Monday, 15 March 2021

The Rashtrakutas and Welfare Chalukyas

  MahitiVedike Com       Monday, 15 March 2021ಮಾನ್ಯಖೇಟದ ರಾಷ್ಟ್ರಕೂಟರು ಮತ್ತು ಕಲ್ಯಾಣ ಚಾಲುಕ್ಯರು


ರಾಷ್ಟ್ರಕೂಟರು (ಸಾ.ಶ. 753 - 973)

 ರಾಷ್ಟ್ರಕೂಟರು ಕನ್ನಡಿಗರು. ಪ್ರಾರಂಭದಲ್ಲಿ ಚಾಲುಕ್ಯರ ಸಾಮಂತರಾಗಿದ್ದವರು. ಅನಂತರ ಸ್ವತಂತ್ರರಾಗಿ ದಕ್ಷಿಣದಲ್ಲಿ ವಿಸ್ತಾರವಾದ ಸಾಮ್ರಾಜ್ಯದ ಒಡೆಯರಾಗಿ ಪ್ರಸಿದ್ಧರಾದವರು.

 ಕನ್ನಡನಾಡಿನ ಇತಿಹಾಸದಲ್ಲಿ ರಾಷ್ಟ್ರಕೂಟರ ಯುಗವು ಪ್ರಮುಖವಾದುದು. ಕರ್ನಾಟಕ ಸಾಮ್ರಾಜ್ಯದ ವೈಭವವನ್ನು ಪರಾಕಾಷ್ಠತೆಗೆತ್ತಿದ್ದ ಕೀರ್ತಿಯು ಇವರಿಗೆ ಸಲ್ಲುತ್ತದೆ. ಉತ್ತರದ ನರ್ಮದಾ ನದಿಯಿಂದ ದಕ್ಷಿಣದ ಕಾವೇರಿ ನದಿಯವರೆಗೆ ಹರಡಿದ ಸಾಮ್ರಾಜ್ಯ, ಎಲ್ಲೋರಾದ ಕೈಲಾಸನಾಥ ದೇವಾಲಯ,

 ಕನ್ನಡದ ಮೊದಲ ಗ್ರಂಥ `ಕವಿರಾಜಮಾರ್ಗಇವೆಲ್ಲವೂ ಇವರನ್ನು ಅಜರಾಮರರನ್ನಾಗಿಸಿದೆ.

 ದಂತಿದುರ್ಗನಿಂದ ಪ್ರಾರಂಭವಾದ ಸಾಮ್ರಾಜ್ಯ ಕೃಷ್ಣ, ಇಮ್ಮಡಿ ಗೋವಿಂದ, ಧ್ರುವ, ಮುಮ್ಮಡಿ ಗೋವಿಂದ, ಅಮೋಘವರ್ಷ ಮುಂತಾದವರಿಂದ ಮುಂದುವರೆದು, ಪರಾಕಾಷ್ಠತೆಯನ್ನು ಮುಟ್ಟಿತು.

 ಅಮೋಘವರ್ಷನ ಪ್ರಾರಂಭಿಕ ಆಳ್ವಿಕೆಯು ಅನೇಕ ಅಡೆತಡೆಗಳಿಂದ ಕೂಡಿತ್ತು. ಆದರೆ ಕದನಗಳಲ್ಲಿ ಇಷ್ಟವಿಲ್ಲದ ಇವನು ಪ್ರಶಾಂತ ವಾತಾವರಣ ಬಯಸಿದನು. ಗಂಗರೊಡನೆ ಹಾಗೂ ಪಲ್ಲವರೊಡನೆ ವಿವಾಹ ಸಂಬಂಧದಿಂದ ವೈಷಮ್ಯವನ್ನು ನಿವಾರಿಸಿದನು.

 ಶಾಂತಿಪ್ರಿಯನಾದುದರಿಂದ ಉತ್ತರದ ಕೆಲವು ಸಾಮ್ರಾಜ್ಯಗಳನ್ನು ಕಳೆದುಕೊಂಡನು. ಪಶ್ಚಿಮ ಕರಾವಳಿಯಲ್ಲಿನ ಬಂದರುಗಳು ಮಹಾನ್ ವಾಣಿಜ್ಯ ಕೇಂದ್ರಗಳಾಗಿದ್ದುದರಿಂದ, ಪರ್ಶಿಯಾ, ಅರೇಬಿಯಾಗಳೊಂದಿಗೆ ವ್ಯಾಪಾರ ಸಂಬಂಧಗಳನ್ನು ಹೊಂದಿ ಅಪಾರ ಐಶ್ವರ್ಯವನ್ನು ಗಳಿಸಿತು.

 ಅನೇಕ ಪ್ರವಾಸಿಗರು, ವರ್ತಕರು ಈ ಸಂದರ್ಭದಲ್ಲಿ ಚಕ್ರಾಧಿಪತ್ಯವನ್ನು ಸಂದರ್ಶಿಸಿದರು. ಅವರಲ್ಲಿ ಪ್ರಮುಖನಾದವನು ಅರಬ್ ಯಾತ್ರಿಕ ಸುಲೈಮಾನ್.

 ಇವನು ಅಮೋಘವರ್ಷನನ್ನು ಕುರಿತು, `ಜಗತ್ತಿನ ನಾಲ್ವರು ಪ್ರಬಲ ಚಕ್ರವರ್ತಿಗಳಲ್ಲಿ ಒಬ್ಬನೆಂದಿದ್ದಾನೆ. ಅಮೋಘವರ್ಷನು ಶೂರನೂ ಹಾಗೂ ಶಾಂತಿಪ್ರಿಯನು. ಎಲ್ಲಾ ಮತಗಳಿಗೂ ಪ್ರೋತ್ಸಾಹ ನೀಡಿದನು.

 ಇವನ ನಂತರ ಇಮ್ಮಡಿ ಕೃಷ್ಣ, ಮುಮ್ಮುಡಿ ಇಂದ್ರ, ಮುಮ್ಮುಡಿ ಕೃಷ್ಣ ಆಳ್ವಿಕೆ ನಡೆಸಿದರು.

 ಎರಡನೇ ಕರ್ಕನ ಕಾಲದಲ್ಲಿನ ಆಡಳಿತ ದುರ್ಬಲತೆಯು ಸಾಮಂತರಾಗಿದ್ದ ಕಲ್ಯಾಣ ಚಾಲುಕ್ಯ ಎರಡನೇ ತೈಲಪನ ಉದಯಕ್ಕೆ ದಾರಿಯಾಗಿ ಇದು ರಾಷ್ಟ್ರಕೂಟರ ಆಳ್ವಿಕೆಯನ್ನು ಕೊನೆಗೊಳಿಸಿತು.

ರಾಷ್ಟ್ರಕೂಟರ ಕೊಡುಗೆಗಳು

 ರಾಷ್ಟ್ರಕೂಟರ ರಾಜತ್ವವು ವಂಶಪಾರಂಪರ್ಯವಾಗಿತ್ತು. ಅರಸರಿಗೆ ಸಹಾಯ ಮಾಡಲು ಮಂತ್ರಿ ಮಂಡಲವಿರುತ್ತಿತ್ತು. ಮಂತ್ರಿ ಮಂಡಲದಲ್ಲಿ ವಿದೇಶೀ ವ್ಯವಹಾರ ನೋಡಿಕೊಳ್ಳುವ ಮಹಾ ಸಂಧಿವಿಗ್ರಹಿಯೆಂಬ ಗಣ್ಯನು ಇದ್ದನು.

 ಆಡಳಿತದ ಅನುಕೂಲಕ್ಕಾಗಿ ಸಾಮ್ರಾಜ್ಯ ವನ್ನು ರಾಷ್ಟ್ರ (ಮಂಡಲ), ವಿಷಯ, ನಾಡು, ಗ್ರಾಮಗಳಾಗಿ ವಿಭಜಿಸಲಾಗಿತ್ತು. ಗ್ರಾಮದ ಮುಖ್ಯಸ್ಥನಿಗೆ ಗ್ರಾಮಪತಿ ಅಥವಾ ಪ್ರಭುಗಾವುಂಡ ಎಂದು ಕರೆಯುತ್ತಿದ್ದರು.

ಗ್ರಾಮ ಸೈನ್ಯಕ್ಕೆ ಈತನೇ ಮುಖ್ಯಸ್ಥ. ಗ್ರಾಮ ಲೆಕ್ಕಿಗ ಈತನ ಸಹಾಯಕ. ಗ್ರಾಮ ಸಭೆಗಳೂ ಇದ್ದವು. ನಾಡುಗಳಲ್ಲಿ ನಾಡಗಾವುಂಡ ಎಂಬ ಅಧಿಕಾರಿ ಇರುತ್ತಿದ್ದನು. ಇದೇ ರೀತಿ ವಿಷಯ ಮತ್ತು ರಾಷ್ಟ್ರಗಳ ಮೇಲೂ ಅಧಿಕಾರಿಗಳಿದ್ದರು.

 ವಿಷಯಪತಿ ಮತ್ತು ರಾಷ್ಟ್ರಪತಿ ಜಿಲ್ಲೆ ಅಥವಾ ವಿಷಯಕ್ಕೂ ಹಾಗೂ ರಾಷ್ಟ್ರಕ್ಕೂ ಅಧಿಕಾರಿಗಳಾಗಿದ್ದರು.

 ಭೂಕಂದಾಯ, ಸರಕು, ಮನೆ, ಅಂಗಡಿಗಳ ಮೇಲಿನ ಸುಂಕ, ನದಿ ದಾಟಿಸುವಂತಹ ವೃತ್ತಿಗಳ ಮೇಲಿನ ತೆರಿಗೆ ಮೊದಲಾದವು ರಾಜ್ಯದ ಆದಾಯವಾಗಿದ್ದವು.

 ವಿದೇಶಿ ವ್ಯಾಪಾರದಿಂದ ರಾಜ್ಯಕ್ಕೆ ಅಪಾರ ಸುಂಕ ಬರುತ್ತಿತ್ತು. ರಾಷ್ಟ್ರಕೂಟರ ಕಾಲದಲ್ಲಿ ರಾಜರು ಕನ್ನಡ ಮತ್ತು ಸಂಸ್ಕøತ ಎರಡಕ್ಕೂ ಪ್ರೋತ್ಸಾಹ ನೀಡಿದ್ದರು.

 ಸಂಸ್ಕøತದಲ್ಲಿ ಅತ್ಯುತ್ತಮ ಗ್ರಂಥಗಳು ರಚನೆಯಾದವು. ತ್ರಿವಿಕ್ರಮನು ನಳಚಂಪು ಎಂಬ ಸಂಸ್ಕøತ ಸಾಹಿತ್ಯದ ಪ್ರಥಮ ಚಂಪಕೃತಿಯನ್ನು ರಚಿಸಿದನು.

 ಹಲಾಯುಧನು ಕವಿರಹಸ್ಯವನ್ನು ಬರೆದನು, ಜಿನಸೇನ, ಗಣಿತಜ್ಞ ಮಹಾವೀರಾಚಾರ್ಯ, ವ್ಯಾಕರಣ ಶಾಸ್ತ್ರಜ್ಞನಾದ ಶಕಟಾಯನ, ಗುಣಭದ್ರ, ವೀರಸೇನ, ಅಮೋಘವರ್ಷನ ಆಸ್ಥಾನದಲ್ಲಿದ್ದರು. ಆದಿಕವಿ ಪಂಪನು ಆದಿಪುರಾಣ, ವಿಕ್ರಮಾರ್ಜುನ ವಿಜಯವನ್ನು ಕನ್ನಡದಲ್ಲಿ ಬರೆದನು. ಉಭಯಕವಿ ಚಕ್ರವರ್ತಿ ಪೊನ್ನನು ಶಾಂತಿಪುರಾಣವನ್ನು ರಚಿಸಿದನು.

 ಅಮೋಘವರ್ಷನ ಆಸ್ಥಾನದಲ್ಲಿದ್ದ ಶ್ರೀ ವಿಜಯ ಕವಿರಾಜಮಾರ್ಗವನ್ನು ರಚಿಸಿದನು. ಇದು ಕನ್ನಡದ ಮೇರುಕೃತಿಯಾಗಿದೆ.

 ಇದರಿಂದ ಕನ್ನಡ ಸಾಹಿತ್ಯವು ಪ್ರಾಚೀನ ಕಾಲದಿಂದಲೂ ಬೆಳೆದು ಬಂದಿರುವುದನ್ನು ತಿಳಿಯಬಹುದು. ಅಗ್ರಹಾರಗಳು, ಮಠಗಳು ಅಂದಿನ ಪ್ರಮುಖ ಶೈಕ್ಷಣಿಕ ಕೇಂದ್ರಗಳಾಗಿದ್ದವು.

ಸಂಸ್ಕøತ, ವೇದ, ಜ್ಯೋತಿಷ್ಯ, ತರ್ಕಶಾಸ್ತ್ರ, ಪುರಾಣಗಳಲ್ಲಿ ಶಿಕ್ಷಣ ನೀಡುತ್ತಿದ್ದರು. ಬಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಸಾಲೊಟಗಿ ಪ್ರಮುಖ ವಿದ್ಯಾ ಕೇಂದ್ರಗಳಲ್ಲೊಂದಾಗಿತ್ತು.

ರಾಷ್ಟ್ರಕೂಟ ಅರಸರು ಶಿವ ಮತ್ತು ವಿಷ್ಣುವಿನ ಆರಾಧಕರಾಗಿದ್ದರು. ಜೈನ ಮತ ರಾಜಾಶ್ರಯ ಪಡೆದ ಪ್ರಬಲ ಮತವಾಗಿತ್ತು.

 ಆದರೂ ಎಲ್ಲಾ ಮತಗಳಿಗೂ ಪ್ರೋತ್ಸಾಹ ನೀಡಿದ್ದರು. ಅನೇಕ ಶಿವ, ವಿಷ್ಣು ದೇವಾಲಯಗಳನ್ನು ನಿರ್ಮಿಸಿದ್ದಾರೆ. ರಾಷ್ಟ್ರಕೂಟ ಅರಸರು ಕಲಾಪೋಷಕರಾಗಿದ್ದರು.

 ಎಲ್ಲೋರ ಮತ್ತು ಎಲಿಫೆಂಟಾಗಳಲ್ಲಿ ಕಲ್ಲಿನಲ್ಲಿ ಕೊರೆದು ಮಾಡಿರುವ ದೇವಾಲಯಗಳು ಭಾರತೀಯ ಕಲೆಗೆ ಇವರು ನೀಡಿರುವ ಮಹಾನ್ಕಾಣಿಕೆಗಳಾಗಿವೆ.

 ಒಂದನೇ ಕೃಷ್ಣನು ಕೊರೆಸಿದ ಎಲ್ಲೋರಾದ ಕೈಲಾಸ ಮಂದಿರವು ಏಕಶಿಲೆಯ ಅದ್ಭುತ ರಚನೆಯಾಗಿದೆ. 100 ಅಡಿ ಎತ್ತರ, 276 ಅಡಿ ಉದ್ದ ಹಾಗೂ 154 ಅಡಿ ಅಗಲವಾಗಿದ್ದು, ಬೃಹತ್ ಬಂಡೆಯನ್ನು ಕೊರೆದು ಕಟ್ಟಲಾಗಿದೆ.

 ಅಲ್ಲಿಯೇ ಪ್ರಸಿದ್ಧ ದಶಾವತಾರ ಗುಹಾಲಯವಿದೆ. ಮುಂಬೈ ಬಳಿಯ ಎಲಿಫೆಂಟಾದ ಗುಹೆಗಳಲ್ಲಿಯ ಶಿಲ್ಪಕಲೆಯು ರಾಷ್ಟ್ರಕೂಟರ ಕಾಲದ ಶಿಲ್ಪಕಲೆಗೆ ಮುಕುಟಪ್ರಾಯವಾಗಿದೆ.

 ಅರ್ಧನಾರೀಶ್ವರ, ಮಹೇಶಮೂರ್ತಿ (ತ್ರಿಮುಖ) ವಿಗ್ರಹಗಳನ್ನು ಸೊಗಸಾಗಿ ಕೆತ್ತಲಾಗಿದೆ. ರಾಯಚೂರು ಜಿಲ್ಲೆ ಶಿರವಾಳದಲ್ಲಿ ಇವರ ಕಾಲದ ದೇವಾಲಯಗಳಿವೆ. ಪಟ್ಟದಕಲ್ಲಿನಲ್ಲಿ ಸುಂದರ ಜಿನದೇವಾಲಯವಿದೆ.

ಕಲೆ ಮತ್ತು ವಾಸ್ತುಶಿಲ್ಪ
o ದಶಾವತಾರ ಗುಹೆ

o ರಾಮೇಶ್ವರ ಗುಹೆ

o ಇಂದ್ರಸಭಾ ಗುಹೆ

o ಜಗನ್ನಾಥ ಸಭಾ

o ಎಲಿಫೆಂಟಾ,

ಕಲ್ಯಾಣದ ಚಾಳುಕ್ಯರು (ಸಾ.ಶ. 973 - ಸಾ.ಶ. 1189)

ಕಲ್ಯಾಣದ ಚಾಳುಕ್ಯರ ಕಾಲವು ಭಾರತದ ಚರಿತ್ರೆಯಲ್ಲಿಯೇ ಗೌರವಯುತವಾದ ಸ್ಥಾನವನ್ನು ಪಡೆದಿದೆ. ಇವರು ಕಲೆ, ಸಾಹಿತ್ಯ, ಶಿಕ್ಷಣಗಳಿಗೆ ವಿಶೇಷ ಪ್ರೋತ್ಸಾಹ ನೀಡಿದರು.

ಕನ್ನಡ ಮತ್ತು ಸಂಸ್ಕøತ ಭಾಷೆಗಳ ಬೆಳವಣಿಗೆಗೆ ವಿಶೇಷ ಪ್ರೋತ್ಸಾಹ ನೀಡಿ ಅವಕಾಶಗಳನ್ನು ಕಲ್ಪಿಸಿಕೊಟ್ಟರು. ಪ್ರಸಿದ್ಧ ಕನ್ನಡ ಕವಿಗಳಾದ ದುರ್ಗಸಿಂಹ, ರನ್ನ, ನಾಗಚಂದ್ರ, ಮುಂತಾದವರಿಗೆ ಆಶ್ರಯ ನೀಡಿದರು.

 ಇದೇ ಕಾಲದಲ್ಲಿ ಬೆಳಕಿಗೆ ಬಂದದ್ದು ವಚನ ಸಾಹಿತ್ಯ. ಕಲ್ಯಾಣವೆಂಬ ಹೊಸ ನಗರವನ್ನು ಕಟ್ಟಿ ರಾಜಧಾನಿಯನ್ನಾಗಿ ಮಾಡಿದ ಕೀರ್ತಿ ಒಂದನೇ ಸೋಮೇಶ್ವರನಿಗೆ ಸಲ್ಲುತ್ತದೆ.

•l ರಾಷ್ಟ್ರಕೂಟರ ಸಾಮಂತನಾಗಿದ್ದ ಎರಡನೇ ತೈಲಪನು ರಾಷ್ಟ್ರಕೂಟರ ರಾಜ ಎರಡನೇ ಕರ್ಕನನ್ನು ಪರಾಭವಗೊಳಿಸಿ ಮಾನ್ಯಖೇಟವನ್ನು ವಶಪಡಿಸಿಕೊಂಡು ಕಲ್ಯಾಣ ಚಾಳುಕ್ಯ ಸಾಮ್ರಾಜ್ಯ ಸ್ಥಾಪಿಸಿದನು.

 ಸುಮಾರು 24 ವರ್ಷಗಳ ಕಾಲ ಆಡಳಿತ ನಡೆಸಿದನು. ಈ ವಂಶದ ಪ್ರಮುಖ ಅರಸರಲ್ಲಿ ಒಂದನೇ ಸೋಮೇಶ್ವರ ಪ್ರಮುಖನಾದವನು.

 ಕಲ್ಯಾಣವೆಂಬ ಹೊಸ ನಗರವನ್ನು ಕಟ್ಟಿಸಿ ರಾಜಧಾನಿಯನ್ನಾಗಿ ಮಾಡಿಕೊಂಡನು. ಇದೇ ಬೀದರ್ ಜಿಲ್ಲೆಯ ಬಸವ ಕಲ್ಯಾಣ ಎನಿಸಿದೆ. ಈತನು ಅನೇಕ ಯುದ್ಧಗಳನ್ನು ಮಾಡಬೇಕಾಗಿ ಬಂದರೂ ಸಾಮ್ರಾಜ್ಯವು ಗಾತ್ರದಲ್ಲಿ ಕುಂದದಂತೆ ನೋಡಿಕೊಂಡನು.

 ಚೋಳರ ರಾಜಾಧಿರಾಜನನ್ನುಕೊಪ್ಪಂ ಎಂಬಲ್ಲಿ ಸೋಲಿಸಿದನು. (ಸಾ.ಶ. 1076ರಲ್ಲಿ) ಒಂದನೇ ಸೋಮೇಶ್ವರನ ಮಗನಾದ ಆರನೆಯ ವಿಕ್ರಮಾದಿತ್ಯನು ಈ ವಂಶದ ಶ್ರೇಷ್ಠನಾದ ಅರಸ. ಅಸಾಧಾರಣ ವೀರ, ಉತ್ತಮ ಆಡಳಿತಗಾರ. ಇವನು ಸಾ.ಶ. 1076ರಲ್ಲಿ ಚಾಳುಕ್ಯ ವಿಕ್ರಮ ಶಕೆಯನ್ನು ಆರಂಭಿಸಿದನು. ಇವನು ಹೊಯ್ಸಳರ ವಿಷ್ಣುವರ್ಧನನ ಬಂಡಾಯ ಅಡಗಿಸಿದನು. ಶ್ರೀಲಂಕೆಯ ಅರಸನಾದ ವಿಜಯಬಾಹುವಿನೊಂದಿಗೆ ಸಂಪರ್ಕ ಹೊಂದಿದ್ದನು.

 ಆರನೇ ವಿಕ್ರಮಾದಿತ್ಯ ಹಾಗೂ ಮೂರನೇ ಸೋಮೇಶ್ವರನ ನಂತರ ಬಂದ ರಾಜರುಗಳ ಕಾಲದಲ್ಲಿ ಅದರಲ್ಲೂ ನಾಲ್ಕನೇ ಸೋಮೇಶ್ವರನ ಕಾಲದಲ್ಲಿ ರಾಜ್ಯವು ಕ್ಷೀಣಿಸಿ, ಕಲಚುರಿ ಬಿಜ್ಜಳನು ಕಲ್ಯಾಣವನ್ನು ಆಕ್ರಮಿಸಿ ಸ್ವತಂತ್ರವಾಗಿ ಆಳತೊಡಗಿದನು.

 ಇದೇ ಕಾಲದಲ್ಲಿ ಬೆಳಕಿಗೆ ಬಂದವರು ಸಾಮಾಜಿಕ, ಧಾರ್ಮಿಕ ಕ್ರಾಂತಿಯನ್ನುಂಟು ಮಾಡಿದ ಶ್ರೀಜಗಜ್ಯೋತಿ ಬಸವೇಶ್ವರರು. ಇವರು ವೀರಶೈವ ಪಂಥದ ಮೌಲ್ಯಗಳನ್ನು ಜನಸಾಮಾನ್ಯರಿಗೂ ತಲುಪಿಸುವ ಕೈಂಕರ್ಯದಲ್ಲಿ ತೊಡಗಿಸಿಕೊಂಡರು.

ಕಲ್ಯಾಣ ಚಾಳುಕ್ಯರ ಕೊಡುಗೆಗಳು

 ಕಲ್ಯಾಣದ ಚಾಲುಕ್ಯರು ಬಾದಾಮಿಯ ಚಾಲುಕ್ಯರಂತೆಯೇ ವಿಶೇಷ ಕೊಡುಗೆಗಳನ್ನು ನೀಡಿದ್ದಾರೆ. ರಾಜತ್ವವು ವಂಶಪಾರಂಪರ್ಯವಾಗಿತ್ತು.

ರಾಜ್ಯವನ್ನು ಪ್ರಾಂತ್ಯಗಳಾಗಿಯೂ (ಮಂಡಲ) ಮತ್ತು ಕಿರು ಪ್ರಾಂತ್ಯಗಳಾಗಿಯೂ (ನಾಡುಗಳು) ವಿಂಗಡಿಸಲಾಗಿತ್ತು. ಇದಲ್ಲದೆ ಕಂಪಣಗಳು (ಈಗಿನ ಹೋಬಳಿ) ಇದ್ದು ಗ್ರಾಮಗಳ ಆಡಳಿತಕ್ಕೆ ಸಹಾಯಕವಾಗಿದ್ದವು.

 ಭೂ ಕಂದಾಯವು ರಾಜ್ಯದ ಮೂಲಾದಾಯವಾಗಿತ್ತು. ಆದಾಯದ ಇತರೆ ಮೂಲಗಳಲ್ಲಿ ಮಾರಾಟ ತೆರಿಗೆ, ಸುಂಕ, ವೃತ್ತಿ ತೆರಿಗೆ ಸೇರಿದ್ದವು.

 ಭೂಕಂದಾಯದ ವ್ಯವಸ್ಥೆಗಾಗಿಯೇ ಕಡಿತವೆರ್ಗಡೆ ಎಂಬ ಅಧಿಕಾರಿಯನ್ನು ನೇಮಿಸಲಾಗಿತ್ತು. ವ್ಯಾಪಾರದಲ್ಲಿ ಹಾಗೂ ವ್ಯವಹಾರಗಳಲ್ಲಿ ವಿವಿಧ ಶ್ರೇಣಿಗಳಿದ್ದವು. ಚಾಲುಕ್ಯರ ಕಾಲದಲ್ಲಿ ಸಾಹಿತ್ಯಕ್ಕೆ ಪ್ರೋತ್ಸಾಹ ದೊರಕಿತು.

 ಜೈನ ವಿದ್ವಾಂಸರ ನೆರವಿನಿಂದ ಕನ್ನಡ ಸಾಹಿತ್ಯವು ಅಭಿವೃದ್ಧಿ ಹೊಂದಿತು. ರನ್ನನು ಬರೆದ ಗದಾಯುದ್ಧ (ಸಾಹಸಭೀಮ ವಿಜಯ), ದುರ್ಗಸಿಂಹನ ಪಂಚತಂತ್ರ ಬಿಲ್ಹಣನ ವಿಕ್ರಮಾಂಕದೇವ ಚರಿತ, ನಯಸೇನನ ಧರ್ಮಾಮೃತ ಹಾಗೂ ವಿಜ್ಞಾನೇಶ್ವರನು ಬರೆದ ಕಾನೂನು ಗ್ರಂಥ ಮಿತಾಕ್ಷರ ಮುಖ್ಯವಾದ ಗ್ರಂಥಗಳಾಗಿವೆ.

 ರಾಜ ಮೂರನೆಯ ಸೋಮೇಶ್ವರನು ಬರೆದ ಮಾನಸೋಲ್ಲಾಸ ಸಂಸ್ಕøತ ವಿಶ್ವಕೋಶವೆನಿಸಿದೆ. ಚಾಲುಕ್ಯರ ಕಾಲದ ವಿಶಿಷ್ಠ ಕೊಡುಗೆ ವಚನ ಸಾಹಿತ್ಯ. ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಮಾಚಯ್ಯ ಮುಂತಾದವರು ಗಣ್ಯವಚನಕಾರರಾಗಿದ್ದರು.

 ಸಾಹಿತ್ಯಾಭಿಮಾನಿಗಳಾದ ಚಾಳುಕ್ಯರು ಕಲಾರಾಧಕರಾಗಿದ್ದರು. ಕಲೆಯ ಕ್ಷೇತ್ರದಲ್ಲಿ ನೀಡಿದ ಕೊಡುಗೆ ಅಪಾರ. ಲಕ್ಕುಂಡಿಯ ಕಾಶಿವಿಶ್ವೇಶ್ವರ, ಇಟಗಿಯ ಮಹಾದೇವ ದೇವಾಲಯ, ಕುರುವತ್ತಿಯ ಮಲ್ಲಿಕಾರ್ಜುನ ಮಂದಿರ, ಗದಗಿನ ತ್ರಿಕೂಟೇಶ್ವರ ಮುಂತಾದ ಪ್ರಸಿದ್ಧ ದೇವಾಲಯಗಳು ಇವರ ಕೊಡುಗೆಯಾಗಿವೆ.

ಈ ವಂಶದ ಅರಸರು ನೂರಾರು ದೇವಾಲಯಗಳನ್ನು ನಿರ್ಮಿಸಿ ಕನ್ನಡ ನಾಡನ್ನು ಕಲೆಗಳ ಬೀಡನ್ನಾಗಿ ಪರಿವರ್ತಿಸುವಲ್ಲಿ ಅಮೂಲ್ಯ ಕೊಡುಗೆ ನೀಡಿದ್ದಾರೆ.

 ಇವರ ಕಾಲದಲ್ಲಿ ಸಂಗೀತ ನೃತ್ಯಗಳೂ ಅಭಿವೃದ್ಧಿಗೊಂಡವು. ಸಂಗೀತ, ನೃತ್ಯ ಸೇವೆಗೆ ಕಲಾವಿದರನ್ನು ನೇಮಿ ಸುತ್ತಿದ್ದರು.

 ಮಹಾರಾಣಿ ಚಂದ್ರಲೇಖೆಯು ಅನೇಕ ಸಂಗೀತ ವಿದ್ವಾಂಸರಿಗೆ ಮತ್ತು ನೃತ್ಯಗಾರ್ತಿಯರಿಗೆ ಆಶ್ರಯ ನೀಡಿದ್ದಳು.

 ಸಂಗೀತ, ನೃತ್ಯ, ಕಲೆ, ಆಭರಣ ಮುಂತಾದ ವಿಷಯಗಳು ಮಾನಸೋಲ್ಲಾಸ ಹಾಗೂ ಎರಡನೆಯ ಜಗದೇಕಮಲ್ಲನ ಸಂಗೀತ ಚೂಡಾಮಣಿ ಗ್ರಂಥಗಳಲ್ಲಿ ವ್ಯಕ್ತವಾಗಿವೆ.

ಕಲ್ಯಾಣದ ಅರಸರಲ್ಲಿ ಆರನೆಯ ವಿಕ್ರಮಾದಿತ್ಯ ಪ್ರಸಿದ್ಧಿ ಹೊಂದಿದ್ದು ಈತನಿಗೆ ತ್ರಿಭುವನಮಲ್ಲ, ಪೆರಾಡಿದೇವ ಮುಂತಾದ ಬಿರುದುಗಳಿದ್ದವು. ಇವನ ಹುಟ್ಟೂರು ಮುದವೊಳಲು.

 ಇವರ ಕಾಲದಲ್ಲಿ ಮಹಾಕವಿ ರನ್ನ ಕಲ್ಯಾಣದ ಚಾಲುಕ್ಯರ ಕಾಲದಲ್ಲಿ ವಿಪುಲವಾದ ಕನ್ನಡಸಾಹಿತ್ಯಶ್ರೇಷ್ಟ ಮಟ್ಟದ ಕವಿಯಾಗಿದ್ದು, ಇವನು ಕಲ್ಯಾಣ ಚಾಲುಕ್ಯ ಅರಸಅರಿವೆ ಬೆಡಂಗ ಸತ್ಯಾಶ್ರಯನ ಆಶ್ರಯದಲ್ಲಿ ಆಸ್ಥಾನಕವಿಯಾಗಿದ್ದನು.

 ರನ್ನನ ಕೃತಿಗಳು ಅಜಿತಪುರಾಣ, ಸಾಹಸಭೀಮ ವಿಜಯ (ಗದಾಯುದ್ದ ಚಾಲುಕ್ಯ ಅರಸ ರನ್ನನಿಗೆ ಕವಿಚಕ್ರವರ್ತಿ ಎಂಬ ಬಿರುದು ನೀಡಿ ಗೌರವಿಸಿದ್ದನು. ಹಾಗೂ 2ನೇ ಜಯಸಿಂಹ ಜಗದೇಕಮಲ್ಲನ ಮಂತ್ರಿಯಾಗಿದ್ದ ದುರ್ಗಸಿಂಹನು ಪಂಚತಂತ್ರ ರಚಿಸಿದನು.

 ನಂತರ 2ನೇಸೋಮೇಶ್ವರನ ಆಶ್ರಯ ಪಡೆದ ಶಾಂತಿನಾಥನೂ ಜೈನಕವಿಯಾಗಿದ್ದು ಸುಕುಮಾರ ಚರಿತೆ ಎಂಬ ಗ್ರಂಥ ರಚಿಸಿದ.

ಕಲ್ಯಾಣ ಚಾಲುಕ್ಯರ ಕಾಲದಲ್ಲಿದ್ದ ಅಭಿನವಪಂಪನೆಂದು ಕರೆದುಕೊಂಡಿರುವ ನಾಗಚಂದ್ರ ಇದೇ ಕಾಲದವನು.

 ನಾಗಚಂದ್ರನ ಕೃತಿಗಳು ಮಲ್ಲಿನಾಥಪುರಾಣ, ರಾಮಚಂದ್ರಚರಿತಪುರಾಣಗಳು ಈತನ ಅಮರಕೃತಿಗಳು, ರಾಮಚಂದ್ರಪುರಾಣಕೃತಿಯು ಪಂಪರಾಮಾಯಣವೆಂದೇ ಪ್ರಸಿದ್ಧವಾಗಿದೆ.

 ಕಾಶ್ಮೀರದಕವಿ ಬಿಲ್ಲಣನು ವಿಕ್ರಮಾಂಕದೇವ ಚರಿತಂ ಸಂಸ್ಕೃತದಲ್ಲಿದೆ.

 ವಿಜ್ಞಾನೇಶ್ವರನ ಮಿತಾಕ್ಷರ ಸಂಹಿತೆ ಕೀರ್ತಿವರ್ಮನ ಗೋವೈದ ಕನ್ನಡದಲ್ಲಿ ರಚಿಸಿದ್ದಾನೆ.

 ನಯನಸೇನನ ಧರ್ಮಾಮೃತ ಸೋಮೇಶ್ವರನ ಮೆನಸೋಲ್ಲಾಸ ಎರಡನೆಯನಾಗವರ್ಮನ ಕಾವ್ಯಾವಲೋಕನ ಅಲಂಕಾರಶಾಸ್ತ್ರವಾಗಿದೆ.

 ಭಾಷಾಭೂಷಣ ವ್ಯಾಕರಣಶಾಸ್ತ್ರವಾಗಿದೆ.

 ಅಭಿದಾನವಸ್ತುಕೋಶ ಕನ್ನಡದ ನಿಘಂಟಾಗಿದೆ. ಶಾಂತಿನಾಥನ ಸುಕುಮಾರ ಚರಿತಂ ಇನ್ನು ಮುಂತಾದವು ಕಲ್ಯಾಣಿ ಚಾಲುಕ್ಯರಕಾಲದಲ್ಲಿ ರಚಿಸಲ್ಪಟ್ಟವು.
logoblog

Thanks for reading The Rashtrakutas and Welfare Chalukyas

Previous
« Prev Post

No comments:

Post a Comment