Saturday 6 March 2021

The rise of Jain and Buddhism

  MahitiVedike Com       Saturday 6 March 2021

ಧರ್ಮಗಳ ಉದಯದ ಹಿನ್ನೆಲೆ:

ಸಾ.ಶ.ಪೂ. 6ನೆಯ ಶತಮಾನದ ಹೊತ್ತಿಗೆ ಭಾರತೀಯ ಸಮಾಜ ವರ್ಣಾಧಾರಿತವಾಗಿ ವಿಭಜಿತವಾಗಿತ್ತು. ನಾಲ್ಕು ವರ್ಣಗಳು ಸ್ಪಷ್ಟವಾಗಿ ಗೋಚರಿಸುತ್ತಿದ್ದವು.


ಎರಡು ಮೇಲ್ವರ್ಣಗಳಲ್ಲಿ ಬ್ರಾಹ್ಮಣರು, ಕ್ಷತ್ರಿಯರು ಅವರಿಗಿಂತ ಕೆಳಗಿನ ವರ್ಣದಲ್ಲಿ ವೈಶ್ಯರು ಮತ್ತು ಕೊನೆಯ ಹಂತದಲ್ಲಿ ಶೂದ್ರರು ಇದ್ದರು.


ಬ್ರಾಹ್ಮಣರು ಪುರೋಹಿತರಾಗಿ, ಯಜ್ಞಯಾಗಾದಿಗಳ ಧಾರ್ಮಿಕ ಕ್ರಿಯೆಗಳ ಆಚರಣೆಯಲ್ಲಿ ಮುಖ್ಯಸ್ಥರಾಗಿದ್ದರು. ದಾನ, ದಕ್ಷಿಣೆ ಪಡೆಯುವ ಹಕ್ಕನ್ನು ಹೊಂದಿದ್ದರು.


ರಾಜನಿಗೆ ರಾಜಧರ್ಮ ಪಾಲನೆಯಲ್ಲಿ ಮಾರ್ಗದರ್ಶಕರಾಗಿ ಕ್ಷತ್ರಿಯರ ಮೇಲೂ ಹತೋಟಿಯನ್ನು ಹೊಂದಿದ್ದರು. ಎರಡನೇ ಹಂತದಲ್ಲಿದ್ದ ಕ್ಷತ್ರಿಯರು ಆಳುವ ವರ್ಗದವರಾಗಿದ್ದು ರೈತನ ಕಂದಾಯದ ಮೇಲೆ ಬದುಕುತ್ತಿದ್ದರು.


ಕೃಷಿ, ಪಶುಪಾಲನೆ ಮತ್ತು ವ್ಯಾಪಾರಿ ಸಂಬಂಧಿತ ಕಸುಬುಗಳನ್ನು ಮಾಡುತ್ತಿದ್ದ ವೈಶ್ಯರನ್ನು ದ್ವಿಜರೆಂದು ಮಾನ್ಯ ಮಾಡಿದ್ದರೂ, ಅವರ ಮೇಲೆ ನಿರ್ಬಂಧಗಳಿದ್ದವು,


ಶೂದ್ರರು ಕೃಷಿಯಾಳು, ಮನೆಯಾಳುಗಳಾಗಿ ಮತ್ತು ಕುಶಲ ಕಸುಬುದಾರಿಕೆ ಸೇವೆಗಾಗಿಯೇ ಮೀಸಲಾಗಿದ್ದರು. ಸಮಾಜದಲ್ಲಿ ಎಲ್ಲಾ ಸವಲತ್ತುಗಳು ಮನ್ನಣೆಗಳು ಉಚ್ಛವರ್ಣದವರಿಗೆ ಸೀಮಿತವಾಗಿದ್ದವು.


ಸ್ತ್ರೀಯರು ಸೇರಿದಂತೆ ಶೂದ್ರರು ಅಶುದ್ಧರೆಂದು ಪರಿಗಣಿಸಲ್ಪಟ್ಟಿದ್ದರು.


ಈ ವರ್ಣಾಧಾರಿತ ತಾರತಮ್ಯತೆಯು ಸಮಾಜದಲ್ಲಿ ಸಾಮಾಜಿಕ ವಿರಸ ಮತ್ತು ತುಮುಲಗಳನ್ನು ಸೃಷ್ಟಿಸಿತ್ತು.


ಈ ಸಂದರ್ಭದಲ್ಲಿ ಜನತೆಗೆ ಗೌತಮ ಮತ್ತು ಮಹಾವೀರರ ತತ್ವಗಳು ಭರವಸೆಯ ಹೊಸ ಮಾರ್ಗಗಳಾಗಿ ಗೋಚರಿಸಿದವು.


ಎಲ್ಲಾ ಪ್ರಾಚೀನ ಕಾಲದ ಸಮಾಜದಲ್ಲಿ ಧರ್ಮ ಮತ್ತು ರಾಜ್ಯ ವ್ಯವಸ್ಥೆಗಳಲ್ಲಿ ಬಹುದೊಡ್ಡ ಬದಲಾವಣೆಗಳು ಘಟಿಸಲು ಆಯಾ ಸಮಾಜದಲ್ಲಿನ ಕೃಷಿ ವಿಧಾನಗಳಲ್ಲಿನ ಮಾರ್ಪಾಡುಗಳು ಮತ್ತು ಆಹಾರ ಧಾನ್ಯಗಳ ಹೆಚ್ಚಳ ಬಹುಪಾಲು ಮೂಲ ಪ್ರೇರಣೆಯಾಗುತ್ತವೆ.


ಬೌದ್ಧ ಮತ್ತು ಜೈನ ಧರ್ಮಗಳ ಉದಯಕ್ಕೂ ಸಹ ಇವೇ ಮುಖ್ಯ ಕಾರಣಗಳಾಗಿವೆ.


ಈ ಕಾಲದ ಹೊತ್ತಿಗೆ ಉತ್ತರ ಪ್ರದೇಶದ ಪೂರ್ವ ಭಾಗ ಬಿಹಾರದ ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ನವೀನ ಕೃಷಿಯಾಧಾರಿತ ಅರ್ಥವ್ಯವಸ್ಥೆ ರೂಪುಗೊಂಡಿತು.


5ನೆಯ ಶತಮಾನದ ಕಾಲಾವಧಿಯ ವೇಳೆಗೆ ಇಲ್ಲಿ ಕಬ್ಬಿಣದ ವ್ಯವಸಾಯದ ಉಪಕರಣಗಳು ಬಳಕೆಗೆ ಬಂದವು.


ಕಬ್ಬಿಣದ ಗುಳಗಳಿಂದ ನೇಗಿಲುಗಳನ್ನು ಎಳೆಯಲು ಎತ್ತುಗಳು ಅಗತ್ಯವಾಗಿದ್ದವು ಆಹಾರ ಧಾನ್ಯಗಳ ಉತ್ಪಾದನೆ ಹೆಚ್ಚಳವಾಯಿತು.


ಆಹಾರ ಧಾನ್ಯಗಳ ಹೆಚ್ಚಳವನ್ನು ಕಾಯ್ದುಕೊಳ್ಳಲು ಎತ್ತುಗಳ ಬಳಕೆ ಅತ್ಯಗತ್ಯವಾಗಿತ್ತು. ಧಾರ್ಮಿಕ ಆಚರಣೆಗಳಲ್ಲಿ ಎತ್ತುಗಳನ್ನು ಬಲಿ ಕೊಡುತ್ತಿದ್ದರಿಂದ ಅವುಗಳ ಸಂಖ್ಯೆ ಇಳಿಮುಖವಾಗತೊಡಗಿತು.


ಈ ಹಿನ್ನೆಲೆಯಲ್ಲಿ ಪ್ರಾಣಿ ಬಲಿಯನ್ನು ತಿರಸ್ಕರಿಸಿ ಅಹಿಂಸೆಯನ್ನು ಬೋಧಿಸುತ್ತಿದ್ದ ಹೊಸ ಧರ್ಮಗಳು ಜನರಿಗೆ ಹೊಸ ಭರವಸೆಯನ್ನು ನೀಡಿದ್ದರಿಂದ ಅವರು ಆಕರ್ಷಿತರಾದರು.


ಈ ಕಾಲಾವಧಿಯಲ್ಲಿ ನಗರಗಳು ಬೆಳೆದವು. ಕೌಶಂಬಿ, ಕುಶಿನಗರ, ವಾರಣಾಸಿ, ಬಿಹಾರದಲ್ಲಿ ವೈಶಾಲಿ, ಚಿರಾಂಡ್ ಮತ್ತು ರಾಜಗೃಹಗಳು ಪ್ರವರ್ಧಮಾನಕ್ಕೆ ಬಂದವು. ಈ ನಗರಗಳಲ್ಲಿ ಕುಶಲ ಕಸುಬುದಾರರು ಮತ್ತು ವ್ಯಾಪಾರಿಗಳು ನೆಲೆಸಿದರು.


ಮೊಟ್ಟಮೊದಲಿಗೆ ನಾಣ್ಯಗಳನ್ನು ಬಳಸಿದರು. ವ್ಯಾಪಾರ ವಾಣಿಜ್ಯಗಳಿಗೆ ಪ್ರಶಸ್ತವಾದ ಈ ಸನ್ನಿವೇಶದಲ್ಲಿ ವರ್ಣವಿಭಜಿತ ಸಮಾಜದಲ್ಲಿ ಮೂರನೇ ಸ್ಥಾನದಲ್ಲಿದ್ದು ಸಾಮಾಜಿಕ ಗೌರವವನ್ನು ಹೊಂದಿರದ ವೈಶ್ಯರು ವೈದಿಕ ಧರ್ಮ ತಮ್ಮ ಮೇಲೆ ವಿಧಿಸಿದ್ದ ನಿರ್ಬಂಧಗಳನ್ನು ಕಿತ್ತೆಸೆದು ತಮ್ಮ ಸ್ಥಾನವನ್ನು ಉನ್ನತಗೊಳಿಸಿಕೊಳ್ಳಲು ವರ್ಣ ವ್ಯವಸ್ಥೆಗೆ ಮಹತ್ವ ನೀಡದ ಬೌದ್ಧ ಮತ್ತು ಜೈನ ಧರ್ಮಗಳನ್ನು ಸ್ವೀಕರಿಸಿದರು.


ಜೈನ ಧರ್ಮ

ಜೈನ ಧರ್ಮ ಅತ್ಯಂತ ಪುರಾತನ ಧರ್ಮಗಳಲ್ಲಿ ಜೈನ ಧರ್ಮವೂ ಒಂದು. ಸಾಂಪ್ರದಾಯಕವಾಗಿ ಜೈನರಲ್ಲಿ 24 ತೀರ್ಥಂಕರರಿದ್ದರೆಂಬ ನಂಬಿಕೆಯಿದೆ.


ಋಷಭ ಇವರಲ್ಲಿ ಮೊದಲನೆಯ ತೀರ್ಥಂಕರನಾದರೆ ಪಾಶ್ರ್ವನಾಥ 23ನೆಯ ತೀರ್ಥಂಕರ. ಪಾಶ್ರ್ವನಾಥನು ಸಾ.ಶ.ಪೂ. 8ನೆಯ ಶತಮಾನದಲ್ಲಿ ರಾಜ ಅಶ್ವಸೇನನ ಮಗನಾಗಿ ಜನಿಸಿದನು.


ಇವನು ಸುಖ ಭೋಗವನ್ನು ತ್ಯಜಿಸಿ ಅಮರನಾದನೆಂಬ ನಂಬಿಕೆಯಿದೆ. ಸರ್ವಸಂಘ


ಪರಿತ್ಯಾಗಿಯಾಗಿ ಇವನು ಸನ್ಯಾಸಿಯಾದನು. ಇವನು ಸುಖಮಯ ಬದುಕಿಗೆ ನಾಲ್ಕು ತತ್ವಗಳನ್ನು ಸೂಚಿಸಿದ್ದನು.


ಪಾಶ್ರ್ವನಾಥನು ಬೋಧಿಸಿದ ನಾಲ್ಕು ತತ್ವಗಳು
ಅಹಿಂಸೆ,
ಸತ್ಯ
ಆಸ್ತೇಯ (ಕದಿಯದಿರುವುದು)
ಅಪರಿಗ್ರಹ (ಆಸ್ತಿಯನ್ನು ಹೊಂದದಿರುವುದು).
ಬ್ರಹ್ಮಚರ್ಯವನ್ನು ವರ್ಧಮಾನನು ಬೋಧಿಸಿದನು. ಇವನೇ 24ನೆಯ ತೀರ್ಥಂಕರ.
ವರ್ಧಮಾನ ಮಹಾವೀರ (ಸಾ.ಶ.ಪೂ. 599-527)
 ವರ್ಧಮಾನನು ಗಣರಾಜ್ಯಗಳಲ್ಲೊಂದಾದ ವೈಶಾಲಿಯ ಕುಂಡಲಗ್ರಾಮದಲ್ಲಿ ಜನಿಸಿದನು. ಇವನ ತಂದೆ ಸಿದ್ಧಾರ್ಥ, ಜ್ಞಾತ್ರಿಕ ಎಂಬ ಬುಡಕಟ್ಟಿನ ರಾಜ. ತಾಯಿ ತ್ರಿಶಲಾದೇವಿ, ಪ್ರಬಲ ಗಣರಾಜ್ಯವಾಗಿದ್ದ ಲಿಚ್ಛವಿಗಳ ಯುವರಾಣಿ.
 ವರ್ಧಮಾನ ಮಹಾವೀರ ತನ್ನ 30ನೆಯ ವಯಸ್ಸಿನಲ್ಲ ಸತ್ಯಾನ್ವೇಷಣೆಯ ಹುಡುಕಾಟದಲ್ಲಿ ತೊಡಗಿದ ಈತ ಮನೆಯನ್ನು ತ್ಯಜಿಸಿದನು. ನಂತರ ಇವನು 12 ವರ್ಷಗಳ ಕಾಲ ಸತ್ಯದ ಹುಡುಕಾಟದಲ್ಲಿ ಅಲೆದಾಡಿದ, ತಪಸ್ಸು ಮಾಡಿದ. ಇವನು ಉಪವಾಸ ಮಾಡುವ ಮೂಲಕ ಸ್ವತಃ ತನ್ನ ದೇಹವನ್ನು ದಂಡಿಸಿಕೊಂಡನು.

 ಆತ 42ನೆಯ ವಯಸ್ಸಿನಲ್ಲಿ ಕೈವಲ್ಯ ಜ್ಞಾನವನ್ನು ಪಡೆದನು. ಕೈವಲ್ಯ ಜ್ಞಾನವೆಂದರೆ ಜ್ಞಾನೋದಯವೆಂದರ್ಥ. ಇವನು ಇಂದ್ರಿಯಗಳನ್ನು ನಿಗ್ರಹಿಸಿ ಸುಖ ಹಾಗೂ ಯಾತನೆಗಳ ಮೇಲೆ ನಿಯಂತ್ರಣವನ್ನು ಸಾಧಿಸಿಕೊಂಡ.

 ಈ ಸಾಧನೆಗಾಗಿ ಇವನು ‘ಮಹಾವೀರ’ನೆಂದು ಕರೆಸಿಕೊಂಡು ‘ಜಿನ’ನಾದನು. ‘ಜಿನ’ನೆಂದರೆ ಎಲ್ಲವನ್ನು ನಿಗ್ರಹಿಸಿದವನು, ಜಯಿಸಿದವನು ಎಂದರ್ಥ.  ಹೀಗಾಗಿಯೆ ಇವನ ಅನುಯಾಯಿಗಳನ್ನು ಜೈನರೆಂದು ಕರೆಯುತ್ತಾರೆ.

 ಮಹಾವೀರನು ತನ್ನ ಉಳಿದ 30 ವರ್ಷಗಳ ಬದುಕನ್ನು ಗಂಗಾನದಿಯ ಪ್ರದೇಶದ ಜನತೆಗೆ ತನ್ನ ತಿಳಿವನ್ನು ಬೋಧಿಸುತ್ತಾ ಕಳೆದನು. ಇವನು ತನ್ನ ಪಶ್ಚಿಮ ಭಾರತಕ್ಕೂ ಬೋಧಿಸುತ್ತಾ ಪ್ರಯಾಣಿಸಿದ.

 ಇವನು ತನ್ನ 72ನೆಯ ವಯಸ್ಸಿನಲ್ಲಿ ಬಿಹಾರದ ಪಾವಾಪುರಿ ಎಂಬಲ್ಲಿ ನಿರ್ವಾಣವನ್ನು ಹೊಂದಿದನು. ಮಹಾವೀರನು 5 ಪ್ರತಿಜ್ಞೆಗಳನ್ನು ಹಾಗೂ ನಡವಳಿಕೆಯ 3 ನಿಯಮಗಳನ್ನು ಬೋಧಿಸಿದನು.

 ಇವುಗಳನ್ನು ತ್ರಿರತ್ನಗಳೆಂದು ಕರೆಯುತ್ತಾರೆ.
 
ಪಂಚ ಪ್ರತಿಜ್ಞೆಗಳು:
1. ಅಹಿಂಸೆ
2. ಸತ್ಯ
3. ಆಸ್ತೇಯ
4. ಅಪರಿಗ್ರಹ
5. ಬ್ರಹ್ಮಚರ್ಯ

 ತ್ರಿರತ್ನಗಳು:
1. ಸಮ್ಯಕ್ಜ್ಞಾನ
2. ಸಮ್ಯಕ್ದರ್ಶನ
3. ಸಮ್ಯಕ್ಚಾರಿತ್ರ

 ಜೈನಧರ್ಮವು ಪೂರ್ಣವಾಗಿ ದೇವರ ಇರುವಿಕೆಯನ್ನು ನಿರಾಕರಿಸುವುದಿಲ್ಲ.

 ಆದರೂ ಅದು ನಾಸ್ತಿಕವಾದವನ್ನು ಒಪ್ಪುತ್ತದೆ. ಪ್ರಪಂಚದ ಆಗುಹೋಗುಗಳಲ್ಲಿ ದೇವರ ಪಾತ್ರವನ್ನು ನಿರಾಕರಿಸುತ್ತದೆ. ಇಲ್ಲಿ ಜಿನನಿಗಿಂತ ಕೆಳಗಿನ ಸ್ಥಾನದಲ್ಲಿ ದೇವರನ್ನು ಇಡಲಾಗಿದೆ.

 ಎಲ್ಲ ಚರಾಚರ ವಸ್ತುಗಳಲ್ಲಿಯೂ ಆತ್ಮ(ಜೀವ)ವಿದೆ ಎಂಬುವುದು ಇವರ ನಂಬಿಕೆ. ಆತ್ಮ(ಜೀವ)

 ಶುದ್ಧೀಕರಣವು ಮಾತ್ರ ಪುರ್ನಜನ್ಮದಿಂದ ಮುಕ್ತಿಯನ್ನು ನೀಡುತ್ತದೆ ಹಾಗೂ ನಿರ್ವಾಣ ಸಾಧ್ಯ.

 ಶುದ್ಧೀಕರಣವು ತಪಸ್ಸು, ಉಪವಾಸ, ದೇಹದಂಡನೆ ಹಾಗೂ ಅದರ ಮೂಲಕ ಉಂಟಾಗುವ ದೇಹ ನಾಶದಿಂದ ಮಾತ್ರ ಸಾಧ್ಯವೆಂಬುದು ಇವರ ನಂಬಿಕೆ.  ಇದನ್ನು ಸಲ್ಲೇಖನವೆನ್ನುವರು. ಕರ್ಮಸಿದ್ಧಾಂತವು ಜೈನರ ಬಹುಮುಖ್ಯ ಆಯಾಮ.

 ಈ ಧರ್ಮದ ಪ್ರಕಾರ ಉತ್ತಮ ಮತ್ತು ಪುಣ್ಯಕಾರ್ಯಗಳ ಮೂಲಕ ಮಾತ್ರ ವಿಮೋಚನೆಯನ್ನು ಪಡೆಯಬಹುದಾಗಿದೆ. ಕೈವಲ್ಯ ಜ್ಞಾನವನ್ನು ಪಡೆಯಲು ದೇಹದ ಬಂಧನದಿಂದ ಆತ್ಮವು ವಿಮುಕ್ತವಾಗಬೇಕು.

 ಸಾಂಪ್ರದಾಯಿಕವಾಗಿ ಜೈನರಲ್ಲಿ ಶ್ವೇತಾಂಬರ ಹಾಗೂ ದಿಗಂಬರರೆಂಬ ಎರಡು ಮುಖ್ಯ ಪಂಗಡಗಳನ್ನು ಕಾಣುತ್ತೇವೆ. ಬಿಳಿಯ ಉಡುಪು ಧರಿಸಿದ ಜೈನ ಮುನಿಗಳನ್ನು ಹಾಗೂ ಅವರ ಅನುಯಾಯಿಗಳನ್ನು ಶ್ವೇತಾಂಬರರೆಂದು ಕರೆಯುತ್ತಾರೆ. ಉಡುಪನ್ನು ಧರಿಸದ ಜೈನಮುನಿಗಳನ್ನು ಹಾಗೂ ಅವರ ಅನುಯಾಯಿಗಳನ್ನು ದಿಗಂಬರ ಪಂಥಕ್ಕೆ ಸೇರಿದವರೆಂದು ಪರಿಗಣಿಸಲಾಗಿದೆ. ಇವುಗಳು ಪ್ರಾಕೃತ ಭಾಷೆಯಲ್ಲಿವೆ

 ಮೊದಲ ಜೈನ ಸಮಾವೇಶದ ನಂತರ ಮಹಾವೀರನ ವಿಚಾರಗಳನ್ನು 12 ಗ್ರಂಥಗಳಲ್ಲಿ ಸಂಗ್ರಹಿಸಿಡಲಾಯಿತು. ಇವುಗಳನ್ನು ಜೈನರು 12 ಅಂಗಗಳೆಂದು ಕರೆದರು.

 .ಬಹಳ ಹಿಂದೆಯೇ ಜೈನರ ಒಂದು ಗುಂಪು ಬಿಹಾರದ ಕ್ಷಾಮದಿಂದಾಗಿ ದಕ್ಷಿಣಕ್ಕೆ ಬಂದು ಶ್ರವಣಬೆಳಗೊಳದಲ್ಲಿ ನೆಲಸಿತು. ಹೀಗೆ ದಕ್ಷಿಣ ಭಾರತದಲ್ಲಿ ಕೂಡ ಜೈನಮತದ ಪ್ರಚಾರವಾಯಿತು. ಇದರಿಂದ ಅಪಾರವಾದ ಗ್ರಂಥಗಳು ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ರಚನೆಯಾದವು.

 ಕನ್ನಡದ ಸುಪ್ರಸಿದ್ಧ ಕವಿಗಳಾದ ಪಂಪ, ರನ್ನ, ಪೆÇನ್ನ, ಜನ್ನ ಇವರುಗಳು ಜೈನರಾಗಿದ್ದರು.

 ಮೊದಲನೆ ಜೈನ ಮಹಾಸಭೆ:

1.ಪಾಟಲಿಪುತ್ರದಲ್ಲಿ ಕ್ರಿಪೂ. 300ರಲ್ಲಿ ಸ್ಥೊಲಭದ್ರ ಎಂಬ ಜೈನಯತಿಯ ಅಧ್ಯಕ್ಷತೆಯಲ್ಲಿ ಸಮಾವೇಶಗೊಂಡಿತ್ತು,

2.ಈ ಸಭೆಯಲ್ಲಿ ಜೈನಧರ್ಮವನ್ನು ನಿರೂಪಿಸುವ ದ್ವದಶಾಂಗಗಳು ಅಥವಾ 12 ಗ್ರಂಥಗಳನ್ನು ರಚಿಸಲಾಯಿತು.

 ಎರಡನೆಯ ಜೈನ ಮಹಾಸಭೆ:
1 ಗುಜರಾತಿನ ವಲ್ಲಬಿ ನಗರದಲ್ಲಿ ಜೈನರ ಎರಡನೆ ಸಭೆ ಕ್ರಿಶ.500ರಲ್ಲಿ ಜರುಗಿತು.

2 ಈ ಸಭೆಯಲ್ಲಿ ಭಿನ್ನಾಭಿಪ್ರಾಯಗಳು ಇತ್ಯರ್ಥವಾಗದೆ ಜೈನರು ಎರಡು ಗುಂಪುಗಳಾಗಿ ವಿಭಜಿತರಾದರು.

ಎ.ದಿಗಂಬರರು:ಮಹಾವೀರನ ಅನುಯಾಯಿಗಳು ದಿಗಂಬರ ಅಥವಾ ನಗ್ನ ಸ್ವರೂಪವಾಗಿರುವುದನ್ನು ವಿಶೇಷವಾಗಿ ನಂಬುತ್ತಾರೆ..ಪಾರ್ಶ್ವನಾಥನ ಅನುಯಾಯಿಗಳು ಪುರುಷರು ಬಿಳಿ ಉಡುಪು ಧರಿಸುತ್ತಿದ್ದರು, ಮಹಿಳೆಯರು ವರ್ಣರಂಜಿತ ಉಡುಪು ಧರಿಸುತ್ತಿದ್ದರು.
ಬಿ, ಶ್ವೇತಾಂಬರರು:ಪಾರ್ಶ್ವನಾಥನ ಅನುಯಾಯಿಗಳು ಪುರುಷರು ಬಿಳಿ ಉಡುಪು ಧರಿಸುತ್ತಿದ್ದರು, ಮಹಿಳೆಯರು ವರ್ಣರಂಜಿತ ಉಡುಪು ಧರಿಸುತ್ತಿದ್ದರು.ಪಾರ್ಶ್ವನಾಥನ ಅನುಯಾಯಿಗಳು ಪುರುಷರು ಬಿಳಿ ಉಡುಪು ಧರಿಸುತ್ತಿದ್ದರು, ಮಹಿಳೆಯರು ವರ್ಣರಂಜಿತ ಉಡುಪು ಧರಿಸುತ್ತಿದ್ದರು.

 ಜೈನಯತಿಗಳಾದ ಸಿಂಹನಂದಿ, ಕುಂದುಕುಂದಾಚಾರ್ಯ, ಪೂಜ್ಯಪಾದರು ಸಂಸ್ಕೃತದಲ್ಲಿ ದಾರ್ಶನಿಕ ಗ್ರಂಥಗಳನ್ನು ರಚಿಸಿದ್ದಾರೆ, ಚಾಲುಕ್ಯರ ಯುಗ ಜೈನ ಕವಿಗಳ ಯುಗವೆನ್ನಬಹುದು, ಅಂದಿನ ಶ್ರೇಷ್ಠಕವಿಗಳಾದ ರನ್ನ, ಪೊನ್ನ, ಪಂಪ, ರವಿಕೀರ್ತಿ ಮುಂತಾದವರೆ ಕಾರಣಕರ್ತರು.

 ಜೈನಧರ್ಮದ ಕಲೆ : ಕಲಾಕ್ಷೇತ್ರದಲ್ಲಿ ಜೈನರ ಕೊಡುಗೆ ಅಪಾರ, ಶ್ರವಣಬೆಳಗೊಳದ ಜಗತ್ಪಸಿದ್ಧವಾದ ಗೊಮ್ಮಟ ಪ್ರತಿಮೆಯನ್ನು ಕಟ್ಟಿಸಿದವನು ಚಾವುಂಡರಾಯ, ಜೈನಮತದ ಈತ ಗಂಗವಂಶದ ಅರಸ ರಾಜಮಲ್ಲನ (ಕ್ರಿ.ಶ.10ನೇ ಶತಮಾನ) ಅಮಾತ್ಯನಾಗಿದ್ದ ಇದಲ್ಲದೆ ಮೌಂಟ್ ಅಬು, ಎಲ್ಲೋರಾ ಖಚುರಾಹೋಗಳಲ್ಲಿ ಜೈನಧರ್ಮದ ದೇವಾಲಯಗಳು ಜೈನರ ಕಲೆಗೆ ಪ್ರಸಿದ್ಧವಾಗಿವೆ.

ಬೌದ್ಧ ಧರ್ಮ  ಗೌತಮ ಬುದ್ಧನೆಂದೇ ಪ್ರಖ್ಯಾತನಾದ ಸಿದ್ದಾರ್ಥನು ಸಾ.ಶ.ಪೂ. 6ನೆಯ ಶತಮಾನದಲ್ಲಿ ಜನಿಸಿದನು.

 ತಂದೆ ಶುದ್ಧೋದನನು ಶಾಕ್ಯ ಗಣ-ಸಂಘದ ರಾಜ. ಸಿದ್ದಾರ್ಥನು ರಾಜರ ಭೋಗವನ್ನು ಹಾಗೂ ಸಂಸಾರದ ಸುಖವನ್ನು ತ್ಯಜಿಸಿ ಸನ್ಯಾಸಿಯಾದನು.

 ಪ್ರಚಲಿತ ಬದುಕಿನ ದಾರಿಗಳ ನಿರರ್ಥಕತೆಯನ್ನು ಕಂಡು ಸತ್ಯದ ಹುಡುಕಾಟದಲ್ಲಿ ನಿರತನಾಗಿ ಜ್ಞಾನೋದಯವನ್ನು ಪಡೆದು ಬುದ್ಧನಾದನು.

 ಜ್ಞಾನೋದಯದ ನಂತರ ಈತ ಮೊದಲಿಗೆ ತೆರಳಿದ್ದು ಬನಾರಸ್ ಸಮೀಪದ ಸಾರನಾಥಕ್ಕೆ.

 ಇಲ್ಲಿನ ಜಿಂಕೆವನದಲ್ಲಿ ಈತನು ತನ್ನ ಮೊಟ್ಟಮೊದಲ ಬೋಧನೆಯನ್ನು ಮಾಡಿದನು. ಇದು ‘ಧರ್ಮ ಚಕ್ರ ಪ್ರವರ್ತನ’ವೆಂದು ಕರೆಯಲ್ಪಟ್ಟಿದೆ.

 ಇಲ್ಲಿ ಬುದ್ಧನು ಚತುರ್ ಆರ್ಯಸತ್ಯ ಹಾಗೂ ಅಷ್ಟಾಂಗಿಕ ಮಾರ್ಗವನ್ನು ಬೋಧಿಸಿದನು.

 ಲೋಕವೆಲ್ಲ ದುಃಖ ಹಾಗೂ ನೋವಿನಿಂದ ಆವರಿಸಿದೆ.

 ದುಃಖದ ಮೂಲವನ್ನು, ಅದರ ಕಾರಣವನ್ನು ಚತುರ್ಆರ್ಯ ಸತ್ಯವು ವಿವರಿಸುತ್ತದೆ. ಆಸೆಯೇ ದುಃಖಕ್ಕೆ ಮೂಲಕಾರಣ ಎಂಬ ಸತ್ಯವನ್ನು ಬುದ್ಧನು ಕಂಡನು. ಅತಿಯಾದ ಆಸೆಯ ವಿಮುಕ್ತಿಯಿಂದ ಮಾತ್ರ ನೆಮ್ಮದಿಯ ಬದುಕು ಸಾಧ್ಯ. ಆಸೆಯ ವಿಮುಕ್ತಿಗಾಗಿ ಅಷ್ಟಾಂಗಿಕ ಮಾರ್ಗವನ್ನು ಬುದ್ಧನು ಬೋಧಿಸಿದನು. ಇದನ್ನು ಮಧ್ಯಮ ಪಥವೆಂದು ಕರೆಯುವರು.

ಅಷ್ಟಾಂಗಿಕ ಮಾರ್ಗ 

1. ಒಳ್ಳೆಯ ನಡತೆ
2. ಮಾತು
3. ನೋಟ (ದೃಷ್ಟಿ)
4. ಬದುಕು
5. ಪ್ರಯತ್ನ
6. ನೆನಪು
7. ನಿರ್ಧಾರ
8. ಚಿಂತನೆ
ಧರ್ಮದ ಅನುಯಾಯಿಗಳು

 ಶ್ರೀಮಂತ ವರ್ತಕರು, ಕುಶಲಕರ್ಮಿಗಳು, ಜನಸಾಮಾನ್ಯರು ಈ ಹೊಸ ಪ್ರತಿಪಾದನೆಯಿಂದ

 ಪ್ರೇರಿತರಾದರು. ಜನಸಾಮಾನ್ಯರ ಭಾಷೆಯಾದ ಪ್ರಾಕೃತದ ಮೂಲಕ ಬುದ್ಧನು ತನ್ನ ಬೋಧನೆಗಳನ್ನು ಮಾಡಿದನು ಹಾಗೂ ಅವುಗಳನ್ನು ಸ್ಥಳೀಯ ಸಂಪ್ರದಾಯಗಳ ಅಂಶಗಳೊಂದಿಗೆ ಸಂಬಂಧ ಕಲ್ಪಿಸಿದನು.

 ಹೊಸ ನಗರಗಳ ವಾತಾವರಣವು ಜನರ ಬದುಕಿನ ವಿಧಾನಗಳನ್ನು ಬದಲಾಯಿಸಿತು. ಬದಲಾದ ಪರಿಸ್ಥಿತಿಗಳಲ್ಲಿ ಹೊಸ ಮತಗಳು ಆಶಾಕಿರಣಗಳಾದವು.

 ಅದರಲ್ಲೂ ಬೌದ್ಧಮತ ಹೊಸ ಪಾತ್ರವನ್ನು ವಹಿಸಿಕೊಂಡು ಪ್ರವರ್ತನೆಯ ಹಾದಿಯನ್ನು ಹಿಡಿಯಿತು.

 ಬುದ್ಧ ಹಾಗೂ ಅವನ ಅನುಯಾಯಿಗಳು ಕೋಸಲ, ಮಗಧ ಹಾಗೂ ಗಂಗಾನದಿಯ ಬಯಲು ಪ್ರದೇಶದ ಉಳಿದ ಹಲವು ನಗರಗಳಿಗೆ ಭೇಟಿಕೊಟ್ಟು ತಮ್ಮ ವಿಚಾರಗಳನ್ನು ಬೋಧಿಸಿದರು.

 ಇವರು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಕಾಲ್ನಡಿಗೆಯಲ್ಲಿಯೇ ಪ್ರಯಾಣಿಸುತ್ತಿದ್ದರು ಮತ್ತು ತಮ್ಮ ಜೀವನವನ್ನು ಪರರ ಬದುಕಿಗಾಗಿಯೆ ಮೀಸಲಿಟ್ಟರು.


80ನೆಯ ಇಳಿ ವಯಸ್ಸಿನಲ್ಲಿ ಬುದ್ಧನ ಅವಿರತವಾದ ಸಾರ್ಥಕ ಬದುಕು ಕುಶಿನಗರದಲ್ಲಿ ಅಂತ್ಯಗೊಂಡಿತು. ಇದನ್ನು ‘ಮಹಾಪರಿ ನಿರ್ವಾಣ’ವೆಂದು ಕರೆಯಲಾಗಿದೆ. ಬುದ್ಧನು ವಿಹರಿಸಿದ ಪ್ರದೇಶಗಳಲ್ಲಿ ವಿಹಾರಗಳನ್ನು ಕಾಲಾಂತರದಲ್ಲಿ ನಿರ್ಮಿಸಿದರು.

 ಅವನ ಅಸ್ಥಿಪಂಜರ ಕಳೆಬರವನ್ನು ಹಾಗೂ ಮೂಳೆಗಳನ್ನು ಜನ ಅವನ ನೆನಪಿನಲ್ಲಿ ಸಂರಕ್ಷಿಸಿದರು. ಅವುಗಳ ಮೂಲಕ ಚೈತ್ಯಾಲಯ ಹಾಗೂ ಸ್ತೂಪಗಳಲ್ಲಿ ಅವನ ಸಾಧನೆಯನ್ನು ಸ್ಮರಿಸುತ್ತಾ ಪೂಜಿಸತೊಡಗಿದರು. ಹೀಗೆ ಪ್ರಾರಂಭವಾದದ್ದೆ ಮೊಟ್ಟಮೊದಲ ದೇವಾಲಯಗಳು,

 ವಿಗ್ರಹಗಳು ಹಾಗೂ ಮೂರ್ತಿಪೂಜೆ. ಬುದ್ಧನ ಮರಣದ ನಂತರ ಅವನ ಅನುಯಾಯಿಗಳು ಬುದ್ಧನ ಬೋಧನೆ ಹಾಗೂ ಸಂಪ್ರದಾಯವನ್ನು ತ್ರಿಪಿಟಕಗಳಲ್ಲಿ ಕ್ರೋಡೀಕರಿಸಿದರು.

 ಇವೇ ವಿನಯ, ಸುತ್ತ ಹಾಗೂ ಅಭಿಧಮ್ಮ ಪಿಟಕವೆಂದು ಕರೆಯಲ್ಪಟ್ಟಿವೆ. ಕಾಲಕ್ರಮೇಣ ಬೋಧನೆಗಳಲ್ಲಿ ಹುಟ್ಟಿಕೊಂಡ ಭಿನ್ನಾಭಿಪ್ರಾಯದಿಂದಾಗಿ ಒಳಪಂಗಡಗಳು ಹುಟ್ಟಿಕೊಂಡವು.

 ಹೀಗೆ ಹೀನಯಾನ, ಮಹಾಯಾನ, ವಜ್ರಯಾನ ಹಾಗೂ ಅವುಗಳಲ್ಲಿನ ಸೂತ್ರಗಳು ಹುಟ್ಟಿಕೊಂಡವು. ಇಂದು ಬುದ್ಧನನ್ನು ಅರಸುವ ಅನೇಕ ಹಾದಿಗಳನ್ನು ಹುಡುಕಿಕೊಂಡಿರುವ ಸಂಘಟನೆಗಳನ್ನು ಜಗತ್ತಿನಾದ್ಯಂತ ನಾವು ಕಾಣುತ್ತೇವೆ.

 ಬೌದ್ಧಧರ್ಮದ ಪವಿತ್ರ ಗ್ರಂಥಗಳು :
1.ತ್ರಿಪಿಟಕಗಳು ಧರ್ಮಪದ, ಮಿಲಿಂದಪನ್ಹ, ದೀರ್ಘಾ, ನಿಕಾಯ, ದ್ವೀಪವಂಶ, ಮಹಾವಂಶ, ಲಿಖಿತವಿಸ್ತಾರ, ಜಾತಕಕತೆಗಳು ಇತ್ಯಾದಿ.
ಭೌದ್ಧಸಭೆಗಳು:

 1ನೇ ಬೌದ್ದ ಮಹಾಸಭೆ (ಕ್ರಿ.ಪೂ.460) :
ಇದು ರಾಜಗೃಹದಲ್ಲಿ ಸಮಾವೇಶಗೊಂಡಿದ್ದು, ಇದರ ಅಧ್ಯಕ್ಷತೆಯನ್ನು ಮಹಾಕಶ್ಯಪ ವಹಿಸಿದ್ದನು. ಆನಂದಪುತ್ರ, ಉಪಾಲಿ ಭಿಕ್ಷುಗಳು ಪ್ರಮುಖಪಾತ್ರವಹಿಸಿದ್ದರು. ಬುದ್ಧನ ಬೋಧನೆಗಳನ್ನು ಗ್ರಂಥರೂಪದಲ್ಲಿ ಸಂಗ್ರಹಿಸಲಾಯಿತು. ಇವುಗಳನ್ನು ತ್ರಿಪಿಟಕಗಳೆಂದು ಕರೆಯುತ್ತಾರೆ.

 2ನೇ ಬೌದ್ಧ ಮಹಾಸಭೆ (ಕ್ರಿ.ಪೂ.377):
ಇದು ಮಗಧದ ವೈಶಾಲಿಯಲ್ಲಿ ಜರುಗಿತ್ತು, ಈ ಸಭೆಯಲ್ಲಿ ಬುದ್ಧನ ಬೋಧನೆ ಮತ್ತು ಸಂವಾದಗಳ ಕೃತಿಗಳನ್ನು ಪುನರ್ ಪರಿಶೀಲಿಸಲಾಯಿತು.

 ಮೂರನೆಯ ಬೌದ್ದ ಮಹಾಸಮ್ಮೇಳನ ಕ್ರಿ.ಪೂ.240)
ಈ ಸಭೆ ಪಾಟಲೀಪುತ್ರಗಳಲ್ಲಿ ಅಶೋಕನ ಕಾಲದಲ್ಲಿ ಜರುಗಿತು. ಬೌದ್ದರಲ್ಲಿ ತಲೆದೋರಿದ್ದ ಒಡಕನ್ನು ನಿವಾರಿಸಲು ಈ ಸಭೆಯಲ್ಲಿ ಕ್ರಮಕೈಗೊಳ್ಳಲಾಯಿತು. ನಾಲ್ಕನೆಯ ಬೌದ್ದಮಹಾಸಭೆ (ಕ್ರಿ.ಪೂ.100) ಇದು ಶ್ರೀನಗರದಲ್ಲಿ ಕಾನಿಷ್ಕನ ಕಾಲದಲ್ಲಿ ಜರುಗಿತು. ಈ ಸಭೆಯಲ್ಲಿ ಬೌದ್ಧಧರ್ಮದಲ್ಲಿನ ಭಿನ್ನಾಭಿಪ್ರಾಯಗಳನ್ನು ನಿವಾರಿಸಲು ವಸ್ತು ಮಿತ್ರನ ಅಧ್ಯಕ್ಷತೆಯಲ್ಲಿ ಪ್ರಯತ್ನಮಾಡಲಾಯಿತು. ಆದರೆ ಅದು ವಿಫಲವಾಗಿ ಬೌದ್ದರು ಹೀನಾಯಾನಿಗಳು ಮತ್ತು ಮಹಾಯಾನಿಗಳು ಎಂಬ ಎರಡು ಪಂಗಡಗಳಾಗಿ ವಿಭಜಿತರಾದರು. ಹೀನಾಯಾನಿಗಳು: ಬುದ್ಧನ ಮೂಲತತ್ವಗಳಲ್ಲಿ ನಂಬಿಕೆಯುಳ್ಳವರು, ಅವರು ವಿಗ್ರಹರೂಪವನ್ನು ಆರಾಧಿಸುತ್ತಿರಲಿಲ್ಲ. ಮಹಾಯಾನಿಗಳು: ಬುದ್ಧನನ್ನು ದೇವರೆಂದು ಪರಿಗಣಿಸಿ ವಿಗ್ರಹರೂಪದಲ್ಲಿ ಪೂಜಿಸುವುದನ್ನು ರೂಢಿಗೆ ತಂದರು.


ವಿದೇಶಿಯರ ದಾಳಿ

 ಇದೇ ಕಾಲಘಟ್ಟದಲ್ಲಿ ಗ್ರೀಸ್ನಲ್ಲಿ ನಗರ ರಾಜ್ಯಗಳು ವಿಕಸಿತಗೊಂಡಿದ್ದವು. ಪ್ರಾಚೀನ ಪರ್ಶಿಯ ಒಂದು ಪ್ರಬಲ ಸಾಮ್ರಾಜ್ಯವಾಗಿ ಬೆಳೆದಿತ್ತು.

 ಈ ಎರಡು ಪ್ರದೇಶಗಳು ನಿರಂತರವಾದ ಸಂಘರ್ಷಕ್ಕೆ ಗುರಿಯಾದ್ದವು.

 ಪ್ರಾಚೀನ ಪರ್ಶಿಯವನ್ನು ಆಳಿದವರಲ್ಲಿ ಅಖಿಮೇನಿಯನ್ನರು ಕೂಡ ಒಬ್ಬರು. ಸಾ.ಶ.ಪೂ.6ನೇ ಶತಮಾನದಲ್ಲಿ ಈ ಮನೆತನದ ದೊರೆಯಾದ ಡೇರಿಯಸನು ಪ್ರಬಲ ಸಾಮ್ರಾಜ್ಯವೊಂದನ್ನು ಕಟ್ಟಿದನು.

 ಇವನ ಕಾಲದಲ್ಲಿ ಅವನ ಸಾಮ್ರಾಜ್ಯವು ಭಾರತದ ಗಡಿಯವರೆವಿಗೂ ಹರಡಿತ್ತು. ಸಾ.ಶ.ಪೂ. 4ನೆಯ ಶತಮಾನದಲ್ಲಿ ಮ್ಯಾಸೆಡೊನಿಯಾದ ದೊರೆ ಅಲೆಗ್ಸಾಂಡರ್ ಗ್ರೀಕ್ ನಗರ ರಾಜ್ಯಗಳನ್ನು ಗೆದ್ದು ಪರ್ಶಿಯಾವನ್ನು ವಶಪಡಿಸಿಕೊಂಡನು.

 ಇದರಿಂದಾಗಿ ಭಾರತದ ಗಡಿಯವರೆವಿಗಿದ್ದ ಪರ್ಷಿಯಾ ಭಾಗವು ಅಲೆಗ್ಸಾಂಡರನ ಕೈವಶವಾಯಿತು.

 ಪರ್ಶಿಯಾವನ್ನು ಗೆದ್ದ ನಂತರ ಅಲೆಗ್ಸಾಂಡರ್ ಕಂದಾಹಾರ್ ಹಾಗೂ ಹಿಂದುಕುಶ್ನ ಮಾರ್ಗವಾಗಿ ಭಾರತವನ್ನು ಪ್ರವೇಶಿಸಿದ.

 ರಾವಿ ಮತ್ತು ಬಿಯಾಸ್ ನದಿಯವರೆಗೂ ಸಾಗಿದ ಈತನಿಗೆ ಇನ್ನು ಹೆಚ್ಚುಮುಂದುವರಿಯಲಾಗದೆ ಜೀಲಂ ನದಿಯ ಮೂಲಕ ಭಾರತದ ಗಡಿದಾಟಿ ಹಿಂದಿರುಗುವ ಮಾರ್ಗದಲ್ಲಿ ಬ್ಯಾಬಿಲೋನಿನವರೆವಿಗೆ ಸಾಗಿ ಅಲ್ಲಿ ಮೃತನಾದ.
ವೈದಿಕ ಸಂಸ್ಕೃತಿ :

 ವೈದಿಕಕಾಲದಲ್ಲಿ ಇಂದ್ರ, ವರುಣ, ಅಗ್ನಿ ದೇವತೆಗಳು ಪ್ರಮುಖವಾದವು.

 ಪ್ರಕೃತಿ ಆರಾಧಕರು, ಪ್ರಾಣಿಬಲಿರೂಢಿಯಲ್ಲಿತ್ತು.

 ಗೋವಿಗೆ (ಹಸು) ಪ್ರಾಧಾನ್ಯತೆ ನೀಡಲಾಗಿತ್ತು ಮತ್ತು ಪವಿತ್ರವಾಗಿತ್ತು.

 4 ಅವರು ಪೂರ್ಣ ಹಳ್ಳಿ ಜೀವನ.

 ವ್ಯಾಪಾರ ಸಂಪರ್ಕಗಳಿರಲಿಲ್ಲ.

 ವ್ಯವಸಾಯ ಮುಖ್ಯಕಸುಬು, ಪಶುಪಾಲನೆ

 ಬೇಟೆ ರಥಗಳನ್ನು ಓಡಿಸುವ ಸ್ಪರ್ಧೆ ಮುಂತಾದ ಹೊರಾಂಗಣ ಆಟ ಪ್ರಿಯವಾಗಿತ್ತು.

 ಕೆಂಪುವರ್ಣ ದೃಢಕಾಯರಾದವರು.

ತಮ್ಮದೇ ಆದ ಲಿಪಿ ಹೊಂದಿರಲಿಲ್ಲ

 ಅಗ್ನಿ ಇವರಿಗೆ ಪವಿತ್ರ ಪೂಜಾರ್ಹವಾಗಿತ್ತು.

 ಇವರ ಬರವಣಿಗೆ ಎಡದಿಂದ ಬಲಕ್ಕೆ

 ವೇದಗಳ ಕಾಲ ನಿಖರವಾಗಿ ನಿರ್ಧಾರವಾಗಿಲ್ಲ.

 13.ಋಗ್ವೇದ ಕಾಲವು ಪಂಜಾಬ್‌ದ ಸಪ್ತಸಿಂಧೂ ಪ್ರದೇಶದಲ್ಲಿ ಕಂಡುಬಂದಿದ್ದು ಇವರ ಕಾಲದ ಆಡಳಿತ ವ್ಯವಸ್ಥೆಯಲ್ಲಿ ಸಭಾ ಮತ್ತು ಸಮಿತಿಗಳಿದ್ದವು.
ಸಭಾ:
ಎಂದರೆ ರಾಜನ ಸಮ್ಮುಖದಲ್ಲಿ ಸಮಾವೇಶಗೊಂಡ ಜನರ. ಪ್ರತಿನಿಧಿಗಳೆಂದು ಅರ್ಥ.
ಸಮಿತಿ:
ಎಂಬುದು ಜನಸಾಮಾನ್ಯರ ಪ್ರತಿನಿಧಿಸಂಸ್ಥೆಯಾಗಿತ್ತು.

ಬೌದ್ಧ ಧರ್ಮ

ಬೌದ್ಧ ಧರ್ಮದ ಪ್ರಮುಖ ಸಂಕೇತ -- - ಧರ್ಮಚಕ್ರ ಅಥವಾ ಪ್ರಾರ್ಥನಾ ಗಾಲಿ

 ಬೌದ್ಧ ಧರ್ಮದ ಸ್ಥಾಪಕ - ----- ಗೌತಮ ಬುದ್ದ

 ಗೌತಮ ಬುದ್ಧನ ಇನ್ನೋಂದು ಹೆಸರು -- ಸಿದ್ಧಾರ್ಥ

 ಗೌತಮ ಬುದ್ಧನ ತಂದೆಯ ಹೆಸರು -- ಶುದ್ಧೋದನ

 ಶುದ್ಧೋದನ ಈ ಕುಲಕ್ಕೆ ಸೇರಿದ ಅರಸ - - ಶಾಕ್ಯ ಕುಲ

 ಶುದ್ಧೋದನ ರಾಜ್ಯವಾಳುತ್ತಿದ್ದ ಪ್ರದೇಶ - - ಕಪಿಲವಸ್ತು

 ಬುದ್ಧನ ತಾಯಿಯ ಹೆಸರು - - ಮಾಯಾದೇವಿ

 ಮಾಯಾದೇವಿಯ ತವರು ಮನೆ - - ದೇವದಾಹ ಎಂಬ ನಗರ

 ಮಾಯಾದೇವಿ ಬುದ್ಧನಿಗೆ ಜನ್ಮ ನೀಡಿದ ಪ್ರದೇಶ -- ಲುಂಬಿಣಿ ವನ

 ಲುಂಬಿಣಿವನ ಪ್ರಸ್ತುತ ಈ ಪ್ರದೇಶದಲ್ಲಿದೆ -- ನೇಪಾಳದ ಗಡಿ ಪ್ರದೇಶ

 ಬುದ್ಧನ ಮಲತಾಯಿಯ ಹೆಸರು - - ಮಹಾ ಪ್ರಜಾಪತಿ

 ಜಿಂಕೆಯ ವನ ಎಂದು ಕರೆಯಲ್ಪಡುವ ಪ್ರದೇಶ - ಸಾರಾನಾಥ

 ಬುದ್ದನ ಕುರಿತಾದ ತಮಿಳು ಕೃತಿ - - ಮಣಿಮೇಖಲೈ

 ಬುದ್ದನ ಬಾಲ್ಯದಲ್ಲಿ ಭವಿಷ್ಯ ನುಡಿದ ಸನ್ಯಾಸಿ - ಅನಿತ

 ಬುದ್ದನ ಪತ್ನಿಯ ಹೆಸರು - ಯಶೋಧರಾ

 ಬುದ್ಧನ ಮುಗುವಿನ ಹೆಸರು - ರಾಹುಲ

 ಬುದ್ಧ ಸನ್ಯಾಸತ್ವ ಪಡೆಯಲು ಕಾರಣವಾದ ಅಂಶ - ವೃದ್ದ ಕುಷ್ಠರೋಗಿ , ಶವ ಹಾಗೂ ಸನ್ಯಾಸಿ

 ಸತ್ಯಾನ್ವೇಷಣಿ -ಬುದ್ಧನು ಲೌಕಿಕ ಪ್ರಪಂಚದಿಂದ ದೂರ ಸರಿಯಲು ಪ್ರಯತ್ನಿಸಿದ್ದು - 21 ನೇ ವಯಸ್ಸಿನಲ್ಲಿ

 ಬುದ್ಧನು ಸತ್ಯಾನ್ವೇಷಣಿಗೆ ಹೊರಟ ಘಟನೆಯನ್ನು ಈ ಹೆಸರಿನಿಂದ ಕರೆಯುವರು - ಮಹಾಪರಿತ್ಯಾಗ

 ರಾಜ್ಯ ತೊರೆದು ಹೊರಟ ಬುದ್ಧನು ತಲುಪಿದ ಮೊದಲ ಪ್ರದೇಶ - ಗಯಾ

 ಬುದ್ಧನಿಗೆ ಜ್ಞಾನೇದಯವಾದದ್ದು - ಬೋದಿ ವೃಕ್ಷದ ಕೆಳಗೆ

 ತಥಾಗತ ಎಂದರೇ - ಸತ್ಯವನ್ನು ಕಂಡವನು ಎಂದರ್ಥ

 ಬುದ್ದನು ನಿರ್ವಾಣ ಹೊಂದಿದ ಪ್ರದೇಶ - ನೇಪಾಳದ ಕುಶೀನಗರ

ಬುದ್ದನ ತತ್ವಗಳು

ನಾಲ್ಕು ಮೂಲ ತತ್ವಗಳು

ನಾಲ್ಕು ಮಹಾನ್ ಸತ್ಯಗಳು

ಅಷ್ಟಾಂಗ ಮಾರ್ಗ

ನಾಲ್ಕು ಮೂಲ ತತ್ವಗಳು❇

ಅಹಿಂಸೆ

ಸತ್ಯ ನುಡಿಯುವಿಕೆ

ಕಳ್ಳತನ ಮಾಡದಿರುವುದು

ಪಾವಿತ್ರತೆ

ನಾಲ್ಕು ಮಹಾನ್ ಸತ್ಯಗಳು

ದುಃಖ

ದುಃಖಕ್ಕೆ ಕಾರಣ

ದುಃಖದ ನಿವಾರಣಿ

ದುಃಖದ ನಿವಾರಣಿಗೆ ಮಾರ್ಗ

ಅಷ್ಟಾಂಗ ಮಾರ್ಗ

ಒಳ್ಳೆಯ ನಂಬಿಕೆ

ಒಳ್ಳೆಯ ಆಲೋಚನೆ

ಒಳ್ಳೆಯ ಮಾತು

ಉತ್ತಮ ನಡತೆ

ಉತ್ತಮ ಜೀವನ

ಒಳ್ಳೆಯ ಪ್ರಯತ್ನ

ಉತ್ತಮ ವಿಚಾರಗಳ ನೆನಪು

ಯೋಗ್ಯ ರೀತಿಯ ಧ್ಯಾನ

 ಅಹಿಂಸೆಯೆ ದುಃಖಕ್ಕೆ ಮೂಲ ಕಾರಣ ಎಂಬ ಹೇಳಿಕೆ ನೀಡಿದವರು - ಬುದ್ದ

 ಬುದ್ಧನ ಪ್ರಕಾರ ಮುಕ್ತಿಗೆ ಕೊಂಡೊಯ್ಯಲಿರುವ ದಾರಿ - ಅಷ್ಟಾಂಗ ಮಾರ್ಗ

 ಅಷ್ಟಾಂಗ ಮಾರ್ಗವನ್ನು ಈ ಹೆಸರಿನಿಂದಲೂ ಕರೆಯುವರು - - ಮಾಧ್ಯಮಿಕ ಮಾರ್ಗ

 ವ್ಯಕ್ತಿಯ ಮೋಕ್ಷ ಸಾಧನೆಗೆ ಸೂಕ್ತ ದಾರಿ ಕಲ್ಪಿಸುವ ಮಾರ್ಗ - ಅಷ್ಟಾಂಗ ಮಾರ್ಗ

 ಬುದ್ಧನ ಉಪದೇಶಗಲನ್ನು ಒಳಗೊಂಡಿರುವ ಬೌದ್ಧ ಸಾಹಿತ್ಯ - ತ್ರಿಪಿಟಕ

ಬೌದ್ಧ ಧರ್ಮದ ಪ್ರಸಾರ
 
ಬುದ್ಧನ ಉಪದೇಶ ಈ ಭಾಷೆಯಲ್ಲಿ ಪ್ರಸಾರವಾಯಿತು - ಪಾಳಿ ಭಾಷೆ

 ಬೌದ್ಧ ಧರ್ಮದ ಎರಡು ಪಂಗಡಗಳು - ಹೀನಾಯಾನ ಮತ್ತು ಮಹಾಯಾನ

 ಬೌದ್ಧ ಮಹಾ ಸಭೆಗಳು
ಮೊದಲ ಸಭೆ - ಕ್ರಿ.ಪೂ. 483 ರಲ್ಲಿ ರಾಜಗೃಹದಲ್ಲಿ ಜರುಗಿತು.

 ಮೊದಲ ಸಭೆ - ಕ್ರಿ.ಪೂ. 483 ರಲ್ಲಿ ವ್ಯವಸ್ಥೆಗೊಳಿಸಿದವರು - ಅಜಾತಶತೃ

 ಮೊದಲ ಸಭೆ - ಕ್ರಿ.ಪೂ. 483 ರಲ್ಲಿ ಇದರ ಅಧ್ಯಕ್ಷತೆ ವಹಿಸಿದವರು - ಮಹಾಕಶ್ಯಪಾ

 ಮೊದಲ ಸಭೆ - ಕ್ರಿ.ಪೂ. 483 ರಲ್ಲಿ ಈ ಸಭೆಯಲ್ಲಿ ತ್ರಿಪಿಟಕ ಎಂಬ ಗ್ರಂಥವನ್ನು ರಚಿಸಲಾಯಿತು

 ಎರಡನೇ ಸಭೆ - ಕ್ರಿ.ಪೂ. 387 ರಲ್ಲಿ - ವೈಶಾಲಿಯಲ್ಲಿ ಜರುಗಿತು

 ಮೂರನೇ ಸಭೆ - ಕ್ರಿ.ಪೂ. 237 ರಲ್ಲಿ ಪಾಟಲಿಪುತ್ರದಲ್ಲಿ ನಡೆಯಿತು

 ಮೂರನೇ ಸಭೆ - ಕ್ರಿ.ಪೂ. 237 ರ ಸಭೆ - ಅಶೋಕನಿಂದ ಸಮಾವೇಶಗೊಂಡಿತು

 ಮೂರನೇ ಸಭೆ - ಕ್ರಿ.ಪೂ. 237 ರ ಅಧ್ಯಕ್ಷತೆಯೆಯನ್ನು - ಮುಗ್ಗಲಿಪುತ್ರ ವಹಿಸಿದ್ದನ್ನು

 ಮೂರನೇ ಸಭೆ - ಕ್ರಿ.ಪೂ. 237 ರಲ್ಲಿ ಕಥಾ ವಸ್ತು ಎಂಬ ಗ್ರಂಥವನ್ನು ರಚಿಸಲಾಯಿತು

 ನಾಲ್ಕನೇ ಮಹಾಸಭೆ ಕ್ರಿ.ಶ.100 ರಲ್ಲಿ ಶ್ರೀನಗರದಲ್ಲಿ ನಡೆಯಿತು.

 ನಾಲ್ಕನೇ ಮಹಾಸಭೆ ಕ್ರಿ.ಶ.100 ರಲ್ಲಿ ಕಾನಿಷ್ಕನ ಆಶ್ರಯದಲ್ಲಿ ನಡೆಯಿತು

 ನಾಲ್ಕನೇ ಮಹಾಸಭೆ ಕ್ರಿ.ಶ.100 ರಲ್ಲಿ ಬೌದ್ಧ ಧರ್ಮ ಮಹಾಯಾನ ಹಾಗೂ ಹೀನಾಯಾನ ಎಂಬ ಎರಡು ಪಂಗಡಗಳಾಗಿ ವಿಭಜನೆಗೊಂಡಿತು .

ಬೌದ್ಧ ಧರ್ಮದ ಅವನತಿಗೆ ಕಾರಣ

ಹೀನಾಯಾನ ಮಹಾಯಾನ ಪಂಗಡಗಳ ಉಗಮ

2⃣ಬೌದ್ಧ ಭಿಕ್ಷು ಹಾಗೂ ಭಿಕ್ಷುಣಿಯರು ಕಾರ್ಯದಲ್ಲಿ ಉತ್ಸಾಹ ಹೀನಾರಾಗಿದ್ದರು

3⃣ಬೌದ್ಧ ಸಂಗಾರಾಗಳು ಸಂಪತ್ತಿನ ಕೇಂದ್ರವಾಗಿದ್ದು

4⃣ಭಿಕ್ಷುಗಳ ಅಶ್ಲೀಲ ನಡತೆ

5⃣ಗುಪ್ತ ಸಾಮ್ರಾಜ್ಯದ ಉಗಮ

6⃣ಶಂಕರಾಚಾರ್ಯರ ವಾಸ

7⃣ಮುಸಲ್ಮಾನರ ದಾಳಿ

Extra Tips

 ತ್ರಿಪಿಟಕಗಳು - ಸುತ್ತ ಪಿಟಕ ,ವಿನಯ ಪಿಟಕ ಹಾಗೂ ಅಭಿಧಮ್ಮ ಪಿಟಕ

 ಶಾಕ್ಯಮುನಿ ಎಂದು ಕರೆಸಿಕೊಂಡವರು - ಬುದ್ದ

 ಬುದ್ಧನು ಜನಿಸಿದ ದಿನ - ವೈಶಾಖ ಶುದ್ಧ ಪೂರ್ಣಿಮೆಯ ದಿನ

 ಬುದ್ಧನ ಮಲತಾಯಿಯ ಹೆಸರು - ಮಹಾಪ್ರಜಾಪತಿ ಗೌತಮಿ

 ರಾಜಗೃಹದಲ್ಲಿ ಬುದ್ಧನು ಭೇಟಿಮಾಡಿದ ಸನ್ಯಾಸಿಗಳು - ಉದ್ರಕ ,ರಾಮಪುತ್ರ ,ಆರಾಢಕಾಲ

 ಬುದ್ಧ ಪದದ ಅರ್ಥ - ಜ್ಞಾನೋದಯ ಪಡೆದವನು

 ಬುದ್ಧನಿಗೆ ಜ್ಞಾನೋದಯವಾದ ದಿನ - ವೈಶಾಖ ಶುದ್ದ ಪೂರ್ಣಿಮೆಯಂದು

 ಜ್ಞಾನೋದಯದ ನಂತರ ಅರಳಿ ಮರ - ಭೋದಿ ವೃಕ್ಷವಾಯಿತು

 ತಥಾಗತ ಎಂಬುವುದಾಗಿ ಪ್ರಖ್ಯಾತಿ ಪಡೆದವನು - ಬುದ್ಧ

 ತಥಾಗತ ಎಂದರೆ - ಸತ್ಯವನ್ನು ಕಂಡವನು

 ಬುದ್ಧ ನಿರ್ವಾಣ ಹೊಂದಿದ್ಧು ಈ ವಯಸ್ಸಿನಲ್ಲಿ - 80

 ಬುದ್ಧನು ಪ್ರಥಮ ಭಾರಿಗೆ ಭೋಧನೆ ಆರಂಬಿಸಿದ್ದು ಈ ಪ್ರದೇಶದಲ್ಲಿ - ಸಾರಾನಾಥದ ಜಿಂಕೆ ಉದ್ಯಾನ

 ಬುದ್ಧನಿಗಿದ್ದ ಪ್ರಾಥಮಿಕ ಶಿಷ್ಯರು - 5 ಮಂದಿ

 ಬುದ್ಧನ ಬ್ರಾಹ್ಮಣ ಶಿಷ್ಯರು - ಆನಂದ ,ಸಾರಿಪುತ್ರ ,ಮಾದ್ಗಲ್ಯಾಯನ್ .ಅಶ್ರಜಿತು ,ಉರವೇಲ

 ಬುದ್ಧನ ಶೂದ್ರ ಶಿಷ್ಯರು - ಉಪಾಲಿ ಮತ್ತು ಸುನಿತ

 ಬುದ್ಧನ ವೈಶ್ಯ ಶಿಷ್ಯ - ಅನಿರುದ್ಧ

 ಬುದ್ಧನ ಮಹಿಳಾ ಶಿಷ್ಯೆಯರು - ಆಮ್ರ ಪಾಲಿ , ಸುಜಾತ ,ಕಿಸಾಗೋತಮಿ ಕ್ಷೇಮ

 ಬುದ್ಧನ ಹಿಂದಿನ ಜನ್ಮ ಕಥೆಗಳನ್ನು ಬಂದಿರುವ ಕಥೆ - ಜಾತಕ ಕಥೆಗಳು
logoblog

Thanks for reading The rise of Jain and Buddhism

Previous
« Prev Post

No comments:

Post a Comment