಾವ ರೀತಿಯಾದ ಪ್ರಾಬ್ಲಮ್ ಆಗಿದೆ ಎಂಬುದನ್ನು ಆಯ್ಕೆ ಮಾಡಬೇಕು. ಉದಾಹರಣೆಗೆ ಆತಿಯಾದ ಮಳೆ ಅಥವಾ ನೆರೆಪ್ರವಾಹ ಆಗಿದೆ ಎಂಬ ಆಪ್ಷನ್ ಅನ್ನು ಆಯ್ಕೆ ಮಾಡಬೇಕು.
4) ನಂತರ,ಯಾವ ವರ್ಷದಲ್ಲಿ ಬೆಳೆ ಹಾನಿಯಾಗಿದೆ ಎಂದು ಹಾನಿಯಾದ ವರ್ಷವನ್ನು ಆಯ್ಕೆ ಮಾಡಬೇಕು.
5)ಆಧಾರ ಕಾರ್ಡ್ ಮತ್ತು ಅಲ್ಲಿ ಕೊಟ್ಟಿರುವ ಕ್ಯಾಪ್ಚಾ ವನ್ನು ಎಂಟ್ರಿ ಮಾಡಿ, ಫೆಚ್ ಡೀಟೇಲ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು.ಅಲ್ಲಿ ಎರಡು ರೀತಿಯ ಆಪ್ಷನ್ ಬರುತ್ತದೆ.ಒಂದು ಪೇಮೆಂಟ್ ಡೀಟೇಲ್ಸ್ ಮತ್ತೊಂದು ಕ್ರಾಪ್ ಡೀಟೇಲ್ಸ್. ಇಲ್ಲಿ ಸೀರಿಯಲ್ ಸಂಖ್ಯೆ , ಡಿಸ್ಟ್ರಿಕ್ಟ್ , ಬ್ಯಾಂಕ್ ಖಾತೆ ವಿವರ ಮತ್ತು ಪೇಮೆಂಟ್ ಸ್ಟೇಟಸ್ ನಲ್ಲಿ ಅಮೌಂಟ್ ಜಮಾ ಆಗಿದೆಯಾ ಇಲ್ಲ ಎನ್ನುವ ಮಾಹಿತಿ ಇರುತ್ತದೆ.ಮತ್ತು ಯಾವ ಕಾರಣಕ್ಕಾಗಿ ಜಮೆ ಆಗಿದೆ ಮತ್ತು ಯಾವ ಸೀಸನ್ ನಲ್ಲಿ ಜಮೆ ಆಗಿದೆ ಎಂಬುದನ್ನು ತಿಳಿಸುತ್ತದೆ.

ಇದನ್ನು ತಪ್ಪದೇ ನೋಡಿ

ಬೆಳೆ ಹಾನಿ ಪರಿಹಾರ ಶೀಘ್ರದಲ್ಲೇ ಈ ರೈತರ ಬರಲಿದೆ ಬೊಮ್ಮಾಯಿ

ನೀವು ಪರಿಹಾರ ಡೇಟಾ ಎಂಟ್ರಿ ರಿಪೋರ್ಟ್ ಅನ್ನು ನೋಡಬೇಕು ಎಂದರೆ ಆವಾಗಲೇ ಹೇಳಿರುವ ಹಾಗೆ ಒಂದು ವೆಬ್ಸೈಟ್ ನಲ್ಲಿ ಡೇಟಾ ಎಂಟ್ರಿ ಪ್ರತಿ ವಿವರ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ , ವರ್ಷವನ್ನು ಆಯ್ಕೆ ಮಾಡಿ , ಫ್ಲಡ್ ಎನ್ನುವ ಆಪ್ಷನ್ ಆಯ್ಕೆ ಮಾಡಿ, ಜಿಲ್ಲೆಯನ್ನು ಆಯ್ಕೆ ಮಾಡಿದಾಗ ಎಲ್ಲ ವಿವರಗಳು ಸಿಗುತ್ತವೆ. ಎಷ್ಟು ಡೇಟಾ ಎಂಟ್ರಿ ಆಗಿದೆ ಮತ್ತು ವಿಲೇಜ್ ಅಕೌಂಟೆಂಟ್ ಮತ್ತು ತಹಶೀಲ್ದಾರ ಕಡೆಯಿಂದ ಅಪ್ಲಿಕೇಶನ್ ಅಪ್ರುವಲ್ ಆಗಿ ಪರಿಹಾರ ಹಣ ಬರುತ್ತದೆ.logoblog

Thanks for reading Crop Damage Solution Released! Check the status if the money has reached your account

Previous
« Prev Post

No comments:

Post a Comment